ಸಲಿಂಗ ಕಾಮ ಕೇಸಲ್ಲಿ ಸೆಂಟ್ರಲ್ ಜೈಲ್ ಸೇರಿದ ಸೂರಜ್ ರೇವಣ್ಣಗೆ ಲಿಂಗತ್ವ, ಲೈಂಗಿಕ ಸಾಮರ್ಥ್ಯ ಪರೀಕ್ಷೆ

By Sathish Kumar KHFirst Published Jun 24, 2024, 11:24 AM IST
Highlights

ಸಲಿಂಗ ಕಾಮ ಕೇಸಲ್ಲಿ ಸೆಂಟ್ರಲ್ ಜೈಲ್ ಸೇರಿದ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣಗೆ ಕೈದಿ ನಂಬರ್ ಹಂಚಿಕೆ ಮಾಡಲಾಗಿದೆ. ಜೊತೆಗೆ, ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು ಲಿಂಗತ್ವ, ಲೈಂಗಿಕ ಸಮರ್ಥತೆ ಸೇರಿ 8 ಪರೀಕ್ಷೆ ಮಾಡಿಸಲು ಪೊಲೀಸರು ತೀರ್ಮಾನಿಸಿದ್ದಾರೆ.

ಬೆಂಗಳೂರು (ಜೂ.24): ಹಾಸನದಲ್ಲಿ ಜೆಡಿಎಸ್ ಕಾರ್ಯಕರ್ತನನ್ನು ಸಲಿಂಗ ಕಾಮಕ್ಕೆ ಬಲವಂತವಾಗಿ ಬಳಸಿಕೊಂಡ ಆರೋಪದಲ್ಲಿ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣನನ್ನು ನಿನ್ನೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಸೆಂಟ್ರಲ್ ಜೈಲ್ ಪರಪ್ಪನ ಅಗ್ರಹಾರಕ್ಕೆ ರವಾನಿಸಲಾಗಿದೆ. ಈಗ ಕೈದಿ ನಂಬರ್ 6141 ನೀಡಲಾಗಿದ್ದು, ಅವರಿಗೆ 8 ತರಹದ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲು ಪೊಲೀಸರು ಮುಂದಾಗಿದ್ದಾರೆ.

ಸಲಿಂಗ ಕಾಮ ಪ್ರಕರಣದಲ್ಲಿ ಜೈಲು ಸೇರಿರುವ ಸೂರಜ್ ರೇವಣ್ಣ ಅವರನ್ನು ಪೊಲೀಸರು ನಿನ್ನೆ ರಾತ್ರಿ ವೇಳೆ ಜೈಲಿಗೆ ರವಾನಿಸುವ ಪ್ರಕ್ರಿಯೆ ತಡವಾಗಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ಕೈದಿ ನಂಬರ್ ಕೊಡದೇ ರಾತ್ರಿ ಕಳೆದಿದ್ದರು. ಆದರೆ, ಜೈಲಿನ ಅಧಿಕಾರಿಗಳು ಸೂರಜ್ ರೇವಣ್ಣಗೆ ಇಂದು ಬೆಳಗ್ಗೆ ಕೈದಿ ನಂಬರ್ ನೀಡಿದ್ದಾರೆ. ಸೂರಜ್‌ಗೆ ಕೈದಿ ನಂಬರ್ 6141 ನೀಡಲಾಗಿದೆ. ಸದ್ಯಕ್ಕೆ ಸೂರಜ್ ರೇವಣ್ಣನನ್ನು ಜೈಲಿನ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿದೆ.

Latest Videos

MLC ಸೂರಜ್ ರೇವಣ್ಣಗೆ 14 ದಿನ ನ್ಯಾಯಾಂಗ ಬಂಧನ; ಪರಪ್ಪನ ಅಗ್ರಹಾರಕ್ಕೆ ಶಿಫ್ಟ್

ಇನ್ನು ಸೂರಜ್ ರೇವಣ್ಣ ವಿರುದ್ಧ ದಾಖಲಾಗಿರುವ ಅಸಹಜ ಲೈಂಗಿಕ ದೌರ್ಜನ್ಯ  ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಲವು ವೂದ್ಯಕೀಯ ಪರೀಕ್ಷೆಗಳನ್ನು ಮಾಡಿಸಲು ಮುಂದಾಗಿದ್ದಾರೆ. ಹೀಗಾಗಿ,ಇವರನ್ನು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ಮಾಡಿಸಲಿದ್ದಾರೆ. ಆಸ್ಪತ್ರೆಯಲ್ಲಿ ಯೂರಾಲಜಿಸ್ಟ್, ಫಾರೆನ್ಸಿಕ್ ತಜ್ಞರು ಮತ್ತು ಪಿಜಿಷಿಯನ್  ವೈದ್ಯರಿಂದ  ಮೆಡಿಕಲ್ ಟೆಸ್ಟ್ ಮಾಡಿಸಲಾಗುತ್ತದೆ. ಜೊತೆಗೆ, ಮನೋ ವೈದ್ಯರಿಂದ ಕೂಡ ಸಂತ್ರಸ್ತನನ್ನ ಎಗ್ಸಾಮಿನೇಷನ್ ಮಾಡಿಸಲಿದ್ದಾರೆ. 

ಸೂರಜ್ ರೇವಣ್ಣಗೆ ಯಾವ ರೀತಿ ಮೆಡಿಕಲ್ ಟೆಸ್ಟ್ ಆಗಲಿದೆ ?

  • 1. ಕೂದಲುಗಳನ್ನ ಪರೀಕ್ಷೆಗೆ ಒಳಪಡಿಸಲು ಕೂದಲನ್ನ ಸಂಗ್ರಹ ಮಾಡಿಕೊಳ್ಳಲಿದ್ದಾರೆ.
  • 2. ಸಂತ್ರಸ್ತ ಯುವಕನ ದೇಹದ ಮೇಲೆ ಕಚ್ಚಿದ ಗುರುತುಗಳು ಇದ್ದರೆ ಹಲ್ಲಿನ ಮಾರ್ಕ್ ಅನ್ನು ಮಾಡಿ  ಲೈಂಗಿಕ ದೌರ್ಜನ್ಯ ನಡೆಸಿರುವ ಸೂರಜ್ ರೇವಣ್ಣ  ಹಲ್ಲಿಗೆ ಹೋಲಿಕೆ ಮಾಡಿ ಪರೀಕ್ಷಿಸಲಿದ್ದಾರೆ.
  • 3. ಸೂರಜ್ ರೇವಣ್ಣಗೆ ಲಿಂಗತ್ವ ಪರೀಕ್ಷೆ.
  • 4. ಅಸಹಜ ಲೈಂಗಿಕ ಕ್ರಿಯೆಗೆ ಸಮರ್ಥನ ಅಥವಾ ಈ ರೀತಿಯ ಅ ಸಹಜ ಲೈಂಗಿಕ ಕ್ರಿಯೆ ಇದೇ ಮೊದಲ ಅಂತಾ ಪರೀಕ್ಷೆ ಮಾಡ್ತಾರೆ.
  • 5. ಕಿಡ್ನಿ ಮತ್ತು ವೃಷಣಗಳ ಪರೀಕ್ಷೆಗಳನ್ನ ಕೂಡ ನಡೆಸಲಿದ್ದಾರೆ.
  • 6. ಲೈಂಗಿಕವಾಗಿ ಸಮರ್ಥತೆ ಬಗ್ಗೆ ಪರೀಕ್ಷೆ.
  • 7. ಫಾರೆನ್ಸಿಕ್ ತಜ್ಞರಿಂದ ಕೂದಲು, ಬಟ್ಟೆ ಮತ್ತು ಕೆಲವೊಂದು ವಸ್ತುಗಳನ್ನ ಪರೀಕ್ಷೆಗೆ ಒಳಪಡಿಸ್ತಾರೆ.
  • 8. ಡಿಎನ್ ಎ ಟೆಸ್ಟ್ ಕೂಡ ಮಾಡಲಿದ್ದಾರೆ.
click me!