
ಮಹಾರಾಷ್ಟ್ರ: ಸಚಿವ ಧನಂಜಯ್ ಮುಂಡೆ ಪತ್ನಿ ಎಂದು ಹೇಳಿಕೊಂಡು ಸುದ್ದಿಯಾಗಿದ್ದ ಮಹಿಳೆಯನ್ನು ಪುಣೆ ಪೊಲೀಸರು ಮತ್ತೊಂದು ಪ್ರಕರಣದಲ್ಲಿ ಬಂಧಿಸಿದ್ದಾರೆ. 43 ವರ್ಷ ಪ್ರಾಯದ ಕರುಣಾ ಶರ್ಮಾ ಬಂಧಿತ ಮಹಿಳೆ. ಈಕೆ ತಾನು ಮಹಾರಾಷ್ಟ್ರದ ಸಾಮಾಜಿಕ ನ್ಯಾಯ ಖಾತೆಯ ಸಚಿವ ಧನಂಜಯ್ ಮುಂಡೆ ಅವರ ಎರಡನೇ ಪತ್ನಿ ಎಂದು ಹೇಳಿಕೊಂಡು ಈ ಹಿಂದೆ ಸುದ್ದಿಯಾಗಿದ್ದಳು. 23ರ ಹರೆಯದ ಪುಣೆಯ ಮಹಿಳೆಯೊಬ್ಬರಿಗೆ ಜಾತಿ ನಿಂದನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಹಾಗೂ ಆಕೆಗೆ ಪತಿಯಿಂದ ವಿಚ್ಛೇದನ ಪಡೆಯುವಂತೆ ಬೆದರಿಕೆ ಹಾಕುತ್ತಿದ್ದ ಕಾರಣಕ್ಕೆ ಪುಣೆ ಪೊಲೀಸರು ಕರುಣಾ ಶರ್ಮಾಳನ್ನು ಬಂಧಿಸಿದ್ದಾರೆ.
ದೂರು ನೀಡಿದ ಮಹಿಳೆಯ ಪತಿಯನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಪುಣೆಯ 23 ವರ್ಷದ ಮಹಿಳೆ ತನ್ನ 32 ವರ್ಷದ ಪತಿ ಮತ್ತು ಸಾಂತಾಕ್ರೂಜ್‌ನ ನಿವಾಸಿ ಶರ್ಮಾ ವಿರುದ್ಧ ನೀಡಿದ ದೂರಿನ ಆಧಾರದ ಮೇಲೆ ಭಾನುವಾರ ಯರವಾಡ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲಾಗಿದೆ. ಅಪರಾಧಕ್ಕೆ ಸಂಬಂಧಿಸಿದಂತೆ 2021 ನವೆಂಬರ್ ಹಾಗೂ ಈ ವರ್ಷದ ಮೇ 30 ರ ನಡುವೆ ಈ ಅಪರಾಧ ಪ್ರಕರಣಗಳು ನಡೆದಿವೆ.
ಕೇವಲ 56 ರೂ. ಟೋಲ್‌ಗಾಗಿ ರಂಪಾಟ ಮಾಡಿದ ಮಿನಿಸ್ಟರ್ ಹೆಂಡ್ತಿ!
ಪುಣೆ ಪೊಲೀಸ್ ಕಮಿಷನರ್ (Pune Police Commissioner) ಅಮಿತಾಭ್ ಗುಪ್ತಾ (Amitabh Gupta) ಆರೋಪಿ ಮಹಿಳೆ ಕರುಣಾ ಶರ್ಮಾ ಮತ್ತು ದೂರುದಾರರ ಪತಿಯನ್ನು ಪುಣೆ ಜಿಲ್ಲೆಯ ಲಾಡ್ಜ್‌ನಿಂದ ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಎಫ್‌ಐಆರ್‌ನ ಪ್ರಕಾರ, ಕರುಣಾ ಶರ್ಮಾ ತನಗೆ ನಿನ್ನ ಪತಿಯೊಂದಿಗೆ ಸಂಬಂಧವಿದ್ದು, ಆತನಿಗೆ ನೀನು ವಿಚ್ಛೇದನ ನೀಡುವಂತೆ ಪುಣೆ ಮೂಲದ 23 ವರ್ಷದ ಮಹಿಳೆಗೆ ಒತ್ತಡ ಹೇರಿದ್ದಳು. ದೂರಿನ ಪ್ರಕಾರ, ಶರ್ಮಾ ಮಹಿಳಾ ದೂರುದಾರರಿಗೆ ಹಾಕಿ ಸ್ಟಿಕ್‌ನಿಂದ ಹಲ್ಲೆ ಮಾಡಿ ಬೆದರಿಕೆ ಹಾಕಿದ್ದಾರೆ ಮತ್ತು ವಿಚ್ಛೇದನ (divorce) ನೀಡದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೇ ಶರ್ಮಾ ಅವರು ದೂರುದಾರರ ವಿರುದ್ಧ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಹೀಗಾಗಿ ಪೊಲೀಸರು ಶರ್ಮಾ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯನ್ನು ಪ್ರಯೋಗಿಸಿದ್ದಾರೆ.
ಕೊರೋನಾ ಹಾವಳಿ ನೋಡಲಾಗದೆ ಮಾಸ್ಕ್ ಹೊಲಿಯಲು ಕುಳಿತ ಸಚಿವರ ಪತ್ನಿ, ಪುತ್ರಿ!
ಅದೇ ಅಪರಾಧದಲ್ಲಿ ಮಹಿಳೆಯ 32 ವರ್ಷದ ಪತಿಯನ್ನು ಭಾರತೀಯ ದಂಡ ಸಂಹಿತೆ 498A ಅಡಿಯಲ್ಲಿ ಕೌಟುಂಬಿಕ ಹಿಂಸೆ, 323 ದೈಹಿಕ ಹಲ್ಲೆ ಮತ್ತು 377 ಅಸ್ವಾಭಾವಿಕ ಅಪರಾಧಗಳಿಗಾಗಿ ಪ್ರಕರಣ ದಾಖಲಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ