
ಮಂಡ್ಯ (ಮೇ.26): ಐಪಿಎಲ್ ಬೆಟ್ಟಿಂಗ್ ಹಣ ಕೊಡುವ ವಿಚಾರದಲ್ಲಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹುಲಿಗೆರೆಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಚಿಕ್ಕರಸಿನಕೆರೆ ಗ್ರಾಮದ ಪುನೀತ್ (30) ಕೊಲೆಯಾದ ಯುವಕನಾಗಿದ್ದಾನೆ. ಈತ ಎಳನೀರು ವ್ಯಾಪಾರ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ. ಮೃತ ಪುನೀತ್ ಸ್ನೇಹಿತರ ಜೊತೆಗೆ ಐಪಿಎಲ್ ಪಂದ್ಯಾವಳಿ ಬೆಟ್ಟಿಂಗ್ ಕಟ್ಟಿದ್ದ. ಗೆದ್ದ ಹಣವನ್ನು ಕೊಡುವಂತೆ ಕೇಳಿದಾಗ ಇಬ್ಬರ ನಡುವೆ ಜಗಳ ನಡೆದಿದೆ. ಈ ವೇಳೆ ಗುಂಪಿನಿಂದ ಪುನೀತ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಚಿಕಿತ್ಸೆ ಫಲಕಾರಿಯಾಗದೆ ಯುವಕ ಸಾವನ್ನಪ್ಪಿದ್ದಾನೆ.
ಗೆಳೆಯರಿಬ್ಬರ ನಡುವೆ ಜಗಳ ತಾರಕಕ್ಕೇರಿ ಮರದ ತುಂಡಿನಿಂದ ಪುನೀತ್ ತಲೆಗೆ ಹೊಡೆಯಲಾಗಿದೆ. ತಕ್ಷಣವೇ ಹಲ್ಲೆಗೊಳಗಾದ ಪುನೀತ್ ನನ್ನು ಕೆ.ಎಂ.ಡೊಡ್ಡಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಪುನೀತ್ ಪೋಷಕರು ಮೈಸೂರಿನ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಪುನೀತ್ ಸಾವನ್ನಪ್ಪಿದ್ದಾನೆ. ಮಂಡ್ಯ ಎಸ್ಪಿ ಯತೀಶ್ ನೇತೃತ್ವದಲ್ಲಿ ಪೊಲೀಸರಿಂದ ಸ್ಥಳ ಪರಿಶೀಲನೆ ನಡೆದಿದ್ದು, ಮದ್ದೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲು ಮಾಡಲಾಗಿದೆ.
BENGALURU: ಎಣ್ಣೆ ಪಾರ್ಟಿಯಲ್ಲಿ ಗುರಾಯಿಸಿದ್ದಕ್ಕೆ ಕಲ್ಲು ಎತ್ತಿ ಹಾಕಿ ಗೆಳೆಯರಿಂದಲೇ ಚಾಲಕನ ಕೊಲೆ
ನಿನ್ನೆ ಸಂಜೆ ಹಣ ನೀಡುವ ವಿಚಾರಕ್ಕೆ ಪುನೀತ್ ಜೊತೆ ಶರತ್ ಎಂಡ್ ಟೀಂ ಕಿರಿಕ್ ತೆಗೆದಿತ್ತು. ಹಣ ನೀಡುವುದಾಗಿ ಬೋರಾಪುರ ಬಳಿ ಪುನೀತ್ ಹಾಗೂ ದರ್ಶನ್ ನನ್ನ ಶರತ್ ಕರೆಸಿ ಕೊಂಡಿದ್ದ. ಈ ವೇಳೆ ಮಾತಿಗೆ ಮಾತು ಬೆಳೆದು ಪುನೀತ್ ಹಾಗೂ ಶರತ್ ಕೈ ಕೈ ಮಿಲಾಯಿಸಿಕೊಂಡಿದ್ದರು. ಈ ವೇಳೆ ದೊಣ್ಣೆಯಿಂದ ಶರತ್ ಮತ್ತು ತಂಡ ಪುನೀತ್ ತಲೆಗೆ ಹೊಡೆದಿತ್ತು. ಈ ವೇಳೆ ತೀವ್ರ ರಕ್ತ ಸ್ರಾವದಿಂದ ಪುನೀತ್ ಕುಸಿದು ಬಿದ್ದಿದ್ದ. ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲು ಮಾಡಿದ್ರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದು, ಮದ್ದೂರು ಪೊಲೀಸರಿಂದ ಆರೋಪಿ ಶರತ್ ಹಾಗೂ ಸಹಚರರ ಬಂಧನವಾಗಿದೆ.
'ಏರಿಯಾದಲ್ಲಿ ನಿಂದು ಹವಾ ಜಾಸ್ತಿ ಆಗಿದೆ': ಕ್ಷುಲ್ಲಕ ಕಾರಣಕ್ಕೆ ಯುವಕನ ಹತ್ಯೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ