Bengaluru crime: ಆಟಿಕೆ ಗನ್‌ ತೋರಿಸಿ ಜ್ಯೋತಿಷಿ ಪುತ್ರನ ಅಪಹರಿಸಿದ ಮೆಕ್ಯಾನಿಕ್‌ !

Published : Aug 10, 2023, 04:36 AM IST
Bengaluru crime: ಆಟಿಕೆ ಗನ್‌ ತೋರಿಸಿ ಜ್ಯೋತಿಷಿ ಪುತ್ರನ ಅಪಹರಿಸಿದ ಮೆಕ್ಯಾನಿಕ್‌ !

ಸಾರಾಂಶ

ಚಲನಚಿತ್ರಗಳಿಂದ ಪ್ರೇರಿತನಾಗಿ ನಕಲಿ ಗನ್‌ ಬಳಸಿ ಜ್ಯೋತಿಷಿಯೊಬ್ಬರ ಪುತ್ರನನ್ನು ಅಪಹರಿಸಿ .5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಮೆಕ್ಯಾನಿಕ್‌ವೊಬ್ಬನನ್ನು ಎಚ್‌ಎಸ್‌ಆರ್‌ ಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ಆ.10) :  ಚಲನಚಿತ್ರಗಳಿಂದ ಪ್ರೇರಿತನಾಗಿ ನಕಲಿ ಗನ್‌ ಬಳಸಿ ಜ್ಯೋತಿಷಿಯೊಬ್ಬರ ಪುತ್ರನನ್ನು ಅಪಹರಿಸಿ .5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಮೆಕ್ಯಾನಿಕ್‌ವೊಬ್ಬನನ್ನು ಎಚ್‌ಎಸ್‌ಆರ್‌ ಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತುಮಕೂರು ಜಿಲ್ಲೆ ಹೆಬ್ಬೂರಿನ ಮನು ಅರ್ಜುನ್‌ ಬಂಧಿತನಾಗಿದ್ದು, ಆರೋಪಿಯಿಂದ .32 ಸಾವಿರ ಮೌಲ್ಯದ ನಕಲಿ ಗನ್‌ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಎಚ್‌ಎಸ್‌ಆರ್‌ ಲೇಔಟ್‌ 6ನೇ ಸೆಕ್ಟರ್‌ನ ನಿವಾಸಿ ಜ್ಯೋತಿಷಿ ಮಣಿವಾಸಕನ್‌ ಅವರ ಪುತ್ರ ಜಯಸೂರ್ಯನನ್ನು ಅಪಹರಿಸಿದ್ದ. ತನಿಖೆ ನಡೆಸಿದ ಪೊಲೀಸರು, ಆರೋಪಿಯನ್ನು ತಿಲಕನಗರ ಪಾರ್ಕ್ ಬಳಿ ಸೆರೆ ಹಿಡಿದು ಅಪಹೃತನನ್ನು ರಕ್ಷಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 

Bengaluru crime: ಸಾಲ ವಾಪಸ್‌ ಕೊಡದ್ದಕ್ಕೆ ಸ್ನೇಹಿತರ ಕಿಡ್ನಾಪ್‌!

ಡ್ರಾಪ್‌ ಕೇಳುವ ನೆಪದಲ್ಲಿ ಅಪಹರಣ:

ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ಗ್ಯಾರೇಜ್‌ನಲ್ಲಿ ಮೆಕ್ಯಾನಿಕ್‌ ಆಗಿದ್ದ ತುಮಕೂರಿನ ಅರ್ಜುನ್‌, ಗ್ಯಾರೇಜ್‌ ಸಮೀಪದ ಪಿಜಿಯಲ್ಲಿ ನೆಲೆಸಿದ್ದ. ಚಲನಚಿತ್ರಗಳ ವೀಕ್ಷಣೆ ಗೀಳಿದ್ದ ಆತನಿಗೆ ಸುಲಭವಾಗಿ ಹಣ ಸಂಪಾದನೆಗೆ ಸಿನಿಮಾ ಮಾದರಿಯಲ್ಲಿ ಹಣವಂತರನ್ನು ಅಪಹರಿಸಲು ಸಂಚು ರೂಪಿಸಿದ್ದ. ಅಂತೆಯೇ ಆ.4ರಂದು ಮನೆ ಸಮೀಪ ನೀಟ್‌ ಕೋಚಿಂಗ್‌ ಸೆಂಟರ್‌ನಲ್ಲಿ ತರಗತಿ ಮುಗಿಸಿಕೊಂಡು ಬೋಲೆರೋ ಜೀಪಿನಲ್ಲಿ ಮನೆಗೆ ಮರಳುತ್ತಿದ್ದ ಜಯಸೂರ್ಯನನ್ನು ಡ್ರಾಪ್‌ ನೆಪದಲ್ಲಿ ಅಡ್ಡಗಟ್ಟಿದ್ದ. ಎಚ್‌ಎಸ್‌ಆರ್‌ ಲೇಔಟ್‌ನ 3ನೇ ಹಂತದಲ್ಲಿ ಜಯಸೂರ್ಯ ಜೀಪನ್ನು ಕೋರಮಂಗಲಕ್ಕೆ ಡ್ರಾಪ್‌ ಕೇಳುವ ನೆಪದಲ್ಲಿ ಹತ್ತಿಕೊಂಡ ಬಳಿಕ ಅರ್ಜುನ್‌, ಜಯಸೂರ್ಯನಿಗೆ ಅಟಿಕೆ ಗನ್‌ ತೋರಿಸಿ ಜೀವ ಬೆದರಿಕೆ ಹಾಕಿದ್ದ.

ತಾನು ಹೇಳಿದ ಕಡೆ ಜೀಪು ಚಲಾಯಿಸುವಂತೆ ಹೇಳಿದ ಆತ, ಸಿಲ್ಕ್ ಬೋರ್ಡ್‌(Silk Board) ಬಳಿಗೆ ತೆರಳಿದ. ಬಳಿಕ ಅಪಹೃತನ ಮೊಬೈಲ್‌ನಿಂದ ಆತನ ತಂದೆಗೆ ಕರೆ ಮಾಡಿಸಿದ್ದ. ನಂತರ ಆತನ ಪೋಷಕರಿಗೆ ಕರೆ ಮಾಡಿಸಿ ಅಪಹರಿಸಿರುವುದಾಗಿ ಹೇಳಿದ್ದ. ಅಲ್ಲದೆ ಮಗನನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಲು .5 ಲಕ್ಷ ನೀಡುವಂತೆ ಹೇಳಿದ್ದ.

 

ಲೋನ್‌ ಕಟ್ಟದ ತಂದೆ, ರಿಕವರಿಗಾಗಿ ಆತನ ಮಗಳನ್ನೇ ಕಿಡ್ನಾಪ್‌ ಮಾಡಿದ ಏಜೆಂಟ್‌

ಈ ಕರೆ ಸ್ವೀಕರಿಸಿದ ಕೂಡಲೇ ಆತಂಕಗೊಂಡ ಜಯಸೂರ್ಯ(Jayasurya) ಪೋಷಕರು, ತಕ್ಷಣವೇ ಎಚ್‌ಎಸ್‌ಆರ್‌ ಲೇಔಟ್‌(HSR Layout police) ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ತನಿಖೆಗಿಳಿದ ಪೊಲೀಸರು, ಕೃತ್ಯದ ನಡೆದ ಒಂದೇ ಗಂಟೆಯಲ್ಲಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ