ಬಿಹಾರದಲ್ಲಿ ಮದುವೆ ಮನೆಗೆ ನುಗ್ಗಿದ ಯುವಕನೋರ್ವ ವಧುವಿಗೆ ಸಿಂಧೂರವಿಟ್ಟು, ಹೂವಿನ ಹಾರ ಹಾಕಿದ ಘಟನೆ ನಡೆದಿದೆ. ಇದಾದ ಬಳಿಕ ಎಲ್ಲರೂ ಸೇರಿ ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಹಾರದ(Bihar) ನಳಂದಾದ (Nalanda)ಮುಬಾರಕ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಯುವಕ ಹೇಳುವ ಪ್ರಕಾರ ಮದುವೆಯ ಹಿಂದಿನ ದಿನ ಯುವತಿಯೇ ಆತನಿಗೆ ಕರೆ ಮಾಡಿ ತನ್ನ ಮದುವೆಗೆ ಬಂದು ಮಂಟಪದಲ್ಲಿ ತನಗೆ ಸಿಂಧೂರವಿಟ್ಟು ಹೂ ಹಾರ ಹಾಕುವಂತೆ ಹೇಳಿದ್ದಳು ಎಂದು ಯುವಕ ಪೊಲೀಸರಿಗೆ ತಿಳಿಸಿದ್ದಾನೆ. ಮೂಲಗಳ ಪ್ರಕಾರ ವಧು ಹಾಗೂ ಯುವಕ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಯುವತಿಯ ಮನೆಯವರಿಗೆ ಇವರಿಬ್ಬರಿಗೆ ಮದುವೆ ಮಾಡುವುದು ಇಷ್ಟವಿರಲಿಲ್ಲ. ಹೀಗಾಗಿ ಇವರ ಪ್ರೇಮದ ವಿಚಾರ ತಿಳಿದ ಬಳಿಕ ಯುವತಿಯ ಪೋಷಕರು ತರಾತುರಿಯಲ್ಲಿ ಬೇರೆ ಗಂಡು ನೋಡಿ ಆತನೊಂದಿಗೆ ಯುವತಿಯ ವಿವಾಹ (wedding) ಮಾಡಲು ನಿರ್ಧರಿಸಿದ್ದರು.
ಪ್ರೀತಿಸಿದವನ ಬಿಟ್ಟು ಬೇರೆಯವನ ಮದುವೆಯಾಗಲು ಮನಸ್ಸಿಲ್ಲದ ಹುಡುಗಿ ತನ್ನ ಪ್ರಿಯತಮನಿಗೆ ಮದುವೆ ದಿನ ಬಂದು ಸಿಂಧೂರವಿಟ್ಟು (Sindhoor) ಹೂ ಹಾರ ಹಾಕುವಂತೆ ಕೇಳಿದ್ದಾಳೆ. ಪರಿಣಾಮ ಯುವಕ ಅದೇ ರೀತಿ ಮಾಡಿದ್ದು, ಈಗ ಆಸ್ಪತ್ರೆ ಸೇರುವಂತಾಗಿದೆ. ಹುಡುಗಿ ಕಡೆಯವರು ಹೊಡೆದ ರಭಸಕ್ಕೆ ಯುವಕನ ಮುಖ ಊದಿಕೊಂಡಿದ್ದು, ರಕ್ತಸಿಕ್ತ ಸ್ಥಿತಿಯಲ್ಲಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನು ಓದಿ: ಆಸ್ತಿಗಾಗಿ ಪ್ರೇಮಿ ಜೊತೆ ಸೇರಿ ಸಾಕಿದವರ ಕತ್ತು ಸೀಳಿದ ದತ್ತು ಪುತ್ರಿ, ಏಕಕಾಲದಲ್ಲಿ ಇಬ್ಬರನ್ನು ಪ್ರೀತಿಸ್ತಿದ್ಲು ಹುಡುಗಿ!
ಘಟನೆಯ ನಂತರ ವಧುವನ್ನು ಮುದೆಯಾಗಬೇಕಿದ್ದ ವರನ ಕಡೆಯವರು ಮದುವೆ ಮುಂದುವರಿಸಲು ನಿರಾಕರಿಸಿದ್ದಾರೆ. ಕಳೆದ ಒಂದು ವರ್ಷದಿಂದ ಮುಖೇಶ್ (Mukhesh)ಹಾಗೂ ಹುಡುಗಿ ಪ್ರೀತಿಸುತ್ತಿದ್ದು, ಬದುಕುವುದಾದರೆ ಇಬ್ಬರು ಒಟ್ಟಿಗೆ ಬದುಕುತ್ತೇವೆ ಸಾಯುವುದಾದರೆ ಇಬ್ಬರು ಒಟ್ಟಿಗೆ ಸಾಯುತ್ತೇವೆ ಎಂದು ಪ್ರತಿಜ್ಞೆ ಮಾಡಿದ್ದರು ಎನ್ನಲಾಗಿದೆ. ಆದರೆ ಯುವತಿ ಮನೆಯವರು ಒಪ್ಪದ ಕಾರಣ ಈ ಅನಾಹುತ ನಡೆದಿದೆ. ಘಟನೆಯಿಂದ ಮುಖೇಶ್ ತಲೆಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎರಡೂ ಕಡೆಯವರು ಪರಸ್ಪರ ಪ್ರಕರಣ ದಾಖಲಿಸಿಕೊಂಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನು ಓದಿ: Crime News: ಪತಿ, ಅತ್ತೆಗೆ ಮತ್ತು ಬರುವ ಔಷಧಿ ಕುಡಿಸಿ, ಚಿನ್ನಾಭರಣ ಕದ್ದು ಪ್ರೇಮಿಯೊಂದಿಗೆ ಮಹಿಳೆ ಪರಾರಿ
ಬಿಹಾರದ ಮುಂಗೇರ್‌ನಲ್ಲಿ ವಿಚಿತ್ರ ಪ್ರಕರಣವೊಂದು ಇತ್ತೀಚೆಗೆ ನಡೆದಿತ್ತು. ಮದುವೆಯಾದ ಕೇವಲ ಏಳು ದಿನಗಳ ನಂತರ, ನವವಿವಾಹಿತ ಮಹಿಳೆ ತನ್ನ ಪ್ರೇಮಿಯ ಕೈಯನ್ನು ಹಿಡಿದು ಪರಾರಿಯಾಗಿದ್ದಾಳೆ. ಆಶ್ಚರ್ಯವೆಂದರೆ ಈ ಇಡೀ ಘಟನೆ ನಡೆದಿರುವುದು ಗಂಡನ ಸಮ್ಮುಖದಲ್ಲಿ. ಅಸಹಾಯಕ ಪತಿ ಕೂಡ ಅವರನ್ನು ಹಿಂಬಾಲಿಸಲು ಪ್ರಯತ್ನಿಸಿದ್ದಾನೆ, ಆದರೆ ಅಷ್ಟರಲ್ಲಿ ಇಬ್ಬರೂ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಪ್ರಕರಣದ ತನಿಖೆಯಲ್ಲಿ ತೊಡಗಿದ್ದ ಪೊಲೀಸರು ನವ ವಧು ಮತ್ತು ಆಕೆಯ ಪ್ರಿಯಕರನನ್ನು ಹಿಡಿದಿದ್ದಾರೆ.
ವಧು ಗಂಡನಿಗೆ 'ಮಾರುಕಟ್ಟೆಗೆ ಬಾ, ನಾನು ಬಳೆ ಮತ್ತು ಕೆಲವು ಪರಿಕರಗಳನ್ನು ಖರೀದಿಸಬೇಕು ಎಂದಿದ್ದಾಳೆ. ಗಂಡ ಅವಳನ್ನು ಮಾರುಕಟ್ಟೆಗೆ ಕರೆದೊಯ್ದ. ಅಲ್ಲಿ ವಧು ತನ್ನ ಪತಿ ಬಳಿ, 'ನೀವೇ ನನಗೆ ಬಳೆಗಳನ್ನು ಆರಿಸಿ' ಎಂದು ಹೇಳಿದ್ದಾಳೆ. ಪತಿ ಬಳೆಯನ್ನು ಸೆಲೆಕ್ಟ್ ಮಾಡುತ್ತಿದ್ದಂತೆಯೇ ಅತ್ತ ತನಗಾಗಿ ಕಾಯುತ್ತಿದ್ದ ಪ್ರಿಯಕರನ ಕೈ ಹಿಡಿದು ವಧು ಓಡಿ ಹೋಗಿದ್ದಾಳೆ. ಪತಿಯೂ ಹಿಂಬಾಲಿಸಿದರಾದರೂ ಅಷ್ಟೊತ್ತಿಗಾಗಲೇ ಇಬ್ಬರೂ ಕಾರಿನಲ್ಲಿ ಕುಳಿತು ಪರಾರಿಯಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ