ಬೆಂಗಳೂರಿನಲ್ಲಿ ರೌಡಿಶೀಟರ್ ಮನೆಗಳ ಮೇಲೆ ಪೊಲೀಸರ ದಾಳಿ: ಚುನಾವಣೆ ವೇಳೆ ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾಗದಂತೆ ಎಚ್ಚರಿಕೆ

By Govindaraj S  |  First Published Mar 24, 2024, 9:26 AM IST

ಚುನಾವಣೆಗಳು ಬಂತಂದ್ರೆ ಸಾಕು ಮೂಲೆ ಸೇರಿದ್ದ ರೌಡಿಗಳು ಬಾಲ ಬಿಚ್ತಾರೆ..ಮತದಾರರಿಗೆ ಬೆದರಿಕೆ ಹಾಕೊ ಕೆಲಸ ಮಾಡ್ತಾರೆ. ಆದ್ರೆ ಇದಕ್ಕೆ ಕಡಿವಾಣ ಹಾಕಲು ನಗರ ಪೊಲೀಸರು ದಿಟ್ಟ ಕ್ರಮ‌ ಕೈಗೊಂಡಿದ್ದಾರೆ. 


ಕಿರಣ್.ಕೆ.ಎನ್, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು

ಬೆಂಗಳೂರು (ಮಾ.24): ಚುನಾವಣೆಗಳು ಬಂತಂದ್ರೆ ಸಾಕು ಮೂಲೆ ಸೇರಿದ್ದ ರೌಡಿಗಳು ಬಾಲ ಬಿಚ್ತಾರೆ..ಮತದಾರರಿಗೆ ಬೆದರಿಕೆ ಹಾಕೊ ಕೆಲಸ ಮಾಡ್ತಾರೆ. ಆದ್ರೆ ಇದಕ್ಕೆ ಕಡಿವಾಣ ಹಾಕಲು ನಗರ ಪೊಲೀಸರು ದಿಟ್ಟ ಕ್ರಮ‌ ಕೈಗೊಂಡಿದ್ದಾರೆ. ಬೆಳ್ಳಂ ಬೆಳಗ್ಗೆ ರೌಡಿಗಳ ಮನೆಗೆ ಲಗ್ಗೆ ಇಟ್ಟು ಪರಿಶೀಲನೆ ಮಾಡ್ತಿದ್ದಾರೆ. ಇದು ಒಂದು ಕಡೆ ಆದ್ರೆ ರಕ್ತ ಹರಿಸಿ ರೌಡಿ ಆದವರೇ ಲೈಸನ್ಸ್ ಬಂದೂಕು ಇಟ್ಕೊಂಡು ದರ್ಬಾರ್ ಮಾಡ್ತಿದ್ದಾರೆ.

Latest Videos

undefined

ಬೆಂಗಳೂರು ನಗರಕ್ಕೂ ಈ ರೌಡಿಸಂ ಗು ಇರೊ ನಂಟು ಇಂದು ನಿನ್ನೆಯದಲ್ಲ. ಅದ್ರಲ್ಲೂ ರಾಜಕಾರಣಿಗಳ ನೆರಳಲ್ಲಿ ಬೆಳಿತಿರೊ ನಟೋರಿಯಸ್ ಗಳ ಸಂಖ್ಯೆಗೇನು ಕಡಿಮೆ ಇಲ್ಲ. ಚುನಾವಣೆ ಬಂತಂದ್ರೆ ಸಾಕು ಹೆಚ್ಚು ಆ್ಯಕ್ಟಿವ್ ಆಗೋ ಪುಡಾರಿಗಳು. ಮತದಾರರ ಮೇಲೆ ಪರಿಣಾಮ ಬೀರೊ ಕೆಲಸ ಮಾಡ್ತಾರೆ.. ಬೆದರಿಕೆ ಒಡ್ಡಲು ಮುಂದಾಗ್ತಾರೆ. ಹಾಗಾಗಿ ಲೋಕಸಭೆ ಚುನಾವಣೆ ಸಮೀಪಿಸ್ತಿದ್ದಂತೆ ರೌಡಿಶೀಟರ್ ಗಳ ಬೆವರಿಳಿಸಲು ನಗರ ಪೊಲೀಸರು ಮುಂದಾಗಿದ್ದಾರೆ. ಇವತ್ತು ಪಶ್ಚಿಮ ಹಾಗೂ ಕೇಂದ್ರ ವಿಭಾಗ ಪೊಲೀಸರು ರೌಡಿಶೀಟರ್ ಮನೆಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. 

ಪಶ್ಚಿಮ ವಿಭಾಗದಲ್ಲಿರುವ 326 ರೌಡಿ ಮನೆಗಳ ಸರ್ಚ್ ಮಾಡಲಾಗಿದ್ದು ಯಾವುದೇ ಮಾರಕಾಸ್ತ್ರಗಳು ಪತ್ತೆ ಆಗಿಲ್ಲ. ಇದು ರೌಡಿಗಳಿಗೆ ದಾಳಿಯ ಸೂಚನೆಯನ್ನ ಪೊಲೀಸರೇ ಕೊಟ್ಟರಾ ಅನ್ನೋ ಅನುಮಾನಕ್ಕೆ ಕಾರಣವಾಗಿದ್ದು, ನಗರ ಪೊಲೀಸರು ಮಾತ್ರ ರೌಡಿ ಚಟುವಟಿಕೆ ನಿಗ್ರಹಕ್ಕೆ ಈ‌ ದಿಟ್ಟ ಕ್ರಮ ಎಂದಿದ್ದಾರೆ. ಇನ್ನೂ ಕೇಂದ್ರ ವಿಭಾಗ ಪೊಲೀಸರು ಸಂಪಂಗಿರಾಮನಗರ,ವಿಲ್ಸನ್ ಗಾರ್ಡನ್,ಹಲಸೂರು ಗೇಟ್ ಸೇರಿದಂತರ ಹಲವು ಏರಯಾ ರೌಡಿಗಳ ಮನೆ ಮೇಲೆ ದಾಳಿ ನಡೆಸಲಾಗಿದೆ. ಲೋಕಸಭೆ ಚುನಾವಣೆ ಘೋಷಣೆ ಆಗ್ತಿದ್ದಂತೆ ಲೈಸನ್ಸ್ ಗನ್ ಠಾಣೆಗಳಿಗೆ ಹಿಂದಿರುಗಿಸುವಂತೆ ಸೂಚನೆ ನೀಡಲಾಗಿತ್ತು. ಈ ವೇಳೆ ಬೆಚ್ಚಿಬೀಳೊ ಸಂಗತಿ ಒಂದು ಗೊತ್ತಾಗಿದೆ. 

ಕಾರಣ ನೀಡದೆ 4 ಮಸೂದೆಗಳಿಗೆ ಅಂಕಿತ ಬಾಕಿ: ರಾಷ್ಟ್ರಪತಿ ಮುರ್ಮು ವಿರುದ್ಧವೇ ಕೇರಳ ಸರ್ಕಾರ ಸುಪ್ರೀಂಗೆ ಅರ್ಜಿ!

ಬೆಂಗಳೂರಿನ  ಆರು ಜನ ರೌಡಿಶೀಟರ್ ಬಳಿ ಲೈಸನ್ಸ್ ಗನ್ ಇರೋದು ಗೊತ್ತಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತ ದಯಾನಂದ್ ರೌಡಿಶೀಟರ್ ಬಳಿ ಲೈಸನ್ಸ್ ಪಿಸ್ತೂಲ್ ಇರುವ ವಿಚಾರ ರೌಡಿಶೀಟರ್ ಬಳಿ ಲೈಸನ್ಸ್ ಗನ್ ಇರೋದು ಕಂಡುಬಂದಿದೆ. ಯಾವ ಹಿನ್ನಲೆ,ಯಾವ ಸನ್ನಿವೇಶದಲ್ಲಿ  ಪರವಾನಗಿ ನೀಡಲಾಗಿದೆ ಅನ್ನೋದನ್ನ ಗಮನಿಸಬೇಕು..ಕಾನೂನಾತ್ಮಕವಾಗಿ ಲೈಸನ್ಸ್ ಗನ್ ವಾಪಸ್ಸು ಪಡೆಯಲು ಅವಕಾಶ ಇದೆ..ಅದರ ಮೇಲೆ ಕ್ರಮ ತೆಗೆದುಕೊಳ್ತೇವೆ ಅಂದ್ರು. ಅದೇನೇ ಹೇಳಿ ರೌಡಿಸಂ ಕಡಿವಾಣ ಹಾಕಲು ರೌಡಿಗಳ ಮನೆ ಮೇಲೆ ಪೊಲೀಸರು‌ ದಾಳಿ ಮಾಡ್ತಿದ್ರೆ...ಅದೇ ಪೊಲೀಸರು ರೌಡಿಗಳಿಗೆ ಗನ್ ಪಡೆಯಲು ಲೈಸನ್ಸ್ ಕೊಟ್ಟಿರೋದು ನಿಜಕ್ಕೂ ವಿಪರ್ಯಾಸ.

click me!