Asianet Suvarna News Asianet Suvarna News

ರೇಣುಕಾಸ್ವಾಮಿ ಕೊಲೆಗೆ ನಟ ದರ್ಶನ್ ಹೊಣೆ, ಕಠಿಣ ಶಿಕ್ಷೆಯಾಗಲಿ: ಮಾಜಿ ಶಾಸಕ ಬಸವರಾಜನ್

ಇದು ರೇಣುಕಾಸ್ವಾಮಿ ಕೊನೆ ಅಲ್ಲ, ಮಾನವೀಯತೆಯ ಕೊಲೆ. ರೇಣುಕಾಸ್ವಾಮಿ ತಪ್ಪು ಮಾಡಿದ್ರೆ ಕಾನೂನು ಕ್ರಮ ಕೈಗೊಳ್ಳಬೇಕಿತ್ತು. ಆದರೆ ಈ ರೀತಿ ಚಿತ್ರಹಿಂಸೆ ನೀಡಿ ಕೊಂದಿದ್ದಾರೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಮಾಜಿ ಶಾಸಕ ಎಸ್‌ಕೆ ಬಸವರಾಜನ್ ಆಕ್ರೋಶ ವ್ಯಕ್ತಪಡಿಸಿದರು.

Kannada actor Darshan is responsible for Renukaswamy murder case says Former MLA Basavarajan at chitradurga rav
Author
First Published Jun 11, 2024, 9:15 PM IST

ಚಿತ್ರದುರ್ಗ (ಜೂ.11): ಇದು ರೇಣುಕಾಸ್ವಾಮಿ ಕೊನೆ ಅಲ್ಲ, ಮಾನವೀಯತೆಯ ಕೊಲೆ. ರೇಣುಕಾಸ್ವಾಮಿ ತಪ್ಪು ಮಾಡಿದ್ರೆ ಕಾನೂನು ಕ್ರಮ ಕೈಗೊಳ್ಳಬೇಕಿತ್ತು. ಆದರೆ ಈ ರೀತಿ ಚಿತ್ರಹಿಂಸೆ ನೀಡಿ ಕೊಂದಿದ್ದಾರೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಮಾಜಿ ಶಾಸಕ ಎಸ್‌ಕೆ ಬಸವರಾಜನ್ ಆಕ್ರೋಶ ವ್ಯಕ್ತಪಡಿಸಿದರು.

ನಟ ದರ್ಶನ ಮತ್ತವರ ತಂಡದಿಂದ ಹತ್ಯೆಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣ ತಿಳಿದು ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾನೂನು ಕೈಗೆತ್ತಿಕೊಂಡವರಿಗೆ ಕಠಿಣ ಶಿಕ್ಷೆಯಾಗಬೇಕು. ಇಂತಹ ಪ್ರಕರಣಗಳು ಮರುಕಳಿಸಿದಂತೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.

ಪವಿತ್ರ ಗೌಡ ಹಾಕಿದ್ದ ಕರ್ಮ ರಿಟರ್ನ್ಸ್ ವಿಡಿಯೋಗೆ ವಿಜಯಲಕ್ಷ್ಮಿ ಅಭಿಮಾನಿಗಳಿಂದ ತಿರುಗೇಟು

ಈ ಪ್ರಕರಣದಲ್ಲಿ ತಕ್ಷಣ ಆರೋಪಿಗಳನ್ನು ಬಂಧಿಸಿದ್ದಕ್ಕೆ ಪೊಲೀಸರಿಗೆ ಧನ್ಯವಾದ. ಪ್ರಕರಣದಲ್ಲಿ ಭಾಗಿಯಾದ ಎಲ್ಲ ಆರೋಪಿಗಳು ಸೂಕ್ತ ಶಿಕ್ಷೆ ಆಗಬೇಕು. ಸೆಲೆಬ್ರಿಟಿ,  ನಟ ದರ್ಶನ್ ರೇಣುಕಾಸ್ವಾಮಿ ಕೊಲೆಗೆ ಹೊಣೆ. ಈ ಪ್ರಕರಣವನ್ನ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಬೇಕು. ಸರ್ಕಾರ ವಿಶೇಷ ತಂಡ ರಚಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ರೇಣುಕಾಸ್ವಾಮಿ ಕೊಲೆ ಖಂಡಿಸಿ ನಾಳೆ ಚಿತ್ರದುರ್ಗದಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಭಾಗಿಯಾಗುತ್ತೇನೆ. ಈ ರೀತಿಯಲ್ಲಿ ಸಮಾಜದವರು ಭಾಗಿಯಾಗಬೇಕು ಎಂದು ಮನವಿ ಮಾಡಿದರು. ಈ ವೇಳೆ ರೇಣುಕಾಸ್ವಾಮಿ ಮನೆಮುಂದೆ ನೆರೆದಿದ್ದ ಜನರು 'ಕೊಲೆಗಾರ ದರ್ಶನ್‌ಗೆ ಧಿಕ್ಕಾರ ಧಿಕ್ಕಾರ' ಚಿತ್ರನಟ ದರ್ಶನ್ ವಿರುದ್ಧ ಘೋಷಣೆ ಕೂಗಿದರು.

Latest Videos
Follow Us:
Download App:
  • android
  • ios