ಪ್ರೀತಿ ನೆಪದಲ್ಲಿ ಅಪ್ರಾಪ್ತೆ ಜತೆ ದೈಹಿಕ ಸಂಪರ್ಕ, ಗರ್ಭಿಣಿಯಾದ ಯುವತಿ!

By Kannadaprabha News  |  First Published Oct 20, 2022, 12:24 PM IST
  • ಪ್ರೀತಿ ನೆಪದಲ್ಲಿ ಅಪ್ರಾಪ್ತೆ ಜತೆ ದೈಹಿಕ ಸಂಪರ್ಕ, ಗರ್ಭಿಣಿ: ಬಂಧನ
  • ಬಾಳೆಹೊನ್ನೂರು ವ್ಯಾಪ್ತಿ ಗ್ರಾಮವೊಂದರ ಮಂಜುನಾಥ ಆರೋಪಿ
  • ಅಪ್ರಾಪ್ತೆ ದೂರಿನ ಮೇರೆ ಪೋಕ್ಸೋ ಕಾಯ್ದೆಯಡಿ ಯುವಕನ ಬಂಧನ

ಬಾಳೆಹೊನ್ನೂರು (ಅ.20): ಮದುವೆಯಾಗಿ ನಂಬಿಸಿ, ಅಪ್ರಾಪ್ತೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ, ಆಕೆ ಗರ್ಭವತಿಯಾಗಲು ಕಾರಣನಾದ ಆರೋಪದ ಮೇಲೆ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.

ಬಾಗಲಕೋಟೆಯಲ್ಲಿ ಮರ್ಯಾದಾ ಹತ್ಯೆ: ಅಪ್ರಾಪ್ತೆ ಮತ್ತು ಬಾಯ್‌ಫ್ರೆಂಡ್‌ ಕೊಲೆ ಮಾಡಿದ ಕುಟುಂಬ

Tap to resize

Latest Videos

ಬಾಳೆಹೊನ್ನೂರು ವ್ಯಾಪ್ತಿಯ ಗ್ರಾಮದವೊಂದರ ಮಂಜುನಾಥ್‌ (20) ಆರೋಪಿ. 17 ವರ್ಷದ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳನ್ನು ಮಂಜುನಾಥ್‌ 4 ವರ್ಷಗಳಿಂದ ಪ್ರೀತಿಸುತ್ತಿದ್ದನು. ಏಪ್ರಿಲ್‌ ತಿಂಗಳಲ್ಲಿ ಈ ಯುವಕ ಸದರಿ ಅಪ್ರಾಪ್ತೆಯನ್ನು ಭೇಟಿ ಮಾಡಿದ್ದು, ಮದುವೆ ಆಗುವುದಾಗಿ ನಂಬಿಸಿ, ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಇತ್ತೀಚೆಗೆ ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಕುಟುಂಬಸ್ಥರು ಅಪ್ರಾಪ್ತೆಯನ್ನು ವೈದ್ಯರ ಬಳಿ ತಪಾಸಣೆಗೆ ಕರೆತಂದು ತಪಾಸಣೆ ನಡೆಸಿದಾಗ ಆಕೆ ಗರ್ಭವತಿ ಆಗಿರುವುದು ಬೆಳಕಿಗೆ ಬಂದಿದೆ.

ಸಂತ್ರಸ್ತೆ ಈ ಬಗ್ಗೆ ಬಾಳೆಹೊನ್ನೂರು ಠಾಣೆಗೆ ದೂರು ನೀಡಿದ್ದು, ಅಪ್ರಾಪ್ತೆಯಾದ ನನ್ನನ್ನು ಮದುವೆ ಆಗುವುದಾಗಿ ನಂಬಿಸಿ, ದೈಹಿಕ ಸಂಪರ್ಕ ಬೆಳೆಸಿ ಗರ್ಭವತಿಯನ್ನಾಗಿ ಮಾಡಿದ್ದಾನೆ. ಆರೋಪಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾಳೆ. ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸಂತ್ರಸ್ತ ಅಪ್ರಾಪ್ತೆಯನ್ನು ಸಾಂತ್ವನ ಕೇಂದ್ರಕ್ಕೆ ದಾಖಲಿಸಲಾಗಿದೆ.

ಮಹಿಳೆಯೊಂದಿಗೆ ಅಸಭ್ಯ ವರ್ತನೆ: ರೌಡಿ ಬಂಧನ

ಇತ್ತೀಚೆಗೆ ಚಚ್‌ರ್‍ನಲ್ಲಿ ಮಹಿಳೆಗೆ ಚಾಕು ತೋರಿಸಿ ಅತ್ಯಾಚಾರಕ್ಕೆ ಯತ್ನಿಸಿ ಪರಾರಿಯಾಗಿದ್ದ ರೌಡಿಯೊಬ್ಬನನ್ನು ಅಶೋಕ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆನೇಪಾಳ್ಯದ ನಿವಾಸಿ ವಿಲಿಯಂ ಪ್ರಕಾಶ್‌ ಬಂಧಿತನಾಗಿದ್ದು, ಸೆ.10ರ ರಾತ್ರಿ ಚಚ್‌ರ್‍ನ ವಿದ್ಯುತ್‌ ದೀಪ ಆರಿಸಲು ತೆರಳಿದ್ದಾಗ ಸಂತ್ರಸ್ತೆಯೊಂದಿಗೆ ಆರೋಪಿ ಅಸಭ್ಯವಾಗಿ ವರ್ತಿಸಿದ್ದ. ಕೂಡಲೇ ಆಕೆ ರಕ್ಷಣೆಗೆ ಕೂಗಿಕೊಂಡಾಗ ಪ್ರಕಾಶ್‌ ಪರಾರಿಯಾಗಿದ್ದ. ಅದೇ ಚಚ್‌ರ್‍ ಆವರಣದಲ್ಲಿ ಅವರ ಕುಟುಂಬ ನೆಲೆಸಿದೆ. ಕ್ಷೌರಿಕ ವೃತ್ತಿ ಮಾಡಿಕೊಂಡು ಆನೇಪಾಳ್ಯದಲ್ಲಿ ನೆಲೆಸಿದ್ದ ರೌಡಿ ಪ್ರಕಾಶ್‌, ಎರಡು ಮದುವೆಗಳಾಗಿದ್ದ. ಆದರೆ ಕೌಟುಂಬಿಕ ಕಾರಣಕ್ಕೆ ಇಬ್ಬರು ಪತ್ನಿಯರು ಆತನಿಂದ ದೂರವಾಗಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

16ರ ಅಪ್ರಾಪ್ತೆಗೆ ತಾಳಿ ಕಟ್ಟಿದ 17ರ ಬಾಲಕ, ಮದುವೆಯಾದ ಬೆನ್ನಲ್ಲೇ ಅರೆಸ್ಟ್!

ಪ್ರಿನ್ಸಿಪಲ್‌ ಕಾರು ಚಾಲಕನಿಂದಲೇ 4 ವರ್ಷದ ಬಾಲಕಿ ಮೇಲೆ ರೇಪ್‌

ಹೈದರಾಬಾದ್‌: ಶಾಲೆಯ ಪ್ರಿನ್ಸಿಪಾಲ್‌ ಕಾರು ಚಾಲಕನೇ, ನಾಲ್ಕು ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿರುವ ಹೀನ ಕೃತ್ಯ ಇಲ್ಲಿನ ಶಾಲೆಯೊಂದರಲ್ಲಿ ನಡೆದಿದೆ. ಘಟನೆ ಸಂಬಂಧ ಕಾರು ಚಾಲಕನನ್ನು ಬಂಧಿಸಲಾಗಿದೆ. ಈ ಕೃತ್ಯಕ್ಕೆ ಶಾಲೆ ಪ್ರಾಂಶುಪಾಲನ ನಿಷ್ಕಾಳಜಿಯೂ ಕಾರಣವಾಗಿದ್ದು, ಚಾಲಕ ಹಾಗೂ ಪ್ರಾಂಶುಪಾಲರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

click me!