ಕೋರ್ಟ್‌ ಮುಂದೆಯೇ ರಾಡ್‌ನಿಂದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ!

By Ravi Janekal  |  First Published Jun 11, 2024, 10:22 PM IST

ಪೊಲೀಸರದ್ದು ಹೆದರಿಕೆ ಇಲ್ಲ, ಕಾನೂನಿದ್ದು ಭಯವಿಲ್ಲ ಹಾಡಹಗಲೇ ನ್ಯಾಯಾಲದ ಮುಂದೆ ವ್ಯಕ್ತಿಯ ಮೇಲೆ ಕಬ್ಬಿಣದ ರಾಡ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ದುಷ್ಕರ್ಮಿಗಳು ವಿಜಯಪುರದ ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದಿರುವ ಘಟನೆ ಬೆಚ್ಚಿಬಿಳಿಸಿದೆ.


ವಿಜಯಪುರ (ಜೂ.11): ಹಾಡಹಗಲೇ ಅದು ನ್ಯಾಯಾಲಯದ ಮುಂದೆಯೇ ವ್ಯಕ್ತಿಯ ಮೇಲೆ ರಾಡ್‌ನಿಂದ ಹಲ್ಲೆ ಮಾಡಿದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ನ್ಯಾಯಾಲಯದ ಮುಂದೆ ನಡೆದಿದೆ.

ವೈಯಕ್ತಿಕ ದ್ವೇಷ ಶಂಕೆ ನಾಲ್ವರು ವ್ಯಕ್ತಿಗಳು ಕೈಯಲ್ಲಿ ರಾಡ್ ಮಾರಕಾಸ್ತ್ರ ಹಿಡಿದು ಬಂದು ವ್ಯಕ್ತಿಯ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ. ಬಿಡಿಸಲು ಹೋದ ವ್ಯಕ್ತಿಗೂ ಹಲ್ಲೆ ಮಾಡಿರುವ ದುಷ್ಕರ್ಮಿಗಳು. ಸುತ್ತಮುತ್ತ ಪೊಲೀಸರು, ವಕೀಲರು ಇದ್ದರೂ ಯಾರದ್ದೂ ಭಯವಿಲ್ಲದೇ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿದ್ದಾರೆ. ಘಟನೆ ಕಂಡು ತಕ್ಷಣ ಮಧ್ಯೆ ಪ್ರವೇಶಿಸಿದ ವಕೀಲರು, ಸಾರ್ವಜನಿಕರು ಹಲ್ಲೆಗೊಳಗಾದ ವ್ಯಕ್ತಿಯನ್ನ ರಕ್ಷಿಸಿದ್ದಾರೆ

Tap to resize

Latest Videos

undefined

ರೇಣುಕಾಸ್ವಾಮಿ ಕೊಲೆಗೆ ನಟ ದರ್ಶನ್ ಹೊಣೆ, ಕಠಿಣ ಶಿಕ್ಷೆಯಾಗಲಿ: ಮಾಜಿ ಶಾಸಕ ಬಸವರಾಜನ್

ವಕೀಲರು ಬರುತ್ತಿದ್ದಂತೆ ಹಲ್ಲೆಕೋರರು ಕಾಲ್ಕಿತ್ತಿದ್ದಿದ್ದಾರೆ. ಈ ವೇಳೆ ನಾಲ್ವರನ್ನು ಹಿಡಿಯಲು ಸಾರ್ವಜನಿಕರು ಯತ್ನಿಸಿದ್ದಾರೆ. ಕೈಗೆ ಸಿಗದೇ ಪರಾರಿಯಾಗಿರುವ ದುಷ್ಕರ್ಮಿಗಳು. ಹಲ್ಲೆಗೊಳಗಾದ ವ್ಯಕ್ತಿಯ ಹೆಸರು ತಿಳಿದುಬಂದಿಲ್ಲ. ತಲೆಗೆ ಗಂಭೀರ ಗಾಯಗಳಾಗಿವೆ. ಮುದ್ದೇಬಿಹಾಳ ತಾಲೂಕು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಮುದ್ದೇಬಿಹಾಳ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ
 

click me!