Mangaluru: ನೈತಿಕ ಪೊಲೀಸ್‌ಗಿರಿ: ಗುಂಪಿನಿಂದ ಅಂಗಡಿ ಮಾಲೀಕನಿಗೆ ಹಲ್ಲೆ

By Ravi Janekal  |  First Published Aug 10, 2023, 10:44 AM IST

ನಗರದ ದುಬೈ ಮಾರ್ಕೆಟ್‌ನಲ್ಲಿ ಗುಂಪಿನಿಂದ ನೈತಿಕ ಪೊಲೀಸ್‌ ಗಿರಿ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಮೊಬೈಲ್‌ ಮಾಲೀಕನಿಗೆ ಥಳಿಸಿ ಯುವಕರು ಪರಾರಿಯಾಗಿದ್ದಾರೆ.


ಮಂಗಳೂರು (ಆ.10): ನಗರದ ದುಬೈ ಮಾರ್ಕೆಟ್‌ನಲ್ಲಿ ಗುಂಪಿನಿಂದ ನೈತಿಕ ಪೊಲೀಸ್‌ ಗಿರಿ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಮೊಬೈಲ್‌ ಮಾಲೀಕನಿಗೆ ಥಳಿಸಿ ಯುವಕರು ಪರಾರಿಯಾಗಿದ್ದಾರೆ.

ಮಂಗಳೂರು ನಗರದ ಹೃದಯ ಭಾಗದ ಸೆಂಟ್ರಲ್‌ ಮಾರ್ಕೆಟ್‌ ಬಳಿ ದುಬೈ ಮಾರ್ಕೆಟ್‌ ಮಳಿಗೆ ಕಾರ್ಯಾಚರಿಸುತ್ತಿದೆ. ಮಂಗಳವಾರ ರಾತ್ರಿ ಗ್ರಾಹಕ ಓರ್ವ ಪವರ್‌ ಬ್ಯಾಂಕ್‌ ರಿಪೇರಿಗೆಂದು ಬಂದಿದ್ದು ರಿಪೇರಿ ಮಾಡಲು ಸೂಚಿಸಿದ್ದರು. ಅಂಗಡಿ ಮಾಲೀಕ, ‘ನಾವು ಮೊಬೈಲ್‌ ಹೊರತು ಬೇರೆ ಯಾವುದನ್ನೂ ರಿಪೇರಿ ಮಾಡುದಿಲ್ಲ’ ಎಂದಿದ್ದಕ್ಕೆ ‘ಸ್ಕ್ರೂ ಡ್ರೈವರ್‌ ಕೊಡು, ನಾನೇ ಸರಿ ಮಾಡುತ್ತೇನೆ’ ಎಂದಿದ್ದನು. ಆಗಲ್ಲ, ನಾವು ಬ್ಯುಸಿ ಇದ್ದೇವೆ ಎಂದಾಗ ಮಾತಿಗೆ ಮಾತು ಬೆಳೆದಿತ್ತು.

Latest Videos

undefined

Moral Policing: ಪೊಲೀಸ್ ಸಿಬ್ಬಂದಿ ಮೇಲೆಯೇ ನೈತಿಕ ಪೊಲೀಸ್ ಗಿರಿ, ಇಬ್ಬರ ಬಂಧನ

ಆಗ ಗ್ರಾಹಕ ಅಂಗಡಿ ಮಾಲೀಕನಿಗೆ ಹಲ್ಲೆ ಮಾಡಿದ್ದನು. ಇದಕ್ಕೆ ಪ್ರತಿರೋಧ ವ್ಯಕ್ತ ಪಡಿಸಿದಕ್ಕೆ ಕೋಪಗೊಂಡ ಗ್ರಾಹಕ ತನ್ನ ಗೆಳೆಯರ ಗುಂಪನ್ನು ಕರೆದು ಹಿಗ್ಗಾ ಮಗ್ಗ ಥಳಿಸಿದ ಘಟನೆ ನಡೆಯಿತು. ಹಲ್ಲೆ ಮಾಡಿದ ವೀಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸ್ಥಳೀಯ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ. ಉಳಿದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಹಾಡಹಗಲೇ ಗ್ಯಾಂಗ್‌ ಹಲ್ಲೆ; ಆರೋಪಿಗಳ ಬಂಧನ

ತುಮಕೂರು: ಹಳೇ ದ್ವೇಷ ಹಿನ್ನೆಲೆಯಲ್ಲಿ ಗುಂಪೊಂದು ಹಾಡಹಗಲೇ ವ್ಯಕ್ತಿಯ ಮೇಲೆ ಮರಣಾಂತಿಕವಾಗಿ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ  ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು.

ಕೆ.ಡಿ.ಆಕಾಶ್, ಸಾಗರ್, ರಾಜಣ್ಣ, ಎಮ್ ಎಸ್ ಪ್ರಸಾದ್ ಬಂಧಿತ ಆರೋಪಿಗಳು. ಆ.3 ರಂದು ಜಗದೀಶ್ ಎನ್ನುವರ ಮೇಲೆ ಹಾಡಹಗಲೇ ಅವಾಚ್ಯವಾಗಿ ನಿಂದಿಸಿ ಲಾಂಗು ಮಚ್ವಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದ ಆರೋಪಿಗಳು. ಘಟನೆ ಬಳಿಕ ತಲೆಮರೆಸಿಕೊಂಡಿದ್ದರು. ಹಲ್ಲೆ ನಡೆಸಿದರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದರ ಸುಳಿವು ಹಿಡಿದು ಆರೋಪಿಗಳ ಬೆನ್ನುಹತ್ತಿದ ಪೊಲೀಸರು. ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ

 

ನೈತಿಕ ಪೊಲೀಸ್‌ಗಿರಿ ನಡೆಸಿದ 18 ಗಂಟೆಯೊಳಗೆ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು

ಸದ್ಯ ಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಜಗದೀಶ್. ಆರೋಪಿಗಳು ದಾಳಿಯ ಹಿಂದಿನ ಕಾರಣಗಳನ್ನ ತಿಳಿಯಲು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.

click me!