
ಪಾಟನಾ: ಪತ್ನಿಯನ್ನು ಕೊಲೆಗೈದು, ಮಡದಿಯ ರುಂಡವನ್ನು ಕೈಯಲ್ಲಿ ಹಿಡಿದುಕೊಂಡು ಊರೂರು ಸುತ್ತುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಮಾಧೇಪುರದ ಶ್ರೀನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪೊಖಾರಿ ಎಂಬಲ್ಲಿ ಕೊಲೆ ನಡೆದಿದ್ದು, ಬಂಧಿತನನ್ನು ಅರ್ಜುನ್ ಶರ್ಮಾ ಎಂದು ಗುರುತಿಸಲಾಗಿದೆ. ಪೂಜಾ ಶರ್ಮಾ ಗಂಡನಿಂದಲೇ ಕೊಲೆಯಾದ ಪತ್ನಿ. ಮಡದಿ ಪೂಜಾ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನಿಸುತ್ತಿದ್ದನು ಎಂದು ತಿಳಿದು ಬಂದಿದೆ. ಇದೇ ಕಾರಣಕ್ಕೆ ಶುರವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.
ಘಟನೆಯ ಕುರಿತು ಪ್ರತಿಕ್ರಿಯೆ ನೀಡಿರುವ ಡಿಎಸ್‌ಪಿ ಮನೋಜ್ ಮೋಹನ್, ವ್ಯಕ್ತಿಯೋರ್ವ ಪತ್ನಿಯ ಕತ್ತು ಸೀಳಿ ಕೊಲೆಗೈದು, ರುಂಡವನ್ನು ಕತ್ತರಿಸಿ ಅದನ್ನು ಕೈಯಲ್ಲಿ ಹಿಡಿದುಕೊಂಡು ಸುತ್ತಾಡುತ್ತಿರುವ ಮಾಹಿತಿ ಲಭ್ಯವಾಗಿತ್ತು. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿದ ಸಿಬ್ಬಂದಿ, ಆರೋಪಿ ಅರ್ಜುನ್ ಶರ್ಮಾ ಎಂಬಾತನನ್ನು ಬಂಧಿಸಿದ್ದಾರೆ ಎಂದು ಹೇಳಿದ್ದಾರೆ. ಪೊಲೀಸರು ಶವ ಮತ್ತು ಕೊಲೆಗೆ ಬಳಸಲಾದ ಆಯುಧವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಶವ ಪರೀಕ್ಷೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.
ಪತ್ನಿಯನ್ನು ರುಂಡವನ್ನು ಚೀಲದಲ್ಲಿ ಹಾಕಿಕೊಂಡ ಅರ್ಜುನ್ ಶರ್ಮಾ ಪೊಲೀಸ್ ಠಾಣೆಗೆ ತೆರಳುತ್ತಿದ್ದನು. ಚೀಲದಿಂದ ರಕ್ತ ಸೋರುತ್ತಿರೋದನ್ನು ಕಂಡು ಸ್ಥಳೀಯರೊಬ್ಬರು ವಿಚಾರಿಸಿದಾಗ ಅದು ಪತ್ನಿಯ ರುಂಡ ಎಂದು ಹೇಳಿದ್ದಾನೆ. ಯಾಕೆ ಕೊಲೆ ಮಾಡಿದೆ ಎಂದು ಪ್ರಶ್ನಿಸಿದಾಗ, ಆಕೆಗೆ ಅಕ್ರಮ ಸಂಬಂಧ ಇತ್ತು ಎಂದು ಹೇಳಿದ್ದಾನೆ. ಅಷ್ಟರಲ್ಲಿಯೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಮಗಳನ್ನು ಮದುವೆ ಮಾಡಿ ಗಂಡನ ಜೊತೆಗೆ ಕಳಿಸಿದರೆ, ಮಾವ ನಿನ್ನ ಮಗಳ ಶವ ತಗೊಂಡೋಗು ಎಂದ ಅಳಿಮಯ್ಯ!
ಹಾವೇರಿ:ಶೀಲ ಶಂಕಿಸಿ ಪತ್ನಿಯ ಕೊಲೆ
ಶೀಲ ಶಂಕಿಸಿ ಪತ್ನಿಯನ್ನು ಹಗ್ಗದಿಂದ ಕುತ್ತಿಗೆ ಬಿಗಿದು ಪತಿಯೇ ಕೊಲೆಗೈದ ಘಟನೆ ಹರಪನಹಳ್ಳಿ ಪಟ್ಟಣದ ವಾಲ್ಮೀಕಿ ನಗರದ ಹುಲ್ಲುಗರಡಿಕೇರಿಯಲ್ಲಿ ಮೇ ತಿಂಗಳಲ್ಲಿ ನಡೆದಿತ್ತು. ಹುಲ್ಲುಗರಡಿಕೇರಿ ನಿವಾಸಿ ನಿಂಗಮ್ಮ ಪತಿಯಿಂದಲೇ ಕೊಲೆಗೀಡಾದವಳು. ಆಲೂರು ಸಣ್ಣ ಚೌಡಪ್ಪ (40) ಆರೋಪಿ. ಮೃತ ಪತ್ನಿ ನಿಂಗಮ್ಮ ಕೂಲಿ ಕೆಲಸ ಮಾಡುತ್ತಿದ್ದಳು. ಆರೋಪಿಯು ಫಾಸ್ಟ್‌ಫುಡ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ. ತಾನು ಕೆಲಸಕ್ಕೆ ಹೋದಾಗ ಪತ್ನಿ ಬೇರೆಯವರ ಜತೆ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಆರೋಪಿ ಶೀಲ ಶಂಕಿಸಿದ್ದ.
ಬೆಳಿಗ್ಗೆವರೆಗೆ ಶವದ ಪಕ್ಕದಲ್ಲಿದ್ದ ಪತಿ
ನಸುಕಿನಜಾವ 3 ಗಂಟೆ ಸುಮಾರಿಗೆ ಪತಿ-ಪತ್ನಿ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಆರೋಪಿಯು ಪತ್ನಿಗೆ ಹಗ್ಗದಿಂದ ಕುತ್ತಿಗೆ ಬಿಗಿದು ಹತ್ಯೆಗೈದಿದ್ದಾನೆ ಎಂದು ಮೃತಳ ತಂದೆ ಬಂಡ್ರಿ ಮಾರಪ್ಪ ನೀಡಿದ ದೂರಿನ ಮೇರೆಗೆ ಹರಪನಹಳ್ಳಿ ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪತ್ನಿಯನ್ನು ಕೊಲೆಗೈದ ಬಳಿಕ ಆರೋಪಿಯು ಬೆಳಿಗ್ಗೆವರೆಗೆ ಶವದ ಹತ್ತಿರವೇ ಇದ್ದ. ಬೆಳಿಗ್ಗೆ 7 ಗಂಟೆ ಸುಮಾರಿಗೆ ಶವವನ್ನು ಮನೆಯ ಕಟ್ಟೆ ಮೇಲೆ ಮಲಗಿಸಿ, ಆಕೆಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ನೆರೆಹೊರೆಯವರಲ್ಲಿ ಹೇಳಿಕೊಂಡಿದ್ದನು.
Bengaluru: ಪತ್ನಿ ನಿದ್ರೆಯಲ್ಲಿದ್ದಾಗಲೇ ಡೂಪ್ಲಿಕೇಟ್ ಕೀ ಬಳಸಿ ಕತ್ತು ಕುಯ್ದು ಹೋದ ಪತಿ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ