ಸಿಐಡಿ ಪೊಲೀಸಪ್ಪನ ಕಾಮಪುರಾಣ, ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ಪತ್ನಿ: ಶತ್ರುವಿಗೂ ಬೇಡ ಇಂಥ ಗಂಡ

By Sathish Kumar KH  |  First Published Sep 6, 2023, 5:29 PM IST

ಪೊಲೀಸ್‌ ಇನ್ಸ್‌ಪೆಕ್ಟರ್‌ ಎಂದು ಭರ್ಜರಿ ವರದಕ್ಷಿಣೆ ಪಡೆದು ಮದುವೆಯಾದ ಭೂಪ, ಹೆಂಡ್ತಿ ಬಿಟ್ಟು ಎರಡೆರಡು ಅನೈತಿಕ ಸಂಬಂಧ ಬೆಳೆಸಿದೆ. ಪತ್ನಿಗೆ ಕೊಟ್ಟ ಕಿರುಕುಳ ಮಾತ್ರ ಅಷ್ಟಿಸ್ಟಲ್ಲ.


ಬೆಂಗಳೂರು (ಸೆ.06): ಪೊಲೀಸ್ ಕೆಲಸವೆಂದರೇ ಹಾಗೆ, ಕುಟುಂಬದೊಟ್ಟಿಗೆ ಸಮಯ ಕಳೆಯುವುದಕ್ಕೂ ಸಾಧ್ಯವಿಲ್ಲ ಎಂಬಕೊರಗು ಕೇಳಿಬರುತ್ತದೆ. ಆದರೆ, ಅಪರಾಧ ತನಿಖಾ ಇಲಾಖೆಯಲ್ಲಿ (ಸಿಐಡಿ) ಮಾಡೋಕೆ ಮೈತುಂಬಾ ಕೆಲಸವಿದ್ದರೂ ಇಲ್ಲೊಬ್ಬ ಸಿಐಡಿ ಇನ್ಸ್‌ಪೆಕ್ಟರ್‌, ಕುಟುಂಬದ ಜೊತೆಗೆ ಎರಡೆರಡು ಅನೈತಿಕ ಸಂಬಂಧವನ್ನು ಮೆಂಟೇನ್‌ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪೊಲೀಸಪ್ಪನ ಕೃಷ್ಣಲೀಲೆ ನೋಡಲಾರದೇ ಸ್ವತಃ ಪತ್ನಿಯೇ ಗಂಡನ ವಿರುದ್ಧ ದೂರು ನೀಡಿದ್ದಾರೆ.

ಹೌದು, ಸಿಐಡಿ ಇನ್ಸ್ ಪೆಕ್ಟರ್ ವಿರುದ್ದ ಪತ್ನಿಯಿಂದ ದೂರು ನೀಡಿದ್ದಾಳೆ. ಪತ್ನಿಗೆ ತಿಳಿಯದಂತೆ ಬೇರೆ ಮಹಿಳೆಯರ ಜೊತೆ ಸಲುಗೆ ಹೊಂದಿರೋ ಆರೋಪ ಮಾಡಿದ್ದಾರೆ. ಹೆಂಡತಿಗೆ ಹಲ್ಲೆ ಮಾಡಿ ಬೇರೆ ಮಹಿಳೆಯರ ಜೊತೆ ಸಲುಗೆಯಿಂದ ಇದ್ದಾರೆ ಎಂದು ಸಿಐಡಿ ಇನ್ಸ್ ಪೆಕ್ಟರ್ ಮಲ್ಲಿಕಾರ್ಜುನ್ ವಿರುದ್ದ ಅವರ ಪತ್ನಿ ಭವಾನಿ ಅವರು ದೂರು ನೀಡಿದ್ದಾರೆ. ಯಶವಂತಪುರ ಠಾಣೆಯಲ್ಲಿ ವಂಚನೆ, ವರದಕ್ಷಿಣೆ ಕಿರುಕುಳದ ಆರೋಪ ಮಾಡಿ ದೂರು ನೀಡಲಾಗಿದ್ದು, ಇನ್ಸ್‌ಪೆಕ್ಟರ್‌ ಮಲ್ಲಿಕಾರ್ಜುನನ ಜೊತೆಗೆ ಅವರ ಅಣ್ಣ ಬಸಪ್ಪನ ವಿರುದ್ಧವೂ ದೂರು ನೀಡಲಾಗಿದೆ. ಪತ್ನಿಯನ್ನ ಯಾಮಾರಿಸಿ ಇಬ್ಬರು ಮಹಿಳೆಯರ ಜೊತೆ ಅನೈತಿಕ‌ ಸಂಬಂಧ ಹೊಂದಿರೋದಾಗಿ ಆರೋಪ ಮಾಡಿದ್ದು, ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

Latest Videos

undefined

ದಶಮಾನೋತ್ಸವ ಸಂಭ್ರಮಕ್ಕೆ ಚಾಲನೆ ಕೊಟ್ಟ ಕರ್ನಾಟಕ ಕ್ಷೀರ ಭಾಗ್ಯ ಪಿತಾಮಹ ಸಿಎಂ ಸಿದ್ದರಾಮಯ್ಯ

ಹುಡುಗಿ ಕೊಟ್ಟರೆ ಸಾಕು ಎಂದವರು ವರದಕ್ಷಿಣೆ ಕೇಳಿದ್ದೆಷ್ಟು ಗೊತ್ತಾ? ಇನ್ನು ಬೆಂಗಳೂರಿನಲ್ಲಿ ಕರ್ನಾಟಕ ಸಚಿವಾಲಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ನೌಕರನನ್ನು ಪರಿಚಯ ಮಾಡಿಕೊಂಡು, ಆಗ ಬಿಇ ಪದವಿ ಪೂರ್ಣಗೊಳಿಸಿದ್ದ ಭವಾನಿ ಅವರ ಮನೆಯಲ್ಲಿ ಒಪ್ಪಿಸಿ 2012ರಲ್ಲಿ ಮಲ್ಲಿಕಾರ್ಜುನ ಮದುವೆ ಆಗಿದ್ದರು. ಮದುವೆಗೂ ಮುನ್ನ ನೀವೇನೂ ಕೊಡುವುದು ಬೇಡ, ವಧುವನ್ನು ಕೊಟ್ಟು ಮದುವೆ ಮಾಡಿಕೊಟ್ಟರೆ ಸಾಕು ಎಂದಿದ್ದರಂತೆ. ನಂತರ, ಮದುವೆ ಮಾತುಕತೆಗೆಂದು ಕುಳಿತಾಗ, ಪೊಲೀಸಪ್ಪನ ಅಣ್ಣನ ಹೆಂಡತಿ ಬಂದು ನಮ್ಮ ಹುಡುಗನಿಗೆ 10 ಲಕ್ಷ ರೂ. ಹಣ, 250 ಗ್ರಾಂ ಚಿನ್ನ ಹಾಗೂ 5 ಕೆ.ಜಿ. ಬೆಳ್ಳಿಯನ್ನು ಹಾಗೂ ಬೆಂಗಳೂರಿನಲ್ಲಿ ಒಂದು ನಿವೇಶನವನ್ನು ವರದಕ್ಷಿಣೆಯಾಗಿ ಕೊಡುವಂತೆ ಬೇಡಿಕೆ ಇಟ್ಟಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ. 

8 ಲಕ್ಷ ಹಣ, 250 ಗ್ರಾಂ ಚಿನ್ನ, 5 ಕೆ.ಜಿ. ಬೆಳ್ಳಿ ವರದಕ್ಷಿಣೆ ಪಡೆದ ಭೂಪ: ಕೇಳಿದಷ್ಟು ವರದಕ್ಷಿಣೆ ಕೊಡಲು ಸಾಧ್ಯವಿಲ್ಲವೆಂದು ಹೇಳಿದಾಗ ಕಡಿಮೆ ಮಾಡಿಕೊಳ್ಳುತ್ತೇವೆ ಎಂದು 8 ಲಕ್ಷ ಹಣ, 250 ಗ್ರಾಂ ಚಿನ್ನ, 5 ಕೆ.ಜಿ. ಬೆಳ್ಳಿ ವರದಕ್ಷಿಣೆ ಪಡೆದುಕೊಂಡಿದ್ದಾರೆ. ಇನ್ನು ಮದುವೆ ಮಾತಿಕತೆ ದಿನವೇ ಬಟ್ಟೆ ಖರೀದಿಗಾಗಿ 50 ಸಾವಿರ ರೂ. ಹಣವನ್ನು ಪಡೆದುಕೊಂಡಿದ್ದಾರೆ. ಇನ್ನು ಸರ್ಕಾರಿ ಕೆಲಸದಲ್ಲಿದ್ದ ದೂರುದಾರೆ ಭವಾನಿ ಅವರ ತಂದೆ 2012ರಲ್ಲಿ ಚಿತ್ರದುರ್ಗದಲ್ಲಿ ಅದ್ಧೂರಿಯಾಗಿ ಮದುವೆ ಮಾಡಿ ಕೊಟ್ಟಿದ್ದಾರೆ. ಇದಾದ ನಂತರ, ಅಣ್ಣನ ಮನೆಯಲ್ಲಿದ್ದುಕೊಂಡೇ ಕೆಲಸಕ್ಕೆ ಹೋಗುತ್ತಿದ್ದ ಇನ್ಸ್‌ಪೆಕ್ಟರ್‌ ಮಲ್ಲಿಕಾರ್ಜುನ ಅವರು ಆರಂಭದ ಕೆಲವು ದಿನಗಳು ಚೆನ್ನಾಗಿ ನಡೆದುಕೊಂಡಿದ್ದು, ನಂತರ ಹೆಂಡತಿಗೆ ಕಿರುಕುಳ ನಿಡಲು ಆರಂಭಿಸಿದ್ದಾನೆ. ಕೆಲವೇ ತಿಂಗಳಲ್ಲಿ ತನ್ನ ಅತ್ತಿಗೆಯ ಮಾತನ್ನು ಕೇಳಿಕೊಂಡು ಪುನಃ 8 ಲಕ್ಷ ರೂ. ಹಣ ಹಾಗೂ ನಿವೇಶನ ಕೊಡುವಂತೆ ಭವಾನಿ ತಂದೆಗೆ ಬೇಡಿಕೆ ಇಟ್ಟು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಕಾರಿನಲ್ಲಿ ಬಂದು ಗುದ್ದೋಡಿದ ಗಿಚ್ಚಿ ಗಿಲಿಗಿಲಿ ಚಂದ್ರಪ್ರಭ: ಮಾನವೀಯತೆಗೂ ಕಾರು ನಿಲ್ಲಿಸದೇ ಪರಾರಿ

ಅಣ್ಣನ ಮನೆಯಲ್ಲಿ ಪ್ರತಿನಿತ್ಯ ಕಿರುಕುಳ ಆಗುತ್ತಿದ್ದರೂ ಕೇಳದೇ, ಅವರು ಹೇಳಿದಷ್ಟು ಹಣ ಕೊಡುವಂತೆ ದಬ್ಬಾಳಿಕೆ ಮಾಡಿ ಹಲ್ಲೆ ಮಾಡಿದ್ದಾನೆ. ನಂತರ, ತವರು ಮನೆಗೆ ಕಳಿಸಿದ್ದಾನೆ. ಆಗ ಗರ್ಭಿಣಿಯಾದ ಹೆಂಡತಿಯನ್ನು ನಾನೇ ನೋಡಿಕೊಳ್ಳುತ್ತೇನೆ ಎಂದು ಕರೆದುಕೊಂಡು ಬಂದು ಮತ್ತೆ ಕಿರುಕುಳ ನೀಡಿದ್ದಾನೆ. ಕಿರುಕುಳಕ್ಕೆ ಬೇಸತ್ತು ತವರು ಮನೆಗೆ ಹೋಗಿದ್ದಾಳೆ. ಮಗು ಹುಟ್ಟಿದರೂ ನೋಡುವುದಕ್ಕೆ ಬರದೇ ಪಿತೃತ್ವ ರಜೆ ಪಡೆದು ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯೊಂದಿಗೆ ಮಜಾ ಮಾಡಿದ್ದಾನೆ. ನಂತರ, ಆಕೆಗೆ ಮೋಸ ಮಾಡಿದ್ದರಿಂದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪುನಃ ಆ ಮಹಿಳೆಯನ್ನು ಬಿಟ್ಟು ಇನ್ನೊಬ್ಬ ಮಹಿಳೆಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾನೆ. ಈ ವಿಚಾರ ತಿಳಿದು ನ್ಯಾಯ ಕೇಳಲು ಪೊಲೀಸ್‌ ಠಾಣೆಗೆ ಹೋದಾಗ ಬಾಯಿಗೆ ಬಂದಂತೆ ಬೈದು ಕೊಲೆ ಮಾಡುವ ಬೆದರಿಕೆ ಹಾಕಿದ್ದಾರಂತೆ. ಈಗ ಕೊನೆಯದಾಗಿ ಹಣವನ್ನೂ ಕೊಡದೇ ಯಾಮಾರಿಸಿದ್ದು, ಭವಾನಿ ಅವರು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ ಎಂದು ತಿಳಿದುಬಂದಿದೆ.

click me!