ಡಿಜೆ ಸದ್ದು ಕಡಿಮೆ ಮಾಡು ಎಂದ ಗರ್ಭಿಣಿ ಮೇಲೆ ಗುಂಡಿನ ದಾಳಿ: ಗರ್ಭಪಾತ

Published : Apr 04, 2023, 03:02 PM IST
ಡಿಜೆ ಸದ್ದು ಕಡಿಮೆ ಮಾಡು ಎಂದ  ಗರ್ಭಿಣಿ ಮೇಲೆ ಗುಂಡಿನ ದಾಳಿ: ಗರ್ಭಪಾತ

ಸಾರಾಂಶ

ಡಿಜೆ ಸದ್ದು ಕಡಿಮೆ ಮಾಡು ಎಂದ ಗರ್ಭಿಣಿ ಮಹಿಳೆ ಮೇಲೆ  ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ಪರಿಣಾಮ ಮಹಿಳೆಗೆ ಗರ್ಭಪಾತವಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.

ದೆಹಲಿ: ಡಿಜೆ ಸದ್ದು ಕಡಿಮೆ ಮಾಡು ಎಂದ ಗರ್ಭಿಣಿ ಮಹಿಳೆ ಮೇಲೆ  ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ಪರಿಣಾಮ ಮಹಿಳೆಗೆ ಗರ್ಭಪಾತವಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ. ವಾಯುವ್ಯ ದೆಹಲಿಯ ಸಿರ್ಸಾಪುರದಲ್ಲಿ ಈ ಘಟನೆ ನಡೆದಿದೆ.   ಮಹಿಳೆಯ ಪಕ್ಕದ ಮನೆಯಲ್ಲಿ ಪಾರ್ಟಿ ನಡೆಯುತ್ತಿದ್ದು, ಕಿವಿಗಡಚಿಕ್ಕುವ ಡಿಜೆ ಸದ್ದಿನಿಂದ ಕಿರಿಕಿರಿಗೊಳಗಾದ  ಮಹಿಳೆ ಡಿಜೆ ಸದ್ದು ಸ್ವಲ್ಪ ಕಡಿಮೆ ಮಾಡುವಂತೆ ಹೇಳಿದ್ದಾಳೆ. ಅಷ್ಟಕ್ಕೆ ಸಿಟ್ಟಿಗೆದ್ದ  ಹರೀಶ್‌ ಎಂಬಾತ ತನ್ನ ಸ್ನೇಹಿತ ಅಮಿತ್ ಎಂಬಾತನ ಗನ್‌ನಿಂದ ಮಹಿಳೆ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ. 

ಗುಂಡಿನ ದಾಳಿಗೊಳಗಾದ ಮಹಿಳೆಯನ್ನು ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ರಾತ್ರಿ 12.15ರ ಸುಮಾರಿಗೆ ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆಯೊಂದು ಬಂದಿದ್ದು, ವಾಯುವ್ಯ ದೆಹಲಿಯ ಸಿರ್ಸಾಪುರದಲ್ಲಿ (Siraspur) ಗುಂಡಿನ ದಾಳಿ ನಡೆದ ಬಗ್ಗೆ ಮಾಹಿತಿ ಸಿಕ್ಕಿದೆ. ಮಾಹಿತಿ ಪಡೆದು ಸ್ಥಳಕ್ಕೆ ಪೊಲೀಸರು ತೆರಳಿದಾಗ ಸಿರ್ಸಾಪುರದ ರಂಜು ಎಂಬ ಮಹಿಳೆ ಆಸ್ಪತ್ರೆಗೆ ದಾಖಲಾಗಿರುವುದು ತಿಳಿದು ಬಂದಿದೆ. 

ಕಚೇರಿಯಲ್ಲಿ ಕುರ್ಚಿಗಾಗಿ ಕದನ: ಸಹೋದ್ಯೋಗಿಯ ಮೇಲೆ ಗುಂಡಿನ ದಾಳಿ

ನಂತರ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಮಹಿಳೆಯ ಹೇಳಿಕೆ ಪಡೆಯಲು ಮುಂದಾಗಿದ್ದಾರೆ. ಆದರೆ ಮಹಿಳೆಯ ಕುತ್ತಿಗೆಗೆ ಗುಂಡು ಬಿದ್ದಿರುವುದರಿಂದ ಆಕೆಯ ಸ್ಥಿತಿ ಗಂಭೀರವಾಗಿದ್ದು, ಹೇಳಿಕೆ ನೀಡಲು ಸಾಧ್ಯವಿಲ್ಲ ಎಂದು ವೈದ್ಯರು ಪೊಲೀಸರಿಗೆ ತಿಳಿಸಿದ್ದಾರೆ ಎಂದು ಉಪ ಪೊಲೀಸ್ ಕಮೀಷನರ್ ರವಿಕುಮಾರ್ ಸಿಂಗ್ (Ravi Kumar Singh) ಹೇಳಿದ್ದಾರೆ. 

ಅಮೆರಿಕಾದ ಗುರುದ್ವಾರದಲ್ಲಿ ಗುಂಡಿನ ದಾಳಿ: NRI ಸೇರಿ ಇಬ್ಬರಿಗೆ ಗಾಯ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನಾಗ್ಪುರದಲ್ಲಿ ಬೆಚ್ಚಿಬೀಳಿಸುವ ಕೃತ್ಯ, ಏರ್ ಫೋರ್ಸ್ ಅಧಿಕಾರಿಯ ಪತ್ನಿ ಮೇಲೆ ಗ್ಯಾಂಗ್‌ನಿಂದ ದೌರ್ಜನ್ಯ: ಮತಾಂತರದ ವೀಡಿಯೋ ವೈರಲ್!
ಬುರುಡೆ ಗ್ಯಾಂಗ್‌ನಿಂದ ಜೀವ ಬೆದರಿಕೆಯಿದೆ: ಮಾಸ್ಕ್‌ಮ್ಯಾನ್ ಚಿನ್ನಯ್ಯ ಆರೋಪ! ಅಷ್ಟಕ್ಕೂ SIT ಗೆ ಸಲ್ಲಿಸಿದ ದೂರಿನಲ್ಲಿ ಏನಿದೆ?