ನಂಗೆ ಹುಟ್ಟೋ ಮಗು ಅಪ್ಪ ಎಲ್ಲಿ ಅಂದ್ರೆ ಏನು ಹೇಳೋದು? ಹತ್ಯೆಯಾದ ರೇಣುಕಾಸ್ವಾಮಿ ಹೆಂಡ್ತಿ ಕಣ್ಣೀರು

By Sathish Kumar KH  |  First Published Jun 11, 2024, 8:46 PM IST

ನಮಗೆ ಮದುವೆಯಾಗಿ ಒಂದು ವರ್ಷವಾಗಿದೆ. ಈಗ ನಾನು ತಾಯಿ ಆಗ್ತಿದ್ದೀನಿ. ನಂಗೆ ಮುಂದೆ ಹುಟ್ಟೋ ಮಗು ಅಪ್ಪ ಎಲ್ಲಿ ಎಂದು ಕೇಳಿದರೆ ಏನು ಹೇಳಬೇಕು? ಎಂದು ಹತ್ಯೆಯಾದ ರೇಣುಕಾಸ್ವಾಮಿ ಪತ್ನಿ ಸಹನಾ ಕಣ್ಣೀರಿಟ್ಟಿದ್ದಾರೆ.


ಚಿತ್ರದುರ್ಗ (ಜೂ.11): ನಮಗೆ ಮದುವೆಯಾಗಿ ಒಂದು ವರ್ಷವಾಗಿದೆ. ಈಗ ನಾನು ತಾಯಿ ಆಗ್ತಿದ್ದೀನಿ. ನಂಗೆ ಮುಂದೆ ಹುಟ್ಟೋ ಮಗು ಅಪ್ಪ ಎಲ್ಲಿ ಎಂದು ಕೇಳಿದರೆ ಏನು ಹೇಳಬೇಕು? ಮೊನ್ನೆ ನನಗೆ ಕರೆ ಮಾಡಿ ಮಾತನಾಡಿದ್ದೇ ಕೊನೆ ಆಗೋಯ್ತು. ನನ್ನ ಮತ್ತು ನನ್ನ ಮುಂದಿನ ಜೀವನ ಹೇಗೆ ಮಾಡೋದು..? ನೀವೇ ನ್ಯಾಯ ಕೊಡಿಸಿ ಸ್ವಾಮೀ ಎಂದು ನಟ ದರ್ಶನ್ ಗ್ಯಾಂಗ್‌ನಿಂದ ಹತ್ಯೆಯಾದ ಚಿತ್ರದುರ್ಗದ ರೇಣುಕಾಸ್ವಾಮಿಯ ಪತ್ನಿ ಸಹನಾ ಅಳಲು ತೋಡಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಗ್ಗೆ ಅವರ ಪತ್ನಿ ಸಹನಾ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ. ನನ್ನ ಮನೆಯವರಿಗೆ ಹೀಗೆ ಆಗಿದೆ, ನ್ಯಾಯ ಕೊಡ್ಸಿ. ನಾನು ಗೃಹಿಣಿ ಇದಿನಿ ಹೀಗೆ ಆಗಬಾರದಿತ್ತು. ಮದುವೆಯಾಗಿ ಒಂದು ವರ್ಷ ಆಗಿದೆ. ತಾಯಿ ಬೇರೆ ಆಗ್ತಿದ್ದೀನಿ ಇವಾಗ ಹಿಂಗ್ ಆದ್ರೆ ಏನ್ ಮಾಡ್ಲಿ.? ಮೊನ್ನೆ ಕರೆ ಮಾಡಿ ನಮ್ಮ ಜೊತೆ ಮಾತನಾಡಿದ್ದೇ ಕೊನೆ ಆಗಿಹೋಯ್ತು. ಈಗ ಮಾತನಾಡೋಕೆ ಅವರೇ ಇಲ್ಲವಾಗಿದೆ ಎಂದು ಮಾಧ್ಯಮಗಳ ಮುಂದೆ ನೋವು ತೋಡಿಕೊಂಡು ಕಣ್ಣೀರಿಟ್ಟರು.

Tap to resize

Latest Videos

undefined

ದರ್ಶನ್‌ನಿಂದ ಕೊಲೆಯಾದ ಬಜರಂಗದಳ ಕಾರ್ಯಕರ್ತ ರೇಣುಕಾಸ್ವಾಮಿ ಹೆಂಡ್ತಿ 5 ತಿಂಗಳ ಗರ್ಭಿಣಿ

ನಮ್ಮನೆಯವರು ದರ್ಶನ್ ಅವರ ಅಭಿಮಾನಿ ಆಗಿರಲಿಲ್ಲ. ದರ್ಶನ ಮೇಲೆ ಆರೋಪ ಬಂದಿರೋದಕ್ಕೆ ನ್ಯಾಯ ಕೊಡಿಸಲು ಜನ ಇದಾರೆ. ನಾನು ಮುಂದೆ ಜೀವನ ಮಾಡೋದು ಹೇಗೆ? ಮುಂದೆ ಈ ಮಗುವಿಗೆ ಯಾರು ಬರ್ತಾರೆ? ನಮಗೆ ನ್ಯಾಯ ಬೇಕು ಎಂದು ಮೃತ ರೇಣುಕಾಸ್ವಾಮಿ ಅವರ ಪತ್ನಿ ಸಹನಾ ಮಾಧ್ಯಮಗಳ ಮುಂದೆ ಮನವಿ ಮಾಡಿಕೊಂಡಿದ್ದಾರೆ.

ರೇಣುಕಾಸ್ವಾಮಿ ಹೆಂಡ್ತಿ ತುಂಬಾ ಮುಗ್ದೆ, ಆಕೆ ನೋಡಿ ನಂಗೇ ಕಣ್ಣೀರು ಬಂತು: ದರ್ಶನ್ ಗ್ಯಾಂಗ್‌ನಿಂದ ಕೊಲೆಯಾದ ರೇಣುಕಾಸ್ವಾಮಿ ಪತ್ನಿ ಭೇಟಿ ಮಾಡಿದ ಭಾವನಾ ಬೆಳಗೆರೆ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಅವರ ಪತ್ನಿ ನೋಡಿ  ನನ್ನ ಕಣ್ಣಲ್ಲೇ ನೀರು ಬಂತು. ಅವರ ಪತ್ನಿ ಸಂಪೂರ್ಣವಾಗಿ ಬ್ಲಾಂಕ್ ಆಗಿದ್ದಾರೆ. ತುಂಬಾ ಎಂಗ್ ಇದ್ದಾರೆ, ಅದರಲಲ್ಲಿಯೂ ಐದು ತಿಂಗಳ ಗರ್ಭಿಣಿ ಇದ್ದಾರೆ. ಅವರ ಹೆಂಡತಿ ತುಂಬಾ ಮುಗ್ಧರು ತುಂಬಾ ನೊಂದು ಕೊಂಡಿದ್ದಾರೆ. ಏನಾಗುತ್ತಿದೆ ಎಂಬುದು ಅವರಿಗೆ ಇನ್ನು ಗೊತ್ತಾಗಿಲ್ಲ. ಪವಿತ್ರ ದರ್ಶನ ಅವರು ಅರೆಸ್ಟ್ ಆಗಿದ್ದಾರೆ ಎಂಬುದು ಗೊತ್ತಾಗಿದೆ. ಅವರ ಮನೆ ಪರಿಸ್ಥಿತಿ ನೋಡಿ ತುಂಬಾ ಬೇಜಾರಾಯ್ತು ಎಂದು ಹೇಳಿದರು.

ಒಂದು ಏಟು ಕಪಾಳಕ್ಕೆ ಹೊಡೆದು ವಾರ್ನಿಂಗ್ ಮಾಡಿದ್ದೆ, ಆತನಿಗೆ ಊಟ ಕೊಟ್ಟು ಕಳಿಸಿಬಿಡಿ ಎಂದಿದ್ದೆ; ನಟ ದರ್ಶನ್ ಹೇಳಿಕೆ

90 ವರ್ಷದ ಅಜ್ಜಿಗೆ ಮೊಮ್ಮಗ ಕೊಲೆಯಾದ ಸುದ್ದಿಯೇ ಗೊತ್ತಿಲ್ಲ: ಮೃತಪಟ್ಟಿರುವ ಹುಡುಗ ರೇಣುಕಾಸ್ವಾಮಿ ಮನೆಯಲ್ಲಿ 97 ವರ್ಷದ ಅವರ ಅಜ್ಜಿ ಇದ್ದಾರೆ. ಅವರಿಗೆ ಏನಾಗಿದಿಯೋ ಗೊತ್ತಿಲ್ಲ. ಇನ್ನೊಂದು ಅಜ್ಜಿ ಇದ್ದು ಅವರು ಮೊಮ್ಮಗ ಗುಣವಾಗಿ ಬರುತ್ತಾನೆ ಅಂತಾ ಹೇಳ್ತಾ ಇದ್ದಾರೆ. ಬೆಂಗಳೂರಲ್ಲಿ ಮೊಮ್ಮಗ ಕೊಲೆಯಾಗಿರುವ ವಿಷ್ಯ ಅವರ ಅಜ್ಜಿಯವರಿಗೆ ಗೊತ್ತಾಗಿಲ್ಲ. ಇನ್ನು ಅವನು ತುಂಬಾ ಅಮಾಯಕ ಅವನು ದರ್ಶನ ಅಭಿಮಾನಿ ಅಲ್ಲ, ಅವನ ಪಾಲೋಯಿರ್ ಕೂಡ ಅಲ್ಲ. ಡ್ಯೂಟಿಗೆ ಹೋದವನು ಇನ್ನು ಬಂದಿಲ್ಲ. ಅವನು ಪೋನ್ ಮಾಡಿದ್ದಾಗ ಅವರ ಪತ್ನಿ ರಿಸಿವ್ ಮಾಡಿಲ್ಲ. ಪತ್ನಿ ಪೋನ್ ಮಾಡಿದಾಗ ಅವನು ರೀಸಿವ್ ಮಾಡಿಲ್ಲ. ಪೇಸ್ ಬುಕ್ ಹಾಗೂ ಪವಿತ್ರಾಗೌಡಗೆ ಮೆಸೇಜ್ ಮಾಡಿದ್ದ ಬಗ್ಗೆ ಬಗ್ಗೆ ಮನೆಯವರಿಗೆ ಏನು ಗೊತ್ತಿಲ್ಲ. ಇನ್ನು ಪರ್ಸನಲ್ ಕಾಮೆಂಟ್ ಗೆ ಸೈಬರ್ ಕ್ರೈಮ್ ಇದೆ. ಪ್ರಾಣ ತೆಗೆಯುವ ಮಟ್ಟಕ್ಕೆ ಸೋಷಿಯಲ್ ಮೀಡಿಯಾ ಹೋಗತ್ತಿದೆ. ಈ ಕೊಲೆ ಪ್ರಕರಣ ಶೇಮ್‌ಫುಲ್ ಬಿಹೇವಿಯರ್ ಆಗಿದೆ. ಯಾವ ಅಭಿಮಾನಿಯೂ ಕೂಡ ಸಾವು ಬಯೋಸೋದು ಇಲ್ಲ. ನಟ ದರ್ಶನ ಹೊಡಿರಿ ಅಂತಾ ಹೇಳಿದ್ದರೂ, ಅವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಪತ್ರಕರ್ತೆ ಭಾವನಾ ಬೆಳಗೆರೆ ಹೇಳಿದರು.

click me!