23ನೇ ಮಹಡಿಯಿಂದ ಕೆಳಗೆ ಹಾರಿ ಸಾವಿಗೆ ಶರಣಾದ ಮುಂಬೈನ ಖ್ಯಾತ ಬಿಲ್ಡರ್

Published : Oct 21, 2022, 11:18 AM ISTUpdated : Oct 21, 2022, 11:19 AM IST
23ನೇ ಮಹಡಿಯಿಂದ ಕೆಳಗೆ ಹಾರಿ ಸಾವಿಗೆ ಶರಣಾದ ಮುಂಬೈನ ಖ್ಯಾತ ಬಿಲ್ಡರ್

ಸಾರಾಂಶ

ಮುಂಬೈನ ಖ್ಯಾತ ಬಿಲ್ಡರ್ ಒಬ್ಬರು ಕಟ್ಟಡವೊಂದರ 23ನೇ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪರಾಸ್ ಪೊರ್ವಾಲ್ ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ.

ಮುಂಬೈ: ಮುಂಬೈನ ಖ್ಯಾತ ಬಿಲ್ಡರ್ ಒಬ್ಬರು ಕಟ್ಟಡವೊಂದರ 23ನೇ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪರಾಸ್ ಪೊರ್ವಾಲ್ ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ. ಮುಂಬೈನ ಚಿಂಚ್‌ಪೋಕ್ಲಿ ರೈಲು ನಿಲ್ದಾಣದ ಬಳಿಯ ಶಾಂತಿ ಕಮಲ್ ಹೌಸಿಂಗ್ ಸೊಸೈಟಿ ಕಟ್ಟಡದಲ್ಲಿರುವ ತಮ್ಮ ನಿವಾಸದ ಬಳಿ ಅವರು ಸಾವಿಗೆ ಶರಣಾಗಿದ್ದಾರೆ. ಗುರುವಾರ ಮುಂಜಾನೆ 6 ಗಂಟೆಗೆ ಈ ಅವಘಡ ಸಂಭವಿಸಿದೆ. ತಮ್ಮ ನಿವಾಸದ ಜಿಮ್ ಸಮೀಪದ ಬಾಲ್ಕನಿಯಿಂದ ಕೆಳಗೆ ಹಾರಿ 57 ವರ್ಷದ ಪರಾಸ್ ಪೊರ್ವಾಲ್ ಜೀವ ಕಳೆದುಕೊಂಡಿದ್ದಾರೆ.

ಬಿಲ್ಡರ್ ಹಾಗೂ ರಿಯಲ್ ಎಸ್ಟೇಟ್ ಡೆವಲಪರ್ (Real Estate developer) ಆಗಿದ್ದ ಇವರು ತನ್ನ ಸಾವಿಗೆ ಬೇರಾರು ಕಾರಣರಲ್ಲ. ಈ ಬಗ್ಗೆ ಯಾವುದೇ ತನಿಖೆ ಮಾಡುವುದು ಬೇಡ ಎಂದು ಡೆತ್‌ನೋಟ್‌ ಬರೆದಿಟ್ಟು ಸಾವಿಗೆ ಶರಣಾಗಿದ್ದಾರೆ. ಅವರ ಜಿಮ್‌ನಲ್ಲಿ ಈ ಡೆತ್‌ನೋಟ್(DeathNote) ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಓಂ ಶಾಂತಿ ಎಂಬ ನಿರ್ಮಾಣ ಸಂಸ್ಥೆಯನ್ನು ನಡೆಸುತ್ತಿದ್ದ ಪರಾಸ್ (Paras Porwal) ಮೂಲತಃ ರಾಜಸ್ಥಾನದವರಾಗಿದ್ದು(Rajasthan), ಪತ್ನಿ(Wife) ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. 

ಸಾಲ ಮಾಡಿ ಖರೀದಿಸಿದ ಟ್ರಾಕ್ಟರ್ ಸೀಜ್, ಚೆಕ್ ಬೌನ್ಸ್: ರೈತ ಆತ್ಮಹತ್ಯೆ

ಜಿಮ್‌ನ (Gym)ಬಾಲ್ಕನಿಯಿಂದ ಕೆಳಗೆ ಹಾರಿದ್ದರಿಂದ ರಸ್ತೆಗೆ ಬಿದ್ದು ಮೃತಪಟ್ಟಿದ್ದು,  ಚಿಂಚ್‌ಪೋಕ್ಲಿಯಲ್ಲಿರುವ ಶಾಂತಿ ಕಮಲ್ ಕೋ ಆಪರೇಟಿವ್ ಸೊಸೈಟಿಯ (Shanti Kamal co-operative Society) ಭದ್ರತಾ ಸಿಬ್ಬಂದಿಗೆ ಆ ರಸ್ತೆಯಲ್ಲಿ ಸಾಗುತ್ತಿದ್ದವರೊಬ್ಬರು ರಸ್ತೆಯಲ್ಲಿ ಶವವಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ನಂತರ ಸೊಸೈಟಿಯ ಭದ್ರತಾ ಸಿಬ್ಬಂದಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಮೀಪದ ಆಸ್ಪತ್ರೆಗೆ ಸಾಗಿಸಿದ್ದಾರೆ. ಸಾವಿನ ಹಿಂದಿನ ಕಾರಣದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.  

ತಾಲಿಬಾನ್ ಉಗ್ರರು ಕಲ್ಲೆಸೆದು ಕೊಲ್ಲೋ ಮೊದಲು ಸಾವಿಗೆ ಶರಣಾದ ಮಹಿಳೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!
ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!