Sandalwood actor stabbed to death: ಕನ್ನಡ ಚಿತ್ರ ನಟ ಸತೀಶ್ ವಜ್ರನನ್ನು ರಾಜರಾಜೇಶ್ವರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಮೈದನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ. ವೈಯಕ್ತಿಕ ದ್ವೇಷದಿಂದ ಈ ಕೃತ್ಯ ಮಾಡಲಾಗಿದೆ ಎಂದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ.
ಬೆಂಗಳೂರು: ನಿನ್ನೆ ತಡರಾತ್ರಿ ಸ್ಯಾಂಡಲ್‌ವುಡ್ ನಟ ಸತೀಶ್ ವಜ್ರ ಎಂಬಾತನನ್ನು ಬಾಮೈದನೇ ಕೊಲೆ ಮಾಡಿದ ಘಟನೆ ನಡೆದಿದೆ. ನಿನ್ನೆ ರಾತ್ರಿ ಮನೆಯಲ್ಲಿ ಆತನನ್ನು ಕೊಲೆ ಮಾಡಿ ಹೋಗಿದ್ದಾರೆ. ನಂತರ ಬೆಳಗ್ಗೆ ಮನೆಯ ಓನರ್ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಮನೆಯ ಮಾಲೀಕ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸತೀಶ್ ಮೂಲತಃ ಮದ್ದೂರು ತಾಲೂಕಿನವರು. ಮೂರು ತಿಂಗಳ ಹಿಂದಷ್ಟೇ ಸತೀಶ್ ಹೆಂಡತಿ ಆತ್ಮಹತ್ಯೆಗೆ ಶರಣಾಗಿದ್ದರು. ಇದೇ ಕಾರಣಕ್ಕೆ ಸತೀಶ್ ವಿರುದ್ಧ ಹೆಂಡತಿಯ ತಮ್ಮ ದ್ವೇಷ ತೀರಿಸಿಕೊಂಡಿದ್ದಾನೆ ಎನ್ನಲಾಗಿದೆ.
ಲಗೋರಿ ಚಿತ್ರ ಸೇರಿದಂತೆ ಕೆಲವು ಚಿತ್ರಗಳಲ್ಲಿ ಸತೀಶ್ ನಟಿಸಿದ್ದರು. ಹಲವಾರು ಸಿನೆಮಾಗಳಲ್ಲಿ ಚಿಕ್ಕಪುಟ್ಟ ಪಾತ್ರಗಳಲ್ಲೂ ಅಭಿನಯಿಸಿದ್ದರು. ಆರ್.ಆರ್.ನಗರ ವ್ಯಾಪ್ತಿಯ ಪಟ್ಟಣಗೆರೆಯ ಮನೆಯಲ್ಲೇ ಸತೀಶ್ ನನ್ನು ಚಾಕುವಿನಿಂದ ಇರಿದು ಹತ್ಯೆಗೈಯ್ಯಲಾಗಿದೆ. ಭಾಮೈದುನನಿಂದಲೇ ಸತೀಶ್ ವಜ್ರ ಕೊಲೆಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅಕ್ಕನ ಆತ್ಮಹತ್ಯೆಗೆ ಭಾವ ಸತೀಶ್ ಕಾರಣ ಎಂದು ಭಾಮೈದುನ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಇದನ್ನೂ ಓದಿ: Crime News: ಬಾವನ ಮರ್ಮಾಂಗಕ್ಕೆ ಬಿಸಿ ನೀರು ಸುರಿದ ಅತ್ತಿಗೆ: ಕಾರಣ ಇಷ್ಟೇ
ನಿನ್ನೆ ರಾತ್ರಿ ಸತೀಶ್ ಕೊಲೆಯಾಗಿದ್ದು, ಬೆಳ್ಳಗ್ಗೆ ಮನೆ ಮಾಲೀಕ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಮೂಲತಃ ಪಾಂಡವಪುರದ ಹಳೇಬಿಡಿ ಗ್ರಾಮದವರಾದ ಸತೀಶ್, ‘ಲಗೋರಿ’, ‘ಕ್ರಶ್’ ಸೇರಿದಂತೆ ಹಲವು ಚಿತ್ರಗಳಲ್ಲಿ ಸಹನಟರಾಗಿ ನಟಿಸಿದ್ದರು ಎನ್ನಲಾಗಿದೆ. ಸಿನಿಮಾ ನಟನೆ ಜತೆಗೆ ಆರ್ಆರ್ ನಗರದಲ್ಲಿ ‘ವಜ್ರ’ ಹೆಸರಿನಲ್ಲಿ ಸಲೂನ್ ನಡೆಸುತ್ತಿದ್ದರು. ಸತೀಶ್ ವಜ್ರ ವಯಸ್ಸು 31 ಆಗಿತ್ತು.
ಏನಂತಾರೆ ಮನೆಯ ಮಾಲೀಕರು?:
ಮನೆ ಮಾಲೀಕ ಹೇಮಂತ್ ಕುಮಾರ್ ಏಷಿಯಾನೆಟ್ ನ್ಯೂಸ್ ಜೊತೆ ಮಾತನಾಡಿದ್ದು, "ನನಗೆ ಬೆಳಗ್ಗೆ 8.30 ಗಂಟೆ ಸುಮಾರಿಗೆ ವಿಚಾರ ಗೊತ್ತಾಯಿತು. ಬೆಳಗ್ಗೆ ನಮ್ಮ ಮನೆಯವರು ಮನೆ ಚೆಕ್ ಮಾಡೋಕೆ ಹೋಗಿದ್ದರು. ಡೋರ್ ಹತ್ರ ಬ್ಲಡ್ ಇರೋದ್ ನೋಡಿ ಭಯ ಬಿದ್ದು ನಂಗೆ ಕಾಲ್ ಮಾಡಿದ್ದರು. ನಾನು ಬಂದು ಬಾಗಿಲು ತೆರೆಯಲು ಯತ್ನಿಸಿದೆ. ಒಳಗಡೆ ತುಂಬಾ ರಕ್ತ ಬಿದ್ದಿತ್ತು. ಆಮೇಲೆ ನಾನು ಭಯ ಬಿದ್ದು ಪೊಲೀಸರಿಗೆ ಕರೆ ಮಾಡಿದೆ. ಸತೀಶ್ ಎಲ್ಲರ ಜೊತೆಗೂ ಉತ್ತಮ ಸಂಬಂಧ ಹೊಂದಿದ್ದರು. ರಾತ್ರಿ ಸ್ವಲ್ಪ ತಡವಾಗಿ ಬರುತ್ತಿದ್ದರು. ಸಿನಿಮಾ ಕೆಲ್ಸ ಅದು ಇದು ಅಂತಾ ತಡವಾಗಿ ಬರುತ್ತಿದ್ದರು. ನಿನ್ನೆ ರಾತ್ರಿ 10.30ರ ಸುಮಾರಿಗೆ ಬಂದರು. ಎಂಟು ತಿಂಗಳ ಹಿಂದೆ ಅವರ ಪತ್ನಿ ಸಾವನ್ನಪ್ಪಿದ್ದರು. ಇಬ್ಬರಿಗೂ ಒಂದಿ ಮಗು ಇದೆ. ಮಗು ಯಾರ ಬಳಿ ಇಟ್ಕೊಳೋದು ಏನು ಅಂತ ಆಗಾಗ ಮಾತು-ಕತೆ ಆಗ್ತಿತ್ತು. ಮಗು ಸದ್ಯ ಸತೀಶ್ ಪತ್ನಿ ಸುಧಾ ಅವರ ತವರು ಮನೆಯಲ್ಲಿದೆ. ಯಾರೋ ಪರಿಚಯ ಇರೋರೆ ಬಂದು ಮಾಡಿದ್ದಾರೆ. ಡೋರ್ ಒಡೆಯೋದು ಏನೂ ಮಾಡಿಲ್ಲ. ನಂಬಿಸಿ ಈತರ ಮಾಡಿ ಹೋಗಿದ್ದಾರೆ," ಎಂದರು.