
ಪುಣೆ: ಮಹಾರಾಷ್ಟ್ರದ ಲೋಹಗಡ ಕೋಟೆಯಲ್ಲಿ ನಡೆದ ಉದ್ಯಮಿ ಕೇತನ್ ಅಗರ್ವಾಲ್ ಅವರ ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಮದುವೆಯಾಗುವ ಇಷ್ಟವಿಲ್ಲದಿದ್ದರೂ, ಖುಷಿಖುಷಿಯಿಂದ ಎಂಗೇಜ್ಮೆಂಟ್ ಮಾಡಿಕೊಂಡು, ಭಾವಿ ಪತಿ ನೀಡಿದ್ದ ಸರ್ಪ್ರೈಸ್ ಗಿಫ್ಟ್ ಅನ್ನೂ ಸ್ವಲ್ಪವೂ ಮುಖದಲ್ಲಿ ಡೌಟೇ ಬರದ ಹಾಗೆ ಖುಷಿಯಿಂದ ಸ್ವೀಕರಿಸಿ ಕೊನೆಗೆ ಲವರ್ ಚೇತನ್ ಜೊತೆಗೂಡಿ ಕೊಲೆ ಮಾಡಿರುವ ಗಂಭೀರ ಆರೋಪವನ್ನು ಎದುರಿಸುತ್ತಿದ್ದಾಳೆ ಸಿಯಾ. ಏನೂ ತಪ್ಪು ಮಾಡದ ಅಮಾಯಕ ಕೇತನ್ ಕೊಲೆಯಾಗಿದ್ದಾನೆ. ಸಿಯಾ ಹಾಗೂ ಅವಳ ಲವರ್ ಚೇತನ್ಗೆ ಘೋರಾತಿಘೋರ ಶಿಕ್ಷೆ ಆಗಬೇಕು ಎನ್ನುವುದು ಎಲ್ಲರ ಆಗ್ರಹ.
ಕಳೆದ ವರ್ಷ ಸೋನಂ ರಘುವಂಶಿ ಎಂಬಾಕೆ ಕೂಡ ಇದೇ ರೀತಿ ಪತಿಯನ್ನು ಕೊಲೆ ಮಾಡಿರುವ ಆರೋಪ ಎದುರಿಸುತ್ತಿದ್ದಾಳೆ. ಇಷ್ಟವಿಲ್ಲದೇ ಮದುವೆಯಾಗಿ ಕೊನೆಗೆ ಲವರ್ ಜೊತೆಗೂಡಿ ಹನಿಮೂನ್ನಲ್ಲಿಯೇ ಪತಿಯನ್ನು ಮುಗಿಸಿದ್ದಾಳೆ.ಆದರೆ ಅವಳಿಗೆ ಇದಾಗಲೇ ಕೋರ್ಟ್ ಜಾಮೀನು ಕೊಟ್ಟಿದ್ದು, ಇದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಸಿಯಾ ಪ್ರಕರಣದಲ್ಲಿಯೂ ಇದೇ ರೀತಿ ಆಗದೇ ಇರಲಿ, ನೊಂದ ಕುಟುಂಬಕ್ಕೆ ಈ ರೀತಿ ನ್ಯಾಯಾಲಯಗಳು ಮಾಡಿ ಇನ್ನಷ್ಟು ನೋವು ಕೊಡದೇ ಇರಲಿ ಎನ್ನುವುದು ಎಲ್ಲರ ಆಶಯವಾಗಿದೆ.
ಇದರ ನಡುವೆಯೇ, ತಮ್ಮ ಮಗಳು ಇಂಥದ್ದೊಂದು ಕ್ರೂರ ಕೃತ್ಯಕ್ಕೆ ಕೈಹಾಕುತ್ತಾಳೆ ಎಂದು ಕನಸಿನಲ್ಲಿಯೂ ಊಹಿಸದ ಸಿಯಾಳ ಅಪ್ಪ-ಅಮ್ಮ ಜರ್ಜರಿತರಾಗಿ ಹೋಗಿದ್ದಾರೆ. ಅಷ್ಟಕ್ಕೂ ಹೀಗೆ ಮಾಡುತ್ತಾಳೆ ಎಂದು ಸಂಸ್ಕಾರ ಇರುವ ಯಾವ ಅಪ್ಪ-ಅಮ್ಮ ತಾನೇ ನಂಬಿಯಾರು? ಅವರಿಗೂ ತಮ್ಮ ಮಗಳು ತಪ್ಪಿತಸ್ಥಳು ಎಂದು ತಿಳಿದಿದೆ. ಆದರೆ ಕಾನೂನಿನ ದೃಷ್ಟಿಯಲ್ಲಿ ಅಪರಾಧಿ ಆಗುವವರೆಗೂ ಆಕೆ ಆರೋಪಿಯಷ್ಟೇ ಅಲ್ಲವೇ, ಆದರೂ ತಮ್ಮ ಮಗಳು ಅಪರಾಧಿ ಎಂದು ಸಾಬೀತಾದರೆ ಅವಳನ್ನು ಅದೇ ಕೋಟೆಯ ಮೇಲಿನಿಂದಲೇ ತಳ್ಳಿ ಸಾಯಿಸಿ ಎಂದು ಅಪ್ಪ-ಅಮ್ಮ ಮಾಧ್ಯಮಗಳ ಎದುರು ಹೇಳಿದ್ದಾರೆ.
ಕೇತನ್ ನನಗೆ ಮಗನಿದ್ದಂತೆ. ಈ ದುರಂತ ಘಟನೆಯು ನಮ್ಮ ಎರಡೂ ಕುಟುಂಬಗಳನ್ನು ಸಂಪೂರ್ಣವಾಗಿ ಛಿದ್ರಗೊಳಿಸಿದೆ. ನಾವೆಲ್ಲರೂ ಅತ್ಯಂತ ಸಂಭ್ರಮದಿಂದ ಮದುವೆಗೆ ತಯಾರಿ ನಡೆಸುತ್ತಿದ್ದೆವು. ಇಂತಹ ಘೋರ ಕೃತ್ಯ ನಡೆದಿದೆ ಎಂಬುದನ್ನು ಇಂದಿಗೂ ನಮಗೆ ನಂಬಲು ಸಾಧ್ಯವಾಗುತ್ತಿಲ್ಲ. ನನ್ನ ಮಗಳು ಇಂಥದ್ದೊಂದು ಭೀಕರ ಕೃತ್ಯ ಮಾಡಿದ್ದಾಳೆ ಎಂದರೆ ನಂಬಲು ಆಗುತ್ತಲೇ ಇಲ್ಲ ಎಂದಿರುವ ಸಿಯಾ ತಂದೆ ಪ್ರವೀಣ್ ಗೋಯಲ್, ಅವಳು ಇದು ಮಾಡಿದ್ದೇ ಹೌದಾದರೆ ಅವಳಿಗೂ ಅದೇ ರೀತಿಯ ಶಿಕ್ಷೆ ಆಗಬೇಕು, ಕೋಟೆಯ ಮೇಲಿನಿಂದ ಅವಳನ್ನೂ ತಳ್ಳಿ ಸಾಯಿಸಿಬಿಡಿ ಎಂದು ತಮ್ಮ ಮನಸ್ಸನ್ನು ಕಲ್ಲು ಮಾಡಿಕೊಂಡು ಕಣ್ಣೀರಾಗಿದ್ದಾರೆ.
ಕೇತನ್ ಕುಟುಂಬಸ್ಥರು ಗೋಯಲ್ ಪರಿವಾರದ ಮೇಲೆಯೇ ಮಾಡಿದ್ದ ಆರೋಪಗಳನ್ನು ಪ್ರವೀಣ್ ನಿರಾಕರಿಸಿದ್ದಾರೆ. ಸಿಯಾಳಿಗೆ ಬೇರೊಬ್ಬನ ಜೊತೆ ಅಕ್ರಮ ಸಂಬಂಧ ವಿಷಯ ತಮಗೆ ಮೊದಲೇ ತಿಳಿದಿತ್ತು ಎಂಬುದು ಸುಳ್ಳು ಎಂದಿದ್ದಾರೆ. ನನ್ನ ಮಗಳು ಅತ್ಯಂತ ಸರಳ ಹುಡುಗಿಯಾಗಿದ್ದಳು, ಆಕೆ ಇಂತಹ ಕೆಲಸ ಮಾಡುತ್ತಾಳೆ ಎಂದು ನಾವು ಊಹಿಸಿರಲಿಲ್ಲ. ನಾವೇನನ್ನೂ ಮರೆಮಾಚಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಾನೊಬ್ಬಳು ಅಮ್ಮನಾಗಿ ಇದೇ ಮಾತನ್ನು ಹೇಳುತ್ತೇನೆ. ಅಪರಾಧ ಸಾಬೀತಾದರೆ ಅವರಿಗೆ ಮರಣದಂಡನೆ ಆಗಬೇಕು. ಆಕೆಯನ್ನು ಗಲ್ಲಿಗೇರಿಸಿ ಎಂದು ಸಿಯಾ ಅಮ್ಮ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ