ಅಮರಜೀತ್ ಸದಾ, 8 ವರ್ಷದ ಬಾಲಕ ವಿಶ್ವದ ಅತ್ಯಂತ ಕಿರಿಯ ಸೀರಿಯಲ್ ಕಿಲ್ಲರ್ ಆಗಿದ್ದು ಹೇಗೆ?

Published : May 26, 2023, 06:35 PM IST
ಅಮರಜೀತ್ ಸದಾ, 8 ವರ್ಷದ ಬಾಲಕ ವಿಶ್ವದ ಅತ್ಯಂತ ಕಿರಿಯ ಸೀರಿಯಲ್ ಕಿಲ್ಲರ್ ಆಗಿದ್ದು ಹೇಗೆ?

ಸಾರಾಂಶ

ಹೆಸರು ಅಮರಜೀತ್ ಸದಾ. ವಯಸ್ಸು ಕೇವಲ 8. ಆದರೆ ವಿಶ್ವದ ಅತ್ಯಂತ ಕಿರಿಯ ಸೀರಿಯಲ್ ಕಿಲ್ಲರ್ ಅನ್ನೋ ಕುಖ್ಯಾತಿ. ಆಟ, ಪಾಠ, ಅಕ್ಕರೆ, ಆರೈಕೆಯಲ್ಲಿ ಬೆಳೆಯಬೇಕಿದ್ದ ಅಮರಜೀತ್ ಸದಾ 8ನೇ ವಯಸ್ಸಿನಲ್ಲಿ ಗರಿಷ್ಠ ಹತ್ಯೆ ಮಾಡಿ ಸೀರಿಯಲ್ ಕಿಲ್ಲರ್ ಆಗಿದ್ದು ಹೇಗೆ? ಅಮರಜೀತ್ ಸದಾ ಇತಿಹಾಸ ಪುಟ ತೆರೆದಾಗ ಭಯಾನಕ ಕತೆಗಳೆ ತೆರೆದುಕೊಳ್ಳುತ್ತದೆ.  

ಪಾಟ್ನಾ(ಮೇ.26): ಭಾರತ ಮಾತ್ರವಲ್ಲ ವಿಶ್ವದಲ್ಲೇ ಅಪರಾಧಗಳಿಗೆ ಕಡಿವಾಣ ಹಾಕಲು ಹಲವು ಪ್ರಯತ್ನಗಳನ್ನು ನಡೆಸಲಾಗುತ್ತದೆ. ಆದರೆ ಅಪರಾಧಗಳ ಸಂಖ್ಯ ಗಣನೀಯಾಗಿ ಕಡಿಮೆಯಾಗಿಲ್ಲ. ಬದಲಾಗಿ ಹೆಚ್ಚಾಗುತ್ತಲೇ ಇದೆ. ಇದರಲ್ಲಿ ಹಲವು ಪ್ರಕರಗಳು ಮತ್ತೆ ಮತ್ತೆ ಕಾಡುತ್ತದೆ. ಮನಸ್ಸನ್ನು ಕದಡುತ್ತದೆ. ಹೀಗೆ ಬೆಚ್ಚಿ ಬೀಳಿಸುವ, ತೀವ್ರ ನೋವು ತರಿಸುವ ಪ್ರಕರಣಗಳಲ್ಲಿ ಅಮರಜೀತ್ ಸದಾ ಪ್ರಕರಣ ಕೂಡ ಒಂದು. ಕೇವಲ 8ನೇ ವಯಸ್ಸಿಗೆ ಸೀರಿಯಲ್ ಕಿಲ್ಲರ್ ಅನ್ನೋ ಕುಖ್ಯಾತಿಗೆ ಗುರಿಯಾದ ಬಾಲಕ. 8ನೇ ವಯಸ್ಸಿಗೆ 3 ಹತ್ಯೆ ಮಾಡಿ, ಮತ್ತಷ್ಟು ಬಲಿಗಾಗಿ ಕಾಯುತ್ತಿದ್ದ ಈತನ ವಿಚಾರಣೆ ಕೂಡ ಪೊಲೀಸರನ್ನು ದಂಗು ಬಡಿಸಿತ್ತು. 8ನೇ ವಯಸ್ಸಿಗೆ ಸೀರಿಯಲ್ ಕಿಲ್ಲರ್ ಹಣೆಪಟ್ಟಿ ಹೊತ್ತುಕೊಂಡ ಅಮರಜೀತ್ ಸದಾ ಇತಿಹಾಸ ಪುಟ ತಿರುವಿದಾಗಿ ರಣರೋಚಕ, ಭಯಾನಕ ಕತೆಗಳು ತೆರೆದುಕೊಳ್ಳುತ್ತದೆ.

ಅಮರಜೀತ್ ಸದಾ ಅತ್ಯಂತ ಬಡಕುಟುಂಬದಲ್ಲಿ ಹುಟ್ಟಿದ್ದ. ಬಿಹಾರದ ಮುಶಾಹರ್‌ನಲ್ಲಿ 1988ರಲ್ಲಿ ಹುಟ್ಟಿದ ಅಮರಜೀತ್, ಮೊದಲ ಹತ್ಯೆಯನ್ನು 2006ರಲ್ಲಿ ಮಾಡುತ್ತಾನೆ. ಕೂಲಿ ಕಾರ್ಮಿಕ ದಂಪತಿಯ ಮಗನಾಗಿ ಹುಟ್ಟಿದ ಅಮರಜೀತ್ ಸದಾ, ಬಾಲ್ಯವನ್ನು ಆನಂದಿಸಲೇ ಇಲ್ಲ. ಪ್ರವೃತ್ತಿಯಲ್ಲಿ ಎಲ್ಲರೊಂದಿಗೆ ಬೆರೆಯುವ ಜಾಯಮಾನ ಈತನಿಗೆ ಇರಲಿಲ್ಲ. ಗೆಳೆಯರು ಇರಲಿಲ್ಲ, ಮಾಡಿಕೊಳ್ಳುವ ಮನಸ್ಸು ಅಮರಜೀತ್‌ಗೆ ಇರಲಿಲ್ಲ. ಮರ ಹತ್ತುವುದು, ಗ್ರಾಮದಲ್ಲಿ ತಿರುಗಾಡುವುದೇ ಈತನ ಬಾಲ್ಯದ ಆಟವಾಗಿತ್ತು.

ಪುಟ್ಟ ತಂಗಿಯ ದೇಹ ತುಂಡು ತುಂಡಾಗಿ ಕತ್ತರಿಸಿ, ಆಸಿಡ್‌ನಿಂದ ಸುಟ್ಟು ಹಿತ್ತಿಲಿಗೆ ಎಸೆದ ಅಕ್ಕ!

ಅಮರಜೀತ್ ಪೋಷಕರ ಎರಡನೇ ಮಗು ಪಡೆದ ಬಳಿಕ ಬದುಕು ಮತ್ತಷ್ಟು ದುಸ್ತರವಾಯಿತು. ಮೊದಲೇ ಅಮರಜಿತ್ ಕಡೆ ಗಮನ ಕೊಡಲು ಪೋಷಕರಿಗೆ ಸಾಧ್ಯವಾಗುತ್ತಿರಲಿಲ್ಲ. ಕೂಲಿ, ಸಾಲ, 3 ಹೊತ್ತು ಊಟಕ್ಕೂ ಸಾಲದ ಸಂಬಂಳ ಹೀಗೆ ಹಲವು ಕಾರಣಗಳೂ ಇತ್ತು. ಹೀಗಾಗಿ ಅಮರಜಿತ್ ಏಕಾಂಗಿಯಾಗತೊಡಗಿದ. ಇತ್ತ ಅಮರಜಿತ್ ಮನೆಗೆ ಸಂಬಂಧಿಯೊಬ್ಬರು ಆಗಮಿಸಿದ್ದರು. ನಗರಕ್ಕೆ ತೆರಳಿ ಕೆಲಸ ಗಿಟ್ಟಿಸಿಕೊಂಡ ಸಂಬಂಧಿ ತಮ್ಮ 6 ವರ್ಷದ ಮಗಳ ಜೊತೆ ಆಗಮಿಸಿದ್ದರು. ಮರುದಿನ ಅಮರಜಿತ್ ಪೋಷಕರ ಜೊತೆ ಪಟ್ಟಣಕ್ಕೆ ತೆರಳಿದರು. ಈ ವೇಳೆ ಅಮರಜಿತ್ ತನ್ನ ಸ್ವಂತ ತಂಗಿ ಹಾಗೂ ಸಂಬಂಧಿಕರ 6 ವರ್ಷದ ತಂಗಿಯನ್ನು ನೋಡಿಕೊಳ್ಳಲು ಸೂಚಿಸಿದ್ದರು. 

ಅಮರಜೀತ್ ಸಂಬಂಧಿಕರ 6 ವರ್ಷದ ಬಾಲಕಿಗೆ ಹಿಂಸೆ ನೀಡಲು ಆರಂಭಿಸಿದ. ಆಕೆ ಅಳುವುದನ್ನು ನೋಡಿ ಅತೀವ ಸಂತಸ ಪಟ್ಟ. ಇಷ್ಟೇ ಆಗಿದ್ದರೆ ಸೀರಿಯಲ್ ಕಿಲ್ಲರ್ ಪಟ್ಟ ಬರುತ್ತಿರಲಿಲ್ಲ. ಆದರೆ ಅಮರಜೀತ್ 8ನೇ ವಯಸ್ಸಿಗೆ ಸೈಕೆ ಆಗಿ ವರ್ತಿಸಲು ಆರಂಭಿಸಿದ್ದ. ಕೊಲೆ ಮಾಡಬೇಕೆಂಬ ಚಟ ಹಾಗೂ ಹಠ ಎರಡೂ ಇತ್ತು. ಹೀಗಾಗಿ 6 ವರ್ಷದ ಬಾಲಕಿಯನ್ನು ಕತ್ತು ಹಿಸುಕಿ ಕೊಂದಿದ್ದ. ಬಳಿಕ ಪಕ್ಕದ ಕಾಡಿನಲ್ಲಿ ಆಕೆಯ ದೇಹ ಸುಟ್ಟಿದ್ದು. ಈ ಕೊಲೆಯನ್ನು ತಾನು ಮಾಡಿರುವುದಾಗಿ ಒಪ್ಪಿಕೊಂಡಿದ್ದ. ಆದರೆ ಪೋಷಕರು ಪೊಲೀಸರಿಗೆ ಹೇಳುವ ಪ್ರಯತ್ನ ಮಾಡಲಿಲ್ಲ.

ಕೆಲ ದಿನಗಳ ಬಳಿಕ ಎಲ್ಲರೂ ಮಲಗಿದ್ದರು. ಅಮರಜಿತ್ ಅಮ್ಮನ ಪಕ್ಕದಲ್ಲಿ ಮಲಗಿದ್ದ ತನ್ನ ಪುಟಾಣಿ ಕಂದನ ಎತ್ತಿ ಕೊಂದೇ ಬಿಟ್ಟಿದ್ದ. ಚೀರಾಟಕ್ಕೆ ಎದ್ದ ತಾಯಿಗೆ ಮಗುವನ್ನು ಬುದಕಿಸಲು ಸಾಧ್ಯವಾಗಲಿಲ್ಲ.ಅಷ್ಟರಲ್ಲೇ ಅಮರಜಿತ್ ತನ್ನ ತಂಗಿಯ ಕತೆ ಮುಗಿಸಿದ್ದ. ಕಾರಣ ಕೇಳಿದರೆ ಸುಮ್ಮನ ಕೊಂದೇ ಎಂದಿದ್ದ. ಈ ವಿಷವನ್ನು ಪೋಷಕರು ಪೊಲೀಸರಿಗೆ ಹೇಳಲಿಲ್ಲ. 

ಕೆಲಸಕ್ಕಾಗಿ ಕೇರಳಕ್ಕೆ ಬಂದ ಬಿಹಾರ ಕಾರ್ಮಿಕನ ಕೊಲೆ, ಕೈ ಕಟ್ಟಿ 2 ಗಂಟೆ ಥಳಿಸಿದ ಹಂತಕರು!

2007ರಲ್ಲಿ ಅಮರಜಿತ್ ಗ್ರಾಮದಲ್ಲಿದ್ದ ಶಾಲೆ ಬಳಿ ತೆರಳಿದ್ದ. ಪುಟಾಣಿ ಮಕ್ಕಳು ಆಡುತ್ತಿದ್ದರು. ಶಿಕ್ಷಕರು ತಮ್ಮ ಕೆಲಸದಲ್ಲಿ ಮಗ್ನರಾಗಿದ್ದರು. ಶಾಲೆಗೆ ಆಗಮಿಸಿದ್ದ ತಾಯಿ ತನ್ನ ತೋಳಲ್ಲಿ ಮಲಗಿದ್ದ 6 ತಿಂಗಳ ಮಗುವನ್ನು ಶಾಲೆಯಲ್ಲಿ ಮಲಗಿಸಿ, ಯಾವುದೇ ಕಾರಣಕ್ಕೆ ಹೊರಗೆ ಹೋಗಿದ್ದರು. ಮರಳಿ ಬಂದಾಗ 6 ತಿಂಗಳ ಮಗು ಕಾಣೆಯಾಗಿತ್ತು. ಕೋಲಾಹಲವೇ ಎದ್ದಿತ್ತು. ಹುಡುಕಾಟ ನಡೆದಾಗ ಘಟನೆ ಬೆಳಕಿಗೆ ಬಂದಿತ್ತು. ಈ ಪ್ರಕರಣ ದಾಖಲಾಗಿ ಪೊಲೀಸರು ಮೊದಲ ಬಾರಿಗೆ ಅಮರಜೀತ್ ಸದಾಗೆ ಸಮನ್ಸಿ ನೀಡಿದ್ದರು. ವಿಚಾರಣೆ ಆರಂಭಗೊಂಡಿತ್ತು. 

ಪೋಷಕರು, ಗ್ರಾಮದ ಹಲವರನ್ನು ವಿಚಾರಣೆ ನಡೆಸಲಾಗಿತ್ತು. ಅಮರಜಿತ್ ತನ್ನ ವಿಚಾರಣೆಯಲ್ಲಿ ಈ ಹಿಂದೆ ಮಾಡಿದ್ದ 2 ಕೊಲೆಯ ಬಗ್ಗೆಯೂ ಬಾಯ್ಬಿಟ್ಟಿದ್ದ. ಕೇವಲ 8ನೇ ವಯಸ್ಸಿಗೆ 3 ಕೊಲೆ ಮಾಡಿ ಬಾಲಾಪರಾಧಿಯಾಗಿದ್ದ. ಕೋರ್ಟ್ ಈತನಿಗೆ ಚಿಕಿತ್ಸೆ ನೀಡಲು ವೈದ್ಯರನ್ನು ನೇಮಿಸಿತು. 2016ರಲ್ಲಿ ಅಮರಜೀತ್ ಸದಾಗೆ 18 ವರ್ಷ ತುಂಬಿತ್ತು. ಇಷ್ಟೇ ಅಲ್ಲ ಜೈಲಿನಿಂದ ಬಿಡುಗಡೆಯಾಗಿದ್ದ. ಆದರೆ ಹೊಸ ಹೆಸರು, ಹೊಸ ವ್ಯಕ್ತಿಯಾಗಿ ಜೈಲಿನಿಂದ ಅಮರಜೀತ್ ಹೊರಬಂದಿದ್ದ. ಇದೀಗ ಎಲ್ಲಿದ್ದಾನೆ, ಆತ ಯಾರು ಅನ್ನೋದು ಕೆಲವೇ ಕೆಲವರಿಗೆ ಮಾತ್ರ ಗೊತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ