ಮಗಳನ್ನು ಕೊಂದು ಮೃತದೇಹ ಬೈಕ್‌ಗೆ ಕಟ್ಟಿ, ರಸ್ತೆಯಲ್ಲಿ ಎಳೆದೊಯ್ದ: ಕೊನೆಗೆ ರೈಲ್ವೆ ಹಳಿ ಮೇಲೆ ಎಸೆದ ಪಾಪಿ ತಂದೆ

By BK Ashwin  |  First Published Aug 11, 2023, 4:37 PM IST

ದಲ್ಬೀರ್ ಸಿಂಗ್ ಎಂದು ಗುರುತಿಸಲಾದ ಆರೋಪಿಯು ತನ್ನ ಮಗಳ ಮೇಲೆ ತುಂಬಾ ಕೋಪಗೊಂಡಿದ್ದು, ಈ ಹಿನ್ನೆಲೆ ಸಿಟ್ಟಿನಲ್ಲಿ ಮಗಳನ್ನೇ ಕೊಲೆ ಮಾಡಿದ್ದಾರೆ.


ಅಮೃತಸರ (ಆಗಸ್ಟ್‌ 11, 2023): ಪಂಜಾಬ್‌ನ ಅಮೃತಸರ ಜಿಲ್ಲೆಯ ಮುಚಲ್ ಗ್ರಾಮದಲ್ಲಿ ಗುರುವಾರ 20 ವರ್ಷದ ಯುವತಿಯೊಬ್ಬಳನ್ನು ಆಕೆಯ ತಂದೆಯೇ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಅಲ್ಲದೆ, ಆಕೆಯನ್ನು  ಬೈಕ್‌ಗೆ ಕಟ್ಟಿ, ರಸ್ತೆಯ ಮೇಲೆ ಎಳೆದುಕೊಂಡು ಹೋಗಿದ್ದು, ನಂತರ ರೈಲು ಹಳಿಗಳ ಮೇಲೆ ಎಸೆದಿದ್ದಾರೆ ಎಂದೂ ತಿಳಿದುಬಂದಿದೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ದಲ್ಬೀರ್ ಸಿಂಗ್ ಎಂದು ಗುರುತಿಸಲಾದ ಆರೋಪಿಯು ತನ್ನ ಮಗಳ ಮೇಲೆ ತುಂಬಾ ಕೋಪಗೊಂಡಿದ್ದು, ಈ ಹಿನ್ನೆಲೆ ಸಿಟ್ಟಿನಲ್ಲಿ ಈ ಕೃತ್ಯವೆಸಗಿದ್ದಾರೆ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ. ಬುಧವಾರ ಯಾರಿಗೂ ತಿಳಿಸದೆ ಮನೆಯಿಂದ ಹೊರಹೋಗಿದ್ದ ಮಗಳು , ಮರುದಿನ ಮನೆಗೆ ಮರಳಿದ್ದಳು ಎಂದು ತಿಳಿದುಬಂದಿದ್ದು, ಈ ಹಿನ್ನೆಲೆ ತಂದೆ ಆಕ್ರೋಶದಿಂದ ಕೊಲೆ ಮಾಡಿರಬಹುದು ಎನ್ನಲಾಗಿದೆ. 

Tap to resize

Latest Videos

ಇದನ್ನು ಓದಿ: ಸಲಿಂಗಿ ಎಂದು ಹೀಯಾಳಿಸ್ತಿದ್ದ ಸೀನಿಯರ್ಸ್‌: ಹಾಸ್ಟೆಲ್‌ ಬಾಲ್ಕನಿಯಿಂದ ಬಿದ್ದು ವಿದ್ಯಾರ್ಥಿ ಆತ್ಮಹತ್ಯೆ

“ಗುರುವಾರ ಮಧ್ಯಾಹ್ನ ನನ್ನ ಮೊಮ್ಮಗಳು ಹಿಂತಿರುಗಿದಾಗ, ಮಗ ತುಂಬಾ ಕೋಪಗೊಂಡು ಅವಳನ್ನು ಥಳಿಸಲು ಪ್ರಾರಂಭಿಸಿದನು. ಬಳಿಕ, ಆತ ಕೆಲವು ಹರಿತವಾದ ಆಯುಧಗಳಿಂದ ಅವಳನ್ನು ಕೊಂದನು. ನಾವು ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ, ಅವನು ನಮ್ಮನ್ನು ಒಂದು ಕೋಣೆಯಲ್ಲಿ ಬಂಧಿಸಿ ನಮ್ಮನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದನು ಬಳಿಕ ಅಕೆಯ ಶವವನ್ನು ತೆಗೆದುಕೊಂಡು ಹೋಗಿದ್ದಾನೆ’ ಎಂದು ಆರೋಪಿಯ ತಂದೆ ಜೋಗಿಂದರ್ ಸಿಂಗ್ ಹೇಳಿದ್ದಾರೆ.

ಅಲ್ಲದೆ, "ಆರೋಪಿಯು ತನ್ನ ಕುಟುಂಬ ಸದಸ್ಯರನ್ನು ಮನೆಯಲ್ಲಿ ಬಂಧಿಸಿ ಅವರನ್ನೂ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂಬ ಮಾಹಿತಿಯೂ ನಮಗೆ ಬಂದಿದೆ. ಭಯದಿಂದಾಗಿ ಅವರು ಮನೆಯಿಂದ ಹೊರಬರಲು ಸಾಧ್ಯವಾಗಲಿಲ್ಲ" ಎಂದೂ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "ನನ್ನ ಮೊಮ್ಮಗಳು ಮನೆಯಿಂದ ಹೊರಟು ಹೋಗಿದ್ದಳು ಮತ್ತು ಅವಳು ಆಗಷ್ಟೇ ಹಿಂತಿರುಗಿದಳು. ಅವಳು ಹಿಂದಿರುಗಿದಾಗ, ಆಕೆಯ ತಂದೆ ಕೋಪಗೊಂಡರು ಮತ್ತು ಅವನು ಅವಳನ್ನು ಕೊಂದನು" ಎಂದು ಸಂತ್ರಸ್ತೆಯ ಅಜ್ಜಿಯೂ  ಹೇಳಿದರು.

ಇದನ್ನೂ ಓದಿ: ಗೋವಾ ಕ್ಯಾಸಿನೋದಲ್ಲಿ 25 ಲಕ್ಷ ಗೆದ್ದ ಬೆಂಗಳೂರು ಚಾಯ್‌ವಾಲಾ; ಕಿಡ್ನ್ಯಾಪ್‌ ಮಾಡಿ ಹಣ ಎಗರಿಸಿದ ಸ್ನೇಹಿತರು!

"ದಲ್ಬೀರ್ ಸಿಂಗ್ ನಿಹಾಂಗ್ ಸಿಖ್ ಆಗಿದ್ದು, ಮತ್ತು ಕಾರ್ಮಿಕನಾಗಿ ಕೆಲಸ ಮಾಡುತ್ತಾನೆ" ಎಂದು ತಾರೈಕ್ಕಾ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಅವತಾರ್ ಸಿಂಗ್ ಹೇಳಿದರು. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದೂ ಎಸ್‌ಎಚ್‌ಒ ಹೇಳಿದರು. ಹಾಗೂ, “ಇದು ಕೋಪದ ಭರದಲ್ಲಿ ಮಾಡಿದ ಅಪರಾಧದಂತೆ ತೋರುತ್ತಿದೆ. ಯುವತಿಯ ಹತ್ಯೆಯ ಹಿಂದಿನ ಕಾರಣವನ್ನು ಕಂಡುಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ. ಆಕೆಯನ್ನು ಕೊಂದ ನಂತರ ಆರೋಪಿ ಮಗಳ ಶವವನ್ನು ಬೈಕ್‌ಗೆ ಕಟ್ಟಿ ಎಳೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ. ಮಹಿಳೆಯ ದೇಹವನ್ನು ಕಟ್ಟಿಹಾಕಿ ಹಳ್ಳಿಯ ರಸ್ತೆಯಲ್ಲಿ ಪುರುಷನು ಮೋಟಾರ್‌ಸೈಕಲ್‌ನಲ್ಲಿ ಹೋಗುತ್ತಿರುವುದನ್ನು ಒಂದು ಸಿಸಿ ಕ್ಯಾಮೆರಾದ ದೃಶ್ಯಾವಳಿಯು ತೋರಿಸುತ್ತದೆ ಎಂದೂ ಪೊಲೀಸರು ಹೇಳಿದ್ದಾರೆ.

ಈ ಸಂಬಂಧ ಪೊಲೀಸರು ವ್ಯಕ್ತಿಯ ವಿರುದ್ಧ ಕೊಲೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದು, ಸದ್ಯ ಆತನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: 70 ಸಾವಿರ ರೂ. ಗೆ ಖರೀದಿಸಿದ ಪತ್ನಿಯನ್ನು ಕೊಲೆ ಮಾಡಿ ಕಾಡಿಗೆ ಎಸೆದ ಪತಿ: ಕಾರಣ ಹೀಗಿದೆ..!

click me!