ಸಾರ್ವಜನಿಕ ಸ್ಥಳದಲ್ಲೇ ಕಾಮುಕನೊಬ್ಬ ಹಸ್ತಮೈಥುನ ಮಾಡಿಕೊಂಡ ಘಟನೆ ಹೆಚ್‌ಬಿಆರ್ ಲೇಔಟ್ ನ 1 ನೇ ಹಂತದಲ್ಲಿ ನಡೆದಿದೆ. ಈ ವ್ಯಕ್ತಿ ಸಾಕಷ್ಟು ಬಾರಿ ಇದೇ ವರ್ತನೆ ತೋರಿದ್ದಾನಂತೆ. ಲೇಔಟ್‌ನ ಮನೆಗಳ ಎದುರಿಗಿನ ಖಾಲಿ ಜಾಗದಲ್ಲಿ ಇದೇ ರೀತಿ ವರ್ತನೆ ಮಾಡಿದ್ದಾನೆ ಆರೋಪಿ.
ಬೆಂಗಳೂರು(ಜ.14): ಸಿಲಿಕಾನ್ ಸಿಟಿ ಕ್ರೈಂ ರಾಜಧಾನಿ ಆಗುತ್ತಿದೆಯಾ?, ಹೌದು, ಇತ್ತೀಚೆಗೆ ಅಪರಾಧ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ನಗರದ ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವರ್ತನೆ ಪ್ರಕರಣಗಳು ಹೆಚ್ಚಾಗ್ತಿವೆ. ಇತ್ತೀಚೆಗಷ್ಟೇ ಯುವತಿ ಮುಂದೆಯೇ ವ್ಯಕ್ತಿಯೊಬ್ಬ ಹಸ್ತಮೈಥುನ ಮಾಡಿಕೊಂಡ ಘಟನೆ ಮಾಸುವ ಮುನ್ನವೇ ಇದೀಗ ಅಂಥಹದ್ದೇ ಮತ್ತೊಂದು ಘಟನೆ ನಗರದಲ್ಲಿ ನಡೆದಿದೆ.
ಹೌದು, ಸಾರ್ವಜನಿಕ ಸ್ಥಳದಲ್ಲೇ ಕಾಮುಕನೊಬ್ಬ ಹಸ್ತಮೈಥುನ ಮಾಡಿಕೊಂಡ ಘಟನೆ ಹೆಚ್‌ಬಿಆರ್ ಲೇಔಟ್ ನ 1 ನೇ ಹಂತದಲ್ಲಿ ನಡೆದಿದೆ. ಈ ವ್ಯಕ್ತಿ ಸಾಕಷ್ಟು ಬಾರಿ ಇದೇ ವರ್ತನೆ ತೋರಿದ್ದಾನಂತೆ. ಲೇಔಟ್‌ನ ಮನೆಗಳ ಎದುರಿಗಿನ ಖಾಲಿ ಜಾಗದಲ್ಲಿ ಇದೇ ರೀತಿ ವರ್ತನೆ ಮಾಡಿದ್ದಾನೆ ಆರೋಪಿ.
ಬೆಂಗಳೂರು: ಸಾರ್ವಜನಿಕ ಸ್ಥಳದಲ್ಲೇ ಯುವತಿ ಮುಂದೆ ಹಸ್ತಮೈಥುನ ಮಾಡ್ಕೊಂಡ ಕಾಮುಕ..!
ಈ ಅಪರಿಚಿತ ವ್ಯಕ್ತಿ ಮಹಿಳೆಯರು ಮತ್ತು ಮಕ್ಕಳ ಎದುರಿಗೆ ಹಸ್ತಮೈಥುನ ಮಾಡಿಕೊಳ್ಳುತ್ತಾನೆ. ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಟ್ವೀಟ್ ಮಾಡಿ ಪೊಲೀಸರಿಗೆ ದೂರು ಸಹ ನೀಡಲಾಗಿದೆ. ಮಹಿಳೆಯರು ಮಕ್ಕಳು ಮನೆಯಲ್ಲೂ ಸುರಕ್ಷಿತವಾಗಿರುವಂತೆ ಮಾಡಿ, ಈ ರೀತಿ ಅಸಭ್ಯ ವರ್ತನೆ ತೋರುತ್ತಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.