ಟೊಮೆಟೋ ಸಾಲ ತೀರಿಸಲು 50 ಲ್ಯಾಪ್‌ಟಾಪ್ ಕದ್ದ ಬೆಂಗಳೂರಿನ ಟೆಕ್ಕಿ!

By Sathish Kumar KHFirst Published Sep 17, 2024, 7:14 PM IST
Highlights

ಬೆಂಗಳೂರಿನಲ್ಲಿ ಐಟಿ ಉದ್ಯೋಗಿಯೊಬ್ಬರು ಸೈಡ್ ಇನ್‌ಕಮ್‌ಗಾಗಿ ಟೊಮೆಟೋ ಬೆಳೆದಿದ್ದರು. ಆದರೆ, ಬೆಳೆ ನಷ್ಟವಾದ್ದರಿಂದ ಸಾಲ ತೀರಿಸಲು ಕೆಲಸ ಮಾಡುತ್ತಿದ್ದ ಕಂಪನಿಯಿಂದಲೇ 50 ಲ್ಯಾಪ್‌ಟಾಪ್‌ಗಳನ್ನು ಕದ್ದಿದ್ದಾರೆ.

ಬೆಂಗಳೂರು (ಸೆ.17): ಬೆಂಗಳೂರಿನ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯೊಬ್ಬ ಸೈಡ್ ಇನ್‌ಕಮ್‌ಗಾಗಿ ಟೊಮೆಟೋ ಸೇರಿ ತರಕಾರಿಗಳನ್ನು ಬೆಳೆಯುತ್ತಿದ್ದನು. ಆದರೆ, ಸಾಲ ಮಾಡಿ ಬೆಳೆದ ತರಕಾರಿ ಬೆಳೆ ನಷ್ಟವಾಗಿದ್ದಕ್ಕೆ, ಆ ಸಾಲ ತೀರಿಸಲು ತಾನು ಕೆಲಸ ಮಾಡುತ್ತಿದ್ದ ಕಂಪನಿಯಿಂದಲೇ ಬರೋಬ್ಬರಿ 50 ಲ್ಯಾಪ್‌ಟಾಪ್ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾನೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಕಂಪನಿಗಳಲ್ಲಿ ಕೆಲಸ ಮಾಡುವ ಹಲವು ಉದ್ಯೋಗಿಗಳು ತಮ್ಮ ಕೆಲಸದ ಜೊತೆಗೆ ಬೇರೆ ಮೂಲಗಳಿಂದ ಆದಾಯ ಗಳಿಸಲು ಇತರೆ ಉದ್ಯಮಗಳನ್ನು ಆರಂಭಿಸಿರುತ್ತಾರೆ. ಕೆಲವರು, ತೋಟಗಾರಿಕೆ, ಕೃಷಿ, ಮೇಕೆ ಅಥವಾ ಕುರಿ ಸಾಕಾಣಿಕೆ, ಹಸುಗಳ ಸಾಕಾಣಿಕೆ ಸೇರಿ ಹಲವು ಉದ್ಯಮ ಮಾಡುತ್ತಾರೆ. ಅದೇ ರೀರಿ ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆ ಐಟಿಪಿಎಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿ ತಾನೂ ಇತರೆ ಮೂಲದಿಂದ ಆದಾಯ ಗಳಿಸಲು ಟೊಮೆಟೋ ಬೆಳೆದಿದ್ದಾನೆ. ಇನ್ನು ದೊಡ್ಡ ಪ್ರಮಾಣದಲ್ಲಿ ಟೊಮೆಟೋ ಬೆಳೆಯಲು ವಿವಿಧೆಡೆ ಸಾಲವನ್ನು ಮಾಡಿದ್ದಾರೆ. ಆದರೆ, ಟೊಮೆಟೋ ಬೆಳೆ ಸರಿಯಾಗಿ ಬರದೇ ಹಾಗೂ ಕಳೆದ ವರ್ಷದ 100 ರೂ. ತಲುಪಿದ್ದಂತೆ ಈ ಬಾರಿ ದರ ಹೆಚ್ಚಳವಾಗದೇ ನಷ್ಟ ಅನುಭವಿಸಿದ್ದಾನೆ. ಇದರಿಂದ ಸಾಲ ತೀರಿಸಲಾಗದೇ ಸಂಕಷ್ಟಕ್ಕೆ ಸಿಲುಕಿದ್ದಾನೆ.

Latest Videos

ಬೆಂಗಳೂರು ಮೆಟ್ರೋ ಹಳಿಗೆ ಜಿಗಿದ ಬಿಹಾರದ ವ್ಯಕ್ತಿ: ಸಾಯಲು ಮೆಟ್ರೋ ಹಳಿಯೇ ಆರಿಸಿಕೊಳ್ಳುವುದೇಕೆ?

ಈ ಘಟನೆ ವೈಟ್‌ಫೀಲ್ಡ್ ಹಾಗೂ ಹೊಸೂರು ವ್ಯಾಪ್ತಿಯಲ್ಲಿ ನಡೆದಿದೆ. ಲ್ಯಾಪ್‌ಟಾಪ್ ಕಳ್ಳತನ ಮಾಡಿ ಸಿಕ್ಕಿಬಿದ್ದ ಆರೋಪಿ ಸಿಸ್ಟಮ್ ಅಡ್ಮಿನ್ ಮುರುಗೇಶ. ಈತ ಸಾಲ ಮಾಡಿ ಹೊಸೂರಿನಲ್ಲಿ ಸುಮಾರು 6 ಎಕರೆ ಜಮೀನಿನಲ್ಲಿ ಟೊಮೆಟೋ ಬೆಳೆ ಬೆಳೆದಿದ್ದನು. ಆದರೆ, ನಿರೀಕ್ಷಿತ ಮಟ್ಟದಲ್ಲಿ ಫಲ ಕೊಡದೇ ಕೈಕೊಟ್ಟಿತ್ತು. ಇನ್ನು ಕಳೆದ ವರ್ಷ 100 ರೂ.ಗಿಂತ ಹೆಚ್ಚು ಬೆಲೆಗೆ ಮಾರಾಟ ಆಗುತ್ತಿದ್ದ ಟೊಮೆಟೋ ಬೆಳೆ ಈ ವರ್ಷದ 30 ರೂ. ದಾಟಲಿಲ್ಲ. ಹೀಗಾಗಿ, ಆತನ ಟೊಮೆಟೋ ಬೆಳೆಯಿಂದ ಸಾಕಷ್ಟು ನಷ್ಟವಾಗಿತ್ತು. ಇದರಿಂದ ತಾನು ಕೃಷಿಯಿಂದ ಸಾಲ ಹೊತ್ತುಕೊಂಡು ತಿರುಗಾಡಬೇಕಾಯಿತು. ಆದರೆ, ತೀರಿಸಲು ಲ್ಯಾಪ್‌ಟಾಪ್ ಕಳ್ಳತನ ಮಾಡಲು ಮುಂದಾಗಿ ಇದೀಗ ಪೊಲೀಸರ ಅತಿಥಿಯಾಗಿ ಜೈಲು ಕಂಬಿ ಎಣಿಸುತ್ತಿದ್ದಾನೆ.

ಬೆಂಗಳೂರು ಶಾಪಿಂಗ್ ಮಾಲ್‌ನಲ್ಲಿ 'ವಿಐಪಿ ಟಾಯ್ಲೆಟ್': ಮೂತ್ರ ಮಾಡಲು 1,000 ರೂ. ವೆಚ್ಚ ಮಾಡಬೇಕು!

ಬೆಂಗಳೂರಿನ ಐಟಿಪಿಎಲ್ ಕಂಪನಿಯಲ್ಲಿ ಕಳೆದ ಆರು ತಿಂಗಳಿನಿಂದ ಕೆಲಸ ಮಾಡಿಕೊಂಡಿದ್ದ ಆರೋಪಿ ಮುರುಗೇಶ ಲ್ಯಾಪ್ ಟಾಪ್ ಸರ್ವಿಸ್, ರಿಪೇರಿ ಮಾಡುವ ನೆಪದಲ್ಲಿ ಸಾಕಷ್ಟು ಲ್ಯಾಪ್ ಟ್ಯಾಪ್ ಕದ್ದಿದ್ದಾನೆ. ಈ ಬಗ್ಗೆ ಕಂಪನಿಯವರು ಪ್ರಶ್ನೆ ಮಾಡಿದಾಗ ರಜೆ ಹಾಕಿ ಎಸ್ಕೇಪ್ ಆಗಿದ್ದನು. ಕಂಪನಿಯಿಂದ ದೂರು ಕೊಟ್ಟಾಗ ಆರೋಪಿ ಮುರುಗೇಶನನ್ನು ಪೊಲೀಸರು ಬಂಧಿಸಿದ್ದಾರೆ. ಆತನಿಂದ ಬರೋಬ್ಬರಿ 22 ಲಕ್ಷ ರೂ. ಮೌಲ್ಯದ 50 ಲ್ಯಾಪ್‌ಟಾಪ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಈತ ಕಂಪನಿಯಲ್ಲಿ ಕದ್ದ ಲ್ಯಾಪ್‌ಟಾಪ್‌ಗಳನ್ನು ಹೊಸೂರಿನಲ್ಲಿ ಸಿಕ್ಕಷ್ಟು ಬೆಲೆಗೆ ಮಾರಾಟ ಮಾಡುತ್ತಿದ್ದನು ಎಂಬ ಮಾಹಿತಿ ತಿಳಿದುಬಂದಿದೆ. ಈ ಘಟನೆ ಕುರಿತಂತೆ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

click me!