ಗೋವಾದಲ್ಲಿ ಪ್ರವಾಸಿಗರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಹೊಟೇಲ್ ಸಿಬ್ಬಂದಿ

Published : Mar 14, 2023, 12:26 PM ISTUpdated : Mar 14, 2023, 12:27 PM IST
ಗೋವಾದಲ್ಲಿ ಪ್ರವಾಸಿಗರ ಮೇಲೆ  ಚಾಕುವಿನಿಂದ ಹಲ್ಲೆ ನಡೆಸಿದ ಹೊಟೇಲ್ ಸಿಬ್ಬಂದಿ

ಸಾರಾಂಶ

ಗೋವಾದಲ್ಲಿ ಹೊಟೇಲ್ ಸಿಬ್ಬಂದಿ ದೆಹಲಿಯಿಂದ ಪ್ರವಾಸ ಬಂದಿದ್ದ ಕುಟುಂಬವೊಂದರ ಮೇಲೆ ಚಾಕು ಹಾಗೂ ಕತ್ತಿಗಳಿಂದ ದಾಳಿ ನಡೆಸಿದ ಆಘಾತಕಾರಿ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗೋವಾ ಸಿಎಂ ಪ್ರಮೋದ್ ಸಾವಂತ್ (Pramod Sawant) ಸೂಚಿಸಿದ್ದಾರೆ.

ಪಣಜಿ: ಗೋವಾದಲ್ಲಿ ಹೊಟೇಲ್ ಸಿಬ್ಬಂದಿ ದೆಹಲಿಯಿಂದ ಪ್ರವಾಸ ಬಂದಿದ್ದ ಕುಟುಂಬವೊಂದರ ಮೇಲೆ ಚಾಕು ಹಾಗೂ ಕತ್ತಿಗಳಿಂದ ದಾಳಿ ನಡೆಸಿದ ಆಘಾತಕಾರಿ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗೋವಾ ಸಿಎಂ ಪ್ರಮೋದ್ ಸಾವಂತ್ (Pramod Sawant) ಸೂಚಿಸಿದ್ದಾರೆ.  ಹಲ್ಲೆಗೊಳಗಾದ ಕುಟುಂಬದ ಸದಸ್ಯರೊಬ್ಬರು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ನಂತರ ಘಟನೆ ಬೆಳಕಿಗೆ ಬಂದಿದೆ.  ಗೋವಾದ ಅಂಜುನಾ ಪ್ರದೇಶದಲ್ಲಿ (Anjuna area) ಈ ಘಟನೆ ನಡೆದಿದ್ದು, ಜತಿನ್ ಶರ್ಮಾ (Jatin Sharma) ಎಂಬುವವರು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ( Instagram) ಈ ವಿಚಾರ ತಿಳಿಸಿದ್ದಾರೆ. 

ಇದಾದ ಬಳಿಕ ಹೊಟೇಲ್‌ ಸಿಬ್ಬಂದಿಯ ಬಗ್ಗೆ ಜತಿನ್ ಅವರು ಹೊಟೇಲ್ ವ್ಯವಸ್ಥಾಪಕರಿಗೆ ದೂರು ನೀಡಿದ್ದು, ಹಲ್ಲೆ ಮಾಡಿದ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ.  ಜತಿನ್ ಅವರ ಕುಟುಂಬದ ಮೇಲೆ ಹೊಟೇಲ್‌ನ ನಾಲ್ವರು ಸಿಬ್ಬಂದಿ ಹಲ್ಲೆ ಮಾಡಿದ್ದರು.  ಅಂಜುನಾ ಪ್ರದೇಶದ ಪೊಲೀಸರು ಆರಂಭದಲ್ಲಿ ಸೆಕ್ಷನ್ 324 ರ ಅಡಿಯಲ್ಲಿ  ಹಲ್ಲೆ ಮಾಡಿದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಈಗ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿದ್ದಾರೆ.  ನಂತರ ಸೆಕ್ಷನ್ 307ರನ್ನು ಸೇರಿಸಿ ಎಫ್ಐಆರ್ (FIR) ದಾಖಲಿಸಿದ್ದರು. ಈ ಹಲ್ಲೆ ವಿಚಾರ ಉನ್ನತಾಧಿಕಾರಿಗಳ ಗಮನ ಸೆಳೆದ ನಂತರ ಕಟ್ಟುನಿಟ್ಟಿನ ಕ್ರಮಕ್ಕೆ ಗೋವಾ ಸಿಎಂ ಪ್ರಮೋದ್ ಸಾವಂತ್ ಆದೇಶಿಸಿದ್ದರು. ಇದಾದ ಬಳಿಕ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 

ಚಿತ್ರದುರ್ಗದ ಕಿರು ಮೃಗಾಲಯಕ್ಕೆ ಬೆಂಗಾಲ್ ಟೈಗರ್ಸ್ ಎಂಟ್ರಿ, ಪುಳಕಿತರಾದ ಪ್ರವಾಸಿಗರು

ಘಟನೆಗೆ ಸಂಬಂಧಿಸಿದಂತೆ ಗೋವಾ ಸಿಎಂ ಟ್ವಿಟ್ ಮಾಡಿದ್ದು, 'ಅಂಜುನಾದಲ್ಲಿ ನಡೆದ ಹಿಂಸಾತ್ಮಕ ಘಟನೆ ಆಘಾತಕಾರಿ ಮತ್ತು ಅಸಹನೀಯವಾಗಿದೆ. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಾನು ಪೊಲೀಸರಿಗೆ ಸೂಚಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಇಂತಹ ಸಮಾಜ ವಿರೋಧಿ ಶಕ್ತಿಗಳು ರಾಜ್ಯದ ಜನರ ಶಾಂತಿ ಮತ್ತು ಸುರಕ್ಷತೆಗೆ ಅಪಾಯವನ್ನುಂಟುಮಾಡುತ್ತಿದೆ ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬರೆದುಕೊಂಡಿದ್ದಾರೆ. 

ಅಬ್ಬಿಫಾಲ್ಸ್ ಪ್ರವಾಸಿಗರ ಟಿಕೆಟ್ ಕೌಂಟರಿಗೆ ಬೀಗ ಹಾಕಿದ ತೋಟದ ಮಾಲೀಕರ ವಿರುದ್ಧ ದೂರು ದಾಖಲು

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!
ಪ್ರೆಗ್ನೆಂಟ್ ಮಾಡಿ ಗರ್ಭಪಾತ ಮಾಡಿಸಿದ, Sorry ಅಮ್ಮಾ ಸಾಯ್ತಿದ್ದೀನಿ: ಯುವತಿ ಆತ್ಮ*ಹತ್ಯೆ