ತನ್ನ ತಾಯಿಯ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ವ್ಯಕ್ತಿ ಪದೇ ಪದೇ ಮನೆಯ ಹತ್ತಿರ ಬರುತ್ತಿರುವುದನ್ನು ನೋಡಿದ ಮಗ ರೋಸಿ ಹೋಗಿ ಏನ್ ಮಾಡಿದ ಗೊತ್ತಾ?
ವರದಿ: ಪುಟ್ಟರಾಜು. ಆರ್.ಸಿ. ಏಷ್ಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ
ಚಾಮರಾಜನಗರ (ಮೇ.08): ಆಕೆಗೆ ಮದುವೆಯಾದ ಮಗಳಿದ್ದಾಳೆ. ಮದುವೆ ವಯಸ್ಸಿಗೆ ಬಂದ ಮಗನೂ ಇದ್ದಾನೆ. ಗಂಡ ಕೆಲ ವರ್ಷಗಳ ಹಿಂದೆಯೇ ಆಕೆಯನ್ನು ಬಿಟ್ಟು ಬೇರೊಂದು ಮದುವೆಯಾಗಿದ್ದ. ಆದರೆ ಆಕೆಗೆ ತನಗಿಂತ ಹತ್ತು ವರ್ಷ ಕಿರಿಯ ವಯಸ್ಸಿನ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಇತ್ತೆಂಬ ಆರೋಪ ಇದೆ. ಇದರಿಂದ ಮಗ ಬೇಸತ್ತು ಹೋಗಿದ್ದ. ತನ್ನ ತಾಯಿಯ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ವ್ಯಕ್ತಿ ಪದೇ ಪದೇ ಮನೆಯ ಹತ್ತಿರ ಬರುತ್ತಿರುವುದನ್ನು ನೋಡಿದ ಮಗ ರೋಸಿ ಹೋಗಿ ಏನ್ ಮಾಡಿದ ಗೊತ್ತಾ?
undefined
ಅಲ್ಲಿ ನೆತ್ತರ ಕೋಡಿ ಹರಿದಿತ್ತು. ಹೀಗೆ ಬೋರಲಾಗಿ ಬಿದ್ದಿರುವ ವ್ಯಕ್ತಿ ಬರ್ಬರವಾಗಿ ಕೊಲೆಯಾಗಿ ಹೋಗಿದ್ದ. ಈತನ ಉಪಟಳ ತಡೆಯಲಾರದೆ ದೊಣ್ಣೆಯಿಂದ ಬಡಿದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಮಾಡಬಾರದ್ದನ್ನು ಮಾಡಿದರೆ ಇದೆ ಗತಿ ಅನ್ನೊದಕ್ಕೆ ಈ ದೃಶ್ಯವೇ ಸಾಕ್ಷಿಯಾಗಿದೆ. ಹೌದು! ಹೀಗೆ ಕೊಲೆಯಾಗಿ ರಕ್ತದ ಮಡವಿನಲ್ಲಿ ಬಿದ್ದಿರುವ ವ್ಯಕ್ತಿ ಹೆಸರು ಸಿದ್ದರಾಜು. ಚಾಮರಾಜನಗರ ತಾಲೂಕು ಯಾನಗಹಳ್ಳಿ ಗ್ರಾಮದ ನಿವಾಸಿಯಾದ ಈತನ ವಯಸ್ಸು 33. ಇನ್ನೂ ಮದುವೆಯಾಗದ ಈತ ವಯಸ್ಸಿನಲ್ಲಿ ತನಗಿಂತ ಹತ್ತು ವರ್ಷ ದೊಡ್ಡವಳಾದ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ.
Chamarajanagar: ಬುಡಕಟ್ಟು ಸೋಲಿಗ ಯುವತಿಯನ್ನು ಪ್ರೇಮಿಸಿ ಕೈ ಕೊಟ್ಟ ಯುವಕ
ಅಕ್ರಮ ಸಂಂಬಂಧ ಜೊತೆಗೆ ಮಾಡಿದ ಇನ್ನೊಂದು ತಪ್ಪೆಂದರೆ ಮಹಿಳೆಯ ಮಗನ ಎದುರಿಗೆ ಹೋಗಿ ಮಹಿಳೆಯನ್ನು ತನ್ನ ಜೊತೆ ಬರುವಂತೆ ಪೀಡಿಸುವುದು, ರಾತ್ರಿ ವೇಳೆ ಬಾಗಿಲು ತಟ್ಟುವುದು, ಮನೆ ಮೇಲೆ ಕಲ್ಲು ಎಸೆಯುವುದು, ಪದೇ ಪದೇ ಫೋನ್ ಮಾಡುವುದು ಮಾಡುತ್ತಿದ್ದ. ಹೀಗೆ ಹೇಳುತ್ತಿರುವ ಪಾರ್ವತಿ ಎಂಬುವವರ ಮಗ ಮಣಿಕಂಠ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ. ಕೆಲಸ ಬಿಟ್ಟು ಕಳೆದ ಎರಡು ತಿಂಗಳಿಂದ ಊರಿನಲ್ಲಿಯೇ ಇದ್ದ. ಸಿದ್ದಾರಾಜುವಿನ ವರ್ತನೆಯಿಂದ ಪಾರ್ವತಿ ಮಗ 25 ವರ್ಷದ ಮಣಿಕಂಠನಿಗೆ ಇದನ್ನೆಲ್ಲಾ ನೋಡಿ ರೋಸಿಹೋಗಿತ್ತು.
ಸಹನೆಯ ಕಟ್ಟೆ ಹೊಡೆದಿತ್ತು. ಮನೆಯ ಬಳಿ ಬಂದು ಬಾಗಿಲು ತಟ್ಟುತ್ತಿದ್ದ ಸಿದ್ದರಾಜುವಿಗೆ ಗತಿ ಕಾಣಿಸಬೇಕೆಂದು ನಿರ್ಧರಿಸಿದ ಮಣಿಕಂಠ ಸಿದ್ದರಾಜುವನ್ನು ದೊಣ್ಣೆ ಯಿಂದ ಹೊಡೆದು ಮುಗಿಸಿಯೇ ಬಿಟ್ಟ. ಸಿದ್ದರಾಜು ತನ್ನ ಮನೆಯಲ್ಲು ನೆಟ್ಟಗೆ ಇರಲಿಲ್ಲಿ ದಿನಾ ಕುಡಿದು ಬಂದು ಗಲಾಟೆ ಮಾಡುತ್ತಿದ್ದ. ಸಿದ್ದರಾಜುವಿಗೆ ತಾಯಿ ನಿಂಗಮ್ಮ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಟ್ಟಿದ್ದರು. ಆದರೂ ಈತನ ಹಣದಾಹ ಹಿಂಗಿರಲಿಲ್ಲ. ಹಣಕ್ಕಾಗಿ ಮತ್ತೆ ಮತ್ತೆ ತಾಯಿಗೆ ಕಾಟ ಕೊಡುತ್ತಿದ್ದ ಈತನ ಕಿರಿಕಿರಿಯಿಂದ ಬೇಸತ್ತು ಹೋಗಿದ್ದ ನಿಂಗಮ್ಮ ತಮ್ಮ ಮಗಳ ಮನೆಗೆ ಹೊರಟು ಹೋಗಿದ್ದರು.
Chamarajanagar: ನವೀಕರಣಗೊಂಡು ಸ್ಮಾರಕವಾಯಿತು ವೀರಪ್ಪನ್‌ನನ್ನು ಬಂಧಿಸಿದ್ದ ಹುತಾತ್ಮ ಅರಣ್ಯಾಧಿಕಾರಿಯ ಜೀಪ್!
ಇದು ಒಂದು ಕಡೆಯಾದರೆ ಸಿದ್ದರಾಜುವನ್ನು ಕೊಂದ ಮಣಿಕಂಠ ತನ್ನ ತಾಯಿಯನ್ನು ಸಾಯಿಸಬೇಕಿತ್ತು ಸಿದ್ದರಾಜು ಕೊಲೆಗೆ ಮಣಿಕಂಠನ ತಾಯಿ ಪಾರ್ವತಿಯೆ ಕಾರಣ ಎನ್ನುವುದು ಸಿದ್ದರಾಜು ಕುಟುಂಬಸ್ಥರ ಆರೋಪ. ಚಾಮರಾಜನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿತ್ತಿದ್ದಾರೆ. ತನ್ನ ತಾಯಿಯ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಸಿದ್ದಾರಾಜುವನ್ನು ಕೊಂದ ಮಣಿಕಂಠ ಜೈಲು ಸೇರಿದ್ದಾನೆ. ಇತ್ತ ಕೊಲೆಯಾದ ಸಿದ್ದರಾಜು ಹಾಗು ಕೊಲೆ ಮಾಡಿದ ಮಣಿಕಂಠ ಹೀಗೆ ಇಬ್ಬರ ಮನೆಯಲ್ಲು ನೀರವ ಮೌನ ಆವರಿಸಿದೆ.