
ಬೆಂಗಳೂರು (ಆ.10) : ಫೋನ್ ಪೇ ಮಾಡುವುದಾಗಿ ನಂಬಿಸಿ ಅಂಗವಿಕಲ ಆಟೋ ಚಾಲಕರೊಬ್ಬರಿಂದ .23,500 ಸಾವಿರ ಪಡೆದು ಮಹಿಳಾ ಪ್ರಯಾಣಿಕರೊಬ್ಬರು ವಂಚಿಸಿರುವ ಘಟನೆ ನಡೆದಿದೆ.
ನಾಗರಭಾವಿ ಸಮೀಪದ ಮಹದೇಶ್ವರ ಲೇಔಟ್(Mahadeshwar layout) ನಿವಾಸಿ ಶಿವಕುಮಾರ್ ಮೋಸ ಹೋಗಿದ್ದು, ಆ.4ರಂದು ಶಿವಕುಮಾರ್ ಅವರ ಆಟೋವನ್ನು ಚಂದ್ರಾಲೇಔಟ್(Chandra layout)ನಿಂದ ಬನಶಂಕರಿಗೆ ತೆರಳುತ್ತಿದ್ದ ಯುವತಿ ವಂಚಿಸಿದ್ದಾಳೆ. ಈ ಬಗ್ಗೆ ಸಂತ್ರಸ್ತ ಚಾಲಕ ನೀಡಿದ ದೂರಿನ ಮೇರೆ ಎಫ್‌ಐಆರ್ ದಾಖಲಿಸಿ ಆರೋಪಿ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.
Bengaluru crime: ಆಟಿಕೆ ಗನ್ ತೋರಿಸಿ ಜ್ಯೋತಿಷಿ ಪುತ್ರನ ಅಪಹರಿಸಿದ ಮೆಕ್ಯಾನಿಕ್ !
ಆಟೋ ಓಡಿಸಿಕೊಂಡು ಶಿವಕುಮಾರ್ ಜೀವನ ಸಾಗಿಸುತ್ತಿದ್ದಾರೆ. ಎಂದಿನಂತೆ ಇದೇ ತಿಂಗಳ 4ರಂದು ಅವರು ಬಾಡಿಗೆ ವಹಿವಾಟಿನಲ್ಲಿ ತೊಡಗಿದ್ದರು. ಆಗ ಚಂದ್ರಾಲೇಔಟ್ ಬಳಿ ಅವರ ಆಟೋಗೆ ಯುವತಿಯೊಬ್ಬಳು ಹತ್ತಿದ್ದಾಳೆ. ತಾನು ಬನಶಂಕರಿಗೆ ಹೋಗಬೇಕಾಗಿದೆ ಎಂದಿದ್ದಾಳೆ. ಬಳಿಕ ಮಾರ್ಗ ಮಧ್ಯೆ ತನಗೆ ಹೊಸಕೆರೆಹಳ್ಳಿಯ ಪಿಇಎಸ್ ಕಾಲೇಜಿ(PES Collage)ನಲ್ಲಿ ಶುಲ್ಕ ಪಾವತಿಸಲು ನಗದು ಹಣ ಬೇಕಿದೆ. ನಾನು ಫೋನ್‌ಪೇ(Phonepay) ಮಾಡುತ್ತೇನೆ ಎಂದು ಶಿವಕುಮಾರ್ ಬಳಿ ಹಣಕ್ಕೆ ಆರೋಪಿ ಮನವಿ ಮಾಡಿದ್ದಾಳೆ.
ಆಗ ಆಕೆ ನಾಜೂಕಿನ ಮಾತಿಗೆ ಮರುಳಾಗಿ ಅವರು ಹಣ ಕೊಡಲು ಒಪ್ಪಿದ್ದಾರೆ. ತನ್ನ ಸ್ನೇಹಿತನಿಗೆ ಕರೆ ಮಾಡಿ ಕರೆಸಿಕೊಂಡು ಹಣ ಪಡೆದು ಯುವತಿಗೆ ಶಿವಕುಮಾರ್ ಕೊಟ್ಟಿದ್ದಾರೆ. ತರುವಾಯ ಹೊಸಕೆರೆಹಳ್ಳಿ ಬಳಿ ಆಟೋದಿಂದ ಇಳಿದ ಯುವತಿ, ಕೆಲವೇ ನಿಮಿಷದಲ್ಲಿ ನಿಮಗೆ ಫೋನ್‌ಪೇ ಮಾಡುತ್ತೇನೆ ಎಂದು ಹೇಳಿ ಕಾಲ್ಕಿತ್ತಿದ್ದಾಳೆ. ಕೊನೆಗೆ ಯುವತಿಗೆ ಕಾದು ಬೇಸತ್ತ ಬಳಿಕ ಆಟೋ ಚಾಲಕನಿಗೆ ಮೋಸ ಹೋಗಿರುವುದು ಅರಿವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟ್ರಾಫಿಕ್ ಸಿಗ್ನಲ್ ಬ್ಯಾಟರಿ ಕಳ್ಳತನ; ಖದೀಮನ ಬೆನ್ನಟ್ಟಿ ಹಿಡಿದ ಪೊಲೀಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ