ಬೇಸರಗೊಂಡು ದಯಾಮರಣಕ್ಕಾಗಿ ಡಿಸಿ ಅವರಿಗೆ ಮನವಿ ಸಲ್ಲಿಸಿದ್ದೇನೆ. ನನಗೆ ನ್ಯಾಯಕೊಡಿ ಇಲ್ಲವೇ ದಯಾಮರಣಕ್ಕೆ ಅವಕಾಶ ಕೊಡಿ ಎಂದು ಪಟ್ಟು ಹಿಡಿದ ಸಂತ್ರಸ್ತ ಮಹಿಳೆ
ವಿಜಯಪುರ(ಮಾ.24): ನಗರದ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿವಿಯಲ್ಲಿ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣ ಬಯಲಿಗೆ ಬಂದಿದ್ದು, ಲೈಂಗಿಕ ಕಿರುಕುಳ ತಾಳಲಾರದೇ ದಯಾಮರಣ ನೀಡಬೇಕೆಂದು ಸಂತ್ರಸ್ತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾಳೆ. ವಿಶ್ವವಿದ್ಯಾಲಯದ ಉದ್ಯಾನವನ ವಿಭಾಗದಲ್ಲಿ ಕೆಲಸ ಮಾಡುತ್ತಿರೋ ಮಹಿಳೆ, ಮಹಿಳಾ ವಿವಿಯ ಸಿಬ್ಬಂದಿ ಶ್ರೀಶೈಲ ದೊಡಮನಿಯಿಂದ ಲೈಂಗಿಕ ಕಿರುಕುಳ ಆಗಿದೆ ಎಂದು ಆರೋಪಿಸಿದ್ದಾಳೆ. ಲೈಂಗಿಕ ಕಿರುಕುಳದ ಕುರಿತು ವಿವಿಯ ಆಂತರಿಕ ದೂರು ಸಮಿತಿಗೆ ಕಳೆದ ಫೆಬ್ರವರಿ 14 ರಂದು ದೂರು ನೀಡಿದ್ದರೂ ಈವರೆಗೂ ಮಹಿಳೆ ನೀಡಿರೋ ದೂರಿನ ಕುರಿತು ಕ್ರಮ ತೆಗೆದುಕೊಂಡಿಲ್ಲ ಆಂತರಿಕ ದೂರು ಸಮಿತಿ ಎಂದು ಆರೋಪಿಸಿದ್ದಾಳೆ.
ಘಟನೆ ಹಿನ್ನೆಲೆ;
undefined
ಇದೇ ವಿವಿಯ ಉದ್ಯಾನವನ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಪತಿ 2015ರಲ್ಲಿ ವಿವಿಯ ಆವರಣದ ತಡೆಗೋಡೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಪತಿಯ ಮರಣಾನಂತರ ಮಹಿಳೆಗೆ ಉದ್ಯಾನವನ ವಿಭಾಗದಲ್ಲಿ ವಿವಿ ಕೆಲಸ ನೀಡಿತ್ತು. ಇನ್ನು ಪತಿಯ ಮರಣಾನಂತರ ಪಿಎಫ್ ಹಣ ನೀಡಿಲ್ಲ ಎಂದು ಆರೋಪ ಮಾಡುತ್ತಿರೋ ಸಂತ್ರಸ್ತೆ, ಎಸ್‌ಸಿ, ಎಸ್‌ಟಿ ನೌಕರರ ಸಂಘದ ಪದಾಧಿಕಾರಿ ಸುಭಾಷ್ ಕಾಂಬಳೆ ಹಾಗೂ ಹಣಕಾಸು ವಿಭಾಗದವರು ಸತಾಯಿಸುತ್ತಿದ್ದಾರೆಂದು ಆರೋಪಿಸಿದ್ದಾಳೆ. ಒಂದೆಡೆ ಸಿಬ್ಬಂದಿಯಿಂದ ಲೈಂಗಿಕ ಕಿರುಕುಳ, ಮತ್ತೊಂದಡೆ ಪತಿಯ ಪಿಎಫ್ ಹಣ ನೀಡದೇ ಸತಾಯಿಸುತ್ತಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ವಿದ್ಯಾರ್ಥಿನಿಯರಿಗೆ ಮರ್ಮಾಂಗದ ಫೋಟೊ ಕಳಿಸಿ ಮಂಚಕ್ಕೆ ಕರೆದ ಆರೋಪ; ಪಿಎಸ್‌ಐ ವಿರುದ್ಧ ದೂರು
ಇದರಿಂದ ಬೇಸರಗೊಂಡು ದಯಾಮರಣಕ್ಕಾಗಿ ಡಿಸಿ ಅವರಿಗೆ ಮನವಿ ಸಲ್ಲಿಸಿದ್ದೇನೆ. ನನಗೆ ನ್ಯಾಯಕೊಡಿ ಇಲ್ಲವೇ ದಯಾಮರಣಕ್ಕೆ ಅವಕಾಶ ಕೊಡಿ ಎಂದು ಸಂತ್ರಸ್ತ ಮಹಿಳೆ ಪಟ್ಟು ಹಿಡಿದಿದ್ದಾಳೆ.