Darshan Arrest: ಜಡ್ಜ್‌ ಮುಂದೆ ಕಣ್ಣೀರಿಟ್ಟ ದರ್ಶನ್‌, ಪವಿತ್ರಾ ಗೌಡ!

By Santosh Naik  |  First Published Jun 11, 2024, 7:38 PM IST

darshan arrested in mysuru  ಚಿತ್ರದುರ್ಗದ ರೇಣುಕಾಸ್ವಾಮಿ ಎನ್ನುವ ಅಭಿಮಾನಿಯನ್ನು ಅಮಾನುಷವಾಗಿ ಕೊಲೆ ಮಾಡಿದ ಪ್ರಕರಣದಲ್ಲಿ ಬಂಧಿತನಾಗಿರುವ ನಟ ದರ್ಶನ್‌ ಹಾಗೂ ಪವಿತ್ರಾ ಗೌಡರನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು, ಜಡ್ಜ್‌ ಮುಂದೆ ಗಳಗಳನೆ ಕಣ್ಣೀರಿಟ್ಟಿದ್ದಾರೆ.


ಬೆಂಗಳೂರು (ಜೂ.11): ಒಂದು ದಿನದ ಹಿಂದೆ ರಾಜ್ಯದ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬನಾಗಿದ್ದ ನಟ ದರ್ಶನ್‌ ಇಂದು ಕೊಲೆ ಕೇಸ್‌ನಲ್ಲಿ ಮೂರು ಪೊಲೀಸ್‌ ಕಸ್ಟಡಿಗೆ ಸೇರಿದ್ದಾರೆ. ಚಿತ್ರದುರ್ಗ ಮೂಲದ ಅಭಿಮಾನಿ ರೇಣುಕಾಸ್ವಾಮಿ ಎನ್ನುವ ವ್ಯಕ್ತಿಯನ್ನು ಅಮಾನುಷವಾಗಿ ಹತ್ಯೆ ಮಾಡಿದ ಆರೋಪದಲ್ಲಿ ದರ್ಶನ್‌ರನ್ನು ಕೋರ್ಟ್‌ 3 ದಿನ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದೆ. ಇನ್ನು ಕೋರ್ಟ್‌ನಲ್ಲಿ ವಾದ ಪ್ರತಿವಾದ ನಡೆದ ವೇಳೆ ದರ್ಶನ್‌ ಹಾಗೂ ಪವಿತ್ರಾ ಗೌಡ ಗಳಗಳನೆ ಕಣ್ಣೀರಿಟಿದ್ದಾರೆ. ದರ್ಶನ್ ಸೇರಿ ಪ್ರಕರಣದ ಎಲ್ಲಾ 13 ಆರೋಪಿಗಳನ್ನ ಕೋರ್ಟ್ ಮುಂದೆ ಪೊಲೀಸರು ಹಾಜರುಪಡಿಸಿದ್ದರು.  ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಇಡೀ ಪಟಾಲಂಅನ್ನು ಹಾಜರುಪಡಿಸಲಾಗಿತ್ತು. ಈ ವೇಳೆ ನ್ಯಾಯಾಧೀಶರ ಮುಂದೆ ಕೈಕಟ್ಟಿ ನಿಂತುಕೊಂಡಿದ್ದ ದರ್ಶನ್‌ ಹಾಗೂ ಪವಿತ್ರಾ ಗೌಡ ಇಬ್ಬರ ಕಣ್ಣಲ್ಲೂ ಧಾರಾಕಾರ ನೀರು ಹರಿಯಿತು.

ಕೋರ್ಟ್‌ನ ಮುಂದೆ ಹಾಜರುಪಡಿಸಲಾಗಿದ್ದ ಎಲ್ಲಾ ಆರೋಪಿಗಳ ಹೆಸರನ್ನೂ ಕೇಳಲಾಯಿತು. ಈ ವೇಳೆ ಪೊಲೀಸರಿಂದ ಏನಾದರೂ ತೊಂದರೆ ಆಗಿದೆಯೇ ಎಂದು ಎಲ್ಲರಿಗೂ ಕೇಳಲಾಗಿತ್ತು. ಇದಕ್ಕೆ ಎಲ್ಲರೂ ಇಲ್ಲ ಎಂದು ಹೇಳಿದ್ದರು. ಆ ಬಳಿಕ ಜಡ್ಜ್‌ ರಿಮಾಂಡ್‌ ಅರ್ಜಿಯ ಪರಿಶೀಲನೆ ಮಾಡಿದರು. ನಿಮ್ಮಲ್ಲರನ್ನ, ಎಲ್ಲಿ? ಯಾವಾಗ ಬಂಧನ ಮಾಡಲಾಯಿತು ಎಂದು ಜಡ್ಜ್‌ ಕೇಳಿದರು. ಈ ವೇಳೆ ದರ್ಶನ್‌ ತಮ್ಮನ್ನು ಮಧ್ಯಾಹ್ನ 2.30ಕ್ಕೆ ಹಾಗೂ ಪವಿತ್ರಾ ಗೌಡ ತನ್ನನ್ನು 3 ಗಂಟೆಗೆ ಬಂಧನ ಮಾಡಲಾಯಿತು ಎಂದು ಹೇಳಿದ್ದಾರೆ. ಪೊಲೀಸ್‌ ಠಾಣೆಯಲ್ಲಿಯೇ ತನ್ನನ್ನು ಬಂಧನ ಮಾಡಿದರು ಎಂದು ಪವಿತ್ರಾ ತಿಳಿಸಿದ್ದಾರೆ.

ವಕೀಲರನ್ನು ನೇಮಕ ಮಾಡಿಕೊಳ್ಳುತ್ತೀರಾ ಎನ್ನುವ ಪ್ರಶ್ನೆಗೆ ಈಗಾಗಲೇ  ಬಂಧನದ ಮಾಹಿತಿಯನ್ನು ಕುಟುಂಬದವರಿಗೆ ನೀಡಲಾಗಿದೆ ಎಂದು ಇವರು ಉತ್ತರ ನೀಡಿದ್ದಾರೆ. ತಮ್ಮ ಕೇಸ್‌ಗೆ ವಕೀಲರನ್ನು ನೇಮಕ ಮಾಡಿಕೊಳ್ಳೋದಾಗಿ ಇಬ್ಬರೂ ತಿಳಿಸಿದ್ದಾರೆ. 

ಆ ಬಳಿಕ ಪೊಲೀಸರು ಹೆಚ್ಚಿನ ವಿಚಾರಣೆಗೆ ಎಲ್ಲರನ್ನೂ 14 ದಿನ ಪೊಲೀಸ್‌ ಕಸ್ಟಡಿಗೆ ನೀಡಬೇಕು ಎಂದು ತಿಳಿಸಿದ್ದಾರೆ. ಎಲ್ಲಾ ಕಡೆ ಮಹಜರ್‌ ಮಾಡಬೇಕಿದೆ. ಕೂಡಿ ಹಾಕಿದ ಜಾಗ, ಕೊಲೆಯಾದ ಸ್ಥಳ, ಬಾಡಿಯನ್ನು  ಎಸೆದ ಸ್ಥಳದ ಮಹಜರು ಮಾಡಬೇಕು ಎಂದು ತಿಳಿಸಿದ್ದಾರೆ. ಎಲ್ಲೆಲ್ಲಿ ಹಲ್ಲೆ‌ಮಾಡಿದ್ದಾರೆ ಎಂಬುದನ್ನ ತನಿಖೆ ಮಾಡಬೇಕಿದೆ. ಹಲ್ಲೆಗೆ ಬಳಕೆ ಮಾಡಿರುವ ವೆಪನ್ ಜಪ್ತಿ ಮಾಡಬೇಕಿದೆ ಎಂದು ತನಿಖಾಧಿಕಾರಿ ಕೂಡ ಕೋರ್ಟ್‌ಗೆ ಮನವಿ ಮಾಡಿದರು.

Tap to resize

Latest Videos

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ದರ್ಶನ್ ಪರ ವಕೀಲ ಮೌನೇಶ್, ಕಸ್ಟಡಿಯ ಅಗತ್ಯವೇ ಇಲ್ಲ ಎಂದು ಹೇಳಿದರು. ಈಗಾಗಲೇ ಮೊಬೈಲ್‌ ಪಡೆದುಕೊಳ್ಳಲಾಗಿದೆ. ಬಾಡಿ ಕೂಡ ರಿಕವರಿ ಆಗಿದೆ. ಕಸ್ಟಡಿಗೆ ಕೊಡುವ ಅಗತ್ಯವೇ ಇಲ್ಲ ಎಂದು ಹೇಳಿದರು. ದರ್ಶನ್‌ ಪರ ಇನ್ನೊಬ್ಬ ವಕೀಲ ನಾರಾಯಣಸ್ವಾಮಿ ಕೂಡ ಇದೇ ಮಾತನ್ನು ಪುನರುಚ್ಛರಿಸಿದರು. ಅದಲ್ಲದೆ, ತನಿಖಾಧಿಕಾರಿ ಮಾತನಾಡಿದ್ದ ಆಕ್ಷೇಪ ವ್ಯಕ್ತಪಡಿಸಿದ ವಕೀಲರು, ಪಿಪಿ ಇದ್ದಾರೆ ಅವರು ವಾದ ಮಾಡುತ್ತಾರೆ. ತನಿಖಾಧಿಕಾರಿ ಮಾತನಾಡುವ ಅಗತ್ಯವಿಲ್ಲ ಎಂದು ತಿಳಿಸಿದರು.  ದರ್ಶನ್ ತಪ್ಪಿಸಿಕೊಂಡಿಲ್ಲ , ತನಿಖೆಗೆ ಸಹಕರಿಸಿದ್ದಾರೆ. ದರ್ಶನ್ ವಿರುದ್ದ ಯಾವುದೇ ಆರೋಪ ಇಲ್ಲ. ಪೊಲೀಸ್ ಕಸ್ಟಡಿಗೆ ನೀಡಬಾರದು. ಹೀಗಾಗಿ ನ್ಯಾಯಂಗ ಬಂಧನಕ್ಕೆ ನೀಡುವಂತೆ ದರ್ಶನ್ ಪರ‌ ವಕೀಲರ ಮನವಿ ಮಾಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ: ಮೆಜೆಸ್ಟಿಕ್‌ ದಾಸ 6 ದಿನ ಪೊಲೀಸ್ ಕಸ್ಟಡಿಯಲ್ಲಿ ವಾಸ!

ದರ್ಶನ್‌ಗೆ ವಕೀಲರ ಬಗ್ಗೆ ಗೊಂದಲ: ಜಡ್ಜ್‌ ವಕೀಲರು ಯಾರು ಎಂದು ಪ್ರಶ್ನೆ ಕೇಳಿದ್ದಕ್ಕೆ, ಪವಿತ್ರಾ ಗೌಡ ನಾರಾಯಣಸ್ವಾಮಿ ತಮ್ಮ ವಕೀಲರು ಎಂದರೆ, ಪ್ರವೀಣ್‌ ತಿಮ್ಮಯ್ಯ ತನ್ನ ವಕೀಲರು ಎಂದು ದರ್ಶನ್‌ ಹೇಳಿದ್ದ. ಕೆಲ ಹೊತ್ತಿನ ಬಳಿಕ ಯಾವ ವಕೀಲರನ್ನ ನೇಮಿಸಿಕೊಂಡಿಲ್ಲ ಎಂದು ದರ್ಶನ್‌ ಉತ್ತರ ನೀಡಿದ್ದಾರೆ. ಮುಂದೆ ಪ್ರಕರಣದಲ್ಲಿ ನೇಮಕ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.

ಯುವ ರಾಜ್‌ಕುಮಾರ್‌-ಸಪ್ತಮಿ ಗೌಡ ರೆಡ್‌ಹ್ಯಾಂಡ್‌ ಆಗಿ ಹೋಟೆಲ್‌ ರೂಮ್‌ನಲ್ಲಿ ಸಿಕ್ಕಿಬಿದ್ದಿದ್ರು: ಶ್ರೀದೇವಿ ಭೈರಪ್ಪ
 

click me!