Mandya: 'ಜೋಕೆ ನಾನು ಬಳ್ಳಿಯ ಮಿಂಚು..' ಎಂದು ರೀಲ್ಸ್‌ ಮಾಡ್ತಿದ್ದ ಪತ್ನಿಯ ಕೊಂದು ನದಿಗೆಸದ ಪತಿ!

By Santosh Naik  |  First Published Aug 11, 2023, 10:59 AM IST

ಇನ್ಸ್‌ಟಾಗ್ರಾಮ್‌ನಲ್ಲಿ ಯಾವುದೇ ವೈರಲ್‌ ರೀಲ್‌ ಬಂದರೂ ತನ್ನೊಂದು ರೀಲ್ಸ್‌ ಮಾಡಿ ಪೋಸ್ಟ್‌ ಮಾಡುತ್ತಿದ್ದ ಹೆಂಡತಿಯ ಗೀಳಿನಿಂದ ಬೇಸತ್ತ ಗಂಡ ಆಕೆಯನ್ನು ಕೊಲೆ ಮಾಡಿ ಕಾವೇರಿ ನದಿಗೆ ಎಸೆದಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.


ಮಂಡ್ಯ (ಆ.11): ಪತ್ನಿಯ ಮೊಬೈಲ್‌ ಗೀಳು ಆಕೆಯ ಪ್ರಾಣಕ್ಕೆ ಸಂಚಕಾರ ತಂದಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಇನ್ಸ್‌ಟಾಗ್ರಾಮ್‌ನಲ್ಲಿ ರೀಲ್ಸ್‌ ಮಾಡ್ತಿದ್ದ ಸುಂದರಿಗೆ ತನ್ನ ಮೊಬೈಲ್‌ ಗೀಳೇ ಜೀವಕ್ಕೆ ಆಪತ್ತು ತಂದಿಟ್ಟಿದೆ. ರೀಲ್ಸ್‌ ಮಾಡ್ತಿದ್ದ ಈಕೆ, ಇದೇ ವೇಳೆ ತನ್ನ ಸ್ನೇಹಿತರೊಂದಿಗೆ ಚಾಟಿಂಗ್‌ ಮಾಡುವ ಅಭ್ಯಾಸ ಕೂಡ ಇರಿಸಿಕೊಂಡಿದ್ದಳು. ಪತ್ನಿಯ ಅತಿಯಾದ ಮೊಬೈಲ್‌ ಗೀಳು ಹಾಗೂ ಆಕೆಯ ರೀಲ್ಸ್‌ನ ಅಭ್ಯಾಸವನ್ನು ನೋಡಿ ಗಂಡನಿಗೆ ಅನುಮಾನ ಶುರುವಾಗಿತ್ತು. ಪರಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿರುವ ಶಂಕೆ ವ್ಯಕ್ತಪಡಿಸಿದ ಆತ, ಪ್ರೀತಿಸಿ ಮದುವೆಯಾಗಿದ್ದ ಮಡದಿಯನ್ನೇ ಕೊಂದಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಮಂಡ್ಯಕೊಪ್ಪಲುವಿನಲ್ಲಿ ನಡೆದಿದೆ. 26 ವರ್ಷದ ಪೂಜಾ, ಗಂಡನಿಂದಲೇ ಕೊಲೆಯಾಗಿರುವ ಮಹಿಳೆ. 33 ವರ್ಷದ ಶ್ರೀನಾಥ್‌ ಪತ್ನಿಯ ವೇಲ್‌ನಿಂದಲೇ ಕುತ್ತಿಗೆ ಬಿಗಿದು ಕೊಂದಿರುವ ಘಟನೆ ನಡೆದಿದೆ.

ಕೊಲೆ ಮಾಡಿದ 3 ದಿನ ಬಳಿಕ  102ಗೆ ಕರೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ. 9 ವರ್ಷದ ಹಿಂದೆ ಪೂಜಾ ಹಾಗೂ ಶ್ರೀನಾಥ್‌ ಪ್ರೀತಿಸಿ ಮದುವೆಯಾಗಿದ್ದರು. ಆರಂಭದಲ್ಲಿ ಕೆಲ ವರ್ಷಗಳ ಕಾಲ ಬಹಳ ಅನ್ಯೋನ್ಯವಾಗಿ ಬದುಕುತ್ತಿದ್ದ ಈ ದಂಪತಿಗೆ ಹೆಣ್ಣು ಮಗು ಕೂಡ ಇದೆ. ಆದರೆ, ಪೂಜಾಗೆ ಮೊದಲಿನಿಂದಲೂ ಟಿಕ್‌ ಟಾಕ್‌ ಹಾಗೂ ಇನ್ಸ್‌ಟಾಗ್ರಾಮ್‌ನಲ್ಲಿ ರೀಲ್ಸ್‌ ಮಾಡುವ ಅಭ್ಯಾಸ ಇರಿಸಿಕೊಂಡಿದ್ದಳು. ರೀಲ್ಸ್‌ ಮಾಡುವ ಜೊತೆಗೆ ಅತಿಯಾಗಿ ಫೋನ್‌ ಕೂಡ ಬಳಕೆ ಮಾಡುತ್ತಿದ್ದರು. ಈ ವಿಚಾರವಾಗಿಯೇ ಗಂಡ ಹೆಂಡತಿ ನಡುವೆ ಪದೇ ಪದೇ ಜಗಳ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗೆ ಪರಪುರುಷನೊಂದಿಗೆ ಈಕೆ ಸಂಬಂಧ ಇದ್ದಿರಬಹುದು ಎಂದು ಶ್ರೀನಾಥ್‌ಗೆ ಶಂಕೆ ಬಂದಿತ್ತು. ಈ ಕುರಿತಾಗಿಯೇ ಆಕೆಯ ಜತೆ ಜಗಳ ತೆಗೆಯುತ್ತಿದೆ. ಮೂರು ದಿನಗಳ ಹಿಂದೆ ಕುತ್ತಿಗೆಗೆ ವೇಲ್‌ನಿಂದ ಬಿಗಿದು ಶ್ರೀನಾಥ್‌ ಕೊಲೆ ಮಾಡಿದ್ದಾನೆ.

ಶವ ಸಾಗಿಸಲು ಅಳಿಯನಿಗೆ ಮಾವನಿಂದಲೇ ಸಾಥ್: ಇನ್ನು ಪತ್ನಿಯ ಶವವನ್ನು ಸಾಗಿಸಲು ಅಳಿಯನಿಗೆ ಆತನ ಮಾವನೇ ಸಾಥ್‌ ನೀಡಿದ್ದಾನೆ. ಅಳಿಯನೊಂದಿಗೆ ಸೇರಿ ಮಗಳ ಶವವನ್ನ ಕಾವೇರಿ ನದಿಗೆ ತಂದೆ ಎಸೆದಿದ್ದಾನೆ. ಕೊಲೆಗೈದ ಬಳಿಕ ಮಾವ ಶೇಖರ್‌ಗೆ ಕರೆ ಮಾಡಿದ್ದ ಶ್ರೀನಾಥ್‌ ಆಗಿರುವ ಘಟನೆಯ ಬಗ್ಗೆ ತಿಳಿಸಿದ್ದಾನೆ. ಮಗಳ ಕೊಲೆ ತಿಳಿದರೂ ಪೊಲೀಸರಿಗೆ ಹೇಳದೆ ಅಳಿಯನಿಗೆ ಸಾಥ್. ಮಾವ ಅಳಿಯ ಇಬ್ಬರೂ ಮನೆಯಿಂದ ಬೈಕ್‌ನಲ್ಲಿಯೇ ಶವವನ್ನು ಸಾಗಿಸಿದ್ದಾರೆ. ಮೃತದೇಹಕ್ಕೆ ಭಾರವಾದ ಕಲ್ಲು ಕಟ್ಟಿಗೆ ಕಿರಾತಕರು ನದಿಗೆ ಎಸೆದಿದ್ದಾರೆ.

Ramanagar: ಜಾಮೂನಿಗೆ ವಿಷ ಬೆರೆಸಿ ಮಕ್ಕಳಿಗೆ ತನ್ನಿಸಿದ ಕ್ರೂರಿ ಅಪ್ಪ, ಮೂವರ ಸ್ಥಿತಿ ಚಿಂತಾಜನಕ

Tap to resize

Latest Videos

ಸೋಮವಾರ ಕೊಲೆಗೈದು ಪೂಜಾಳ ಶವವನ್ನು ಶ್ರೀನಾಥ್‌ ಮನೆಯಲ್ಲಿಯೇ ಇರಿಸಿದ್ದ. ಅತ್ತ ಮಗಳ ಶವವನ್ನು ನದಿಗೆಸೆದು ಶೇಖರ್‌ ಹೋಟೆಲ್‌ ಕೆಲಸದಲ್ಲಿ ತೊಡಗಿಕೊಂಡಿದ್ದ. ಇನ್ನು ಶ್ರೀನಾಥ್‌, ನಿಮಿಷಾಂಭ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ತೆರಳಿದ್ದ. ದೇವರ ದರ್ಶನದ ಬಳಿಕ ಪೊಲೀಸರಿಗೆ ಕರೆ ಮಾಡಿ ಶರಣಾಗತಿಯ ಮಾಹಿತಿ ನೀಡಿದ್ದಾನೆ. ಶವ ಸಾಗಿಸಲು ಸಾಥ್ ನೀಡಿದ ಮಾವನ ಬಗ್ಗೆಯೂ ಪೊಲೀಸರಿಗೆ ಮಾಹಿತಿ. ಸದ್ಯ ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಅರೆಕೆರೆ ಪೊಲೀಸರು ತನಿಖೆ ಮುಂದವರಿಸಿದ್ದಾರೆ.

ಬೇಡವೆಂದು ಬೇಡಿಕೊಂಡರೂ ಬಿಡದೇ ಹೆತ್ತ ಮಕ್ಕಳನ್ನೇ ಬಾವಿಗೆ ತಳ್ಳಿದ ತಾಯಿ, ತಾನೂ ಹಾರಿ ಸಾವು

click me!