
ಉಜ್ಜೈನಿ(ಜೂ.24) ಪತಿಯೊಂದಿಗೆ ಜಗಳ ಮಾಡಿ ಹೊರಬಂದ ಮಹಿಳೆಯನ್ನು ಎಳೆದೊಯ್ದ 60 ವರ್ಷದ ಕಾಮುಕ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಭೀಕರ ಘಟನೆ ಮಧ್ಯಪ್ರದೇಶದ ಉಜ್ಜೈನಿಯಲ್ಲಿ ನಡಿದೆ. ಮಹಿಳೆಗೆ ಆಶ್ರಯ ಕೊಡುವ ನೆಪದಲ್ಲಿ 60ರ ಕಾಮುಕ ಆಕೆಯನ್ನು ರೈಲು ನಿಲ್ದಾಣದ ಪಕ್ಕದಲ್ಲೇ ಇರುವ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಪ್ರತಿಭಟಿಸಿದ ಆಕೆಯನ್ನು ಹತ್ಯೆ ಮಾಡಿ ದೇಹವನ್ನು ಹಲವು ತುಂಡುಗಳಾಗಿ ಕತ್ತರಿಸಿದ್ದಾನೆ. ಬಳಿಕ ಎರಡು ರೈಲಿನಲ್ಲಿ ಮೃತದೇಹ ತುಂಡುಗಳನ್ನು ಪಾರ್ಸೆಲ್ ಮಾಡಿ ಕಾಮುಕನನ್ನು ಅರೆಸ್ಟ್ ಮಾಡಲಾಗಿದೆ.
ಜೂನ್ 6ರಂದು ಪತಿಯೊಂದಿಗೆ ಜಗಳ ಮಾಡಿದ 36 ವರ್ಷದ ಮಹಿಳೆ ಉಜ್ಜೈನಿ ರೈಲು ನಿಲ್ದಾಣದಲ್ಲಿ ಕುಳಿತಿದ್ದಳು. ಮಥುರಾಗೆ ತೆರಳಲು ರೈಲಿಗಾಗಿ ಕಾಯುತ್ತಿದ್ದ ಮಹಿಳೆಗೆ ಆಶ್ರಯ ನೀಡುವ ನೆಪದಲ್ಲಿ ಬಂದ 60 ವರ್ಷ ಕಾಮುಕ ಆರೋಪಿ ಕಮಲೇಶ್ ಪಟೇಲ್ ಆಕೆಯನ್ನು ಪಕ್ಕದಲ್ಲೇ ಇರುವ ಮನೆಗೆ ಕರೆದುಕೊಂಡು ಹೋಗಿದ್ದಾನೆ.
ಮದ್ವೆಯಾಗಿದ್ರೂ ಲಿವ್ ಇನ್ ರಿಲೇಶನ್‌ಶಿಪ್; ಹಾಲಿ ಗೆಳತಿಯೊಂದಿಗೆ ಸೇರಿ ಮಾಜಿ ಗೆಳತಿಯನ್ನು ಕೊಂದು ಜೈಲುಪಾಲು
ಮನೆಯಲ್ಲಿ ಆಕೆಗೆ ಆಹಾರದಲ್ಲಿ ನಿದ್ದೆ ಮಾತ್ರೆ ನೀಡಿ ಬಳಿಕ ಅತ್ಯಾಚಾರ ಎಸಗಿದ್ದಾನೆ. ನಿದ್ದೆಯ ಮಂಪರಿನಲ್ಲೇ ಅತ್ಯಾಚಾರ ಪ್ರತಿಭಟಿಸಿದ್ದಾಳೆ. ಆದರೆ ಕಾಮುಕ ಕಮಲೇಶ್ ಪಟೇಲ್ ಮಹಿಳೆಯನ್ನು ಹತ್ಯೆ ಮಾಡಿದ್ದಾನೆ. ಬಳಿಕ ಆಕೆಯ ದೇಹವನ್ನು ಕತ್ತರಿಸಿದ್ದಾನೆ. ಸರಿಸುಮಾರು 4 ಗಂಟೆಗೂ ಹೆಚ್ಚು ಕಾಲ ಮಹಿಳೆಯ ದೇಹ ಹತ್ತರಿಸಿದ ಕಮಲೇಶ್ ಪಟೆಲ್, ಗೋಣಿ ಚೀಲದಲ್ಲಿ ಪ್ಯಾಕ್ ಮಾಡಿದ್ದಾನೆ. ಬಳಿಕ ರೈಲು ನಿಲ್ದಾಣಕ್ಕೆ ತೆರಳಿ ಎರಡು ರೈಲುಗಳಲ್ಲಿ ಆಕೆಯ ಮೃತದೇಹದ ತುಂಡುಗಳನ್ನು ಇಟ್ಟು ಪರಾರಿಯಾಗಿದ್ದಾನೆ.
ಜೂನ್ 10 ರಂದು ಉತ್ತರಖಂಡ ರಿಷಿಕೇಶಿ ರೈಲು ನಿಲ್ದಾಣದಲ್ಲಿ ರೈಲಿನಲ್ಲಿ ಮಹಿಳೆಯ ಕೈ ಕಾಲುಗಳು ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹುಡುಕಾಟ ನಡೆಸಿದಾಗ ಮಹಿಳೆಯ ದೇಹತ ಇತರ ಭಾಗಗಳು ಸಿಕ್ಕಿದೆ. ಈ ಕುರಿತು ತನಿಖೆ ನಡೆಸಿದ ಪೊಲೀಸರು ರೈಲು ಹಾದು ಬಂದ ಎಲ್ಲಾ ನಿಲ್ದಾಣಗಲ್ಲಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಆರೋಪಿ ಪತ್ತೆ ಹಚ್ಚಿದ ಪೊಲೀಸರು ಕಮಲೇಶ್ ಪಟೇಲ್ ಬಂಧಿಸಿದ್ದಾರೆ. ಇದೀಗ ಈತ ಇದೇ ರೀತ ಹಲವು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ಕುರಿತು ವಿಚಾರಣೆಯಲ್ಲಿ ಕೆಲ ಸಾಕ್ಷ್ಯಗಳು ಲಭ್ಯವಾಗಿದೆ. ಇತ್ತ ಮಹಿಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಯಾದಗಿರಿ: ಅರಣ್ಯಾಧಿಕಾರಿ ಕೊಲೆ ಮರೆಮಾಚಲು 40 ಲಕ್ಷ ಡೀಲ್?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ