ಮಹಿಳೆಯೊಬ್ಬಳನ್ನು ಕಲ್ಲು ಎತ್ತಿಹಾಕಿ ಕೊಲೆ ಮಾಡಿದ ವ್ಯಕ್ತಿಯೊಬ್ಬ ತಾನೂ ಕೂಡ ಆತ್ಮಹತ್ಯೆಗೆ ಶರಣಾದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ನಾಗಮಲೆ ಗ್ರಾಮದ ಬಳಿ ಬರುವ ಪಡಸಲನಾಥದಲ್ಲಿ ಘಟನೆ ಜರುಗಿದೆ.
ಹನೂರು (ಫೆ.23): ಮಹಿಳೆಯೊಬ್ಬಳನ್ನು ಕಲ್ಲು ಎತ್ತಿಹಾಕಿ ಕೊಲೆ ಮಾಡಿದ ವ್ಯಕ್ತಿಯೊಬ್ಬ ತಾನೂ ಕೂಡ ಆತ್ಮಹತ್ಯೆಗೆ ಶರಣಾದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ನಾಗಮಲೆ ಗ್ರಾಮದ ಬಳಿ ಬರುವ ಪಡಸಲನಾಥದಲ್ಲಿ ಘಟನೆ ಜರುಗಿದೆ. ಹನೂರು ತಾಲೂಕಿನ ನಾಗಮಲೆ ಗ್ರಾಮದ ಲಕ್ಷ್ಮೀ(35) ಮೃತರು. ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಮುನಿರಾಜ್ ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿ. ಲಕ್ಷ್ಮೀ ಮೂಲತಃ ತಮಿಳುನಾಡಿನ ಪೆನ್ನಾಗರಂ ನಿವಾಸಿ ಲಕ್ಷ್ಮೀಯನ್ನು ಕಳೆದ 7 ತಿಂಗಳ ಹಿಂದೆ ನಾಗಮಲೆ ಗ್ರಾಮದ ರಮೇಶ್ ಎಂಬಾತ ಕೂಡಾವಳಿ ವಿವಾಹ ಮಾಡಿಕೊಂಡು ನಾಗಮಲೆಗೆ ಕರೆತಂದಿದ್ದ.
ಮಂಗಳವಾರ ರಮೇಶ್ ಬೇರೆ ಊರಿಗೆ ಹೋಗಿದ್ದ ವೇಳೆ ಬಂದ ಮುನಿರಾಜು ಲಕ್ಷ್ಮಿಯನ್ನು ಕೊಂದು ತಾನೂ ಬೇವಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಲಕ್ಷ್ಮೀಯನ್ನು ಕೊಲೆ ಮಾಡಿ ಫೇಸ್ ಬುಕ್‌ಲೈವ್ ಮಾಡಿರುವ ಪಾಗಲ್ ಪ್ರಿಯಕರ ತನ್ನನ್ನು ಕೊಲೆಗಾರನನ್ನಾಗಿಸಿದೆಯಲ್ಲಾ ಲಕ್ಷ್ಮೀ, ನಾನೇ ನಿನ್ನನ್ನು ಕೊಲೆ ಮಾಡಿದೆನ್ನಲ್ಲಾ, ನಿನ್ನ ರಕ್ತವನ್ನು ಕಾಣಲು ನನಲ್ಲಾಗುತ್ತಿಲ್ಲ ಎಂದು ಅಳುತ್ತಾ ವೀಡಿಯೋ ಮಾಡಿದ್ದಾನೆ. ಮೇಲ್ನೋಟಕ್ಕೆ ವಿವಾಹೇತರ ಸಂಬಂಧವೇ ಇದಕ್ಕೆ ಕಾರಣ ಎಂದು ತಿಳಿದುಬಂದಿದೆ. ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹೋ, ಎಎಸ್‌ಪಿ ಸುದೇಶ್ ಮಲೆಮಹದೇಶ್ವರ ಬೆಟ್ಟ ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ಮುಂದಿನ ಕ್ರಮಕೈಗೊಂಡಿದ್ದಾರೆ.
undefined
ಹೆಂಡತಿಯನ್ನು ಬಾಣಂತನಕ್ಕೆ ಕಳುಹಿಸಿ ಮತ್ತೊಂದು ವಿವಾಹ: ದೂರು ದಾಖಲು
ಪ್ರೇಯಸಿ ಜತೆಗೆ ಎಸ್ಕೇಪ್ ಆಗಿದ್ದ ವ್ಯಕ್ತಿ ನೇಣುಬಿಗಿದು ಆತ್ಮಹತ್ಯೆ: ಇತ್ತೀಚೆಗೆ ಪತ್ನಿಯನ್ನು ತೊರೆದು ಪ್ರೇಯಸಿ ಜತೆಗೆ ಪರಾರಿಯಾಗಿದ್ದ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೊಮ್ಮಘಟ್ಟದ ವೀರಭದ್ರ ನಗರ ನಿವಾಸಿ ನಾಗೇಶ್ (30) ಮೃತ ವ್ಯಕ್ತಿ. ವಿಶ್ವೇಶ್ವರಯ್ಯ ಲೇಔಟ್‌ನ ನಿರ್ಜನ ಪ್ರದೇಶದ ಮರವೊಂದರಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಕಂಡು ಬಂದಿತ್ತು. ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಜ್ಞಾನಭಾರತಿ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ನಾಗೇಶ್ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.
ಮೃತ ನಾಗೇಶ್ ಆರು ವರ್ಷದ ಹಿಂದೆ ಮಧುಶ್ರೀ ಎಂಬಾಕೆಯನ್ನು ವಿವಾಹವಾಗಿದ್ದ. ದಂಪತಿ ಕೊಮ್ಮಘಟ್ಟದ ವೀರಭದ್ರ ನಗರದಲ್ಲಿ ನೆಲೆಸಿದ್ದರು. ಈ ನಡುವೆ ನಾಗೇಶ್‌ಗೆ ಸಹನಾ ಎಂಬಾಕೆ ಪರಿಚಿತಳಾಗಿ ಇಬ್ಬರು ಆತ್ಮೀಯರಾಗಿದ್ದರು. ದಿನ ಕಳೆದಂತೆ ಆತ್ಮೀಯತೆ ಅಕ್ರಮ ಸಂಬಂಧಕ್ಕೆ ಕಾರಣವಾಗಿತ್ತು. ಈ ವಿಚಾರ ಪತ್ನಿ ಮಧುಶ್ರೀಗೆ ಗೊತ್ತಾಗಿ ಮನೆಯಲ್ಲಿ ಆಗಾಗ ದಂಪತಿ ನಡುವೆ ಜಗಳವಾಗುತ್ತಿತ್ತು ಎನ್ನಲಾಗಿದೆ.
ನಡುರಸ್ತೆಯಲ್ಲೆ ವ್ಯಕ್ತಿಯ ಕತ್ತು ಕೊಯ್ದು ಹತ್ಯೆ: ಹಂತಕರ ಪತ್ತೆಗೆ ಪೊಲೀಸರಿಂದ ತೀವ್ರ ಶೋಧ
ಫೆ.10ರಂದು ನಾಗೇಶ್, ಪ್ರೇಯಸಿ ಸಹನಾ ಜತೆಗೆ ಪರಾರಿಯಾಗಿದ್ದ. ಈ ಸಂಬಂಧ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಸಹನಾ ತಂದೆ ನಾಪತ್ತೆ ದೂರು ನೀಡಿದ್ದರು. ಈ ನಡುವೆ ನಾಗೇಶ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಾಗೇಶ್‌ನನ್ನು ಕೊಲೆ ಮಾಡಲಾಗಿದೆ ಎಂದು ತಂದೆ ಆರೋಪ ಮಾಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.