Asianet Suvarna News Asianet Suvarna News

ಮಗಳನ್ನು ಮದುವೆ ಮಾಡಿ ಗಂಡನ ಜೊತೆಗೆ ಕಳಿಸಿದರೆ, ಮಾವ ನಿನ್ನ ಮಗಳ ಶವ ತಗೊಂಡೋಗು ಎಂದ ಅಳಿಮಯ್ಯ!

ಕಳೆದ ಎರಡು ವರ್ಷಗಳ ಹಿಂದೆ ಬೆಂಗಳೂರಿನ ಅಳಿಯನಿಗೆ ಮಗಳನ್ನು ಕೊಟ್ಟು ಮದುವೆ ಮಾಡಿದರೆ, ಮೊಮ್ಮಕ್ಕಳನ್ನು ಕೊಡುವುದು ಬಿಟ್ಟು ಮಗಳ ಶವವನ್ನು ಮರಳಿ ಕೊಟ್ಟಿದ್ದಾನೆ.

North Indian young woman married son in law killed his wife for dowry in Bengaluru sat
Author
First Published Aug 6, 2024, 2:14 PM IST | Last Updated Aug 6, 2024, 2:17 PM IST

ಬೆಂಗಳೂರು (ಆ.06): ಎರಡು ವರ್ಷದ ಹಿಂದೆ ಮಾವ ನಿನ್ನ ಮಗಳ ಕೊಡು ಎಂದು ಮದುವೆ ಮಾಡಿಕೊಂಡು ಬಂದಿದ್ದ ಬೆಂಗಳೂರಿನ ಅಳಿಯ ಈಗ ವರದಕ್ಷಿಣೆ ಕಿರುಕುಳಕ್ಕೆ ಮಗಳನ್ನೇ ಮೆಟ್ಟಿಲ ಮೇಲಿಂದ ತಳ್ಳಿ ಕೊಲೆ ಮಾಡಿದ್ದಾರೆಂದು ಯುವತಿಯ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ.

ಈ ಘಟನೆ ಬೆಂಗಳೂರಿನ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಗೃಹಿಣಿ ತನಿಷಾ ಚೌಧರಿ. ಈಕೆಯ ಗಂಡ ತರುಣ್ ಚೌಧರಿ ಹಾಗೂ ಆತನ ಮನೆಯವರು ಕೊಲೆ ಮಾಡಿದ್ದಾರೆಂದು ಮೃತ ಗೃಹಿಣಿ ತನಿಷಾ ಅವರ ತಂದೆ ತಾಯಿ ಆರೋಪ ಮಾಡಿದ್ದಾರೆ. ಹೊರ ರಾಜ್ಯದಲ್ಲಿ ವಾಸವಾಗಿದ್ದಾರೆ. ಬೆಂಗಳೂರಿನಲ್ಲಿ ಉದ್ಯಮ ಮಾಡಿಕೊಂಡಿದ್ದ ತರುಣ್‌ ಚೌಧರಿ ಎಂಬಾತನಿಗೆ ತನ್ನ ಮಗಳನ್ನು ಕೊಟ್ಟು ಅದ್ಧೂರಿಯಾಗಿ ಮದುವೆ ಮಾಡಿ ಕಳಿಸಿದ್ದಾರೆ. ಇನ್ನು ಮದುವೆ ಮಾಡಿ ಕಳಿಸುವಾಗಲೃ ಕೈತುಂಬಾ ವರದಕ್ಷಿಣೆ ಹಣ ಹಾಗೂ ವರನಿಗೆ ಓಡಾಡಲು ಒಂದು ಕಾರನ್ನು ಸಹ ಕೊಡಿಸಿದ್ದಾರೆ. ಆದರೆ, ಚಿನ್ನದ ಮೊಟ್ಟೆ ಇಡುವ ಕೋಳಿಯನ್ನು ತಂದಿದ್ದೇವೆಂದು, ಹೊಟ್ಟೆಯನ್ನು ಕೊಯ್ಯಲು ಮುಂದಾದ ದುರಾಸೆಯ ದುರ್ಬುದ್ಧಿಗೆ ಬಿದ್ದ ಗಂಡನ ಮನೆಯವರು ಹೆಂಡತಿಗೆ ಮತ್ತಷ್ಟು ವರದಕ್ಷಿಣೆ ಹಣ ತರುವಂತೆ ಕಿರುಕುಳ ನೀಡಿದ್ದಾರಂದು ಆರೋಪ ಕೇಳಿಬಂದಿದೆ.

ಪೊಲೀಸರನ್ನು ವಂಚಿಸಿ ಲಕ್ಷ ಲಕ್ಷ ಹಣ ಸುಲಿಗೆ ಮಾಡುತ್ತಿದ್ದ ಶಿವಾಜಿನಗರದ ಸರ್ಫರಾಜ್ ಬಂಧನ!

ತನಿಷಾಳನ್ನು ಮತ್ತು ತರುಣ್ ಚೌಧರಿ ಎಂಬ ಬೆಂಗಳೂರು ಯುವಕನಿಗೆ 2022ನೇ ಇಸವಿಯಲ್ಲಿ ಮದುವೆ ಮಾಡಿಕೊಡಲಾಗಿತ್ತು. ಮಗಳು ತನಿಷಾ ಚೌಧರಿ ಮದುವೆ ಮಾಡಿಕೊಟ್ಟ ಬಳಿಕ ಆಡುಗೋಡಿ ಬಳಿಯಲ್ಲಿ ಗಂಡನ ಮನೆಯಲ್ಲಿ ವಾಸವಿದ್ದಳು. ಮದುವೆಯ ವೇಳೆ ವರದಕ್ಷಿಣೆ ಮತ್ತು ಕಾರನ್ನು ನೀಡಿ ಮದವೆ ಮಾಡಿಕೊಡಲಾಗಿತ್ತು. ಆದರೂ, ಸಹ ಗಂಡನ ಮನೆಯವರು ಮಗಳಿಗೆ ವರದಕ್ಷಿಣೆ ಕಿರುಕುಳ‌ ನೀಡುತ್ತಿದ್ದರು. ನಿನ್ನೆ ಇದ್ದಕ್ಕಿದ್ದಂತೆ ಕರೆ ಮಾಡಿ ಬೇಗನೆ ಬೆಂಗಳೂರಿಗೆ ಬನ್ನಿ, ನಿಮ್ಮ ಮಗಳು 50 ಮೆಟ್ಟಿಲು ಜಾರಿ ಬಿದ್ದಿದ್ದಾಳೆ ಎಂದು ಅಳಿಯ ತರುಣ್ ಚೌಧರಿ ಹೇಳಿದ್ದಾನೆ.

ಇನ್ನು ಹೊರ ರಾಜ್ಯದಲ್ಲಿದ್ದ ತನಿಷಾ ಪೋಷಕರು ಮಗಳಿಗೆ ಹುಷಾರಿಲ್ಲವೆಂದುಕೊಂಡು ತರಾತುರಿಯಲ್ಲಿ ಬೆಂಗಳೂರಿಗೆ ಬಮದಿದ್ದಾರೆ. ಆದರೆ, ಬೆಂಗಳೂರಿಗೆ ಬಂದ ನಂತರ ಮಗಳ‌ ಸಾವಿನ ವಿಚಾರ ಗೊತ್ತಾಗಿದೆ. ನಗರದ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ತನಿಷಾ ಮೃತದೇಹ ಇಡಲಾಗಿತ್ತು. ಜೊತೆಗೆ, ಮೃತ ಮಗಳು ತನಿಷಾ ಕುತ್ತಿಗೆಯ ಭಾಗದಲ್ಲಿ ಗಾಯದ ಗುರುತುಗಳು ಪತ್ತೆಯಾಗಿವೆ. ಇದರಿಂದ ಗಂಡನ ಮನೆಯವರು ನಮ್ಮ ಮಗಳನ್ನು ವರದಕ್ಷಿಣೆ ಕಿರುಕುಳ ಕೊಟ್ಟು ಸಾಯಿಸಿದ್ದಾರೆಂದು ತನಿಷಾ ಮನೆಯವರು ಆರೋಪ ಮಾಡಿದ್ದಾರೆ.

ಬೆಂಗಳೂರು: ಹೊಟ್ಟೆನೋವೆಂದು ಆಸ್ಪತ್ರೆಗೆ ಬಂದ ಶಾಲಾ ಬಾಲಕಿ ತುಂಬು ಗರ್ಭಿಣಿ ಎಂದ ವೈದ್ಯರು

ಮೃತ ತನಿಷಾ ಅವರ ಪಾಲಕರು ಆಕೆಯ ಗಂಡ ಗಂಡ ತರುಣ್ ಚೌಧರಿ ಸೇರಿದಂತೆ ಏಳು ಜನರ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಕೊಲೆ ಆರೋಪದ ದೂರು ನೀಡಿದ್ದಾರೆ. ಆಡುಗೋಡಿ ಪೊಲೀಸ್ ಠಾಣೆಯಲ್ಲಿ  ವರದಕ್ಷಿಣೆ ಕಿರುಕುಳ ಕೇಸ್ ದಾಖಲು ಆಗಿದೆ. ಈ ಹಿನ್ನೆಲೆಯಲ್ಲಿ ತನಿಷಾ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲು ಪೊಲೀಸರು ಪ್ರಕ್ರಿಯೆ ಶುರು ಮಾಡಿದ್ದಾರೆ. ಇನ್ನು ಆರೋಪದ ಬೆನ್ನಲ್ಲಿಯೇ ತನಿಷಾಳ ಕುಟುಂಬವನ್ನೂ ವಿಚಾಣೆ ಮಾಡಲು ಮುಂದಾಗಿದ್ದಾರೆ.

Latest Videos
Follow Us:
Download App:
  • android
  • ios