ಕೊಡಗು ಹೋಂ ಸ್ಟೇಯಲ್ಲಿ ಕರಾಳ ಘಟನೆ: ಸಿಬ್ಬಂದಿಯಿಂದಲೇ ವಿದೇಶಿ ಮಹಿಳೆ ಮೇಲೆ ರೇ**ಪ್

Published : Apr 22, 2026, 12:13 PM ISTUpdated : Apr 22, 2026, 12:31 PM IST
Homestay in coorg

ಸಾರಾಂಶ

ಕೊಡಗಿನ ಪ್ರವಾಸಿ ಹೋಂಸ್ಟೇಯೊಂದರಲ್ಲಿ ಅಮೆರಿಕ ಮೂಲದ ವಿದೇಶಿ ಮಹಿಳೆಯ ಮೇಲೆ ಸಿಬ್ಬಂದಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿ, ಸಂತ್ರಸ್ತೆಯನ್ನು ಕೂಡಿಹಾಕಿದ ಆರೋಪದ ಮೇಲೆ ಈಗ ಹೋಂಸ್ಟೇ ಮಾಲೀಕ ಮತ್ತು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕೊಡಗು ಹೋಂ ಸ್ಟೇನಲ್ಲಿ ಕರಾಳ ಘಟನೆ

ಕೊಡಗು: ಪ್ರವಾಸಿ ತಾಣ ಕೊಡಗಿನ ಹೋಂ ಸ್ಟೇಯೊಂದರಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ಅಮೆರಿಕಾ ಮೂಲದ ವಿದೇಶಿ ಮಹಿಳೆಯೊಬ್ಬಳ ಮೇಲೆ ಹೋಂಸ್ಟೇಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ಅತ್ಯಾ*ಚಾರವೆಸಗಿ ಆಕೆಯನ್ನು ಕೂಡಿ ಹಾಕಿ ದೌರ್ಜನ್ಯವೆಸಗಿದ್ದಾರೆ. ಅತ್ಯಾಚಾರವೆಸಗಿದ ಸಿಬ್ಬಂದಿ ಜಾರ್ಖಂಡ್ ಮೂಲದವ ಎಂದು ತಿಳಿದು ಬಂದಿದೆ. ಹೋಂ ಸ್ಟೇಯಲ್ಲಿ ವಿದೇಶಿ ಮಹಿಳೆ ಇದ್ದ ಕೊಠಡಿಗೆ ನುಗ್ಗಿದ ಆರೋಪಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಹೋಂ ಸ್ಟೇ ಮಾಲೀಕರಿಗೆ ತಿಳಿದಿತ್ತು. ಆದರೂ ಪ್ರಕರಣವನ್ನು ಮುಚ್ಚಿ ಹಾಕಿ ಆರೋಪಿಯನ್ನು ರಕ್ಷಿಸುವ ಪ್ರಯತ್ನ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಮೂರು ದಿನಗಳ ಕಾಲ ಕೊಠಡಿಯಲ್ಲಿ ಕೂಡಿ ಹಾಕಿದ್ದ  ಹೋಂ ಸ್ಟೇ ಮಾಲೀಕ

ಹೋಂ ಸ್ಟೇ ಮಾಲೀಕ ಸಂತ್ರಸ್ತ ಮಹಿಳೆಗೆ ಸಹಾಯ ಮಾಡುವ ಬದಲು ಆಕೆಯನ್ನು ಮೂರು ದಿನಗಳ ಕಾಲ ಕೊಠಡಿಯಲ್ಲಿ ಕೂಡಿ ಹಾಕಿದ್ದಾನೆ. ಆಕೆಯ ಬಳಿ ಇದ್ದ ಮೊಬೈಲ್ ಫೋನ್‌ ಅನ್ನು ಕಸಿದು ಕೊಂಡಿದ್ದಾನೆ. ಅಲ್ಲದೇ ಈ ವಿಚಾರವಾಗಿ ಪೊಲೀಸರಿಗೆ ದೂರು ನೀಡದಂತೆ ಬೆದರಿಕೆ ಹಾಕಿದ್ದಾನೆ ಎಂದು ವರದಿಯಾಗಿದೆ.

ನಂತರ ಅವರು ಮಹಿಳೆಯನ್ನು ಬಿಡುಗಡೆ ಮಾಡಿದ್ದು, ಮಹಿಳೆ ನಂತರ ಅಲ್ಲಿಂದ ಮೈಸೂರಿಗೆ ಬಂದಿದ್ದಾಳೆ. ಬಳಿಕ ಆಕೆ ಅಮೆರಿಕಾದ ಅಧಿಕಾರಿಗಳನ್ನು ಸಂಪರ್ಕಿಸಿದ್ದು, ಘಟನೆಯ ಬಗ್ಗೆ ಅವರಿಗೆ ಮಾಹಿತಿ ನೀಡಿದ್ದಾರೆ. ನಂತರ ಅಮೆರಿಕಾ ರಾಯಭಾರ ಕಚೇರಿಯಿಂದ ಬಂದ ಮಾಹಿತಿಯ ಮೇರೆಗೆ ಕರ್ನಾಟಕ ಪೊಲೀಸರು ಈ ಘಟನೆ ಸಂಬಂಧ ಎಫ್‌ಐಆರ್ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಕಸ ಎಸೆದು ಬರ್ತೀನಿ ಅಂತ ಹೇಳಿ ಕಟ್ಟಿಂಗ್ ಶಾಪ್‌ನವನ ಜೊತೆ ಓಡಿದ ಆಂಟಿ: ಗಂಡ ಮಕ್ಕಳಿಗೆ ನಿದ್ರೆ ಮಾತ್ರೆ ಹಾಕಿ ಎಸ್ಕೇಪ್

ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಇಬ್ಬರನ್ನು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಹಾಗೂ ಹೋಮ್‌ ಸ್ಟೇ ಮಾಲೀಕನನ್ನು ಬಂಧಿಸಲಾಗಿದ್ದು, ಇಬ್ಬರನ್ನು ಮೇ 3ರವರೆಗೆ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ. ಕೊಡಗು ಜಿಲ್ಲಾ ಎಸ್‌ಪಿ ಈ ಘಟನೆ ಹಾಗೂ ಆರೋಪಿಗಳ ಬಂಧನ ಆಗಿರುವ ಬಗ್ಗೆ ಖಚಿತಪಡಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: 1050 ಕೋಟಿ ಮೌಲ್ಯದ ಆಸ್ತಿ ಒಡೆಯನಾದ್ರು ವಿರಾಟ್‌ ಕೊಹ್ಲಿಗೆ ಒಂದು ಪೋಟೋ ಲೈಕ್ ಮಾಡುವ ಸ್ವಾತಂತ್ರ್ಯ ಇಲ್ವಾ? 

ಅಮೆರಿಕದ ವಾಷಿಂಗ್ಟನ್ ಮೂಲದ ಮಹಿಳೆ ಏಪ್ರಿಲ್ 19ರಂದು ಕೊಡಗಿನ ವಿರಾಜಪೇಟೆ ಸಮೀಪದ ಕುಟ್ಟಾ ಬಳಿ ಇರುವ ದೇವಿ ವಿಲ್ಲಾ ಎಂಬ ಹೋಂಸ್ಟೇನಲ್ಲಿ ವಾಸ್ತವ್ಯ ಹೂಡಿದ್ದರು. ಈ ವೇಳೆ ಅಲ್ಲಿ ಸಿಬ್ಬಂದಿಯಾಗಿದ್ದ ಜಾರ್ಖಂಡ್ ಮೂಲದ ವೃಜೇಶ್ ಕುಮಾರ್ ಎಂಬಾತ ಆ ವಿದೇಶಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಈ ಸಂಬಂಧ ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವೃಜೇಶ್ ಕುಮಾರ್ ಹಾಗೂ ಹೋಂಸ್ಟೇ ಮಾಲೀಕ ವಿಶಾಲ್ ಎಂಬಾತನನ್ನು ಬಂಧಿಸಲಾಗಿದೆ.

 

 

ಘಟನೆಗೆ ಸಂಬಂಧಿಸಿದಂತೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ಹೋಂ ಸ್ಟೇ ಗಳಿಗೆ ಈಗಾಗಲೇ ಎಸ್ಓಪಿ ನೀಡಲಾಗಿದೆ. ಅದರ ಪ್ರಕಾರ ಹೋಂಸ್ಟೇ ಮಾಲೀಕರು ನಡೆದುಕೊಳ್ಳಬೇಕು. ಅವರಿಗೆ ಲೈಸೆನ್ಸ್ ಇದೆಯಾ ಇಲ್ವಾ ಹೋಂಸ್ಟೇ ಮಾಡಬೇಕಾದರೆ ಏನೇನು ಮಾಡಬೇಕು ಎಲ್ಲದರ ಬಗ್ಗೆ ಸುತ್ತೋಲೆ ಇದೆ. ಅದನ್ನ ಮೀರಿ ಇಂಥ ಘಟನೆಗಳಾದಾಗ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ. ಘಟನೆ ಗೊತ್ತಾಗ್ತಿದ್ದ ಹಾಗೆ ಪೊಲೀಸರು ಅವರನ್ನು ಅರೆಸ್ಟ್ ಮಾಡಿದ್ದಾರೆ.

ಕಾನೂನು ಪ್ರಕಾರ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತಾರೆ. ಇದು ರಾಜ್ಯಕ್ಕಾಗಲೀ ಸಮಾಜಕ್ಕಾಗಲೀ ಒಳ್ಳೆಯ ಸಂದೇಶ ಕೊಡುವ ಘಟನೆ ಅಲ್ಲ. ಹೊರಗಿನಿಂದ ಬಂದವರ ಮೇಲೆ ಇತರ ಆದಾಗ ಏನು ಸಂದೇಶ ಹೋಗುತ್ತೆ. ನಮ್ಮ ದೇಶದ ಬಗ್ಗೆ ಎಂಥಾ ಸಂದೇಶ ಹೋಗುತ್ತೆ. ಇಂಥ ವಿಚಾರದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಘಟನೆ ಆದಮೇಲೆ ಮುಚ್ಚಿ ಹಾಕುವುದಕ್ಕೆ ಪ್ರಯತ್ನ ಮಾಡಿದ್ದಾರೆ ಅಂತ ಅನ್ಸುತ್ತೆ. ಪೊಲೀಸರಿಗೆ ಗೊತ್ತಾದ ತಕ್ಷಣ ಅವರನ್ನ ಅರೆಸ್ಟ್ ಮಾಡಿದ್ದಾರೆ. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿ ಜಾರ್ಖಂಡ್ ಅವನು ಅಂತ ಹೇಳ್ತಿದ್ದಾರೆ ಹೆಚ್ಚಿನ ವಿವರಗಳು ಬರಬೇಕಿದೆ ಎಂದು ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
Belagavi: ಸೀರೆ ಬದಲು ನೈಟಿ ಧರಿಸಿದ್ದಕ್ಕೆ ಪತ್ನಿಗೆ ಬೆಂಕಿ ಹಚ್ಚಿದ ಕ್ರೂರ ಪತಿರಾಯ