ದಾವಣಗೆರೆಯಲ್ಲಿ ಅನೈತಿಕ ಸಂಬಂಧ ಹೊಂದಿದ್ದ ಪ್ರಿಯಕರನಿಂದಲೇ ಮಹಿಳೆಯ ಹತ್ಯೆ, ಕೊಲೆಯಾಗಿ ನಾಲ್ಕು ತಿಂಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದೇ ರೋಚಕ.
ವರದಿ: ವರದರಾಜ್ , ಏಷ್ಯಾನೆಟ್ ಸುವರ್ಣನ್ಯೂಸ್
ದಾವಣಗೆರೆ (ಜೂನ್ 20): ಮಹಿಳೆಯೊಬ್ಬಳು ನಾಲ್ಕು ತಿಂಗಳ ಹಿಂದೆ ಕಾಣೆಯಾಗಿದ್ದ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ವಿವಾಹಿತೆಯಾದರೂ ಬೇರೊಬ್ಬನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದು, ಆತನಿಂದಲೇ ಕೊಲೆಯಾಗಿ ಶವ ಕೂಡ ಸಿಗದ ಹಾಗೆ ಹಾಕಿ ಸುಟ್ಟು ಹಾಕಿದ ಪ್ರಕರಣವನ್ನು ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲ್ಲೂಕಿನ ಹಲವಾಗಲು ಠಾಣೆ ಪೊಲೀಸರು ಭೇದಿಸಿದ್ದಾರೆ.
ಹಲವಾಗಲು ಠಾಣಾ ವ್ಯಾಪ್ತಿಯ ನಿಟ್ಟೂರು ಗ್ರಾಮದ ವಿವಾಹಿತ ಮಹಿಳೆ ಕವಿತಾ ಕುಂಚೂರು ಗ್ರಾಮದ ಸಲೀಂ ಮುನ್ನಾಖಾನ್ ಎನ್ನವನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಕಳೆದ ನಾಲ್ಕು ತಿಂಗಳ ಹಿಂದೆ ಇದ್ದಕಿದ್ದಂತೆ ಮಹಿಳೆಯೊಬ್ಬರು ಕಾಣೆಯಾಗಿದ್ದಳು, ತವರು ಮನೆಯಾದ ದಾವಣಗೆರೆಯ ಅಲೂರು ಗ್ರಾಮದಲ್ಲಿದ್ದ ಕವಿತಾ ಕಳೆದ ಫೆಬ್ರವರಿ 23 ರಂದು ಹರಿಹರಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವಳು ಬಂದಿರಲಿಲ್ಲ. ಅಲ್ಲದೆ ಗಂಡನ ಮನೆ ನಿಟ್ಟೂರಿಗೂ ಕೂಡ ಹೋಗದ ಕಾರಣ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರನ್ನು ನೀಡಿದ್ದರು.
ಹಾಲು ತಗೊಂಡೋಗು ಅಂದ್ರೆ, ಮಗಳ ಪ್ರಾಣನೇ ಹೊತ್ತೊಯ್ದ ಹಾಲಿನ ವಾಹನ
ಆದರೆ ಹರಿಹರಕ್ಕೆ ಹೋಗುವುದಾಗಿ ಹೇಳಿದ್ದ ಕವಿತಾ ಸೀದಾ ಹೋಗಿದ್ದು ತೆಲಗಿ ಗ್ರಾಮಕ್ಕೆ, ಇಲ್ಲಿಗೆ ಬಂದಿದ್ದ ಕವಿತಾಳನ್ನು ಅನೈತಿಕ ಸಂಬಂಧವಿಟ್ಟುಕೊಂಡಿದ್ದ ಆರೋಪಿ ಸಲೀಂ ತನ್ನ ಬೈಕ್ ಮೇಲೆ ಕೂರಿಸಿಕೊಂಡು ಕುಂಚೂರಿನ ಕೆರೆಯಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದುದಿದ್ದಾನೆ. ಈ ವೇಳೆ ಫೋನ್ ನಲ್ಲಿ ಮಾತನಾಡುವ ವಿಚಾರಕ್ಕೆ ಇಬ್ಬರ ನಡುವೆ ಜಗಳ ಆರಂಭವಾಗಿದೆ. ಯಾವಾಗಲೂ ಪೋನ್ ನಲ್ಲಿ ಬ್ಯುಸಿ ಬರ್ತಾ ಇರುತ್ತದೆ, ನನ್ನನ್ನು ಬಿಟ್ಟು ಬೇರೊಬ್ಬನ ಜೊತೆ ಸಂಬಂಧ ಇಟ್ಟುಕೊಂಡಿದ್ದೀಯಾ ಎಂದು ಸಲೀಂ ಕವಿತಾಳನ್ನು ಪ್ರಶ್ನೆಸಿ ಜೋರಾಗಿ ಜಗಳವಾಡಿದ್ದಾನೆ. ಅಲ್ಲದೆ ಜಗಳ ವಿಕೋಪಕ್ಕೆ ತಿರುಗಿದ್ದು, ಕೋಪಗೊಂಡ ಸಲೀಂ ಕವಿತಾಳ ಕತ್ತು ಹಿಸುಕಿ ಸಾಯಿಸಿದ್ದಾನೆ.
ಮತ್ತೊಂದು ನಿರ್ಭಯಾ ಕೇಸ್ ಆತಂಕ: ಕಾರಿನಲ್ಲಿ ಮಧ್ಯರಾತ್ರಿ ಕೂಗಿಕೊಂಡ ಮಹಿಳೆ; ಚೇಸ್
ಈ ವಿಷಯ ಯಾರಿಗೂ ಗೊತ್ತಾಗದಂತೆ ತಡೆಯಲು ಸಲೀಂ ಪರಿಚಯಸ್ಥರ ಜಮೀನಿನಲ್ಲಿ ಆಕೆಯ ಶವವನ್ನು ಕಟ್ಟಿಗೆಯಲ್ಲಿ ಸುಟ್ಟು ಹಾಕಿ ಮನೆಗೆ ಹಿಂತಿರುಗಿದ್ದಾನೆ. ಘಟನೆ ನಡೆದು ಕೆಲ ದಿನಗಳ ನಂತರ ಅಲ್ಲಿ ನಡೆದಿರುವ ಘಟನೆಯನ್ನು ಆರೋಪಿ ತನ್ನ ಸ್ನೇಹಿತನ ಬಳಿ ಹೇಳಿಕೊಂಡಿದ್ದಾನೆ. ನೀನು ಕೂಡ ಅದೇ ಸಮುದಾಯಕ್ಕೆ ಸೇರಿದ ವ್ಯಕ್ತಿ ನೀನು ನನ್ನನ್ನು ಕಾಪಾಡು, ನನಗೆ ಹೆಂಡತಿ ಮಕ್ಕಳಿದ್ದಾರೆ ಎಂದು ಬೇಡಿಕೊಂಡಿದ್ದಾನೆ. ಈ ವಿಚಾರ ಕವಿತಾಳ ಕುಟುಂಬಸ್ಥರಿಗೆ ತಿಳಿಯಿತು. ತಕ್ಷಣ ಆಕೆಯ ಮನೆಯವರು ವಿಚಾರವನ್ನು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಇದರಿಂದ ಆರೋಪಿಯನ್ನು ಕರೆತಂದು ವಿಚಾರಣೆ ನಡೆಸಿದಾಗ ಪ್ರಕರಣದ ಮಾಹಿತಿ ನೀಡಿದ್ದಾನೆ. ಅರೋಪಿ ಸಲೀಂ ನನ್ನ ಹಲವಾಗಲು ಠಾಣೆ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ