ನಿರ್ವಾನ್ ಸ್ಪಾನಲ್ಲಿ ಹೈಟೆಕ್ ವೇಶ್ಯವಾಟಿಕೆ ದಂಧೆ: ಪ್ರಕರಣದ ತನಿಖೆ ಡಿಸಿಪಿ ಅರುಣಾಗಂಶು ಗಿರಿ ಹೆಗಲಿಗೆ

By Ravi JanekalFirst Published Jan 8, 2024, 10:53 AM IST
Highlights

ಹೈಟೆಕ್ ವೇಶ್ಯವಾಟಿಕೆ ದಂಧೆ ನಡೆಸುತ್ತಿದ್ದ ಮಸಾಜ್ ಪಾರ್ಲರ್, ಸ್ಪಾ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ 44 ಮಹಿಳೆಯರು, 34 ಪುರುಷರನ್ನು ವಶಕ್ಕೆ  ಪಡೆದಿದ್ದ ಸಿಸಿಬಿ ಪೊಲೀಸರು. ವಿಚಾರಣೆ ವೇಳೆ ಒಂದೊಂದೇ ಶಾಕಿಂಗ್ ಸುದ್ದಿಗಳು ಬಯಲಿಗೆ ಬರುತ್ತಿವೆ.

ಬೆಂಗಳೂರು (ಜ.8) ಹೈಟೆಕ್ ವೇಶ್ಯವಾಟಿಕೆ ದಂಧೆ ನಡೆಸುತ್ತಿದ್ದ ಮಸಾಜ್ ಪಾರ್ಲರ್, ಸ್ಪಾ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ 44 ಮಹಿಳೆಯರು, 34 ಪುರುಷರನ್ನು ವಶಕ್ಕೆ  ಪಡೆದಿದ್ದ ಸಿಸಿಬಿ ಪೊಲೀಸರು. ವಿಚಾರಣೆ ವೇಳೆ ಒಂದೊಂದೇ ಶಾಕಿಂಗ್ ಸುದ್ದಿಗಳು ಬಯಲಿಗೆ ಬರುತ್ತಿವೆ.

ನಗರದ ಟಿನ್ ಫ್ಯಾಕ್ಟರಿ ಬಳಿಯಿರುವ ಓಲ್ಡ್ ಮದ್ರಾಸ್ ರಸ್ತೆಯಲ್ಲಿರೋ ನಿರ್ವಾನ ಇಂಟರ್ ನ್ಯಾಷನಲ್ ಸ್ಫಾ ಪ್ರೈಲಿ ಹೆಸರಲ್ಲಿ ವೇಶ್ಯವಾಟಿಕೆ ದಂಧೆ ನಡೆಸುತ್ತಿದ್ದ ಹೈದರಾಬಾದ್ ಮೂಲದ ಆರೋಪಿ ಅನಿಲ್ ಅಲಿಯಾಸ್ ಬೆಂಜ್ ಅನಿಲ್. ಹಲವಾರು ವರ್ಷಗಳಿಂದ ವೇಶ್ಯಾವಟಿಕೆ ದಂಧೆ ನಡೆಸುತ್ತಿದ್ದರೂ ಯಾರ ಗಮನಕ್ಕೆ ಬಂದಿರಲಿಲ್ಲ. ಇದೀಗ ಸಿಸಿಬಿ ಅಧಿಕಾರಿ ಧರ್ಮೇಂದ್ರ ನೇತೃತ್ವದ ತಂಡದಿಂದ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಈ ಪ್ರಕರಣದ ತನಿಖೆ ಡಿಸಿಪಿ ಅರಣಾಗಂಶು ಗಿರಿಗೆ ವಹಿಸಲಾಗಿದೆ. ಸಿಟಿ ಆರ್ಮ್ ರಿಸರ್ವ್ ಸೆಂಟ್ರಲ್  ವಿಭಾಗದ ಡಿಸಿಪಿಯಾಗಿರೋ ಅರುಣಾಗಂಶು ಗಿರಿ. ಸ್ಪಾ ಮೇಲಿನ ದಾಳಿಗೂ ಕಮಿಷನರ್ ಸೂಚನೆ ಮೇರೆಗೆ ಅರುಣಾಗಂಶು ಗಿರಿ ಅವರು ದಾಳಿ ನಡೆಸಲು ಟೀಮ್ ಲೀಡ್ ಮಾಡಿದ್ರು. ದಾಳಿಗೂ ಮುನ್ನ ತಿಂಗಳ ಕಾಲ ಮಫ್ತಿಯಲ್ಲಿ ಡಿಕಾಯ್ ಮಾಡಿದ್ದ ಸಿಸಿಬಿ ಟೀಂ

Latest Videos

ಮಸಾಜ್ ಪಾರ್ಲರ್ ಮೇಲೆ ಸಿಸಿಬಿ ಪೊಲೀಸರ ದಾಳಿ; 44 ಮಹಿಳೆಯರು, 34 ಪುರುಷರು ಪೊಲೀಸರ ವಶಕ್ಕೆ

ಸೋಷಿಯಲ್ ಮೀಡಿಯಾದಲ್ಲಿ ಸ್ಪಾ ಫೇಮಸ್:

ಹೈದರಾಬಾದ್‌ ನಿಂದ ಬಂದ ಬೆಂಜ್ ಅನಿಲ್ ಮೊದಲು ದಂಧೆ ಶುರುಮಾಡಿದ್ದೇ ವೇಶ್ಯವಾಟಿಕೆ. ನಿರ್ವಾನ್ ಸ್ಪಾ ಸೋಷಿಯಲ್ ಮೀಡಿಯಾದಲ್ಲಿ ಬಹಳ ಫೇಮಸ್ ಆಗಿತ್ತು. ಸೋಷಿಯಲ್ ಮೀಡಿಯಾ ಬಳಸಿಕೊಂಡಿಕೊಂಡ ಗ್ರಾಹಕರಿಗೆ ಬಲೆ ಹಾಕುತ್ತಿದ್ದ ಆರೋಪಿ. ಬ್ಯಾಂಕಾಕ್ ರೀತಿಯ ಬಾಡಿ ಟು ಬಾಡಿ ಮಸಾಜ್ ಸರ್ವೀಸ್ ನೀಡುತ್ತಿತ್ತಂತೆ ಸ್ಪಾ. ಬಹು ಅಂತಸ್ತಿನ ಬಿಲ್ಡಿಂಗ್ ಬಾಡಿಗೆ ಪಡೆದು ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪಿ ಅನಿಲ್. 2017 ರಿಂದ ನಿರ್ವಾನ್ ಸ್ಪಾ ನಡಿತಿದ್ರು ಇಲ್ಲಿವರೆಗೂ ಯಾವುದೇ ದಾಳಿ ಆಗದಿರುವುದು ಅಚ್ಚರಿ ಹುಟ್ಟಿಸಿದೆ. ಕೆಲ ಪೊಲೀಸ್ರ ಸಹಕಾರದಿಂದ ಈ ದಂಧೆ ನಡೀತಿತ್ತು ಅನ್ನೋ ಅನುಮಾನ ಎದ್ದಿದೆ. ಐದು ವರ್ಷದಿಂದ ಸಿಸಿಬಿ ಹಾಗೂ ಸ್ಥಳಿಯ ಪೊಲೀಸರ ಗಮನಕ್ಕೆ ಬಂದಿರಲಿಲ್ವಾ? ಅಥವಾ ಗಮನಕ್ಕೆ ಬಂದಿದ್ರು ಪೊಲೀಸ್ ಅಧಿಕಾರಿಗಳು ಆಮಿಷಕ್ಕೆ ಒಳಗಾಗಿದ್ರಾ ಅನ್ನೋದು ತನಿಖೆ ನಂತರ ಬಹಿರಂಗಗೊಳ್ಳಬೇಕಿದೆ.

ಅನಿಲ್ @ ಬೆಂಜ್ ಅನಿಲ್ ಇತಿಹಾಸವೇ ರೋಚಕ:

ಹೊರರಾಜ್ಯದಿಂದ ಬಂದು ಮಸಾಜ್ ಪಾರ್ಲರ್ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ ಶುರು ಮಾಡಿದ್ದ ಅನಿಲ್ ಚಾಲಾಕಿತನಕ್ಕೆ ಪೊಲೀಸರ ದಂಗಾಗಿದ್ದಾರೆ. ಅನಿಲ್ ಪೋನ್ ಕಾಂಟಾಕ್ಟ್ ನಲ್ಲಿ ಹಿರಿಯ ಐಪಿಎಸ್ ಅಧಿಕಾರಿಗಳು ಇದ್ದಾರಂತೆ. ಮಧ್ಯಾಹ್ನ 2 ಬೆಳಗಿನ ಜಾವ 4 ಗಂಟೆವರೆಗೂ ಅನಿಲ್ ಫುಲ್ ಆಕ್ಟಿವ್ ಆಗ್ತಿದ್ದನಂತೆ. ಮೂಲತಃ ಹೈದರಾಬಾದ್‌ನವನಾಗಿದ್ದು, ಬೆಂಗಳೂರಿಗೆ ಮಾಂಸ ದಂಧೆಗೆ ಇಳಿದಿದ್ದ ಆರೋಪಿ. ಹೊರರಾಜ್ಯ, ಹೊರದೇಶದಿಂದ ಉದ್ಯೋಗ, ಹಣದ ಆಸೆ ತೋರಿಸಿ ಯುವತಿಯರನ್ನು ಕರೆಸಿಕೊಳ್ಳುತ್ತಿದ್ದ ಆರೋಪಿ. ಕೊವಿಡ್ ಅವಧಿಯಲ್ಲಿ ಎಲ್ಲ ಬ್ಯುಸಿನೆಸ್ ನಷ್ಟದಲ್ಲಿದ್ದರೂ ಅನಿಲ್ ಅಲಿಯಾಸ್ ಬೆಂಜ್ ಅನಿಲನ ಮಾಂಸದಂಧೆ ಬ್ಯುಸಿನೆಸ್ ಜೋರು ಇತ್ತಂತೆ.

ಮಸಾಜ್ ಪಾರ್ಲರ್, ಸ್ಪಾ ಹೆಸರಲ್ಲಿ ವೇಶ್ಯವಾಟಿಕೆ ದಂಧೆ; ಹೊರರಾಜ್ಯಗಳಿಂದ ಉದ್ಯೋಗಕ್ಕೆ ಬರೋ ಹುಡುಗಿಯರೇ ಇವನ ಟಾರ್ಗೆಟ್!

ಇಷ್ಟೆಲ್ಲ ಆದ್ರೂ ಸಿಸಿಬಿ ಅಧಿಕಾರಿಗಳಿಗಾಗಲಿ, ಸ್ಥಳೀಯ ಪೊಲೀಸರಿಗಾಗಿ ವಿಷಯ ಗೊತ್ತಾಗಿಲ್ಲ ಎಂಬುದು ಸಂಂದೇಹ ಮೂಡಿಸಿದೆ. ಅನಿಲ್ ಜೊತೆ ರಾಜಕಾರಣಿಗಳು ಸೇರಿದಂತೆ ಹಲವು ಅಧಿಕಾರಿಗಳ ಒಡನಾಟ ಹೊಂದಿದ್ದನೆಂದು ಹೇಳಲಾಗಿದೆ. ಸದ್ಯ ತನಿಖಾ ಜವಾಬ್ದಾರಿಯನ್ನ ಡಿಸಿಪಿ ಅರನಾಂಶು ಗಿರಿಗೆ ವಹಿಸಲಾಗಿದೆ. ಎಲ್ಲ ಆಯಾಮಗಳಲ್ಲೂ ತನಿಖೆಗೆ ಮುಂದಾಗಿರುವ ಅಧಿಕಾರಿಗಳು. ಅರುಣಾಗಂಶು ಗಿರಿ ಅವರಿಗೆ ಕ್ಲೀನ್ ಇಮ್ಯಾಜ್ ಇದ್ದು,  ಇದೇ ಕಾರಣಕ್ಕೆ ಹಲವು ಅಧಿಕಾರಿಗಳಿಗೆ ಢವಢವ ಶುರುವಾಗಿದೆ. ಅನಿಲನ ದಂಧೆಯಲ್ಲಿ ಯಾವ ರಾಜಕಾರಣಿ, ಯಾವ ಅಧಿಕಾರಿಗಳ ಹೆಸರು ಇದೆಯೋ ತನಿಖೆಯ ಬಳಿಕ ಮಾಹಿತಿ ಹೊರಬೀಳಲಿದೆ.

click me!