ಭಾರತದ ಉದ್ಯಮಿ ಮೇಲೆ ಅಮೆರಿಕದಲ್ಲಿ ಗುಂಡಿನ ದಾಳಿ, ಸ್ಥಳದಲ್ಲೇ ಸಾವು!

Published : Jun 18, 2022, 10:20 PM IST
ಭಾರತದ ಉದ್ಯಮಿ ಮೇಲೆ ಅಮೆರಿಕದಲ್ಲಿ ಗುಂಡಿನ ದಾಳಿ, ಸ್ಥಳದಲ್ಲೇ ಸಾವು!

ಸಾರಾಂಶ

ಗುಜರಾತ್ ಮೂಲದ ಉದ್ಯಮಿಗೆ ಗುಂಡಿಟ್ಟ ದುಷ್ಕರ್ಮಿ ಸೂಪರ್ ಮಾರ್ಕೆಟ್ ಉದ್ಯಮ ನಡೆಸುತ್ತಿದ್ದ ಪ್ರಯೇಶ್ ಉದ್ಯಮಿ ಜೊತೆ ನೌಕರನ ಮೇಲೂ ಗುಂಡಿನ ದಾಳಿ

ನ್ಯೂಯಾರ್ಕ್(ಜೂ.18): ಭಾರತೀಯ ಮೂಲದ ಉದ್ಯಮಿ ಪ್ರಯೇಶ್ ಪಟೇಲ್(55) ಅಮರಿಕದಲ್ಲಿ ದುರ್ಷರ್ಮಿಗಳ ಗುಂಡಿಗೆ ಬಲಿಯಾಗಿದ್ದಾರೆ. ವರ್ಜಿನಿಯಾದ ನ್ಯೂಪೋರ್ಟ್‌ನಲ್ಲಿ ಸೂಪರ್ ಮಾರ್ಕೆಟ್ ಸೇರಿದಂತೆ ಹಲವು ಸ್ಟೋರ್ ಉದ್ಯಮ ನಡೆಸುತ್ತಿದ್ದ ಪ್ರಯೇಶ್ ಪಟೇಲ್ ಮೇಲೆ ದುರ್ಷರ್ಮಿ ಗುಂಡಿನ ದಾಳಿ ನಡೆಸಲಾಗಿದೆ.

ದರೋಡೆ ಮಾಡಲು ಬಂದ ವ್ಯಕ್ತಿ ಏಕಾಏಕಿ ಮಾಲೀಕ ಪ್ರಯೇಶ್ ಪಟೇಲ್ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಇದೇ ವೇಳೆ ಸ್ಟೋರ್‌ನಲ್ಲಿ ಕೆಲಸಕ್ಕಿದ ನೌಕರ ಮೇಲೂ ಗುಂಡಿನ ದಾಳಿ ನಡೆಸಿದ್ದಾನೆ. ಪರಿಣಾಮ ಇಬ್ಬರು ಸೂಪರ್ ಮಾರ್ಕೆಟ್ ಒಳಗಡೆ ಇಬ್ಬರು ಸಾವಿಗೀಡಾಗಿದ್ದಾರೆ.

ಭದ್ರತೆ ವಾಪಸ್ ಪಡೆದ ಬೆನ್ನಲ್ಲೇ ಪಂಜಾಬ್ ಸಿಂಗರ್, ಕಾಂಗ್ರೆಸ್ ನಾಯಕ ಸಿಧುನನ್ನು ಗುಂಡಿಕ್ಕಿ ಹತ್ಯೆ!

ಪ್ರಯೇಶ್ ಪಟೇಲ್ ಮೂಲತಹ ಗುಜರಾತ್ ಮೂಲದವರು. ಪ್ರಯೇಶ್ ಕಳೆದ ಕೆಲ ವರ್ಷಗಳಿಂದ ವರ್ಜಿನಿಯಾದಲ್ಲಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಪ್ರಯೇಶ್ ಪಟೇಲ್ ಕುಟುಂಬ ಗುಜರಾತ್‌ನ ವಿದ್ಯಾನಗರದಲ್ಲಿ ನೆಲೆಸಿದೆ. ಪ್ರಯೇಶ್ ಪಟೇಲ್ ಸಹೋದರ ತೇಜಸ್ ಪಟೇಲ್ ಗುಜರಾತ್ ಬಿಧನಾಗರದ ಬಿಜೆಪಿ ಅಧ್ಯಕ್ಷರಾಗಿದ್ದಾರೆ. ಈ ಸುದ್ದಿ ತಿಳಿದು ಕುಟುಂಬಕ್ಕೆ ತೀವ್ರ ಆಘಾತವಾಗಿದೆ. ತೇಜಸ್ ಪಟೇಲ್ ಅಮೆರಿಕಾಗೆ ತೆರಳಿದ್ದು, ಕುಟುಂಬದಲ್ಲಿ ಶೋಕ ಮಡುಗಟ್ಟಿದೆ.

ಇತ್ತೀಚೆಗೆ ಅಮೆರಿಕದ ಕೆಲ ಭಾಗದಲ್ಲಿ ದುರ್ಷರ್ಮಿಗಳಿಂದ ಗುಂಡಿನ ದಾಳಿ ಪ್ರಕರಣಗಳು ಹೆಚ್ಚಾಗುತ್ತಿದೆ. ಇತ್ತೀಚೆಗೆ ನ್ಯೂಯಾರ್ಕ್‌ನ ಸಬ್‌ವೇನಲ್ಲಿ ಗುಂಡಿನ ದಾಳಿ ನಡದಿತ್ತು. ಬ್ರೂಕ್ಲಿನ್‌ನಲ್ಲಿರುವ ಮೆಟ್ರೋ ಸುರಂಗಮಾರ್ಗ ನಿಲ್ದಾಣದಲ್ಲಿ ನಡೆದ ಬಾಂಬ್‌ ಮತ್ತು ಗುಂಡಿನ ದಾಳಿಯಲ್ಲಿ ಹಲವರು ತೀವ್ರವಾಗಿ ಗಾಯಗೊಂಡಿದ್ದರು. ದಾಳಿಯ ಸ್ಥಳದಲ್ಲಿ ಸ್ಫೋಟಕಗಳು ಕೂಡ ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.  

ಸನ್‌ಸೆಟ್‌ ಪಾರ್ಕಿನ 36ನೇ ಸ್ಟ್ರೀಟ್‌ ಸ್ಟೇಷನ್‌ನಲ್ಲಿ ಹೊಗೆ ಕಾಣಿಸಿಕೊಂಡ ವರದಿ ಹಿನ್ನೆಲೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತೆರಳಿದಾಗ ಹಲವರು ಗಾಯಗೊಂಡು ಮತ್ತು ಸ್ಥಳದಲ್ಲಿ ಸ್ಫೋಟಕಗಳು ಇರುವುದು ಪತ್ತೆಯಾಯಿತು. ದಾಳಿಯಲ್ಲಿ ಒಟ್ಟು 13 ಜನರು ಗಂಭೀರವಾಗಿ ಗಾಯಗೊಂಡಿದ್ದು, ಹತ್ತಿರದ ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಲಾಗಿದೆ ಎಂದು ಅಗ್ನಿಶಾಮಕ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಮಂಗಳವಾರ ಬೆಳಗ್ಗೆ ರೈಲು ನಿಲ್ದಾಣದಲ್ಲಿ ತೀವ್ರ ಜನಸಂದಣಿ ಇದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಬಾಂಬ್‌ ಎಸೆದು ಗುಂಡಿನ ದಾಳಿಯನ್ನೂ ನಡೆಸಿದ ಎಂದು ಹೇಳಲಾಗುತ್ತಿದೆ. ಸದ್ಯ ಈ ದಾಳಿ ನಡೆಸಿದ್ದು ಯಾರು ಎಂಬುದು ತಿಳಿದು ಬಂದಿಲ್ಲ. ದಾಳಿ ನಡೆಸಿದ ಶಂಕಿತ ಆರೋಪಿ ಕಟ್ಟಡ ಕಾರ್ಮಿಕರ ಬಟ್ಟೆಮತ್ತು ಮುಖಕ್ಕೆ ಗ್ಯಾಸ್‌ ಮಾಸ್‌್ಕ ಧರಿಸಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ ಎಂದು ತಿಳಿಸಿದ್ದಾರೆ.

ಅಂತರ್ಜಾತಿ ವಿವಾಹ, ಅಳಿಯನನ್ನೇ ಗುಂಡಿಕ್ಕಿ ಕೊಂದ ಮಾವ!

ಅಮೆರಿಕದ ನ್ಯೂಯಾರ್ಕ್ ನಲ್ಲಿರುವ ಬ್ರೂಕ್ಲಿನ್‌ ಸಬ್‌ವೇನಲ್ಲಿ ಬಾಂಬ್‌ ಹಾಗೂ ಗುಂಡಿನ ದಾಳಿ ನಡೆಸಿದ್ದ 62 ವರ್ಷದ ಕಪ್ಪುವರ್ಣೀಯ ವ್ಯಕ್ತಿ ಫ್ರಾಂಕ್‌ ಆರ್‌ ಜೇಮ್ಸ್‌ನನ್ನು ಬುಧವಾರ ರಾತ್ರಿ ಬಂಧಿಸಲಾ ಗಿದೆ. ಮಂಗಳವಾರ ಬೆಳಿಗ್ಗೆ ರೇಲ್ವೆ ನಿಲ್ದಾಣದಲ್ಲಿ ತೀವ್ರ ಜನದಟ್ಟಣೆಯಿರುವಾಗ ಈತ ದಾಳಿ ನಡೆಸಿದ್ದರಿಂದ 16 ಜನ ಗಾಯಗೊಂಡಿದ್ದರು. ಈತನನ್ನು ಇಬ್ಬರು ಪೊಲೀಸರು ಗಮನಿಸಿದ್ದರು ಹಾಗೂ ಗುರುತು ಪತ್ತೆ ಹಚ್ಚಿ ಬಂಧನಕ್ಕೆ ಬಲೆ ಬೀಸಿದ್ದರು. ಈತನ ಕೃತ್ಯಕ್ಕೆ ಕಾರಣ ತಿಳಿದುಬರಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನನ್ನ ಜೊತೆಗೂ ಬಾ: ಗೆಳೆಯನ ಗರ್ಲ್‌ಫ್ರೆಂಡ್‌ಗೆ ಸಂದೇಶ: ಪ್ರಶ್ನಿಸಿದ್ದಕ್ಕೆ ಸ್ನೇಹಿತನನ್ನೇ ಕೊಂದು ಪೀಸ್ ಪೀಸ್ ಮಾಡಿದ
The Devil Movie: ಕಾಲವೇ ಸತ್ಯ ಹೇಳುತ್ತದೆ. ಸಮಯವೇ ಉತ್ತರಿಸುತ್ತದೆ-ಜೈಲಿನಿಂದಲೇ Darshan ಮೆಸೇಜ್