ಯೂಟ್ಯೂಬ್‌ಗೆ ವಿಡಿಯೋ ಕಾಲ್‌ ಅಪ್ಲೋಡ್‌ ಮಾಡುವ ಬೆದರಿಕೆ: 80 ವರ್ಷದ ಮುದುಕನಿಗೆ 8 ಲಕ್ಷ ರೂ. ವಂಚನೆ

By BK Ashwin  |  First Published Apr 4, 2023, 11:01 AM IST

ಮುಂಬೈನ ಮಾತುಂಗಾದ 80 ವರ್ಷದ ರಿಯಲ್ ಎಸ್ಟೇಟ್ ಬ್ರೋಕರ್‌ ಅನ್ನು ವಿಡಿಯೋ ಕರೆ ಮೂಲಕ ಪಡೆದ ದೃಶ್ಯಗಳನ್ನು ಮಾರ್ಫ್ ಮಾಡಿ ಒಟ್ಟು 7.97 ಲಕ್ಷ ರೂ. ವಂಚಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತುಂಗಾ ಪೊಲೀಸರು ಮೂವರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.


ನವದೆಹಲಿ (ಏಪ್ರಿಲ್‌ 4, 2023): ಸ್ಮಾರ್ಟ್‌ಫೋನ್‌ ಹಾಗೂ ತಂತ್ರಜ್ಞಾನದ ಬಳಕೆ ಹೆಚ್ಚಾದಂತೆ ಅಪರಾಧ ಹಾಗೂ ವಂಚನೆ ಮಾಡುವ ರೀತಿಯೂ ಬದಲಾಗುತ್ತಿರುತ್ತದೆ. ಇತ್ತೀಚೆಗೆ ಯಾವ್ಯಾವುದೋ ನಂಬರ್‌ನಿಂದ ವಿಡಿಯೋ ಕಾಲ್‌ ಬರುವುದು ಹಾಗೂ ನಂತರ ಹಣಕ್ಕೆ ಬೇಡಿಕೆ ಇಡುವ ಪ್ರಕರಣಗಳು ಹೆಚ್ಚಾಗುತ್ತಿದೆ. ಇದೇ ರೀತಿ, ಮಹಾರಾಷ್ಟ್ರದ ಮುಂಬೈನಲ್ಲಿ 80 ವರ್ಷದ ರಿಯಲ್ ಎಸ್ಟೇಟ್ ಬ್ರೋಕರ್‌ಗೆ ಬೆದರಿಕೆ ಹಾಕಿ ಲಕ್ಷಂತರ ರೂ. ಪೀಕಲಾಗಿದೆ. 

ಮಾತುಂಗಾದ 80 ವರ್ಷದ ರಿಯಲ್ ಎಸ್ಟೇಟ್ ಬ್ರೋಕರ್‌ ಅನ್ನು ವಿಡಿಯೋ ಕರೆ ಮೂಲಕ ಪಡೆದ ದೃಶ್ಯಗಳನ್ನು ಮಾರ್ಫ್ ಮಾಡಿ ಒಟ್ಟು 7.97 ಲಕ್ಷ ರೂ. ವಂಚಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತುಂಗಾ ಪೊಲೀಸರು ಮೂವರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Tap to resize

Latest Videos

ಇದನ್ನು ಓದಿ: ಮದುವೆಯಾಗಿದ್ರೂ ಅಪ್ರಾಪ್ತೆ ವಿದ್ಯಾರ್ಥಿನಿಗೆ ತಾಳಿ ಕಟ್ಟಿದ ಟೀಚರ್‌: ಕಾಮುಕ ಶಿಕ್ಷಕನ ಬಂಧನ

ಪ್ರಕರಣದ ವಿವರ..
ಮಾರ್ಚ್ 11 ರಂದು 80 ವರ್ಷದ ರಿಯಲ್‌ ಎಸ್ಟೇಟ್‌ ಬ್ರೋಕರ್‌ಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿತ್ತು. ತನ್ನನ್ನು ಡಾ ಮಾನಸಿ ಜೈನ್ ಎಂದು ಗುರುತಿಸಿಕೊಂಡ ಮಹಿಳೆಯೊಬ್ಬರು, ಪರೇಲ್‌ನಲ್ಲಿರುವ ತನ್ನ ಕ್ಲಿನಿಕ್ ಅನ್ನು ಮಾರಾಟ ಮಾಡಲು ಬಯಸುವುದಾಗಿ ಬ್ರೋಕರ್‌ಗೆ ತಿಳಿಸಿದರು. ಪ್ರಾಪರ್ಟಿ ಆಯಾಮಗಳು ಮತ್ತು ಇತರ ವಿವರಗಳನ್ನು ತಿಳಿದುಕೊಳ್ಳಬೇಕು ಎಂದು ಬ್ರೋಕರ್ ಉತ್ತರಿಸಿದರು. ಕೆಲವೇ ನಿಮಿಷಗಳಲ್ಲಿ, ಅವರಿಗೆ ವಿಡಿಯೋ ಕಾಲ್‌ ಬಂದಿದೆ. ಆದರೆ, ಆ ಕಾಲ್‌ನಲ್ಲಿ ಅವರು ತಮ್ಮನ್ನು ಮಾತ್ರ ನೋಡುತ್ತಿದ್ದರೇ ಹೊರತು ಇನ್ನೊಂದು ಕಡೆ ಸಂಪೂರ್ಣ ಕತ್ತಲೆ ಇತ್ತು ಎಂದು 80 ವರ್ಷದ ರಿಯಲ್‌ ಎಸ್ಟೇಟ್‌ ಬ್ರೋಕರ್‌ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. 

ಎರಡು ದಿನಗಳ ನಂತರ ಬ್ರೋಕರ್‌ಗೆ  ಮಹಿಳೆಯಿಂದ ಮತ್ತೊಂದು ಕರೆ ಬಂದಿದೆ. ನಿಮ್ಮ ನಗ್ನ ಕ್ಲಿಪ್‌ ನಮ್ಮ ಬಳಿ ಇದೆ. 1.50 ಲಕ್ಷ ರೂಪಾಯಿ ಪಾವತಿಸದಿದ್ದರೆ, ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಉತ್ತರಿಸಿದ 80 ವರ್ಷದ ವ್ಯಕ್ತಿ, ತನ್ನ ಬಳಿ ಅಷ್ಟು ಹಣವಿಲ್ಲ. ಆದರೆ ಕಡಿಮೆ ಮೊತ್ತವನ್ನು ಪಾವತಿಸಲು ಪರಿಗಣಿಸುವುದಾಗಿ ಬ್ರೋಕರ್ ಉತ್ತರಿಸಿದ.

ಇದನ್ನೂ ಓದಿ: AI ಬಗ್ಗೆ ಇರಲಿ ಎಚ್ಚರ: ಚಾಟ್‌ಜಿಪಿಟಿಯಂತಹ ಆ್ಯಪ್ ಗೀಳಿಗೆ ಆತ್ಮಹತ್ಯೆ ಮಾಡಿಕೊಂಡ ವಿವಾಹಿತ..!

ಮತ್ತೆ, ಮಾರ್ಚ್ 20 ರಂದು, ಬ್ರೋಕರ್‌ಗೆ ತನ್ನನ್ನು ತಾನು ಸಿಬಿಐನ ಸೈಬರ್ ಕ್ರೈಂ ಅಧಿಕಾರಿ ವಿಕ್ರಂ ರಾಥೋಡ್ ಎಂದು ಗುರುತಿಸಿಕೊಂಡ ವ್ಯಕ್ತಿಯಿಂದ ಕರೆ ಬಂದಿತ್ತು. ನಿಮ್ಮ ನಗ್ನ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ ಮತ್ತು ಅದನ್ನು ಡಿಲೀಟ್‌ ಮಾಡಲು ಬಯಸಿದರೆ, ತಕ್ಷಣವೇ 'ಯೂಟ್ಯೂಬ್ ಅಧಿಕಾರಿ' ರಾಹುಲ್ ಶರ್ಮಾಗೆ ಕರೆ ಮಾಡಿ ಎಂದು ಅವರು ರಿಯಲ್‌ ಎಸ್ಟೇಟ್‌ ಬ್ರೋಕರ್‌ಗೆ ತಿಳಿಸಿದರು.

ತಕ್ಷಣವೇ ರಾಹುಲ್ ಶರ್ಮಾ ಅವರನ್ನು ಬ್ರೋಕರ್‌ ಸಂಪರ್ಕಿಸಿದ್ದು, ಅವರು ವಿಡಿಯೋ ಡಿಲೀಟ್ ಮಾಡಲು 32,500 ರೂಪಾಯಿ ನೀಡುವಂತೆ ಕೇಳಿದ್ದು, ಶರಣ್‌ಪುರ ಮೂಲದ ಬ್ಯಾಂಕ್ ಖಾತೆಯ ವಿವರ ನೀಡಿದ್ದಾರೆ. ನಂತರ ಮತ್ತೆ 65,000 ರೂ. ನೀಡುವಂತೆ ಕೇಳಿದ್ದು, 80 ವರ್ಷದ ವ್ಯಕ್ತಿ ಬ್ಯಾಂಕ್‌ಗೆ ಹೋಗಿ ಹಣ ಪಾವತಿಸಿದ್ದು, ಬಳಿಕ ನಿಮ್ಮ ವಿಡಿಯೋ ಡಿಲೀಟ್‌ ಆಗಿದೆ ಎಂಬ ಸಂದೇಶ ಬಂದಿದೆ. 

ಇದನ್ನೂ ಓದಿ: Bengaluru: ಕಾರಿನ ಜಿಪಿಎಸ್‌ನಿಂದ ಬಯಲಾಯ್ತು ಪತ್ನಿಯ ಅನೈತಿಕ ಸಂಬಂಧ..!

ಇಷ್ಟಕ್ಕೆ ನಿಲ್ಲದೆ, ಮಾರ್ಚ್ 22 ರಂದು, ರಾಥೋಡ್ ಅವರಿಂದ ಮತ್ತೆ ಕರೆ ಬಂದಿದ್ದು, ಡಾ. ಮಾನಸಿ ಜೈನ್‌ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಕಾಂಟ್ಯಾಕ್ಟ್‌ ಲಿಸ್ಟ್‌ನಲ್ಲಿರುವವರನ್ನು ಬಂಧಿಸಲಾಗುತ್ತೆ ಎಂದಿದ್ದಾರೆ. ಇದನ್ನು ತಪ್ಪಿಸಲು 10 ಲಕ್ಷ ರೂ. ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಬಳಿಕ, ಹೆದರಿದ ದಲ್ಲಾಳಿ ತನ್ನ ಬಳಿ ಅಷ್ಟು ದೊಡ್ಡ ಮೊತ್ತ ಇಲ್ಲ, ಆದರೆ ಸ್ವಲ್ಪ ಹಣ ಕೊಡುವುದಾಗಿ ಹೇಳಿದ್ದಾರೆ. ಹಾಗೆ, ಮಾರ್ಚ್ 23 ರಂದು ರಾಥೋಡ್‌ಗೆ 2.5 ಲಕ್ಷ ರೂ., ನಂತರ ಮಾರ್ಚ್ 24 ಮತ್ತು 27 ರಂದು ಕ್ರಮವಾಗಿ 1.5 ಲಕ್ಷ ಮತ್ತು 1 ಲಕ್ಷ ರೂ. ಹಣ ಹಾಕಿದ್ದಾರೆ. ಆದರೂ, ಆರೋಪಿಗಳು ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. 

ಬಳಿಕ, ರಿಯಲ್‌ ಎಸ್ಟೇಟ್‌ ಬ್ರೋಕರ್‌ನ ಮೊಮ್ಮಗನಿಗೆ ಅನುಮಾನ ಬಂದು ಅವರಿಗೆ ಈ ವಿಷಯ ತಿಳಿದುಬಂದಿದ್ದು, ನಂತರ ಅವರಿಬ್ಬರೂ ಮಾತುಂಗಾ ಪೊಲೀಸ್‌ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಈ ಸಂಬಂಧ ಕೇಸ್‌ ದಾಖಲಿಸಿಕೊಂಡ ಪೊಲೀಸರು 7.97 ಲಕ್ಷ ಸುಲಿಗೆ ಮಾಡಿದ್ದಕ್ಕಾಗಿ ಮೂವರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ದೀಪಕ್ ಚೌಹಾಣ್‌ ತಿಳಿಸಿದ್ದಾರೆ.

ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ನಡೆಸಿ 7 ವರ್ಷದ ಬಾಲಕಿ ಹತ್ಯೆ ಮಾಡಿದ ನೆರೆಮನೆಯ ಕಾಮುಕ: ಗೋಣಿಚೀಲದಲ್ಲಿ ಶವ ಪತ್ತೆ

click me!