Latest Videos

ಅಯ್ಯೋ ಇದೆಂತ ದುರಂತ: ತಾಯಿ ಅಂತ್ಯಸಂಸ್ಕಾರಕ್ಕೆ ಹೋಗ್ತಿದ್ದ ಪುತ್ರ ರಸ್ತೆಯಲ್ಲಿ ಹೆಣವಾದ!

By BK AshwinFirst Published Aug 11, 2023, 6:49 PM IST
Highlights

ಕೇವಲ 12 ಗಂಟೆಗಳ ಅಂತರದಲ್ಲಿ ತಾಯಿ ಮತ್ತು ಮಗ ಅಪಘಾತದಲ್ಲಿ ಮೃತಪಟ್ಟಿದ್ದಾರೆ.  ರೇವಾ ಜಿಲ್ಲೆಯಲ್ಲಿ ನಡೆದ ಬೈಕ್ ಅಪಘಾತದಲ್ಲಿ ಮಹಿಳೆ ಮೃತಪಟ್ಟಿದ್ದರು. ಬಳಿಕ, ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಇಂದೋರ್‌ನಿಂದ ಧಾವಿಸುತ್ತಿರುವಾಗ ಆಕೆಯ ಮಗನೂ ಬಲಿಯಾಗಿದ್ದಾನೆ ಎಂದು ವರದಿಯಾಗಿದೆ.

ಭೋಪಾಲ್ (ಆಗಸ್ಟ್‌ 11, 2023): ಮಧ್ಯಪ್ರದೇಶದಲ್ಲಿ ನಡೆದ ಎರಡು ದುರಂತದಲ್ಲಿ ಕೇವಲ 12 ಗಂಟೆಗಳ ಅಂತರದಲ್ಲಿ ತಾಯಿ ಮತ್ತು ಮಗ ಅಪಘಾತದಲ್ಲಿ ಮೃತಪಟ್ಟಿದ್ದಾರೆ.  ರೇವಾ ಜಿಲ್ಲೆಯಲ್ಲಿ ನಡೆದ ಬೈಕ್ ಅಪಘಾತದಲ್ಲಿ ಮಹಿಳೆ ಮೃತಪಟ್ಟಿದ್ದರು. ಬಳಿಕ, ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಇಂದೋರ್‌ನಿಂದ ಧಾವಿಸುತ್ತಿರುವಾಗ ಆಕೆಯ ಮಗನೂ ಬಲಿಯಾಗಿದ್ದಾನೆ ಎಂದು ವರದಿಯಾಗಿದೆ.

ಈ ಹಿನ್ನೆಲೆ ರಾಣಿ ದೇವಿ (55) ಮತ್ತು ಅವರ ಎರಡನೇ ಮಗ ಸೂರಜ್ ಸಿಂಗ್ (22) ಅಂತ್ಯಕ್ರಿಯೆಯನ್ನು ಗುರುವಾರ ರೇವಾದಲ್ಲಿರುವ ಅವರ ಸ್ಥಳೀಯ ಗ್ರಾಮವಾದ ಜಾತ್ರಿಯಲ್ಲಿ ಜತೆಗೇ ನೆರವೇರಿಸಲಾಯಿತು ಎಂದು ತಿಳಿದುಬಂದಿದೆ. ರಾಣಿ ದೇವಿಯ ಪತಿ ಹಲವು ವರ್ಷಗಳ ಹಿಂದೆಯೇ ನಿಧನರಾಗಿದ್ದರು. ಈ ಹಿನ್ನೆಲೆ ತಾಯಿಯೇ ತಮ್ಮ ಮೂವರು ಗಂಡು ಮತ್ತು ಮೂವರು ಹೆಣ್ಣು ಮಕ್ಕಳನ್ನು ಬೆಳೆಸಿದ್ದರು. 

ಇದನ್ನು ಓದಿ: ಮಗಳನ್ನು ಕೊಂದು ಮೃತದೇಹ ಬೈಕ್‌ಗೆ ಕಟ್ಟಿ, ರಸ್ತೆಯಲ್ಲಿ ಎಳೆದೊಯ್ದ: ಕೊನೆಗೆ ರೈಲ್ವೆ ಹಳಿ ಮೇಲೆ ಎಸೆದ ಪಾಪಿ ತಂದೆ

ಉತ್ತರ ಪ್ರದೇಶ ಗಡಿಗೆ ಸಮೀಪವಿರುವ ಗ್ರಾಮದಲ್ಲಿ  ತನ್ನ ಹಿರಿಯ ಮತ್ತು ಕಿರಿಯ ಮಕ್ಕಳಾದ ಪ್ರಕಾಶ್ ಮತ್ತು ಸನ್ನಿಯೊಂದಿಗೆ ತಾಯಿ ವಾಸ ಮಾಡ್ತಿದ್ದರು. ಇನ್ನೊಂದೆಡೆ, ಎರಡನೇ ಮಗ ಸೂರಜ್‌  830 ಕಿಮೀ ದೂರದ ಇಂದೋರ್‌ನಲ್ಲಿ ವಾಸಿಸುತ್ತಿದ್ದ. ಬುಧವಾರ, ರಾಣಿ ದೇವಿ ದ್ವಿಚಕ್ರ ವಾಹನದಲ್ಲಿ ಸನ್ನಿಯೊಂದಿಗೆ ತನ್ನ ತಾಯಿಯ ಸ್ಥಳಕ್ಕೆ ಹೋಗುತ್ತಿದ್ದಾಗ ಅವರ ಗ್ರಾಮದಿಂದ 12 ಕಿಮೀ ದೂರದಲ್ಲಿರುವ ದಬೌರಾದಲ್ಲಿ ಮೋಟಾರ್‌ ಸೈಕಲ್‌ವೊಂದಕ್ಕೆ ಡಿಕ್ಕಿ ಹೊಡೆದು ಅಪಘಾತವಾಗಿದೆ. 

ನಂತರ, ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಲ್ಲಿನ ವೈದ್ಯರು ತಾಯಿಯನ್ನು 80 ಕಿ.ಮೀ. ದೂರದ ರೇವಾ ಆಸ್ಪತ್ರೆಗೆ ಸೇರಲು ರೆಫರ್‌ ಮಾಡಿದರು. ಆದರೆ, ತಾಯಿ ದಾರಿಯ ಮಧ್ಯದಲ್ಲೇ ಮೃತಪಟ್ಟಿದ್ದಾರೆ ಎಂದು ಜಾತ್ರಿ ಗ್ರಾಮದ ಸರಪಂಚ್ ಸಾಂತ್ರಾ ದೇವಿ ಅವರು ತಿಳಿಸಿದ್ದಾರೆ. ಇನ್ನೊಂದೆಡೆ, ಮಗ ಸನ್ನಿಗೆ ಮೂಳೆ ಮುರಿತವುಂಟಾಗಿದೆ ಎಂದೂ ತಿಳಿದುಬಂದಿದೆ.

ಇದನ್ನೂ ಓದಿ: ಸಲಿಂಗಿ ಎಂದು ಹೀಯಾಳಿಸ್ತಿದ್ದ ಸೀನಿಯರ್ಸ್‌: ಹಾಸ್ಟೆಲ್‌ ಬಾಲ್ಕನಿಯಿಂದ ಬಿದ್ದು ವಿದ್ಯಾರ್ಥಿ ಆತ್ಮಹತ್ಯೆ

ತಾಯಿಯ ಸಾವಿನ ಸುದ್ದಿ ತಿಳಿದ ತಕ್ಷಣ ಸೂರಜ್ ಇಂದೋರ್‌ನಿಂದ ತನ್ನ ಊರಿಗೆ ಹೊರಟರು. ಸ್ನೇಹಿತ, ಅಭಿಷೇಕ್ ಸಿಂಗ್ ಕಾರಿನಲ್ಲಿ ತನ್ನ ಗೆಳೆಯನೊಂದಿಗೆ ಬಾಡಿಗೆ ಚಾಲಕನೊಂದಿಗೆ ಜಾತ್ರಿ ಗ್ರಾಮಕ್ಕೆ ಹೊರಟರು. ಆದರೆ, ಗ್ರಾಮದಿಂದ ಸುಮಾರು 100 ಕಿಮೀ ದೂರದಲ್ಲಿ, ಸತ್ನಾ ಜಿಲ್ಲೆಯ ರಾಮ್‌ಪುರ ಬಘೇಲಾನ್‌ನಲ್ಲಿ ಕಾರು ಅಪಘಾತಕ್ಕೀಡಾಗಿದೆ. 

“ಬೆಳಗ್ಗೆ 7 ಗಂಟೆ ಸುಮಾರಿಗೆ ನಮಗೆ ಮಾಹಿತಿ ಬಂದಿದೆ. ಟೈರ್ ಒಡೆದು ಕಾರು ನಿಯಂತ್ರಣ ತಪ್ಪಿ ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಮೂವರನ್ನೂ ರೇವಾ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಸೂರಜ್ ಮೃತಪಟ್ಟಿದ್ದು ಮತ್ತು ಇತರ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ’’ ಎಂದು ರಾಂಪುರ ಬಾಘೇಲನ್ ಪೊಲೀಸ್ ಠಾಣೆಯ ಉಸ್ತುವಾರಿ ಸಂದೀಪ್ ಚತುರ್ವೇದಿ ತಿಳಿಸಿದರು. 
ಇನ್ನು, ಈ ಅಪಘಾತಗಳಿಂದ ಇಡೀ ಗ್ರಾಮ ತಲ್ಲಣಗೊಂಡಿದೆ. ಒಂದೇ ದಿನದಲ್ಲಿ 2 ದುರಂತಗಳನ್ನು ಯಾರೂ ಸಹಿಸಲಾರರು. ತಾಯಿ ಮತ್ತು ಮಗನನ್ನು ಒಟ್ಟಿಗೆ ಅಂತ್ಯಸಂಸ್ಕಾರ ಮಾಡುವುದನ್ನು ನೋಡುವುದು ಹೃದಯ ವಿದ್ರಾವಕವಾಗಿತ್ತು’’ ಎಂದು ಸರಪಂಚ್ ಸಂತ್ರಾ ದೇವಿ ಹೇಳಿದರು.

ಇದನ್ನೂ ಓದಿ: ಗೋವಾ ಕ್ಯಾಸಿನೋದಲ್ಲಿ 25 ಲಕ್ಷ ಗೆದ್ದ ಬೆಂಗಳೂರು ಚಾಯ್‌ವಾಲಾ; ಕಿಡ್ನ್ಯಾಪ್‌ ಮಾಡಿ ಹಣ ಎಗರಿಸಿದ ಸ್ನೇಹಿತರು!

click me!