ಉರುವಲು ಕಟ್ಟಿಗೆಗಾಗಿ ಮಾರಣಾಂತಿಕ ಹಲ್ಲೆ: ಆಸ್ಪತ್ರೆಯಲ್ಲೂ ಥಳಿಸಿದ ಕ್ರೂರಿಗಳು

By Sathish Kumar KHFirst Published Jun 5, 2023, 9:19 PM IST
Highlights

ಪಕ್ಕದ  ಜಮೀನಿನಲ್ಲಿ ಹಾಕಲಾಗಿದ್ದ ಕಟ್ಟಿಗೆಯನ್ನು ಕಳ್ಳತನ ಮಾಡಿದ್ದನ್ನು ವಿಚಾರಿಸಿದ್ದಕ್ಕೆ ವ್ಯಕ್ತಿಯೋರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಜೂ.05): ಅಕ್ಕ ಪಕ್ಕದ ಜಮೀನು ಅಂದ್ಮೇಲೆ ತಂಟೆ ತಕಾರಾರುಗಳು ಇದ್ದದ್ದೇ. ಆದರೆ, ಪಕ್ಕದ  ಜಮೀನಿನಲ್ಲಿ ಹಾಕಲಾಗಿದ್ದ ಕಟ್ಟಿಗೆಯನ್ನು ಕಳ್ಳತನ ಮಾಡಿದ್ದನ್ನು ವಿಚಾರಿಸಿದ್ದಕ್ಕೆ ವ್ಯಕ್ತಿಯೋರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ. ಇಷ್ಟಕ್ಕೆ ಸುಮ್ಮನಾಗದೇ ಹಲ್ಲೆಗೊಳಗಾದ ವ್ಯಕ್ತಿ ಆಸ್ಪತ್ರೆಗೆ ದಾಖಲಾದರೂ ಬೆಂಬಿಡದೇ ಬೆನ್ನಟ್ಟಿ ಹಲ್ಲೆ ನಡೆಸಿರೋ ಘಟನೆ ಚಳ್ಳಕೆರೆ ತಾಲ್ಲೂಕಿನಲ್ಲಿ ನಡೆದಿದೆ.

ಕಟ್ಟಿಗೆಗಾಗಿ ವ್ಯಕ್ತಿಯೋರ್ವನನ್ನು ಜೀವ ಹೋಗುವ ಮಟ್ಟಿಗೆ  ಹಲ್ಲೇ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕರಿಕೆರೆ ಗ್ರಾಮದಲ್ಲಿ ನಡೆದಿದೆ. ಕರಿಕೆರೆ ಗ್ರಾಮದ ರೈತ ಸುರೇಂದ್ರ ಎಂಬುವರು ಜಮೀನಲ್ಲಿ ಕಟ್ಟಿಗೆ ಕಳುವಾಗಿದ್ದವು. ಈ ಸಂಬಂಧ ಅದೇ ಗ್ರಾಮದ ತಿಪ್ಪೇಸ್ವಾಮಿ ಎಂಬುವರಿಗೆ ಸುರೇಂದ್ರ ವಿಚಾರಿಸಿದ್ದರು. ಇದಕ್ಕೆ ಸಿಟ್ಟಾದ ತಿಪ್ಪೇಸ್ವಾಮಿ ಹಾಗೂ ಕುಟುಂಬದ ಸದಸ್ಯರು ಸುರೇಂದ್ರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಸುರೇಂದ್ರನನ್ನು ಆಸ್ಪತ್ರೆಗೆ ಹೋದರೂ ಬಿಡದೇ ಹಿಂಬಾಲಿಸಿರುವ ತಿಪ್ಪೇಸ್ವಾಮಿ ಕುಟುಂಬಸ್ಥರು ಆಸ್ಪತ್ರೆ ಆವರಣದಲ್ಲಿಯೂ ಸುರೇಂದ್ರ ಮೇಲೆ ಹಲ್ಲೆ ನಡೆಸಿದ್ದಾರೆ. 

ಬೆಂಗಳೂರು - ಮೈಸೂರು ದಶಪಥ ಹೆದ್ದಾರಿಯಲ್ಲಿ ಭೀಕರ ಅಪಘಾತ: ಪಲ್ಟಿಯಾಗಿ 100 ಮೀಟರ್‌ ಉರುಳಿದ ಕಾರು

ಆಸ್ಪತ್ರೆಗೆ ಬಂದರೂ ಅಲ್ಲಿಗೂ ಬಂದು ಥಳಿಸಿದರು: ಇನ್ನು ಹಲ್ಲೆ ಮಾಡುವುದನ್ನು ಪ್ರತ್ಯಕ್ಷದರ್ಶಿಯೊಬ್ಬರು ತಮ್ಮ ಮೊಬೈಲ್‌ ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿದೆ.‌‌ ಅಲ್ಲದೇ ಸ್ವತಃ ಹಲ್ಲೆಗೊಳಗಾದ ಸುರೇಂದ್ರ ಪ್ರತಿಕ್ರಿಯೆ ನೀಡಿದ್ದು, ನಮ್ಮ ಹೊಲದಲ್ಲಿ ಕಟ್ಟಿಗೆ ಕಳವಾಗುತ್ತಿತ್ತು. ಹಿಂಬಾಲಿಸಿದಾಗ ತಿಪ್ಪೇಸ್ವಾಮಿ ಸಿಕ್ಕಿಬಿದ್ದ ಕೇಳಿದ್ದಕ್ಕೆ ನನ್ನ ಮೇಲೆ ತಿಪ್ಪೇಸ್ವಾಮಿ ಮಕ್ಕಳಿಬ್ಬರು ಮತ್ತು ಹೆಂಡತಿ ಗಂಗಮ್ಮ ಹಲ್ಲೆ ಮಾಡಿದ್ದಾರೆ. ಇನ್ನು ಗಾಯಗೊಂಡು ಆಸ್ಪತ್ರೆಗೆ ಬಂದರೂ ಆಸ್ಪತ್ರೆಯಲ್ಲೂ ಬಿಡದೆ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಅವರಿಗೆ ಸೂಕ್ತ ಕಾನೂನು ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.

ಸೂಕ್ತ ಶಿಕ್ಷೆಗಾಗಿ ಸಂತ್ರಸ್ತರ ಕುಟುಂಬದ ಮನವಿ: ಈ ಘಟನೆ ಕುರಿತು ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನನ್ನ ತಮ್ಮ ಸತ್ತು ಹೋದರೆ ಯಾರು ಗತಿ ಅದಕ್ಕೆ ನಮಗೆ ನ್ಯಾಯ ಬೇಕು, ಹಲ್ಲೆ ಮಾಡಿದ ತಿಪ್ಪೇಸ್ವಾಮಿ ಅವರ ಮಕ್ಕಳು ಹೆಂಡತಿಯನ್ನು ಬಂಧಿಸಬೇಕು ಎಂದು ಹಲ್ಲೆಗೊಳಗಾದ ಸುರೇಂದ್ರ ನ ಸಹೋದರಿ ಆಗ್ರಹಿಸಿದರು. ಅಲ್ಲದೇ ಗ್ರಾಮದಲ್ಲಿ ಇವರ ಹಾವಳಿ ಮಿತಿ ಮೀರಿದೆ ಪೊಲೀಸರು ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಒಟ್ಟಾರೆ ಕ್ಷುಲ್ಲಕ ನಿರ್ಜೀವ  ಕಟ್ಟಿಗೆಗಾಗಿ ವ್ಯಕ್ತಿ ಒಬ್ಬನ ಜೀವಕ್ಕೆ ಬೆಲೆ ಇಲ್ಲದಂತೆ ಮಾರಣಾತಿಕವಾಗಿ ಜೀವ ಹೋಗುವ ಮಟ್ಟಿಗೆ ಹಲ್ಲೆ ಮಾಡಿದ ಅಮಾನವೀಯ ಘಟನೆ ನಡೆದಿದ್ದು, ಈ ಕುರಿತು ಸಂಬಂಧಪಟ್ಟ ಪೋಲಿಸ್ ಇಲಾಖೆ ಸೂಕ್ತ ಕ್ರಮ ಕೈಗೊಂಡು ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕಿದೆ.

ಕುಡಿಯಬೇಡ ಎಂದು ಬೈದಿದ್ದಕ್ಕೆ ಮಗನನ್ನೇ ಕೊಂದ ಪಾಪಿ ದೊಡ್ಡಪ್ಪ

ಕುಡಿಯಬೇಡ ಎಂದು ಬೈದಿದ್ದಕ್ಕೆ ಮಗನನ್ನೇ ಕೊಂದ: ಹಾಸನ (ಜೂ.05): ಪ್ರತಿನಿತ್ಯ ಕುಡಿದು ಬಂದು ಮನೆಯಲ್ಲಿ ಕುಟುಂಬದ ಎಲ್ಲ ಸದಸ್ಯರಿಗೂ ಬೈದು, ಗಲಾಟೆ ಮಾಡುತ್ತಿದ್ದ ದೊಡ್ಡಪ್ಪನಿಗೆ ನೀನು ಕುಡಿಯಬೇಡ ಎಂದು ಬೈದಿದ್ದಕ್ಕೆ ತಮ್ಮನ ಮಗನೆಂದೂ ನೋಡದೇ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವ ದುರ್ಘಟನೆ ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕಿನ, ದುಮ್ಮೇನಹಳ್ಳಿ ಕಾಲೋನಿಯಲ್ಲಿ ಭಾನುವಾರ ರಾತ್ರಿ ನಡೆದಿದೆ.

ಕ್ಷುಲ್ಲಕ ಕಾರಣಕ್ಕೆ ತಮ್ಮನ ಮಗನನ್ನು ಚಾಕುವಿನಿಂದ ಇರಿದು ಕೊಂದ ದೊಡ್ಡಪ್ಪನನ್ನು ಹನುಮಂತಯ್ಯ ಎಂದು ಗುರುತಿಸಲಾಗಿದೆ. ಇನ್ನು ಕೊಲೆಯಾದ ವ್ಯಕ್ತಿಯನ್ನು ಯತೀಶ್ (37) ಎಂದು ಗುರುತಿಸಲಾಗಿದೆ. ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕಿನ, ದುಮ್ಮೇನಹಳ್ಳಿ ಕಾಲೋನಿಯಲ್ಲಿ ನಿನ್ನೆ ರಾತ್ರಿ ಘಟನೆ ನಡೆದಿದೆ. ಪ್ರತಿದಿನ ಕುಡಿದು ಬಂದು ಮನೆಯ ಎಲ್ಲ ಕುಟುಂಬ ಸದಸ್ಯರೊಂದಿಗೆ ಗಲಾಟೆ ಮಾಡುತ್ತಿದ್ದ ಹನುಮಂತಯ್ಯನಿಗೆ ತಮ್ಮನ ಮಗ ಯತೀಶ್‌ ಕುಡಿದು ಗಲಾಟೆ ಮಾಡದಂತೆ ಬೈದು ಬುದ್ಧಿ ಹೇಳಿದ್ದಾನೆ. ಇದರಿಂದ ಮನೆಯವರ ಎದುರಿಗೆ ತನಗೆ ಅವಮಾನವಾಗಿದೆ ಎಂದು ಸ್ವಂತ ತಮ್ಮನ ಮಗನೆಂದೂ ನೋಡದೇ ಕೊಲೆ ಮಾಡಿದ್ದಾನೆ. 

click me!