ನಗರದ ಜೇವರ್ಗಿ ರಸ್ತೆಯಲ್ಲಿರುವ ಕೋಟನೂರ್ (ಡಿ) ಲುಂಬಿಣಿ ಉದ್ಯಾನವನದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಚಪ್ಪಲಿ ಹಾರ ಹಾಕಿದ ಘಟನೆ ಖಂಡಿಸಿ ಮಂಗಳವಾರ ವಿವಿಧ ದಲಿತಪರ ಸಂಘಟನೆಗಳ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ಕಲಬುರಗಿ (ಜ.24): ನಗರದ ಜೇವರ್ಗಿ ರಸ್ತೆಯಲ್ಲಿರುವ ಕೋಟನೂರ್ (ಡಿ) ಲುಂಬಿಣಿ ಉದ್ಯಾನವನದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಚಪ್ಪಲಿ ಹಾರ ಹಾಕಿದ ಘಟನೆ ಖಂಡಿಸಿ ಮಂಗಳವಾರ ವಿವಿಧ ದಲಿತಪರ ಸಂಘಟನೆಗಳ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ಈ ವೇಳೆ ಕೆಲ ಕಿಡಿಗೇಡಿಗಳು ಅಂಗಡಿಗಳು, ವಾಹನಗಳ ಮೇಲೆ ಕಲ್ಲು ತೂರಿದ್ದು, ಗಾಜುಗಳು ಪುಡಿಪುಡಿಯಾಗಿವೆ. ಜತೆಗೆ, ಬೆಳಗ್ಗಿನ ಪ್ರತಿಭಟನೆಯಿಂದಾಗಿ ಬೆಂಗಳೂರು-ಕಲಬುರಗಿ ಹೆದ್ದಾರಿಯಲ್ಲಿ ಸುಮಾರು 3 ಗಂಟೆಗೂ ಹೆಚ್ಚುಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಪ್ರತಿಭಟನಾಕಾರರು ಬೆಳಗಿನ 8.30 ಗಂಟೆಯಿಂದಲೇ ಪ್ರಮುಖ ರಸ್ತೆ, ವೃತ್ತಗಳಲ್ಲಿ ಜಮಾಯಿಸಿ ನ್ಯಾಯ ಕೊಡಿ ಎಂದು ಕೂಗುತ್ತ ರಸ್ತೆಗಳಿಗೆ ದೊಡ್ಡ ಕಲ್ಲುಗಳನ್ನು ಇಟ್ಟು, ಬೈಕ್ ಅಡ್ಡಾದಿಡ್ಡಿ ನಿಲ್ಲಿಸಿ, ಕಾರ್‌ಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸುತ್ತ ರಸ್ತೆ ತಡೆ ಶುರು ಮಾಡಿದರು. ಮಧ್ಯಾಹ್ನದ ವರೆಗೂ ಪ್ರತಿಭಟನೆ ಮುಂದುವರಿಯಿತು. ನಂತರ ಜಿಲ್ಲಾಧಿಕಾರಿ ಫೌಜಿಯಾ ಅವರು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದರು.
undefined
ಅಂಬೇಡ್ಕರ್ ಪ್ರತಿಮೆಗೆ ಅಪಮಾನ: ಕಲಬುರಗಿಯಲ್ಲಿ ಉದ್ವಿಗ್ನ ಪರಿಸ್ಥಿತಿ
ಉದ್ದೇಶಪೂರ್ವಕ ಸಂಚು?
ಕಲಬುರಗಿ ಹೊರ ವಲಯದಲ್ಲಿರುವ ಕೋಟನೂರ್ (ಡಿ) ಗ್ರಾಮದ ಲುಂಬಿಣಿ ಉದ್ಯಾನದಲ್ಲಿದ್ದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿ ಅಪಮಾನ ಪ್ರಕರಣದ ಹಿಂದೆ ದುಷ್ಕರ್ಮಿಗಳಿಂದ ಪಕ್ಕಾ ಸಂಚು ರೂಪಿಸಿರೋ ಗುಮಾನಿ ಕಾಡತೊಗಿದೆ. ಏಕೆಂದರೆ ಲುಂಬಿಣಿ ಗಾರ್ಡನ್ ಅಪಮಾನಕ್ಕೊಳಗಾದಂತಹ ಅಂಬೇಡ್ಕರ್ ಪುತ್ಥಳಿ ಬಳಿಯೇ ಪುಟ್ಟದಾದ ಕಾಗದ ಚೀಟಿಯೊಂದು ಪತ್ತೆಯಾಗಿ ಕುತೂಹಲ ಮೂಡಿಸಿದೆ.
ಈ ಕಾಗದದ ಪುಟ್ಟದಾದ ಚೀಟಿ, ಅದರಲ್ಲಿ ಪಾಣೆಗಾಂವ್ 3, ನದಿ ಸಿನ್ನೂರಿನ ನಾಲ್ವರು ಯುವಕರ (ಹುಡುಗರ) ಹೆಸರಿದೆ, ಜೊತೆಗೆ ಇವರೇ ಸೂಚಿಸಿದ್ದರಿಂದ ಈ ಕೃತ್ಯ ಮಾಡಿದ್ದೇವೆ. ಇವರು ಹಣ ಕೊಡೋದಾಗಿ ಆಮಿಷ ತೋರಿಸಿದ್ದಾರೆಂಬ ಸಾಲುಗಳು ಕಂಡು ಬಂದಿದ್ದು ಸದ್ಯ ಈ ಕಾಗದದ ಚೀಟಿ ಪೊಲೀಸರ ಗಮನ ಸೆಳೆದಿವೆ.
ಅಪಮಾನದ ಪ್ರಕರಣಬೆಳಕಿಗೆ ಬರುತ್ತಿದ್ದಂತೆಯೇ ಪೊಲೀಸರು ಬಂದಾಗ ಈ ಚೀಟಿ ಅವರ ಗಮನ ಸೆಳೆದಿದೆ. ಮೂಲಗಳ ಪ್ರಕಾರ ಚೀಟಿ ಪೊಲೀಸರ ಕೈ ಸೋರಿದೆ. ಪೊಲೀಸರು ಪ್ರಕರಣದ ತನಖೆ ಎಲ್ಲಾ ನಿಟ್ಟಿನಲ್ಲಿಯೂ ನಡೆಸೋದಾಗಿ ಹೇಳಿದ್ದಾರೆಂದು ಗೊತ್ತಾಗಿದೆ.
ಸಾಮಾನ್ಯವಾಗಿ ಇಂತಹ ಪ್ರಕರಣಗಳಲ್ಲಿ ಕಿಡಿಗೇಡಿಗಳು ಸುಳಿವು ಬಿಟ್ಟು ಕೊಡೋದಿಲ್ಲ, ಆದರಿಲ್ಲಿ ಹೆಸರುಗಳಿರುವ ಚೀಟಿ ದೊರಕಿರೋದರಿಂದ ಇದೊಂದು ಸಂಚು, ಜೊತೆಗೇ ಯಾರನ್ನೋ ಇದರಲ್ಲಿ ಸಿಕ್ಕಿ ಹಾಕಿಸುವ ಮತ್ತೊಂದು ಕಿಡಿಗೇಡಿತನವೂ ಅಡಗಿದೆಯ? ಎಂಬುದನ್ನು ಪೊಲೀಸರು ಪರಿಶೀಲನೆ ಮುಂದಾಗಿದ್ದಾರೆ.
ಜಗದೀಶ್ ಶೆಟ್ಟರ್ ಮರಳಿ ಬಿಜೆಪಿಗೆ ಕರೆತರುವ ಯತ್ನ ಬಿಜೆಪಿಯಲ್ಲಿ ಆರಂಭ!
ಲುಂಬಿಣಿ ವನದಲ್ಲಿರುವ ಅಂಬೇಡ್ಕರ್ ಪ್ರತಿಮೆ ಅಪಮಾನದ ಪ್ರಕರಣದ ಕೇಸ್ ದಾಖಲಾಗಿದ್ದು ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಇಲ್ಲಿ ಕಂಡಿರುವ ಚೀಟಿ, ಇತರೆ ಸಾಕ್ಷಾಧ್ಯಾರಗಳನ್ನೆಲ್ಲ ಅದಾಗಲೇ ಕಲೆ ಹಾಕಿರುವ ಪೊಲೀಸರ ತನಿಖೆಯಿಂದಲೇ ಈ ಪ್ರಕರಣದ ಹಿಂದಡಗಿರುವ ವಿಷಯಗಳು ಹೊರಬರಬೇಕಷ್ಟೆ.