ಕಾರಿನಲ್ಲಿ ಬಂದು ಗುದ್ದೋಡಿದ ಗಿಚ್ಚಿ ಗಿಲಿಗಿಲಿ ಚಂದ್ರಪ್ರಭ: ಮಾನವೀಯತೆಗೂ ಕಾರು ನಿಲ್ಲಿಸದೇ ಪರಾರಿ

By Sathish Kumar KH  |  First Published Sep 6, 2023, 10:54 AM IST

ಕನ್ನಡ ಕಿರುತೆರೆಯ ಹಾಸ್ಯನಟ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಚಂದ್ರಪ್ರಭ ಅವರು ಕಾರಿನಲ್ಲಿ ಬಂದು ಬೈಕ್‌ ಸವಾರನಿಗೆ ಗುದ್ದಿ, ಪರಾರಿ ಆಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.


ಚಿಕ್ಕಮಗಳೂರು (ಸೆ.06): ಮಜಾ ಭಾರತ ಹಾಗೂ ಗಿಚ್ಚಿ ಗಿಲಿಗಿಲಿ ಸೀಸನ್ 1 ಮತ್ತು ಸೀಸನ್ 2 ಕಾಮಿಡಿ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿ ಸೀಸನ್ 2 ವಿನ್ನರ್ ಟ್ರೋಫಿ ಪಡೆದಿರುವ ಚಂದ್ರಪ್ರಭ ಅವರು ಚಿಕ್ಕಮಗಳೂರು ಬಸ್‌ ನಿಲ್ದಾಣದ ಬಳಿ ಕಾರಿನಲ್ಲಿ ಹೋಗುತ್ತಿದ್ದ ವೇಳೆ ಬೈಕ್‌ ಸವಾರನಿಗೆ ಗುದ್ದಿದ್ದಾರೆ. ಈ ವೇಳೆ ಮಾನವೀಯತೆಗೂ ಕಾರನ್ನು ನಿಲ್ಲಿಸದೇ ಪರಾರಿ ಆಗಿದ್ದು, ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಚಿಕ್ಕಮಗಳೂರು ನಗರದಲ್ಲಿ ಹಿಟ್ ಅಂಡ್ ರನ್ ಆಕ್ಸಿಡೆಂಟ್ ಮಾಡಲಾಗಿದೆ. ನಗರದ ಸರ್ಕಾರಿ ಬಸ್ ನಿಲ್ದಾಣದ ಬಳಿ ಬೈಕಿಗೆ ಗುದ್ದಿ ಕಾರು ಎಸ್ಕೇಪ್ ಆಗಿದೆ. ಹಿಟ್ ಅಂಡ್ ರನ್ ಮಾಡಿ ಪರಾರಿ ಆಗಿದ್ದು, ಗಿಚ್ಚಿ ಗಿಲಿ-ಗಿಲಿ ಕಾಮಿಡಿ ಶೋ ನಟ ಚಂದ್ರ ಪ್ರಭಗೆ ಸೇರಿದ ಕಾರು ಎಂದು ಗುರುತಿಸಲಾಗಿದೆ. KA 51 MD 9552 ರಿಜಿಸ್ಟ್ರೇಷನ್ ನಂಬರ್ ಹೊಂದಿರುವ ಕಾರು ಇದಾಗಿದೆ. ಅಪಘಾತ ಮಾಡಿದ ನಂತರ ಮಾನವೀಯತೆಗೂ ಕಾರು ನಿಲ್ಲಿಸದೆ ಚಾಲಕ ಪರಾರಿ ಆಗಿದ್ದಾರೆ. ಇನ್ನು ಅಪಘಾತ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

Tap to resize

Latest Videos

undefined

ಗುಟ್ಟಾಗಿ ಮದುವೆ ಆದ ಗಿಚ್ಚಿ ಗಿಲಿಗಿಲಿ ಚಂದ್ರಪ್ರಭ; ಹೆಂಡ್ತಿ ಸುಂದರವಾಗಿದ್ರೂ ಮದ್ವೆ ಆಗಿಲ್ಲ ಅನ್ನೋದು ಯಾಕೆ?

ಚಿಕ್ಕಮಗಳೂರು ಬಸ್‌ ನಿಲ್ದಾಣದ ಬಳಿ ಕಾರು ಗುದ್ದಿದ ಬೆನ್ನಲ್ಲೇ ಬೈಕ್‌ ಅಪಘಾತದಲ್ಲಿ ರಸ್ತೆಗೆ ಬಿದ್ದ ಮಾಲತೇಶ್‌ ಗಂಭೀರ ಗಾಯಗೊಂಡಿದ್ದಾನೆ. ಗಾಯಾಳು ಮಾಲತೇಶ್‌ ಚಿಕ್ಕಮಗಳೂರು ತಾಲೂಕಿನ ನಾಗೇನಹಳ್ಳಿ ನಿವಾಸಿ ಆಗಿದ್ದಾನೆ. ಈತ ನಗರದಲ್ಲಿ ಕೆಲಸ ಮುಗಿಸಿ ಮನೆಗೆ ಹೋಗುವಾಗ ಅಪಘಾತ ನಡೆದಿದೆ. ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳು ಮಾಲ್ತೇಶ್ ಹಾಸನಕ್ಕೆ ರವಾನೆ ಮಾಡಲಾಗಿದೆ. ಸಂಬಂಧಿಕರಿಂದ ಚಿಕ್ಕಮಗಳೂರು ನಗರದ ಟ್ರಾಫಿಕ್ ಠಾಣೆಗೆ ದೂರು ದಾಖಲು ಮಾಡಲಾಗಿದೆ.

ಶೂಟಿಂಗ್‌ ಇರೋದ್ರಿಂದಾಗಿ ನಾಳೆ ವಿಚಾರಣೆಗೆ ಹಾಜರು:  ಇನ್ನು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾದ ಬೆನ್ನಲ್ಲಿಯೇ ಹಾಸ್ಯನಟ ಚಂದ್ರಪ್ರಭನನ್ನು ಸಂಪರ್ಕ ಮಾಡಿದ ಪೊಲೀಸರು, ವಿಚಾರಣೆಗೆ ಬರುವಂತೆ ನೋಟಿಸ್‌ ನೀಡಿದ್ದಾರೆ. ಇಂದು ನನಗೆ ಶೂಟಿಂಗ್‌ ಇದ್ದು, ನಾಳೆ ಪೊಲೀಸ್‌ ಠಾಣೆಗೆ ವಿಚಾರಣೆಗೆ ಬರುವುದಾಗಿ ತಿಳಿಸಿದ್ದಾರೆ. ಆದರೆ, ಒಬ್ಬ ಖ್ಯಾತ ನಟನಾಗಿದ್ದರೂ ಆಕಸ್ಮಿಕವಾಗಿ ಸಂಭವಿಸಿದ ಅಪಘಾತದ ಘಟನೆಯ ನಂತರ ಬೈಕ್‌ ಸವಾರನನ್ನು ನೋಡುವ ಹಾಗೂ ಅವರನ್ನು ಆಸ್ಪತ್ರೆಗೆ ಸೇರಿಸುವ ಮಾನವೀಯತೆಯನ್ನೂ ತೋರದೆ ಹೋಗಿರುವುದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. 

ವಯಸ್ಸಿನ ಬಗ್ಗೆ ಸುಳ್ಳು ಹೇಳಿ ಮದ್ವೆಯಾದ ಚಂದ್ರಪ್ರಭ!  ಮಜಾ ಭಾರತ ಹಾಗೂ ಗಿಚ್ಚಿ ಗಿಲಿಗಿಲಿ ಸೀಸನ್ 1 ಮತ್ತು ಸೀಸನ್ 2 ಕಾಮಿಡಿ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿ ಸೀಸನ್ 2 ವಿನ್ನರ್ ಟ್ರೋಫಿ ಪಡೆದಿರುವ ಚಂದ್ರಪ್ರಭಾ ಸೈಲೆಂಟ್ ಆಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಅಷ್ಟಕ್ಕೂ ಚಂದ್ರಪ್ರಭಾ ವಯಸ್ಸು ಎಷ್ಟು ಚಂದ್ರಪ್ರಭಾ ಹೇಗೆ ಭಾರತಿ ಪ್ರಿಯಾ ಭೇಟಿ ಮಾಡಿದರು ಎಂದು ಪ್ರತಿಯೊಂದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. 'ಮಲೆ ಮಹಾದೇಶ್ವರ ದೇವಸ್ಥಾನಕ್ಕೆ ದೇವರ ದರ್ಶನ ಮಾಡಲು ಹೋಗಿ ದೇವರೆ ದರ್ಶನ ಆಯ್ತು. ಚೆನ್ನಾಗಿದ್ದಳು ಎಂದು ವಾಟ್ಸಪ್‌ನಲ್ಲಿ ಮೆಸೇಜ್ ಮಾಡಿದೆ. ನನ್ನ ಹಾಡು ನೋಡಿ ಇಷ್ಟ ಪಟ್ಟು ಐ ಲೈಕ್‌ ಯು ಎಂದು ಹೇಳಿದ್ದಳು. ಮೊಬೈಲ್ ನಂಬರ್ ಸಿಕ್ಕಿದ್ದು ಫೇಸ್‌ ಬುಕ್‌ನಲ್ಲಿ ಆಮೇಲೆ ಆಗಿದ್ದು ಎಲ್ಲಾ ಮಾಮುಲಿ. ನನ್ನ ಹಾಡಿಗೆ ಅವರು ಸಿಕ್ಕಾಪಟ್ಟೆ ಫ್ಯಾನ್. ಅವರು ಲೈಕ್ ಸೆಂಡ್ ಮಾಡಿದ್ದರೂ ನಾನು ಲವ್ ಯು ಎಂದು ಹೇಳಿದೆ.

ನಕಲಿ ಆಧಾರ್ ಕಾರ್ಡ್‌ ಬಳಸಿ ವಯಸ್ಸು ನಂಬಿಸಿ ಮದ್ವೆ ಆದ ಗಿಚ್ಚಿ ಗಿಲಿಗಿಲಿ ಚಂದ್ರಪ್ರಭ; ಸತ್ಯ ಬಯಲು!

ನಕಲಿ ಆಧಾರ್‌ಕಾರ್ಡ್‌ ಮಾಡಿಸಿ ಮೋಸ: ಅಣ್ಣ ಅಂತ ಹೇಳುತ್ತೀನಿ ಅಂದ್ರು ಬೇಡ ಅಂತ ಹೇಳಿ ಒತ್ತಾಯ ಮಾಡಿ ಲವ್ ಮಾಡಿಸಿದೆ. ಎಲ್ಲರೂ ರೇಗಿಸುತ್ತಿದ್ದರು ಅದನ್ನು ನೋಡಿ ನನ್ನ ವಯಸ್ಸಿನ ಮೇಲೆ ಆಕೆಗೆ ಡೌಟ್ ಆಯ್ತು ಅವರ ಅಪ್ಪ ಕೂಡ ಬೇಡ ಕಣ್ಣಮ್ಮ ಹುಡುಗ ನನ್ನ ವಯಸ್ಸು ಎಂದ ಹೇಳಿದರು. ಮದುವೆ ಮಾಡಿಕೊಳ್ಳೋಣ ಎಂದು ದಿನಾಂಕ ಕೂಡ ಫಿಕ್ಸ್ ಮಾಡಿಸಿದೆ. ಆದರೆ ಅವರು ಬೇಡ ಎನ್ನುತ್ತಿದ್ದರಿಂದ ಒಂದು ಐಡಿಯಾ ಮಾಡಿದೆ. ಜನರು ಆಧಾರ್ ಕಾರ್ಡ್‌ ನಂಬುತ್ತಾರೆಂದು, ಸುಳ್ಳು ಆಧಾರ್ ಕಾರ್ಡ್ ಮಾಡಿಸಿದೆ. ನನಗೆ 25 ವರ್ಷ ಅಂತ ಸುಳ್ಳು ಮಾಡಿಸಿ ಅವರ ಅಪ್ಪನಿಗೆ ತೋರಿಸಿದೆ. ಹೆಚ್ಚಿಗೆ ತೋರಿಸಿದರೆ ಚರ್ಚೆ ಆಗುತ್ತೆ ಅಂತ ರಪ್ ಅಂತ ಮದುವೆ ಮಾಡಿಕೊಂಡೆನು ಎಂದು ತಿಳಿಸಿದರು.

click me!