ಕರ್ನಾಟಕದಲ್ಲಿ ಅಡಗಿದ್ದ ಐಸಿಸ್‌ ಉಗ್ರ ನಬೀಲ್‌ ತಮಿಳ್ನಾಡಲ್ಲಿ ಬಂಧನ

By Kannadaprabha News  |  First Published Sep 7, 2023, 1:00 AM IST

ಕೇರಳದಲ್ಲಿ ಉಗ್ರ ಕೃತ್ಯಗಳನ್ನು ಎಸಗಲು ನಡೆಸಿದ್ದ ಪಿತೂರಿಯನ್ನು ಬಯಲು ಮಾಡಿದ ಬಳಿಕ ತ್ರಿಶೂರ್‌ ಮೂಲದ ನಿಷೇಧಿತ ಉಗ್ರ ಸಂಘಟನೆಯ ನಾಯಕ ಸೈಯದ್‌ ನಬೀಲ್‌ ಕಳೆದ ಹಲವು ವಾರಗಳಿಂದ ಕರ್ನಾಟಕ ಹಾಗೂ ತಮಿಳುನಾಡಿನ ಹಲವು ಪ್ರದೇಶಗಳಲ್ಲಿ ತಲೆಮರೆಸಿಕೊಂಡಿದ್ದ. ರಾಷ್ಟ್ರೀಯ ತನಿಖಾ ದಳದ ಪಲಾಯನವಾದಿಗಳ ಟ್ರ್ಯಾಕ್‌ ತಂಡ ಹುಡುಕಿ ಬಂಧಿಸಿದೆ. 

ನವದೆಹಲಿ(ಸೆ.07):  ಕರ್ನಾಟಕದ ಹಲವು ಭಾಗಗಳಲ್ಲಿ ತಲೆ ಮರೆಸಿಕೊಂಡಿದ್ದ ಹಾಗೂ ವಿದೇಶಕ್ಕೆ ಪರಾರಿಯಾಗಲು ಸಿದ್ಧತೆ ನಡೆಸಿದ್ದ ತ್ರಿಶೂರ್‌ ಮಾಡೆಲ್‌ನ ಐಸಿಸ್‌ ಉಗ್ರ ಸಂಘಟನೆಯ ನಾಯಕ ಸೈಯದ್‌ ನಬೀಲ್‌ನನ್ನು ರಾಷ್ಟ್ರೀಯ ತನಿಖಾ ದಳ ಚೆನ್ನೈನಲ್ಲಿ ಬಂಧಿಸಿದೆ.

ಕೇರಳದಲ್ಲಿ ಉಗ್ರ ಕೃತ್ಯಗಳನ್ನು ಎಸಗಲು ನಡೆಸಿದ್ದ ಪಿತೂರಿಯನ್ನು ಬಯಲು ಮಾಡಿದ ಬಳಿಕ ತ್ರಿಶೂರ್‌ ಮೂಲದ ನಿಷೇಧಿತ ಉಗ್ರ ಸಂಘಟನೆಯ ನಾಯಕ ಸೈಯದ್‌ ನಬೀಲ್‌ ಕಳೆದ ಹಲವು ವಾರಗಳಿಂದ ಕರ್ನಾಟಕ ಹಾಗೂ ತಮಿಳುನಾಡಿನ ಹಲವು ಪ್ರದೇಶಗಳಲ್ಲಿ ತಲೆಮರೆಸಿಕೊಂಡಿದ್ದ. ರಾಷ್ಟ್ರೀಯ ತನಿಖಾ ದಳದ ಪಲಾಯನವಾದಿಗಳ ಟ್ರ್ಯಾಕ್‌ ತಂಡ ಹುಡುಕಿ ಬಂಧಿಸಿದೆ. 

Tap to resize

Latest Videos

ಸನ್ನಡತೆ ಅಡಿ ಸ್ಫೋಟ ರೂವಾರಿ ಉಗ್ರನ ಬಿಡುಗಡೆಗೆ ಸರ್ಕಾರ ಸಿದ್ಧತೆ!

ಈತ ನಕಲಿ ದಾಖಲೆಗಳನ್ನು ಬಳಸಿಕೊಂಡು ನೇಪಾಳಕ್ಕೆ ಹೋಗುವ ಮೂಲಕ ದೇಶಬಿಟ್ಟು ಓಡಿಹೋಗಲು ಯೋಜನೆ ರೂಪಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಗ್ರ ಕೃತ್ಯಕ್ಕೆ ಸಂಚು ರೂಪಿಸಿದ್ದ ಆರೋಪದಲ್ಲಿ ಜು.11ರಂದು ಯುಎಪಿಎ ಅಡಿ ಪ್ರಕರಣ ದಾಖಲಿಸಿದ್ದ ಎನ್‌ಐಎ ತನಿಖೆ ಆರಂಭಿಸಿತ್ತು.

click me!