ಕಾರಿನ ಮೇಲೆ ಬಿದ್ದ ಲಖನೌ ಕ್ರಿಕೆಟ್ ಕ್ರೀಡಾಂಗಣದ ಐಪಿಎಲ್ ಹೋರ್ಡಿಂಗ್, ತಾಯಿ ಮಗಳು ಸಾವು!

By Suvarna News  |  First Published Jun 5, 2023, 9:53 PM IST

ಲಖನೌ ಕ್ರಿಕೆಟ್ ಕ್ರೀಡಾಂಗಣದ ಗೇಟ್ ಬಳಿ ಅಳವಡಿಸಿದ್ದ ಬೃಹತ್ ಐಪಿಎಲ್ ಹೋರ್ಡಿಂಗ್ ಚಲಿಸುತ್ತಿದ್ದ ಕಾರಿಗೆ ಮಗುಚಿ ಬಿದ್ದು ತಾಯಿ ಹಾಗೂ ಮಗಳು ಮೃತಪಟ್ಟ ಘಟನೆ ನಡೆದಿದೆ. 


ಲಖನೌ(ಜೂ.05):  ವಾಹನ ಅಪಘಾತ, ರೈಲು ದುರಂತ ಸೇರಿದಂತೆ ಹಲವು ಅವಘಡ ಸಾವು ನೋವುಗಳು ದುಃಖಿತ ಸಂಖ್ಯೆ ಹೆಚ್ಚಿಸುತ್ತಿದೆ. ಇದೀಗ ಲಖನೌ ಕ್ರಿಕೆಟ್ ಕ್ರೀಡಾಂಗಣದ ಗೇಟ್ ಬಳಿ ಅಳವಡಿಸಿದ್ದ ಐಪಿಎಲ್ ಹೋರ್ಡಿಂಗ್ ಮಗುಚಿ ಬಿದ್ದು ಭಾರಿ ದುರಂತ ಸಂಭವಿಸಿದೆ. ಚಲಿಸುತ್ತಿದ್ದ ಕಾರಿನ ಮೇಲೆ ಈ ಹೋರ್ಡಿಂಗ್ ಮಗುಚಿ ಬಿದ್ದಿದೆ. ಇದರ ಪರಿಣಾಮ ಕಾರಿನಲ್ಲಿದ್ದ ತಾಯಿ ಹಾಗೂ ಮಗಳು ಮೃತಪಟ್ಟಿದ್ದಾರೆ. ಕಾರು ಚಾಲಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಲಖನೌದ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣ ಗೇಟ್ ನಂಬರ್ 2ರ ಬಳಿ  ಬೃಹತ್ ಹೋರ್ಡಿಂಗ್ ಅಳವಡಿಸಲಾಗಿತ್ತು. ಕ್ರೀಡಾಂಗಣದ ದಾರಿ ಮೂಲಕ 38 ವರ್ದ ಪ್ರೀತಿ ಜಗ್ಗಿ ಹಾಗೂ 15 ವರ್ಷದ ಪುತ್ರಿ ಎಂಜಲ್ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಶಾಪಿಂಗ್ ಮಾಲ್‌ಗೆ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಮುಂಗಾರು ಪ್ರವೇಶದಿಂದ ಲಖನೌ ಸುತ್ತಮುತ್ತ ಭಾರಿ ಗಾಳಿ ಅಪ್ಪಳಿಸಿತ್ತು. ಈ ಗಾಳಿಗೆ ಬೃಹತ್ ಹೋರ್ಡಿಂಗ್ ಮಗುಚಿ ಬಿದ್ದಿದೆ.

Latest Videos

undefined

 

ಒಡಿಶಾ ತ್ರಿವಳಿ ರೈಲು ದುರಂತ: ಯುದ್ಧಭೂಮಿಯಂತಾದ ಬಾಲಸೋರ್‌ ಜಿಲ್ಲಾಸ್ಪತ್ರೆ

ಇದೇ ದಾರಿಯಲ್ಲಿ ಚಲಿಸುತ್ತಿದ್ದ ಸ್ಕಾರ್ಪಿಯೋ ಕಾರಿನ ಮೇಲೆ ಬಿದ್ದಿದೆ. ತಾಯಿ, ಮಗಳು ಹಾಗೂ ಚಾಲಕ ತೀವ್ರವಾಗಿ ಗಾಯಗೊಂಡಿದ್ದರು. ಹರಸಾಹಸ ಮಾಡಿ ಮೂವರನ್ನು ನಜ್ಜುಗುಜ್ಜಾದ ಕಾರಿನಿಂದ ಹೊರತೆಗೆದು ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತಾಯಿ ಹಾಗೂ ಮಗಳು ಆಸ್ಪತ್ರೆ ದಾಖಲಾಗುವ ಮುನ್ನವೇ ಮೃತಪಟ್ಟಿದ್ದಾರೆ. ಇತ್ತ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.

ಐಪಿಎಲ್ ಟೂರ್ನಿ ವೇಳೆ ಲಖನೌ ಕ್ರೀಡಾಂಗಣದ ಗೇಟ್ ನಂಬರ್ 2ರ ಬಳಿಕ ಹೋರ್ಡಿಂಗ್ ಹಾಕಲಾಗಿತ್ತು. ಐಪಿಎಲ್ ಮುಗಿದರೂ ಹೋರ್ಡಿಂಗ್ ತೆಗೆದಿಲ್ಲ. ಇಷ್ಟೇ ಅಲ್ಲ ಈ ಹೋರ್ಡಿಂಗ್ ಸುರಕ್ಷತೆ ಕುರಿತು ಯಾವುದೇ ಪರೀಶೀಲನೆ ನಡೆಸಿಲ್ಲ. ಈ ಬೃಹತ್ ಗಾತ್ರದ ಹೋರ್ಡಿಂಗ್ ಗಾಳಿಗೆ ಮಗುಚಿ ಬಿದ್ದಿದೆ. ದುರಂತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಕ್ರೇನ್ ಮೂಲಕ ಹೋರ್ಡಿಂಗ್ ಹಾಗೂ ಇತರ ಕಬ್ಬಿಣದ ರಾಡ್‌ಗಳನ್ನು ತೆರವುಗೊಳಿಸಲಾಗಿದೆ. ಇತ್ತ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಲಖನೌ ಕ್ರೆಕೆಟ್ ಸಂಸ್ಥೆ ವಿರುದ್ಧ ಹಾಗೂ ಬಿಸಿಸಿಐ ವಿರುದ್ಧ ಪ್ರಕರಣ ದಾಖಲಾಗಿದೆ.

ರೈಲು ಹಳಿ ಮೇಲೆ ಟೈರ್‌ ಇಟ್ಟ ಕಿಡಿಗೇಡಿಗಳು: ತಮಿಳುನಾಡಲ್ಲಿ ತಪ್ಪಿದ ಮತ್ತೊಂದು ಭೀಕರ ರೈಲು ದುರಂತ!

ಇತ್ತೀಚೆಗೆ ಹಲವು ಅಪಘಾತ ಪ್ರಕರಣಗಳು ದಾಖಲಾಗುತ್ತಿದೆ. ಇದರಲ್ಲಿ ಇಡೀದ ದೇಶವನ್ನೇ ಬೆಚ್ಚಿ ಬೀಳಿಸಿದ ಒಡಿಶಾ ರೈಲು ದುರಂತ ಕೂಡ ಒಂದು. ಒಡಿಶಾದಲ್ಲಿ ಸಂಭವಿಸಿದ ಕೋರಮಂಡಲ್‌ ಎಕ್ಸ್‌ಪ್ರೆಸ್‌, ಯಶವಂತಪುರ ಹೌರಾ ಎಕ್ಸ್‌ಪ್ರೆಸ್‌ ಹಾಗೂ ಗೂಡ್‌್ಸ ರೈಲಿನ ನಡುವಿನ ತ್ರಿವಳಿ ರೈಲು ಅಪಘಾತವು 2016ರ ಬಳಿಕದ ನಡೆದ ಭೀಕರ ರೈಲು ಅಪಘಾತವಾಗಿದೆ.

ಈ ಘಟನೆಯಲ್ಲಿ 288 ಪ್ರಯಾಣಿಕರು ಮೃತಪಟ್ಟಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ರೈಲ್ವೆ ಅಪಘಾತ ಬಲು ಅಪರೂಪ ಎನ್ನುವ ಹೊತ್ತಿನಲ್ಲೇ ಬಾಹಾನಗ ರೈಲ್ವೆ ನಿಲ್ದಾಣದ ಬಳಿ ಸಂಭವಿಸಿದ ಮೂರು ರೈಲುಗಳನ್ನು ಒಳಗೊಂಡ ಘೋರ ದುರಂತ ಇಡೀ ದೇಶವನ್ನೇ ಅಘಾತಕ್ಕೆ ಈಡುಮಾಡಿದೆ.
 

click me!