Sports Braದಲ್ಲಿ ಅಕ್ರಮ ಚಿನ್ನ ಸಾಗಾಟ; ಕಸ್ಟಮ್ಸ್ ಬಲೆಗೆ ಬಿದ್ದ ಮಹಿಳೆ

Published : Oct 21, 2022, 08:40 AM ISTUpdated : Oct 21, 2022, 08:44 AM IST
Sports Braದಲ್ಲಿ  ಅಕ್ರಮ ಚಿನ್ನ ಸಾಗಾಟ; ಕಸ್ಟಮ್ಸ್ ಬಲೆಗೆ ಬಿದ್ದ ಮಹಿಳೆ

ಸಾರಾಂಶ

ವಿದೇಶಗಳಿಂದ ಅಕ್ರಮವಾಗಿ ದೇಶದೊಳಕ್ಕೆ ಚಿನ್ನ, ಡ್ರಗ್ಸ ಸಾಗಿಸುವ ಕ್ರಿಮಿನಲ್‌ಗಳು ವಿಮಾನ ಪ್ರಯಾಣ ವೇಳೆ ಏನೆಲ್ಲ ಸರ್ಕಸ್ ಮಾಡ್ತಾರೆ ನೋಡಿ. ಇತ್ತೀಚೆಗೆ ನೂರಕ್ಕೂ ಹೆಚ್ಚು ಡ್ರಗ್ಸ್ ಕ್ಯಾಪ್ಸೋಲ್‌ಗಳನ್ನು ಹೊಟ್ಟೆಯಲ್ಲಿಟ್ಟುಕೊಂಡು ಬಂದಿದ್ದ ವಿದೇಶಿ ಪ್ರಜೆ. ಇದೀಗ ಚಿನ್ನ ಸಾಗಿಸಲು ಇಂಥದ್ದೇ ವಿಫಲ ಯತ್ನ ಮಾಡಿ ಮಹಿಳೆಯೊಬ್ಬಳು ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾಳೆ.

ಬೆಂಗಳೂರು ಗ್ರಾಮಾಂತರ (ಅ.21): ವಿದೇಶಗಳಿಂದ ಅಕ್ರಮವಾಗಿ ದೇಶದೊಳಕ್ಕೆ ಚಿನ್ನ, ಡ್ರಗ್ಸ ಸಾಗಿಸುವ ಕ್ರಿಮಿನಲ್‌ಗಳು ವಿಮಾನ ಪ್ರಯಾಣ ವೇಳೆ ಏನೆಲ್ಲ ಸರ್ಕಸ್ ಮಾಡ್ತಾರೆ ನೋಡಿ. ಇತ್ತೀಚೆಗೆ ನೂರಕ್ಕೂ ಹೆಚ್ಚು ಡ್ರಗ್ಸ್ ಕ್ಯಾಪ್ಸೋಲ್‌ಗಳನ್ನು ಹೊಟ್ಟೆಯಲ್ಲಿಟ್ಟುಕೊಂಡು ಬಂದಿದ್ದ ವಿದೇಶಿ ಪ್ರಜೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದ. ಇನ್ನು ಕೆಲವರು ಶೂ, ಬಾಟಲ್, ಪೆನ್ ಸೇರಿದಂತೆ ಚಿನ್ನ, ಡ್ರಗ್ಸ್ ಇಟ್ಟು ಭಾರತಕ್ಕೆ ಸಾಗಿಸಲು ಯತ್ನಿಸಿ ಸಿಕ್ಕಿಬಿದ್ದಿದ್ದಾರೆ. ಇದೀಗ ಮತ್ತೊಂದು ಅಂಥದೇ ವಿಫಲ ಯತ್ನ ಮಾಡಿರುವ ಮಹಿಳೆ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾಳೆ.

ಸ್ಪೋರ್ಟ್ಸ್  ಬ್ರಾ, ಪ್ಯಾಡ್ ನಲ್ಲಿ ಮರೆಮಾಚಿ ಅಕ್ರಮವಾಗಿ ಚಿನ್ನ ಸಾಗಣಿಕೆ  ಮಾಡುತ್ತಿದ್ದ ಮಹಿಳೆಯನ್ನು ಬೆಂಗಳೂರು  ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ,  ಆರೋಪಿಯಿಂದ 17 ಲಕ್ಷ ಮೌಲ್ಯದ   348 ಗ್ರಾಂ  ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಆಕ್ಟೋಬರ್  8 ರ ಬೆಳಗ್ಗೆ  ಎಮಿರೇಟ್ಸ್ ಏರ್ ಲೈನ್ಸ್ ನ EK564 ವಿಮಾನದಲ್ಲಿ ಬೆಂಗಳೂರಿನ ಕೆಂಪೇಗೌಡ  ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಹಿಳೆ ಬಂದಿದ್ದು,  ಆಕೆ ನಡೆದುಕೊಂಡು ಬರುತ್ತಿದ್ದ ಭಂಗಿ ಮತ್ತು ಆಕೆ ಧರಿಸಿದ ಒಳಉಡುಪು ಅಸಹಜವಾಗಿ ಕಂಡು ಬಂದಿತ್ತು.

ಅನುಮಾನಗೊಂಡ ಕಸ್ಟಮ್ಸ್ ನ ಮಹಿಳಾ  ಅಧಿಕಾರಿಗಳು ಆಕೆಯನ್ನ ತಡೆದು ವಿಚಾರಣೆ ನಡೆಸಿದ್ದಾಗ  ಸಂಶಯಾಸ್ಪದ ರೀತಿಯಲ್ಲಿ ಉತ್ತರ ನೀಡಿದಳು, ಆಕೆಯನ್ನ ವಶಕ್ಕೆ  ಪಡೆದ ಮಹಿಳಾ ಅಧಿಕಾರಿಗಳು ಆಕೆ ಧರಿಸಿಧ ಒಳ ಉಡುಪು ತೆಗೆಯುವಂತೆ ಹೇಳಿದ್ದಾರೆ, ಸ್ಪೋರ್ಟ್ಸ್  ಬ್ರಾ ಒಳಗಡೆ ಇದ್ದ ಪ್ಯಾಡ್ ನಲ್ಲಿ ಚಿನ್ನವನ್ನ ಬಚ್ಚಿಟ್ಟಿರುವುದು ಬೆಳಕಿಗೆ ಬಂದಿದೆ,  17,53,630 ಮೌಲ್ಯದ  348 ಗ್ರಾಂ  ಚಿನ್ನವನ್ನ  ವಶಕ್ಕೆ  ಪಡೆದಿರು ಕಸ್ಟಮ್ಸ್  ಅಧಿಕಾರಿಗಳು  ವಿಚಾರಣೆ  ಮುಂದುವರೆಸಿದ್ದಾರೆ.

ಬೆನ್ನು ನೋವಿನ ಬೆಲ್ಟ್‌ನಲ್ಲಿ 1.277 ಕೇಜಿ ಚಿನ್ನ ಸಾಗಾಟ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!
ಬೆಂಗಳೂರಲ್ಲಿ ಹೊಟ್ಟೆಪಾಡಿಗೆ ಕಳ್ಳತನ ಮಾಡ್ತಿದ್ದ ಕಳ್ಳನನ್ನೇ ರಾಬರಿ ಮಾಡಿದ ಖತರ್ನಾಕ್ ಕಿತಾಪತಿಗಳು!