Madikeri: ಮೊಮ್ಮಗನಿಗೆ ಹಣ್ಣುಕೊಟ್ಟದ್ದೇ ತಪ್ಪಾಯ್ತಾ?: ಮಾವನನ್ನೇ ಗುಂಡಿಕ್ಕಿ ಕೊಂದ ಸೊಸೆ

By Sathish Kumar KH  |  First Published Mar 14, 2023, 2:58 PM IST

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬಳು ತನ್ನ ಮಾವನನ್ನು ಗುಂಡಿಕ್ಕಿ ಕೊಂದಿದ್ದಾಳೆ. ಇತ್ತೀಚೆಗೆ ಪಾರ್ಟಿ ಕೊಡಿಸುವ ವಿಚಾರದಲ್ಲಿ ಮಗನ ಸ್ನೇಹಿತನನ್ನು ಬಲಿಪಡೆಕೊಂಡಿದ್ದನು.


ಕೊಡಗು (ಮಾ.14): ಕಾಫಿನಾಡು ಕೊಡಗಿನಲ್ಲಿ ಮತ್ತೆ ಬಂದೂಕು ಗುಂಡಿನ ಸದ್ದು ಮೊಳಗಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬಳು ತನ್ನ ಮಾವನನ್ನು ಗುಂಡಿಕ್ಕಿ ಕೊಂದಿದ್ದಾಳೆ. ಇತ್ತೀಚೆಗೆ ಪಾರ್ಟಿ ಕೊಡಿಸುವ ವಿಚಾರದಲ್ಲಿ ಮಗನ ಸ್ನೇಹಿತನನ್ನು ಬಲಿಪಡೆಕೊಂಡಿದ್ದ ಮಡಿಕೇರಿಯಲ್ಲಿ ಈಗ ಸೊಸೆಯೊಬ್ಬಳು ತನ್ನ ಮಾವನನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾಳೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕಿಕ್ಕರಳ್ಳಿ ಗ್ರಾಮದಲ್ಲಿ ಘಟನೆ ವರದಿಯಾಗಿದೆ. ಇನ್ನು ಕೊಲೆ ಮಾಡಿದ ಆರೋಪಿಯ ವಿರುದ್ಧ ಪೊಲೀಸ್‌ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕೊಲೆಯಾದ ವ್ಯಕ್ತಿ ಕೆ.ಎ.ಮಂದಣ್ಣ (73) ಆಗಿದ್ದಾರೆ. ಮಂದಣ್ಣನನ್ನು ಅವರ ಸೊಸೆ ನೀಲಮ್ಮ ಅಲಿಯಾಸ್‌ ಜ್ಯೋತಿ (25) ಎಂಬುವವರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ನೀಲಮ್ಮ ಅವರು ಕಳೆದ ನಾಲ್ಕು ವರ್ಷಗಳ ಹಿಂದೆ ಮಂದಣ್ಣ ಅವರ ಪುತ್ರ ಕೆ.ಎಂ.ನಾಣಯ್ಯ ಅವರನ್ನು ವಿವಾಹವಾಗಿದ್ದರು. ನೀಲಮ್ಮ ಮತ್ತು ಮಂದಣ್ಣ ನಡುವೆ ಸಣ್ಣಪುಟ್ಟ ವಿಚಾರಗಳಿಗೆ ಕುಟುಂಬದಲ್ಲಿ ಆಗಾಗ ಕಲಹ ನಡೆಯುತ್ತಿತ್ತು.

Tap to resize

Latest Videos

undefined

ಆಸ್ತಿ ಕಲಹ: ತಂದೆಯನ್ನು ತುಂಡು ತುಂಡಾಗಿ ಕತ್ತರಿಸಿ ಸೂಟ್‌ಕೇಸ್‌ಗೆ ತುಂಬಿ ಎಸೆದ ಮಗ

ಮನೆಯ ಕೊಠಡಿಯಲ್ಲಿ ಮಗ- ಸೊಸೆ ಪ್ರತ್ಯೇಕ ವಾಸ: ಮದುವೆಯಾಗಿ ಕೆಲವೇ ದಿನಗಳಲ್ಲಿ ಭಿನ್ನಾಭಿಪ್ರಾಯ ಮೂಡಿದ್ದರಿಂದ ಆಗಾಗ ವೈಷಮ್ಯವೂ ನಡೆಯುತ್ತಿತ್ತು. ಇನ್ನು ಮಾವ ಆಗಿಂದಾಗ್ಗೆ ಸೊಸೆ ಬಂದು ಮಗನನ್ನು ನಮ್ಮಿಂದ ಕಿತ್ತುಕೊಂಡಳು ಎಂದು ಹೇಳುವುದು ಸಾಮಾನ್ಯವಾಗಿತ್ತು. ಆದರೆ, ಇದರಿಂದ ಸೊಸೆಗೆ ತೀವ್ರ ಕಿರಿಕಿಸಿ ಉಂಟಾಗುತ್ತಿತ್ತು. ಇನ್ನು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಾವ ಮಂದಣ್ಣನ ಮನೆಯಲ್ಲಿ ಪ್ರತ್ಯೇಕ ಕೊಠಡಿಯೊಂದಲ್ಲಿ ಆತನ ಮಗನೊಂದಿಗೆ ಸೊಸೆ ನೀಲಮ್ಮ ಬೇರೆಯಾಗಿ ಜೀವನ ನಡೆಸುತ್ತಿದ್ದರು. ಕಳೆದ ಒಂದು ವರ್ಷದಿಂದ ಪ್ರತ್ಯೇಕವಾಗಿ ಅಡುಗೆ ಮಾಡಿಕೊಳ್ಳುತ್ತಿದ್ದರು.

ಮೊಮ್ಮಗನಿಗೆ ಹಣ್ಣು ಕೊಟ್ಟ ತಾತ: ಮಾರ್ಚ್ 11 ರಂದು ಮಂದಣ್ಣ ತನ್ನ 3 ವರ್ಷದ ಮೊಮ್ಮಗನಿಗೆ (ನೀಲಮ್ಮ ಮತ್ತು ನಾಣಯ್ಯನ ಮಗ) ಹಣ್ಣು ನೀಡಿದ್ದಾನೆ. ಆದರೆ, ತಮ್ಮ ಮಾವ ಮಗನಿಗೆ ತಿನ್ನಲು ಹಣ್ಣು ನೀಡಿದ್ದರಿಂದ ನೀಲಮ್ಮ ಸಿಟ್ಟಿಗೆದ್ದು ಇಬ್ಬರ ನಡುವೆ ಮನಸ್ತಾಪ ಮತ್ತು ಜಗಳ ಉಂಟಾಗಿದೆ. ಭಾನುವಾರ (ಮಾರ್ಚ್ 12), ಪತಿ ನಾಣಯ್ಯ ಸ್ವಲ್ಪ ಉರುವಲು ತರಲು ಮುಂದಾದಾಗ ನೀಲಮ್ಮ ಮಂದಣ್ಣನ ಮೇಲೆ ಬಂದೂಕಿನಿಂದ ಗುಂಡು ಹಾರಿಸಿದ್ದಾಳೆ, ಈ ಗುಂಡು ಮಾವನ ದೇಹವನ್ನು ಸೀಳಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ತೀವ್ರ ರಕ್ತಸ್ರಾವಗೊಂಡು ಸ್ಥಳದಲ್ಲಿಯೇ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ.

Bengaluru Crime: ಹೆಂಡತಿಯನ್ನು ಮಂಚಕ್ಕೆ ಕರೆದವನ ತಲೆಯನ್ನೇ ಸೀಳಿದ ಗಂಡ: ಕುಡಿದ ಅಮಲಿನಲ್ಲಿ ಕೊಲೆಯಾದ ಯುವಕ

ಕೊಲೆ ಮಾಡಿದ ಸೊಸೆಯನ್ನು ವಶಕ್ಕೆ ಪಡೆದ ಪೊಲೀಸರು: ನೀಲಮ್ಮಳ ಪತಿ ನಾಣಯ್ಯ ಅವರು ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪತ್ನಿ ನೀಲಮ್ಮ ವಿರುದ್ಧ ದೂರು ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ತಹಶೀಲ್ದಾರ ರಾಮಚಂದ್ರ ನಾಯಕ್ ಮತ್ತಿತರರು ಭೇಟಿ ನೀಡಿದ್ದರು. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಡಿಕೇರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ತನಿಖೆ ಮುಂದುವರಿದಿದೆ. ಆರೋಪಿ ನೀಲಮ್ಮಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಕೊಲೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.

click me!