ಅಪ್ರಾಪ್ತೆ ಮೇಲೆ ಸೋದರ ಮಾವ ಅತ್ಯಾಚಾರ, ಬಾಲಕಿ 7 ತಿಂಗಳು ಗರ್ಭಿಣಿ

By Suvarna News  |  First Published Jun 21, 2022, 4:54 PM IST

* ಅಪ್ರಾಪ್ತ ಬಾಲಕಿ ಮೇಲೆ ಸೋದರ ಮಾವನಿಂದಲೇ ಅತ್ಯಾಚಾರ
* 7 ತಿಂಗಳು ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ
* ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ದುಡಿಯಲು ಹೋಗಿದ್ದ ಬಾಲಕಿ ತಾಯಿಗೆ ವಿಷಯ ತಿಳಿದು ಶಾಕ್..!


ಯಾದಗಿರಿ, (ಜೂನ್.21): ಅಪ್ರಾಪ್ತ ಬಾಲಕಿ ಮೇಲೆ ಸೋದರ ಮಾವನೊಬ್ಬ ಅತ್ಯಾಚಾರ ಎಸಗಿದ ಪೈಶಾಚಿಕ ಕೃತ್ಯವೊಂದು 7 ತಿಂಗಳ ಬಳಿಕ ಹೊರ ಬಿದ್ದಿದೆ. ಸೋದರ ಮಾವನೇ ಅಂದ್ರೆ ತಾಯಿಯ ಸಹೋದರ(ತಮ್ಮ) ಇಂತಹ ನೀಚಕೃತ್ಯ ಎಸಗಿದ್ದು, ಇದೀಗ ಬಾಲಕಿ ಏಳು ತಿಂಗಳ ಗರ್ಭಿಣಿಯಾಗಿದ್ದಾಳೆ. 

ತಂದೆ, ತಾಯಿ ಸತ್ರೂ ಸಹೋದರ ಮಾವ ಇರಬೇಕು ಎಂಬ ಮಾತು ಸಮಾಜದಲ್ಲಿದೆ, ಆದ್ರೆ ಇಲ್ಲೊಬ್ಬ ಮಾವ ಆ ಬಾಲಕಿ ಬಾಳಲ್ಲಿ ಕಣ್ಣಾಮುಚ್ಚಾಲೆ ಆಟ ಆಡಿದ್ದಾನೆ. ಆ ಬಾಲಕಿಯ ತಂದೆ ಸುಮಾರು ಏಂಟು ವರ್ಷದ ಹಿಂದೆ ಮೃತಪಟ್ಟಿದ್ದು, ಬಾಲಕಿ ತಾಯಿ ಹೊಟ್ಟೆಪಾಡಿಗಾಗಿ ದೂರದ ಬೆಂಗಳೂರಿಗೆ ಹೋಗಿ ಕೂಲಿ ಕೆಲಸ ಮಾಡಿ 5 ಜನ ಹೆಣ್ಣುಮಕ್ಕಳ ಜೊತೆ ಜೀವನ ಸಾಗಿಸ್ತಾ ಇದ್ದಳು. ಐದು ಜನ ಹೆಣ್ಣು ಮಕ್ಕಳಲ್ಲಿ ನಾಲ್ಕನೇಯವಳಾದ ಈ ಬಾಲಕಿ ಆಗಾಗಾ ಬೆಂಗಳೂರಿನ ಶಾಲೆಯೊಂದರಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದಾಳೆ. 

Tap to resize

Latest Videos

undefined

ಬೆಂಗಳೂರಿನಿಂದ ಹಬ್ಬ, ಹುಣ್ಣಿಮೆ, ಜಾತ್ರೆ ಹಾಗೂ ಇತರೆ ಸಮಾರಂಭಗಳಲ್ಲಿ ಪಾಲ್ಗೊಳ್ಳಲು ತಮ್ಮ ಊರಿಗರ ಬರುತ್ತಿದ್ದಳು. ಇದನ್ನೇ ಕಾಯುತ್ತಿದ್ದ ಸೋದರ ಮಾವ ಮಲ್ಲಿಕಾರ್ಜುನ್ ನಗಲಾಪುರ ಬಾಲಕಿಯೊಂದಿಗೆ ಸಲುಗೆಯಿಂದ ವರ್ತಿಸಿ, ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. ಮಗಳಂತಿರುವ 13 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ, 7 ತಿಂಗಳ ಗರ್ಭಿಣಿಯನ್ನಾಗಿಸಿದ್ದಾನೆ.

8 ವರ್ಷದ ಬಾಲಕಿ ಮೇಲೆ ರೇಪ್ ಮಾಡಿದಾತ HIV ಪಾಸಿಟಿವ್, ಬಾಲಕಿಗೂ ಟೆಸ್ಟ್‌!

ಯಾರು ಇಲ್ಲದನ್ನು ಹೊಂಚು ಹಾಕಿದ ಪಾಪಿ ಮಾವ..!
ಅಕ್ಕ ಗಂಡನನ್ನು ಕಳೆದುಕೊಂಡ ಮಹಿಳೆ. ಆಕೆಯನ್ನು ಕಷ್ಟ ಕಾಲದಲ್ಲಿ ಕೈ ಹಿಡಿಯಬೇಕಾದ ತಮ್ಮ ಸಹೋದರಿಯ ಮಗಳ ಕಥೆಯನ್ನೆ ಮುಗಿಸಿದ್ದಾನೆ. ಹೊಟ್ಟೆಪಾಡಿಗಾಗಿ ಮಕ್ಕಳನ್ನು ಕರೆದುಕೊಂಡು ಹೋಗಿದ್ದ ಆಕೆಯ ಬಾಳನ್ನು ಬರ್ಬಾದ್ ಆಗುವಂತೆ ಮಾಡಿದ್ದಾನೆ. ದೂರದ ಬೆಂಗಳೂರಿನಿಂದ ಸಹೋದರಿ (ಅಕ್ಕ) ಮಗಳು ಊರಿಗೆ ಬಂದು ಸಭೆ, ಸಮಾರಂಭ, ಹಬ್ಬ, ಹುಣ್ಣಿಮೆಯಲ್ಲಿ ಭಾಗವಹಿಸುತ್ತಿದ್ದಳು. 

ಇದನ್ನೆ ಕಾಯ್ದುಕೊಂಡು ಕುಳಿತಿದ್ದ ಕಾಮುಕ ಸೋದರ ಮಾವ ಬಲಾತ್ಕಾರದಿಂದ 13 ವರ್ಷದ ಬಾಲಕಿಯನ್ನು ಅತ್ಯಾಚಾರಗೈದಿದ್ದಾನೆ. ತನ್ನ ಸಂಬಂಧಿಕರ ಮನೆಯೊಂದರಲ್ಲಿ ಬಾಲಕಿಯ ಮೇಲೆ ಪೈಶ್ಯಾಚಿಕ ಕೃತ್ಯ ಎಸಗಿದ್ದಾನೆ. ಸಾಕ್ಷಾತ್ ತಂದೆ ಸಮಾನನಾದ ಸೋದರ ಮಾವ ಈ ತರ ಕೃತ್ಯ ಮಾಡಿರುವುದು ಎಂತಹವರು ಕೂಡ ಆರೋಪಿ ಮಲ್ಲಿಕಾರ್ಜುನ್ ನಗಲಾಪುರ ವಿರುದ್ಧ ಆಕ್ರೋಶ ಮುಗಿಲು ಮುಟ್ಟಿದೆ.

ಮಕ್ಕಳ ಮೇಲೆ ವಿಶೇಷ ಕಾಳಜಿ ವಹಿಸುಂತೆ ಎಸ್ಪಿ ಸಲಹೆ
ಅಪ್ರಾಪ್ತ ಬಾಲಕಿ ಮೇಲೆ ಸೋದರ ಮಾವ ಅತ್ಯಾಚಾರ ಪ್ರಕರಣದ ಕುರಿತು, ಯಾದಗಿರಿ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಪ್ರತಿಕ್ರಿಯೆ ನೀಡಿದ್ದು, 13 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ. ಇದರಿಂದಾಗಿ ಬಾಲಕಿ 7 ತಿಂಗಳು ಗರ್ಭೀಣಿಯಾಗಿದ್ದಾಳೆ, ಆರೋಪಿ, ಬಾಲಕಿಯ ಸೋದರ ಮಾವ(ತಾಯಿಯ ತಮ್ಮ) ಮಲ್ಲಿಕಾರ್ಜುನ್ ನಗಲಾಪುರ ಎಂಬಾತನನ್ನು ಅರೆಸ್ಟ್ ಮಾಡಲಾಗಿದೆ. ಈ ಪ್ರಕರಣವನ್ನು ತುಂಬಾ ಗಂಭೀರವಾಗಿ ಪರಿಗಣಿಸಿ, ತನಿಖೆ ಮಾಡಲಾಗುತ್ತಿದೆ. ಇದರ ತನಿಖೆಯನ್ನು ಯಾದಗಿರಿ ಮಹಿಳಾ ಪೋಲಿಸ್ ಠಾಣೆಯ ಇನ್ಸ್ ಪೆಕ್ಟರ್ ಗೆ ವಹಿಸಲಾಗಿದೆ ಎಂದರು.

ಫೇಸ್‌ಬುಕ್‌ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿಲ್ಲ ಎಂದು ಅಪ್ರಾಪ್ತೆಯ ಕೊಲೆ

ಸಾರ್ವಜನಿಕರು ಶಾಲೆಗೆ ಹೋಗುವ ಮಕ್ಕಳ ಮೇಲೆ ನಿಗಾ ಇಡವೇಕು, ಅವರ ಬಗ್ಗೆ ವಿಶೆಷ ಕಾಳಜಿ ವಹಿಸಬೇಕೆಂದು ಸಲಹೆ ನೀಡಿದರು. ಜೊತಗೆ ಶಾಲೆಯಲ್ಲಿ ಮಕ್ಕಳಿಗೆ ಯಾರಾದ್ರು ತೊಂದ್ರೆ ಕೊಟ್ರೆ, ಲೈಂಗಿಕವಾಗಿ ಶೋಷಣೆ, ದೌರ್ಜನ್ಯ ಮಾಡಿದ್ರಾ ಅಂತ ಅವರಿಂದ ಕೇಳಬೇಕು. ಕೆಲವು ಮಕ್ಕಳು ತಂದೆ-ತಾಯಿ ಮುಂದೆ ಹೇಳಲು ಹೆದರ್ತಾರೆ, ಆಗ ಅವರೊಂದಿಗೆ ಸಲುಗೆಯಿಂದ ಮಾತನಾಡಿಸಿ ಕೇಳಬೇಕು. ಶಾಲೆಗೆ ಹೋಗುವಾಗ ವಾಹನದ ಡ್ರೈವರ್ ಹಾಗೂ ಕಂಡಕ್ಟರ್ ತೊಂದ್ರೆ ಕೊಟ್ರಾ ಅಂತ ಕೇಳಿ ತಿಳಿದುಕೊಳ್ಳಬೇಕು. ಮನೆಯಲ್ಲಿಯೂ ಬಲಾಕಿಯರ ಮೇಲೆ ಶೋಷಣೆ ನಡೆಯುತ್ತದೆ. ತಾಯಿಯ ಸಹೋದರ ಅಥವಾ ಇತರೆ ಸಂಬಂಧಿಗಳು ಮನೆಗೆ ಬಂದಾಗ ಯಾರಿಗೆ ಗೊತ್ತಾಗದಂತೆ ಮೈ, ಕೈ ಮುಟ್ಟಿ ತೊಂದ್ರೆ ಕೊಡ್ತಾರೆ ಎಂದು ಯಾದಗಿರಿ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಎಚ್ಚರಿಕೆಯ ಸಂದೇಶ ನೀಡಿದರು.

click me!