
ದಾಬಸ್‌ಪೇಟೆ(ಮಾ.24): ಮದ್ಯ ಸೇವನೆಗೆ ಹೆಂಡತಿ ಹಣ ಕೊಡುತ್ತಿಲ್ಲ ಎಂದು ಗಲಾಟೆ ಮಾಡಿ ಮನೆಗೆ ಬೆಂಕಿಯಿಟ್ಟು ಸಾಮಗ್ರಿಗಳನ್ನು ಸುಟ್ಟಿರುವ ಪ್ರಕರಣ: ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸೋಲದೇವನಹಳ್ಳಿ ಗ್ರಾಪಂ ವ್ಯಾಪ್ತಿಯ ಕೊಟ್ಟನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ಕಿರಣ್‌ಕುರ್ಮಾ (37) ಬಂಧಿತ ಆರೋಪಿ. ಈತ 11 ವರ್ಷಗಳ ಹಿಂದೆ ಆಶಾಳನ್ನು ಪ್ರೀತಿಸಿ ಮದುವೆಯಾಗಿದ್ದು ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಇವರ ಕುಟುಂಬ ಕೆಲ ವರ್ಷಗಳಿಂದ ಪ್ರತ್ಯೇಕ ವಾಸವಾಗಿದ್ದರು. ಮನೆಯಲ್ಲಿ ಕಿರಣ್ ಕುಡಿತಕ್ಕೆ ದಾಸನಾಗಿದ್ದು, ಆಶಾ ಮೇಲೆ ಗಲಾಟೆ ಮಾಡಿ ಮಕ್ಕಳಿಗೂ ಹಿಂಸೆ ನೀಡುತ್ತಿದ್ದ. ಐದಾರು ದಿನದ ಹಿಂದೆ ಹೆಂಡತಿ ಆಶಾ ಬಳಿ ಕುಡಿಯಲು ಹಣ ಕೇಳಿದ್ದಾನೆ.
ಬೆಂಗಳೂರು: ಸಿಗ್ನಲ್ ಜಂಪ್ ಮಾಡಿ ಕಾನ್‌ಸ್ಟೇಬಲ್‌ಗೆ ಹೊಡೆದ ಬೈಕ್ ಸವಾರ ಜೈಲಿಗೆ
ಆಕೆ ಹಣ ಕೊಡದಿದ್ದಕ್ಕೆ ಗಲಾಟೆ ಮಾಡಿ ತಲೆಗೆ ಹೊಡೆದಿದ್ದನು. ಈ ವಿಚಾರ ಆಶಾ ತಂದೆ ತಾಯಿಗೆ ತಿಳಿದು ಅವರು ಕೇಳಲು ಬಂದಾಗ ಅವರಿಗೆ ಕೊಲೆ ಬೆದರಿಕೆ ಹಾಕಿ ಮನೆಯಲ್ಲಿದ್ದ ಆಶಾ ಹಾಗೂ ಮಕ್ಕಳ ಬಟ್ಟೆ, ಟಿವಿ, ಫ್ರಿಡ್ಜ್, ಪ್ಯಾನ್, ಪಾತ್ರೆಗಳಿಗೆ ಬೆಂಕಿ ಇಟ್ಟಿದ್ದಾನೆ. ತಕ್ಷಣ ಇವರು ಹೊರಗೆ ಬೆಂಕಿ ನಂದಿಸಲು ಹೋದಾಗ ಕೊಲೆ ಬೆದರಿಕೆ ಹಾಕಿ ಮತ್ತೆ ಹೊಡೆದು ಪರಾರಿಯಾಗಿದ್ದಾನೆ. ಸ್ಥಳೀಯರು ಮನೆಯ ಬೆಂಕಿ ನಂದಿಸಿ ಆಶಾಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆಶಾ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತಡವಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಿರಣ್‌ನನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ