Crime News; ಪಾಕಿಸ್ತಾನ, ಬಾಲಕನ ಹತ್ಯೆ ಮಾಡಿ ಶವದ ಮೇಲೆ ಅತ್ಯಾಚಾರ

Published : Nov 22, 2021, 12:35 AM IST
Crime News; ಪಾಕಿಸ್ತಾನ, ಬಾಲಕನ ಹತ್ಯೆ ಮಾಡಿ ಶವದ ಮೇಲೆ ಅತ್ಯಾಚಾರ

ಸಾರಾಂಶ

* ಪಾಕಿಸ್ತಾನದಿಂದ ಘನ-ಘೋರ ಪ್ರಕರಣ ವರದಿ * ಬಾಲಕನ ಹತ್ಯೆ ಮಾಡಿ ಶವದ ಮೇಲೆ ಅತ್ಯಾಚಾರ * ಇಬ್ಬರು ಆರೋಪಿಗಳ ಬಂಧನ * ಮಿತಿ ಮೀರಿದ ಕಾಮುಕರ ಅಟ್ಟಹಾಸ

ಇಸ್ಲಾಮಾಬಾದ್ (  ನ. 22) ಕಾಮುಕರು ಯಾವ ರೀತಿ ಅಟ್ಟಹಾಸ ಮರೆದಿದ್ದಾರೆ ಎನ್ನುವುದನ್ನು ಹೇಳಲು ಅಸಾಧ್ಯ.  ಬಾಲಕನ (Boy) ಹತ್ಯೆ (Murder) ಮಾಡಿ ಆತನ ಶವದ ಮೇಲೆ ಅತ್ಯಾಚಾರ (Rape) ಎಸಗಲಾಗಿದೆ. 

 ಪಾಕಿಸ್ತಾನದ (Pakistan) ಸಿಂಧ್ ಪ್ರಾಂತ್ಯದಲ್ಲಿ 11 ವರ್ಷದ ಹಿಂದು (Hindu) ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಬರ್ಬರವಾಗಿ ಹತ್ಯೆ  ಮಾಡಲಾಗಿದೆ . ಈ ಪ್ರಕರಣವನ್ನು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಬಾಲಕನ ಶವ ಖೈರ್‌ಪುರ್ ಮಿರ್ ಪ್ರದೇಶದ ಬಾಬರ್ಲೋಯ್ ಪಟ್ಟಣದಲ್ಲಿನ ಹಾಳುಬಿದ್ದ ಮನೆಯೊಂದರಲ್ಲಿ ಪತ್ತೆಯಾಗಿದೆ ಎಂದು ಕುಟುಂಬ ಹೇಳಿಕೆಯಲ್ಲಿ ತಿಳಿಸಿದೆ. . ಘಟನೆ ಕುರಿತು ಬಾಲಕನ ಸೋದರ ಸಂಬಂಧಿ ರಾಜ್‌ಕುಮಾರ್ ಮಾತನಾಡಿ, ನಮ್ಮ ಕುಟುಂಬ ಗುರುನಾನಕ್ ಜಯಂತಿ ಕಾರ್ಯಕ್ರಮಗಳಲ್ಲಿ  ಬಿಡುವಿಲ್ಲದೆ ತೊಡಗಿಸಿಕೊಂಡಿದ್ದರಿಂದ ಬಾಲಕ ಎಲ್ಲಿದ್ದಾನೆ ಎನ್ನುವುದು ಮೊದಲಿಗೆ ಗೊತ್ತಾಗಲಿಲ್ಲ. ನಂತರ ಕಾಮುಕರು ಪೈಶಾಚಿಕ ಕೃತ್ಯ ಎಸಗಿರುವುದು ಗೊತ್ತಾಯಿತು ಎಂದಿದ್ದಾರೆ.

ಬಾಲಕ  ಐದನೇ ತರಗತಿ ಓದುತ್ತಿದ್ದ, ಅಪ್ರಾಪ್ತ ಬಾಲಕನ ದೇಹದ ಮೇಲೆ ಚಿತ್ರಹಿಂಸೆ ನೀಡಿರುವ ಗುರುತು ಕಂಡುಬಂದಿವೆ ಎಂದು ಮಕ್ಕಳ ರಕ್ಷಣಾ ಪ್ರಾಧಿಕಾರ ಜುಬೇರ್ ಮಹೇರ್ ಹೇಳಿದ್ದಾರೆ. ಇದು  ಈ ಪ್ರಾಂತ್ಯದಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ನಡೆಯುತ್ತಿರುವ ಎರಡನೇ ಘೋರ ಪ್ರಕರಣ

ಬಾಬರ್ಲೋಯ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್(ಎಸ್‌ಎಚ್‌ಒ) ಮಾತನಾಡಿ, ಆರೋಪಿಗಳು ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಮುನ್ನ ಕತ್ತು ಕೊಯ್ದು ಹತ್ಯೆ ಮಾಡಿದ್ದಾರೆ ಎಂದು ವಿವರಣೆ ನೀಡಿದ್ದಾರೆ. ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದ್ದು, ಈ ಪೈಕಿ ಒಬ್ಬ  ತಪ್ಪೊಪ್ಪಿಕೊಂಡಿದ್ದಾನೆ.

Viral Video; ಸೋಶಿಯಲ್ ಮೀಡಿಯಾದಲ್ಲಿ ಪಾಕ್ ಶಾಸಕಿಯ ಅಶ್ಲೀಲ ವಿಡಿಯೋ ವೈರಲ್

ಲೈಂಗಿಕ ನಿಶ್ಯಕ್ತಿ ಮಾಡಲಾಗುತ್ತದೆ: ಪದೇ-ಪದೇ ಅತ್ಯಾಚಾರ (Rape Case) ಕೃತ್ಯಗಳಲ್ಲಿ ಭಾಗಿಯಾಗುವವರ ವಿರುದ್ಧದ ಕಠಿಣ ಕ್ರಮಕ್ಕೆ ಮುಂದಾಗಿದ್ದ ಪಾಕಿಸ್ತಾನ (Pakistan), ಇಂಥ ಕೃತ್ಯಗಳಲ್ಲಿ ಆಗಾಗ್ಗೆ ಭಾಗಿಯಾಗಿ ಬಂಧನಕ್ಕೊಳಗಾಗುವವರಿಗೆ ಲೈಂಗಿಕ ಉತ್ಸಾಹವನ್ನೇ ಕುಂಠಿತಗೊಳಿಸುವ ಶಿಕ್ಷೆಗೆ ಗುರಿಪಡಿಸಲು ನಿರ್ಧರಿಸಿತ್ತು. . ಅತ್ಯಾಚಾರ ಪ್ರಕರಣಗಳ ತ್ವರಿತ ತನಿಖೆ, ಸಾಕ್ಷ್ಯ ಸಂಗ್ರಹ, ವಿಚಾರಣೆಗೆ ಪೂರ್ಣ ಮತ್ತು ಲೈಂಗಿಕ ಶಕ್ತಿ ಕುಂಠಿತಗೊಳಿಸುವ ಶಿಕ್ಷೆ ಜಾರಿ ಸೇರಿದಂತೆ ಮಹತ್ವದ ಅಂಶಗಳನ್ನು ಒಳಗೊಂಡ ಮಸೂದೆಗೆ ಪಾಕ್‌ ಸಂಸತ್‌  ಅಂಗೀಕಾರ ಮಾಡಿತ್ತು.

ಪಾಕ್‌ನಲ್ಲಿ ಅತ್ಯಾಚಾರ ಪ್ರಕರಣದ ದೋಷಿಗಳಿಗೆ 20-25 ವರ್ಷ ಜೈಲು ಅಥವಾ ಮರಣ ದಂಡನೆ ( Death sentence )  ವಿಧಿಸುವ ಅವಕಾಶ ಇದೆ. ಆದರೆ ಸಾವಿರಾರು ಅತ್ಯಾಚಾರ (Rape) ಪ್ರಕರಣ ದಾಖಲಾದರೂ ಶಿಕ್ಷೆ ಜಾರಿಯಾಗುವ ಪ್ರಮಾಣ ಕೇವಲ ಶೇ.3ಕ್ಕಿಂತ ಕಡಿಮೆ  ಇರುವುದು ಅಂಕಿ ಅಂಶಗಳಿಂದ ಗೊತ್ತಾಗಿತ್ತು.

 ದೇಶಾದ್ಯಂತ ಮಕ್ಕಳು (Children) ಮತ್ತು ಮಹಿಳೆಯರ (woman) ಮೇಲಿನ ಅತ್ಯಾಚಾರ ಪ್ರಕರಣ ಹೆಚ್ಚುತ್ತಿದೆ. ಈ ಬಗ್ಗೆ ದೇಶಾದ್ಯಂತ ಭಾರೀ ಪ್ರತಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಇಂಥ ಕಠಿಣ ಕ್ರಮಕ್ಕೆ ಮುಂದಾಗಿದೆ. ಈ ಶಿಕ್ಷೆಯನ್ನು ಕೆಲವೊಂದು ರಾಸಾಯನಿಕ ಬಳಸಿ ಇಂಜೆಕ್ಷನ್‌ (Injection) ಮೂಲಕ ಜಾರಿಗೊಳಿಸಲಾಗುತ್ತದೆ. ಹೀಗೆ ಶಿಕ್ಷೆಗೆ ಗುರಿಯಾದ ವ್ಯಕ್ತಿ ನಿರ್ದಿಷ್ಟಅವಧಿಗೆ ಯಾವುದೇ ಲೈಂಗಿಕ ಆಸಕ್ತಿಯನ್ನು ಹೊಂದಿರುವುದಿಲ್ಲ. ಜೊತೆಗೆ ಬೇರೆ ರಾಸಾಯನಿಕಗಳನ್ನು ಮರಳಿ ಅಂಥ ವ್ಯಕ್ತಿಗಳಿಗೆ ನೀಡುವ ಮೂಲಕ ಅವರಲ್ಲಿನ ಲೈಂಗಿಕ ಶಕ್ತಿಯನ್ನು ಮರಳಿಸಬಹುದಾಗಿದೆ ಎಂದು ಹೇಳಲಾಗಿತ್ತು.   ಇಂಥ ಶಿಕ್ಷೆ ಈಗಾಗಲೇ ದಕ್ಷಿಣ ಕೊರಿಯಾ, ಪೊಲೆಂಡ್‌, ಅಮೆರಿಕದ ಕೆಲ ರಾಜ್ಯಗಳು, ಜೆಕ್‌ ರಿಪಬ್ಲಿಕ್‌ ಮೊದಲಾದ ದೇಶಗಳಲ್ಲಿ ಜಾರಿಯಲ್ಲಿದೆ.

ಹೇಗೆ ಸ್ಪರ್ಶಿಸಿದರೂ ಲೈಂಗಿಕ ದೌರ್ಜನ್ಯ :  ಮಗುವಿನ ಮೇಲಿನ ಲೈಂಗಿಕ ದೌರ್ಜನ್ಯದ(sexual assault) ಪ್ರಕರಣವೊಂದರಲ್ಲಿ ‘ಚರ್ಮಕ್ಕೆ ಚರ್ಮ ತಾಗಿಲ್ಲ’(skin-to-skin contact) ಎಂಬ ಕಾರಣ ನೀಡಿ ಆರೋಪಿಯನ್ನು ಖುಲಾಸೆಗೊಳಿಸಿದ್ದ ಬಾಂಬೆ ಹೈಕೋರ್ಟ್‌ನ(Bombay High Court) ಬಹುಚರ್ಚಿತ ವಿವಾದಿತ ತೀರ್ಪನ್ನು ಸುಪ್ರೀಂಕೋರ್ಟ್‌ ರದ್ದುಪಡಿಸಿತ್ತು.  'ಪೋಕ್ಸೋ' ಕಾಯ್ದೆಯಡಿ ಮಗುವಿನ ಮೇಲಿನ ಲೈಂಗಿಕ ದೌರ್ಜನ್ಯವನ್ನು ಸಾಬೀತುಪಡಿಸುವಲ್ಲಿ ಆರೋಪಿಯ ಲೈಂಗಿಕ ಉದ್ದೇಶ ಮುಖ್ಯವೇ ಹೊರತು ಚರ್ಮಕ್ಕೆ ಚರ್ಮ ತಾಗುವುದಲ್ಲ’ ಎಂದು ನ್ಯಾಯಪೀಠ ಸ್ಪಷ್ಟವಾಗಿ ಹೇಳಿ ವಿವಾದವನ್ನು ಕೊನೆ ಮಾಡಿತ್ತು.

ಗುಪ್ತಾಂಗಗಳನ್ನು ಸ್ಪರ್ಶಿಸುವುದು ಅಥವಾ ಇನ್ನಾವುದೇ ರೀತಿಯ ದೈಹಿಕ ಸ್ಪರ್ಶವು ಲೈಂಗಿಕ ಉದ್ದೇಶದಿಂದ(sexual intent) ಕೂಡಿದ್ದಾಗಿದ್ದರೆ ಅದು ಪೋಕ್ಸೋ ಕಾಯ್ದೆಯ(POCSO Act) ಸೆಕ್ಷನ್‌ 7ರಡಿ ಲೈಂಗಿಕ ದೌರ್ಜನ್ಯವಾಗುತ್ತದೆ. ಕಾಯ್ದೆಯ ಉದ್ದೇಶವು ಸ್ಪಷ್ಟವಾಗಿದ್ದು, ಅದರಲ್ಲಿ ಕೋರ್ಟ್‌ಗಳು ಗೊಂದಲ ಹುಡುಕಬಾರದು ಎಂದೂ ಸುಪ್ರೀಂಕೋರ್ಟ್‌(Supreme Court) ಹೇಳಿತ್ತು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!