
ಜೈಪುರ(ನ. 21) ರಾಜಸ್ಥಾನದ (Rajasthan) ರಾಜಧಾನಿ ಜೈಪುರದಿಂದ (Jaipur) ವಿಚಿತ್ರ ಪ್ರಕರಣ ವರದಿಯಾಗಿದೆ. ಗೆಳೆಯಯ ಖಾಸಗಿ ಅಂಗವನ್ನೇ(Private Part) ಈಕೆ ಕತ್ತರಿಸಿ ಹಾಕಿದ್ದಾಳೆ. ಯೋಗ (Yoga Teacher) ಶಿಕ್ಷಕಿ ಇಂಥ ಕೆಲಸ ಮಾಡಿದ್ದಾಳೆ.
ಗಾಯಗೊಂಡಿದ್ದ ಯುವಕನನ್ನು ಆಸ್ಪತ್ರೆಗೆ (Hospital) ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆದು ಮರಳಿದ ಬಳಿಕ ಯುವಕ ಜೈಪುರದ ಭಂಕ್ರೋಟಾ ಠಾಣೆಗೆ ದೂರು ದಾಖಲಿಸಿದ್ದಾನೆ.
ಯುವಕ ಮತ್ತು ಯುವತಿ ಇಬ್ಬರು ಯೋಗ ತರಬೇತುದಾರರಾಗಿದ್ದು ಬಿಕಾನೇರ್ ನಿವಾಸಿಗಳು. ಕಳೆದ ಎರು ವರ್ಷಗಳಿಂದ ಒಂದೆ ಕಡೆ ಕೆಲಸ ಮಾಡುತ್ತಿದ್ದರು. ಈ ವೇಳೆ ಯುವಕನಿಗೆ ರೀಮಾ (Social Media) ಪರಿಚಯವಾಗಿದೆ. ಒಂದು ದಿನ ಮನೆಗೆ ಕರೆಸಿಕೊಂಡ ಯುವತಿ ಆತನಿಗೆ ಊಟ ನೀಡಿದ್ದಾಳೆ.
ಊಟದಲ್ಲಿ ಅಮಲು ಪದಾರ್ಥ ಹಾಕಿ ನೀಡಿದ್ದು ಯುವಕ ಅಮಲಿಗೆ ಜಾರಿದ್ದಾನೆ. ಮಧ್ಯರಾತ್ರಿ ಎರಡು ಗಂಟೆ ನಂತರ ಎಚ್ಚರವಾಗಿ ನೋಡಿದಾಗ ಎಲ್ಲ ಕಡೆ ರಕ್ತ ಚೆಲ್ಲಿತ್ತು. ಯುವಕನ ಮರ್ಮಾಂಗ ಕತ್ತರಿಸಿ ಬಿದ್ದಿದೆ. ಯುವತಿ ಇನ್ನೊಂದು ಕಡೆ ಮುದುಡಿ ಕುಳಿತುಕೊಂಡಿದ್ದಳು. ಮರ್ಮಾಂಗ ಕತತ್ತರಿಸಿದ್ದ ಆಕೆಯೇ ಯುವಕನನ್ನು ಆಸ್ಪತ್ರೆಗೆ ದಾಖಲಿಸುವ ಕೆಲಸ ಮಾಡಿದ್ದಾಳೆ. ನನ್ನನ್ನು ಕ್ಷಮಿಸಿ ಎಂದು ಅಳುತ್ತಾ ಕುಳಿತುಕೊಂಡಿದ್ದಳು.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವಕನಿಗೆ ಏನಾಗಿದೆ ಎನ್ನುವುದೆ ಅರಿವಿನಲ್ಲಿ ಇರಲಿಲ್ಲ. ಒಂದು ಕಡೆ ನೀಡಿದ್ದ ಅಮಲು ಪದಾರ್ಥ ಇನ್ನೊಂದು ಕಡೆ ಮರ್ಮಾಂಗ ಕತ್ತರಿಸಿಕೊಂಡ ನೋವಿನಿಂದ ಪ್ರಜ್ಞಾಹೀನನಾಗಿದ್ದ. ಯುವತಿಯೇ ಆತನನನ್ನು ಆಸ್ಪತ್ರೆಗೆ ದಾಖಲಿಸಿದ್ದಾಳೆ. ಆತನಿಗೆ ಚಿಕಿತ್ಸೆ ನೀಡುತ್ತಿರುವುದು ಗೊತ್ತಾದ ತಕ್ಷಣ ಅಲ್ಲಿಂದ ಜಾಗ ಖಾಲಿ ಮಾಡಿದ್ದಾಳೆ.
ಪಾಕ್ ಶಾಸಕಿಯ ಅಶ್ಲೀಲ ವಿಡಿಯೋ ವೈರಲ್ ಮಾಡಿದ್ದು ಯಾರು?
ಯುವಕ ಇದೀಗ ಯೋಗ ಶಿಕ್ಷಕಿ ಮೇಲೆ ಕೊಲೆ ಪ್ರಕರಣ ದಾಖಲಿಸಿದ್ದಾನೆ. ಯುವತಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು ಹುಡುಕಾಟ ನಡೆಯುತ್ತಿದೆ. ಆಕೆ ತನಗೆ ಮಾದಕ ಪದಾರ್ಥ ನೀಡಿ ಸೆಕ್ಸ್ ಗಾಗಿ ಪ್ರಚೋದನೆ ಮಾಡಿದ್ದಾಳೆ. ಅದನ್ನು ನಿರಾಕರಿಸಿದಾಗ ಸಿಟ್ಟಿನಿಂದ ಖಾಸಗಿ ಅಂಗ ಕತ್ತರಿಸಿದ್ದಾಳೆ ಎಂದು ಯುವಕ ಆರೋಪಿಸಿದ್ದಾನೆ.
ಸ್ಪೇನ್ ನಲ್ಲಿ ವಿಚಿತ್ರ ಪ್ರಕರಣ: ಮಾಜಿ ಬಾಯ್ ಫ್ರೆಂಡ್ ನ್ನು ಸಿಕ್ಕಿಹಾಕಿಸಲು ಹೋದ ಮಹಿಳೆಗೆ ಹತ್ತು ವರ್ಷ ಜೈಲು ಶಿಕ್ಷೆಯಾಗಿತ್ತು. ಸ್ಪೇನ್ ನ ಬೆಂಬಿಂಬ್ರೆಯಿಂದ ವರದಿಯಾಗಿತ್ತು. ತನ್ನ ಯೋನಿಯನ್ನು ಮಾಜಿ ಪ್ರಿಯಕರ ಗಮ್ ನಿಂದ ಸೀಲ್ ಮಾಡಲು ಯತ್ನಿಸಿದ್ದ ಎಂದು ಮಹಿಳೆ ಆರೋಪಿಸಿದ್ದಳು. ಆದರೆ ತನಿಖೆ ವೇಳೆಯಲ್ಲಿ ಆಕೆ ತಾನೇ ಸೀಲ್ ಮಾಡಿಕೊಂಡಿದ್ದಳು ಎಂಬುದು ಬಹಿರಂಗವಾಗಿತ್ತು.
ವನೆಸಾ ಗಾಸ್ಟೋ ಎಂಬಾಕೆಯೇ ಶಿಕ್ಷೆಗೆ ಗುರಿಯಾದವಳು. ಪೊಲೀಸರು ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ಆಕೆ ಮಾರಕ ಆಯುಧ ಮತ್ತು ಗಮ್ ಖರೀದಿ ಮಾಡಿದ್ದು ಗೊತ್ತಾಗಿದೆ. ಕೃತ್ಯ ಎಸಗಿ ಮಾಜಿ ಪ್ರಿಯಕರ ಕಪ್ಪು ಬಣ್ಣದ ಕಾರ್ ನಲ್ಲಿ ಹೋಗಿದ್ದ ಎಂದು ಮಾಡಿದ್ದ ಆರೋಪವೂ ಸುಳ್ಳಾಗಿದೆ.
ತಪ್ಪು ಮಾಡದೆ ಇದ್ದರೂ ಪ್ರಿಯಕರ ಜೈಲು ಸೇರಿದ್ದ. ಉತ್ತರ ಸ್ಪೇನ್ ಲಿಯಾನ್ ನ್ಯಾಯಾಲಯ ಪ್ರಿಯಕರಿನಿಗೆ 25 ಸಾವಿರ ಯುರೋ ದಂಡ ನೀಡಲು ಮಹಿಳೆಗೆ ಆದೇಶ ನೀಡಿತ್ತು ಪ್ರಿಯಕರ ರಿಕೋ ನನ್ನನ್ನು ಕಪ್ಪು ಬಣ್ಣದ ಕಾರಿನಲ್ಲಿ ಅಪಹರಣ ಮಾಡಿ ಯೋನಿಯನ್ನು ಅಂಟಿನಿಂದ ಸೀಲ್ ಮಾಡಿ ಅರೆಬೆತ್ತಲೆ ಸ್ಥಿತಿಯಲ್ಲಿ ಬಿಟ್ಟುಹೋಗಿದ್ದ ಎಂದು ಮಹಿಳೆ ಆರೋಪ ಮಾಡಿದ್ದು ಸುಳ್ಳೆಂದು ಸಾಬೀತಾಗಿತ್ತು.
ಬೆಡ್ ರೋಂ ಸೇರಿಕೊಂಡಿದ್ದ ಇಲಿ ಓಡಿಸಲು ಗಂಡ ನಿರಾಕರಿಸಿದ್ದಕ್ಕೆ ಆಕ್ರೋಶಗೊಂಡ ಮಹಿಳೆ ಗಂಡನ ಶಿಶ್ನವನ್ನೇ ಕಚ್ಚಿದ್ದಳು. ಜಾಂಬೀಯಾದ ಕಿಟ್ವೆಯಲ್ಲಿನ ಗಂಡ ಹೆಂಡತಿಯಿಂದ ಘೋರ ಶಿಕ್ಷೆಗೆ ಗುರಿಯಾಗಿದ್ದ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ