ಬಾಯ್‌ಫ್ರೆಂಡ್ ಹಾಗೂ ಗರ್ಲ್‌ಫ್ರೆಂಡ್ ಪ್ರಯಾಣಿಸುತ್ತಿದ್ದ ಆಟೋರಿಕ್ಷಾದೊಳಗೆ 30 ವರ್ಷದ ಮಹಿಳೆಯನ್ನು ಆಕೆಯ ಪ್ರಿಯಕರ ಕೊಲೆ ಮಾಡಿದ್ದಾರೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ.
ಮುಂಬೈ (ಮಹಾರಾಷ್ಟ್ರ): ದೇಶದಲ್ಲಿ ಬಾಯ್‌ಫ್ರೆಂಡ್‌ಗಳು ಗರ್ಲ್‌ಫ್ರೆಂಡ್‌ಗಳ ಮೇಲೆ ಅಥವಾ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿರುವವರನ್ನೇ ಭೀಕರವಾಗಿ ಹತ್ಯೆ ಮಾಡುವ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಲೇ ಇವೆ. ಇದೇ ರೀತಿ, ಮಹಾರಾಷ್ಟ್ರ ರಾಜಧಾನಿ ಮುಂಬೈನ ಸಾಕಿನಾಕಾ ಪ್ರದೇಶದ ಖೈರಾನಿ ರಸ್ತೆಯಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಬಾಯ್‌ಫ್ರೆಂಡ್ ಆಟೊರಿಕ್ಷಾದಲ್ಲೇ ತನ್ನ ಸಂಗಾತಿಯನ್ನು ಕೊಲೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಬಾಯ್‌ಫ್ರೆಂಡ್ ಹಾಗೂ ಗರ್ಲ್‌ಫ್ರೆಂಡ್ ಪ್ರಯಾಣಿಸುತ್ತಿದ್ದ ಆಟೋರಿಕ್ಷಾದಲ್ಲೇ 30 ವರ್ಷದ ಮಹಿಳೆಯನ್ನು ಆಕೆಯ ಪ್ರಿಯಕರ ಕೊಲೆ ಮಾಡಿದ್ದಾರೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ. ಈ ಘಟನೆಯಲ್ಲಿ ಮೃತ ಮಹಿಳೆಯನ್ನು ಸಂಘರ್ಷ್ ನಗರ ಚಂಡಿವಾಲಿ ನಿವಾಸಿಯಾಗಿದ್ದ 30 ವರ್ಷದ ಪಂಚಶೀಲಾ ಅಶೋಕ್ ಜಾಮ್ದಾರ್ ಎಂದು ಗುರುತಿಸಲಾಗಿದೆ.
ಇದನ್ನು ಓದಿ: ಆಶ್ರಮದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಸ್ವಾಮೀಜಿ ಅರೆಸ್ಟ್
ಆಟೋ ಪ್ರಯಾಣದ ವೇಳೆ ಆಕೆ ಮತ್ತು ಆರೋಪಿ ನಡುವೆ ಮಾರಾಮಾರಿ ನಡೆದಾಗ ಆಕೆಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನು, ಈ ಪ್ರಕರಣದ ಆರೋಪಿಯನ್ನು ದೀಪಕ್ ಬೋರ್ಸೆ ಎಂದು ಗುರುತಿಸಲಾಗಿದೆ. ಆರೋಪಿ ಆಟೋರಿಕ್ಷಾದೊಳಗೆ ಹುಡುಗಿಯ ಕತ್ತನ್ನು ಹರಿತವಾದ ಆಯುಧವನ್ನು ಸೀಳಿ ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದ್ದ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.
ಅಷ್ಟೇ ಅಲ್ಲದೆ, ಆರೋಪಿ ದೀಪಕ್ ಬೋರ್ಸೆ ಅದೇ ಹರಿತವಾದ ಆಯುಧದಿಂದ ತನ್ನ ಕತ್ತನ್ನು ಕೊಚ್ಚಿಕೊಂಡು ತನ್ನ ಜೀವನವನ್ನು ಅಂತ್ಯಗೊಳಿಸಲು ಪ್ರಯತ್ನಿಸಿದನು" ಎಂದೂ ಸಕಿನಾಕಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ, ಈ ಬಗ್ಗೆ ದಾರಿಹೋಕರು ಪೊಲೀಸರಿಗೆ ಎಚ್ಚರಿಕೆ ನೀಡಿದರು. ಬಳಿಕ, ಇಬ್ಬರನ್ನೂ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಹಿಳೆ ಮೃತಪಟ್ಟಿದ್ದಾಳೆ ಎಂದು ಘೋಷಿಸಲಾಗಿದೆ. ಆರೋಪಿ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿರುವ ಬಗ್ಗೆ ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ. ಬಳಿಕ, ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಮತ್ತೊಂದು ನಿರ್ಭಯಾ ಕೇಸ್ ಆತಂಕ: ಕಾರಿನಲ್ಲಿ ಮಧ್ಯರಾತ್ರಿ ಕೂಗಿಕೊಂಡ ಮಹಿಳೆ; ಚೇಸ್ ಮಾಡಿದ್ರೂ ಸಿಗದೆ ಪರಾರಿ!
ಇನ್ನೊಂದೆಡೆ, ಆರೋಪಿ ತಾನು ಕತ್ತು ಕೊಯ್ದುಕೊಂಡರೂ ಸ್ಥಳದಿಂದ ಎಸ್ಕೇಪ್ ಅಗಲು ಪ್ರಯತ್ನಿಸಿದ್ದಾರೆ. ಆದರೆ, ಸಕಿನಾಕಾ ಪೊಲೀಸರು ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿದೆ. ಆತ್ಮಹತ್ಯೆಯ ವಿಫಲ ಯತ್ನದಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದರೂ, ಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದೂ ತಿಳಿದುಬಂದಿದೆ. ಸಕಿನಾಕಾ ಪೊಲೀಸರು ದೀಪಕ್ ಬೋರ್ಸೆ ವಿರುದ್ಧ ಕೊಲೆಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇನ್ನು, ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದೂ ವರದಿಯಾಗಿದೆ.
ಇದನ್ನೂ ಓದಿ: ಇದಪ್ಪಾ ಶಿಕ್ಷೆ ಅಂದ್ರೆ! ಅಪ್ರಾಪ್ತ ಸೋದರ ಸಂಬಂಧಿ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ ಪಾಪಿಗೆ 135 ವರ್ಷ ಸೆರೆವಾಸ