Haveri: ಮದುವೆ ಸಾಲ ತೀರಿಸಲಾಗದೇ ತಂದೆ- ತಾಯಿ ನೇಣಿಗೆ ಶರಣು: ಮನನೊಂದು ಮದುವೆಯಾದ ಮಗಳೂ ಆತ್ಮಹತ್ಯೆ

Published : Feb 23, 2023, 10:54 AM ISTUpdated : Feb 23, 2023, 12:30 PM IST
Haveri: ಮದುವೆ ಸಾಲ ತೀರಿಸಲಾಗದೇ ತಂದೆ- ತಾಯಿ ನೇಣಿಗೆ ಶರಣು: ಮನನೊಂದು ಮದುವೆಯಾದ ಮಗಳೂ ಆತ್ಮಹತ್ಯೆ

ಸಾರಾಂಶ

ಸುಮಾರು 25 ಲಕ್ಷ ರೂ. ಸಾಲವನ್ನು ಮಾಡಿ ಮಗಳ ಮದುವೆ ಮಾಡಿದ್ದು, ನಂತರ ಸಾಲ ತೀರಿಸಲಾಗದೇ ಇಡೀ ಕುಟುಂಬ ಸಮೇತರಾಗಿ ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ತೊಂಡೂರು ಗ್ರಾಮದಲ್ಲಿ ನಡೆದಿದೆ.

ಹಾವೇರಿ (ಫೆ.23): ಸುಮಾರು 25 ಲಕ್ಷ ರೂಪಾಯಿ ಸಾಲವನ್ನು ಮಾಡಿ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಿದ್ದು, ನಂತರ ಸಾಲ ತೀರಿಸಲಾಗದೇ ಇಡೀ ಕುಟುಂಬ ಸಮೇತರಾಗಿ ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ತೊಂಡೂರು ಗ್ರಾಮದಲ್ಲಿ ನಡೆದಿದೆ.

ಸಾಲ ಬಾಧೆಯನ್ನು ತಾಳಲಾರದೇ ನೇಣು ಬಿಗಿದುಕೊಂಡು ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯಿಂದ ಇಡೀ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ. ತಂದೆ ಹನುಮಂತಗೌಡ ಪಾಟೀಲ (54) ತಾಯಿ ಲಲಿತಾ ಪಾಟೀಲ (50) ಮತ್ತು ಮಗಳು ನೇತ್ರಾ ಪಾಟೀಲ (22) ಆತ್ಮಹತ್ಯೆಗೆ ಶರಣಾದ ದುರ್ದೈವಿಗಳಾಗಿದ್ದಾರೆ. ಸವಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇನ್ನು ಘಟನಾ ಸ್ಥಳಕ್ಕೆ ಸವಣೂರು ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. 

Suicide case: ವರದಕ್ಷಿಣೆಗಾಗಿ ಪತ್ನಿಗೆ ಹಲ್ಲೆ ಮಾಡಿ ತವರಿಗೆ ಕಳಿಸಿದ್ದವನು ಮನೆಯಲ್ಲಿ ನೇಣಿಗೆ ಶರಣು!

ಮದುವೆಯ ಮೆಚ್ಚುಗೆ ಸಾಲದಿಂದ ಹರಾಜು: ಭರ್ಜರಿ ಸಾಲ ಮಾಡಿ ಸುತ್ತಲಿನ ಗ್ರಾಮಗಳು, ನೆಂರಿಷ್ಟರು, ಬೀಗರು ಮೆಚ್ಚುವಂತೆ ಮದುವೆ ಮಾಡಿ ಕೊಟ್ಟಿದ್ದ ತಂದೆ, ಮಗಳ ಮದುವೆಯ ನಂತರ ನೆಮ್ಮದಿಯಾಗಿ ಇರಲು ಸಾಧ್ಯವಾಗಿಲ್ಲ. ಸಾಲಗಾರರ ಕಾಟವೂ ವಿಪರೀತವಾಗಿಯೇ ಆರಂಭವಾಗಿದೆ. ಬಡ್ಡಿಯನ್ನು ಕಟ್ಟುವುದಕ್ಕೂ ಪರದಾಡುವ ಸ್ಥಿತಿ ಬಂದಿದೆ. ಮದುವೆಯ ವೇಳೆ ಎಲ್ಲರಿಂದ ಮೆಚ್ಚುಗೆ ಗಳಿಸಿದ್ದ ಹನುಮಂತಗೌಡ ಪಾಟೀಲ, ಸಾಲದ ಸುಳಿಗೆ ಸಿಕ್ಕು ಕೇಳಬಾರದ ಮಾತನ್ನು ಕೇಳಿ ಎಲ್ಲ ಮರ್ಯಾದೆಯನ್ನು ಕಳೆದುಕೊಂಡಿದ್ದಾನೆ. ಇನ್ನು ಸಾಲ ತೀರಿಸಲು ದಾರಿಯೂ ಕಾಣದೇ ಒಂದೇ ದಿನ ತಂದೆ- ತಾಯಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.

ಮಗಳೂ ಆತ್ಮಹತ್ಯೆಗೆ ಶರಣು: ಸಾಲ ಸೋಲ ಮಾಡಿಕೊಂಡು ಮಗಳ ಆಸೆಯಂತೆ ಮದುವೆ ಮಾಡಿಕೊಡಲಾಗಿದೆ. ಆದರೆ, ತವರು ಮನೆಯಲ್ಲಿ ತನ್ನ ತಂದೆ ತಾಯಿ ಸಾಲದ ಸುಳಿಗೆ ಸಿಲುಕಿರುವುದು ಮಗಳಿಗೂ ತಿಳಿದಿದೆ. ಇದರಿಂದಲೇ ತಮ್ಮ ತಂದೆ- ತಾಯಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದ ಮದುವೆಯಾಗಿದ್ದ ಮಗಳು ಕೂಡ ಮನೆಯಲ್ಲಿ ಇನ್ನೊಂದು ಸೀರೆಯನ್ನು ಕಟ್ಟಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಒಟ್ಟಾರೆ, ಮದುವೆ ಸಾಲದಿಂದ ಇಡೀ ಒಂದು ಕುಟುಂಬವೇ ನಿರ್ನಾಮ ಆದಂತಾಗಿದೆ. ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ಪೊಲೀಸರು ಬಂದು ಸ್ಥಳ ಪರಿಶೀಲನೆ ಮಾಡಿ, ಮರಣೋತ್ತರ ಪರೀಕ್ಷೆಗೆ ಶವಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.

ಪ್ರೇಯಸಿ ಜತೆಗೆ ಓಡಿಹೋಗಿದ್ದ ವ್ಯಕ್ತಿ ನೇಣಿಗೆ ಶರಣು: ಪತ್ನಿ ತೊರೆದು ಪ್ರೇಯಸಿ ಹಿಂದೆ ಹೋಗಿದ್ದ ಭೂಪ..!

ಮದುವೆಗೆ ಸಾಲ ಮಾಡದಂತೆ ನೀತಿಪಾಠ: ಇನ್ನು ತೊಂಡೂರು ಗ್ರಾಮದಲ್ಲಿ ಹನುಮಂತೇಗೌಡ ಪಾಟೀಲ ಹಾಗೂ ಅವಎ ಎಲ್ಲ ಕುಟುಂಬ ಸದಸ್ಯರು ಮಗಳ ಮದುವೆಗೆ ಮಾಡಿದ್ದ ಸಾಲವನ್ನು ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ದುರ್ಘಟನೆಯಿಂದ ಇಡೀ ಗ್ರಾಮದಲ್ಲಿ ಯಾರೊಬ್ಬರೂ ಮಕ್ಕಳ ಮದುವೆಗಾಗಿ ಸಾಲವನ್ನು ಮಾಡಬಾರದು ಎಂಬ ನೀತಿಪಾಠವನ್ನು ಕಲಿತಿದ್ದಾರೆ. ತಮ್ಮ ಕೈಲಾದಷ್ಟು ಹಣವನ್ನು ಕೂಡಿಟ್ಟು, ಅದರಲ್ಲಿಯೇ ಸಾಧಾರಣವಾಗಿ ಮದುವೆ ಮಾಡಿಕೊಟ್ಟು ಕಳುಹಿಸುವ ನೀತಿಪಾಠವನ್ನು ಕಲಿತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ
ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?