ನಾಲ್ಕು ವರ್ಷಗಳ ಹಿಂದೆ ಎರಡು ಪ್ರತ್ಯೇಕ ಸಂದರ್ಭಗಳಲ್ಲಿ ತನ್ನ ಸ್ವಂತ ತಾಯಿಯನ್ನೇ ಅತ್ಯಾಚಾರ ಮಾಡಿದ್ದ ಹರಿದೇವಪುರದ 33 ವರ್ಷದ ವ್ಯಕ್ತಿಗೆ ನಗರ ನ್ಯಾಯಾಲಯವು ಇತ್ತೀಚೆಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.
ಕೋಲ್ಕತ್ತಾ (ಆ.11): ಬಹುಶಃ ಇದಕ್ಕಿಂತ ಹೀನ ಕೃತ್ಯ ಕೇಳಿರಲು ಸಾಧ್ಯವೇ ಇಲ್ಲ. ಜನ್ಮ ನೀಡಿದ ತಾಯಿಯನ್ನೇ ನಾಲ್ಕು ವರ್ಷಗಳ ಹಿಂದೆ ಎರಡು ಪ್ರತ್ಯೇಕ ಸಂದರ್ಭದಲ್ಲಿ ಅತ್ಯಾಚಾರ ಮಾಡಿದ ಪುತ್ರನಿಗೆ ಕೋಲ್ಕತ್ತಾದ ಕೋರ್ಟ್ ಜೀವಾವಧಿ ಶಿಕ್ಷೆ ನೀಡಿದೆ. ಕೋಲ್ಕತ್ತಾದ ಹರಿದೇವಪುರದ 33 ವರ್ಷದ ವ್ಯಕ್ತಿ ಈ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ನಗರ ನ್ಯಾಯಾಲಯ ತೀರ್ಮಾನ ಮಾಡಿದ್ದು, ಗುರುವಾರ ಆತನಿಗೆ ಜೀವಾವಧಿಯ ಶಿಕ್ಷೆಯನ್ನು ಪ್ರಕಟ ಮಾಡಿದೆ. ತೀವ್ರವಾಗಿ ಮಾದಕ ವ್ಯಸನಿಯಾಗಿದ್ದ ಆತ, 2019ರ ಮೊದಲು ಏಳು ಸಂದರ್ಭದಲ್ಲಿ ಮಾದಕ ವ್ಯಸನ ಮುಕ್ತ ಮಾಡುವ ಪುನರ್ವಸತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 2019ರ ಮೇ 5 ರಂದು ಸಂತ್ರಸ್ಥೆಯಿಂದಲೇ ದೂರು ದಾಖಲಾಗಿತ್ತು. 65 ವರ್ಷದ ಮಹಿಳೆ ಪಶ್ಚಿಮ ಬಂಗಾಳದ ಕೋಲ್ಕತ್ತಾದ ಹರಿದೇವಪುರ ಪೊಲೀಸ್ ಠಾಣೆಯಲ್ಲಿ ಸ್ವಂತ ಮಗನ ವಿರುದ್ಧವೇ ಅತ್ಯಾಚಾರದ ಕೇಸ್ ದಾಖಲು ಮಾಡಿದ್ದರು.
ತನ್ನ ಹಿರಿಯ ಮಗನ ಮದುವೆಯ ಬಳಿಕ ಆತ ನಮ್ಮದೇ ಇನ್ನೊಂದು ಮನೆಯಲ್ಲಿ ವಾಸ ಮಾಡಲು ಆರಂಭ ಮಾಡಿದ್ದ. ಈ ವೇಳೆ ನಾನು ನನ್ನ ಮನೆಯಲ್ಲಿ ಕಿರಿಯ ಮಗನೊಂದಿಗೆ ವಾಸವಿದ್ದೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದರು. ಈ ಮನೆಯಲ್ಲಿ ತನಗೆ ಆದ ಭಯಾನಕ ಘಟನೆಗಳನ್ನು ಆಕೆ ದೂರಿನಲ್ಲಿ ವಿವರಿಸಿದ್ದು, ಅದೇ ವರ್ಷದ ಏಪ್ರಿಲ್ 14ರಂದು ಕಿರಿಯ ಮಗ ನನ್ನ ಮೇಲೆ ಹಲ್ಲೆ ನಡೆಸಿದ್ದ. ಆದರೆ, ಸಾಮಾಜಿಕ ಕಳಂಕದ ಭಯ ನನ್ನನ್ನು ಆವರಿಸಿತ್ತು. ಅದಕ್ಕಾಗಿ ನಾನು ಈ ಬಗ್ಗೆ ಯಾರಿಗೂ ತಿಳಿಸಿರಲಿಲ್ಲ ಎಂದು ಹೇಳಿದ್ದಾರೆ.
ಆದರೆ, ನನ್ನ ಈ ಮೌನ ಆತನಿಗೆ ಇನ್ನಷ್ಟು ನನ್ನ ಮೇಲೆ ಹಿಂಸೆ ಮಾಡಲು ಪ್ರೇರೇಪಿಸಿದಂತೆ ಕಾಣುತ್ತದೆ. ಅದೇ ವರ್ಷದ ಮೇ 5 ರಂದು ಆತ ಇನ್ನಷ್ಟು ಹಿಂಸಾತ್ಮಕವಾಗಿ ವರ್ತನೆ ಮಾಡಿದ್ದ. ಇದಾದ ಬಳಿಕ ಆತನನ್ನು ಪೊಲೀಸರು ಬಂಧಿಸಿದ್ದರು. ಆರೋಪಿಗೆ ನ್ಯಾಯಾಲಯ ಶಿಕ್ಷೆ ಘೋಸಣೆ ಮಾಡುವ ಮುನ್ನ ಏಳೂವರೆ ತಿಂಗಳ ಕಾಲ ಜೈಲಿನಲ್ಲಿ ಕಾಲ ಕಳೆದಿದ್ದರು. ಈ ಹಂತದಲ್ಲಿ ನಡೆದ ವಿಚಾರಣೆಯಲ್ಲಿ ಸಂತ್ರಸ್ಥೆಯಾಗಿರುವ ಆತನ ತಾಯಿಯ ವೈದ್ಯಕೀಯ ಮೌಲ್ಯಮಾಪನ, ಆಕೆಯ ಸಾಕ್ಷ್ಯ ಹಾಗೂ ಏಳು ಹೆಚ್ಚುವರಿ ಸಾಕ್ಷಿಗಳು ನೀಡಿದ ಹೇಳಿಕೆಗಳನ್ನು ಆಧರಿಸಿ ಕೋರ್ಟ್ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂಪಾಯಿ ದಂಡವನ್ನು ವಿಧಿಸಿದೆ.
Chandrayaan-3 vs Lunar-25: ಆಮೆ-ಮೊಲದ ಸ್ಪೇಸ್ ರೇಸ್‌ನಲ್ಲಿ ಗೆಲ್ಲೋದ್ ಯಾರು?
ಈ ವೇಳೆ ತಾಯಿಯ ಹಿರಿಯ ಮಗ ಕೂಡ ಸಾಕ್ಷ್ಯ ನುಡಿದಿದ್ದಾರೆ. ಅದಲ್ಲದೆ, ಆಕೆಯ ನಿವಾಸದ ಕೆಳಗೆ ಬಾಡಿಗೆ ಪಡೆದುಕೊಂಡಿದ್ದ, ಇಬ್ಬರು ವೈದ್ಯಕೀಯ ಶಾಸ್ತ್ರದ ವ್ಯಕ್ತಿಗಳು ಕೂಡ ಸಾಕ್ಷ್ಯ ನುಡಿದಿದ್ದಾರೆ. ಘಟನೆ ನಡೆದ ವೇಳೆ ಒಬ್ಬಾಕೆ ಆಕೆಯನ್ನು ಪರೀಕ್ಷೆ ಮಾಡಿದ್ದರೆ, ಇನ್ನೊಬ್ಬರು ಆರೋಪಿಯನ್ನು ಗುರುತಿಸಿದ್ದರು.
Mandya: 'ಜೋಕೆ ನಾನು ಬಳ್ಳಿಯ ಮಿಂಚು..' ಎಂದು ರೀಲ್ಸ್ ಮಾಡ್ತಿದ್ದ ಪತ್ನಿಯ ಕೊಂದು ನದಿಗೆಸದ ಪತಿ!